ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2007ರ ಅಕ್ಟೋಬರ್ 29ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2007ರ ಸೆಪ್ಟೆಂಬರ್ 3ರಿಂದ ಅಕ್ಟೋಬರ್ 29ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
ಭಾಷಣ ಗುಣಗಳು
1. ಪುನರಾವರ್ತನೆ ಏಕೆ ಒಂದು ಪ್ರಾಮುಖ್ಯ ಬೋಧನಾ ವಿಧಾನವಾಗಿದೆ? [be-KA ಪು. 206 ಪ್ಯಾರ 1-2, ಚೌಕ]
2. ಭಾಷಣದ ಮುಖ್ಯ ವಿಷಯವನ್ನು ನಾವು ಯಾವೆಲ್ಲ ವಿಧಗಳಲ್ಲಿ ಒತ್ತಿಹೇಳಬಹುದು? [be-KA ಪು. 210, ಚೌಕ]
3. ಒಂದು ಭಾಷಣದ ಮುಖ್ಯಾಂಶಗಳು ಯಾವುವು, ಮತ್ತು ಅವುಗಳನ್ನು ನಾವು ಯಾವುದರ ಮೇಲಾಧರಿಸಿ ಆರಿಸಬೇಕು? [be-KA ಪು. 212 ಪ್ಯಾರ 1-3]
4. ನಮ್ಮ ಭಾಷಣದಲ್ಲಿ ತೀರ ಹೆಚ್ಚು ಮುಖ್ಯಾಂಶಗಳು ಏಕಿರಬಾರದು? [be-KA ಪು. 213 ಪ್ಯಾರ 2-4]
5. ನಮ್ಮ ಪೀಠಿಕೆಯು ಸಭಿಕರ ಆಸಕ್ತಿಯನ್ನು ಕೆರಳಿಸುವುದು ಪ್ರಾಮುಖ್ಯವೇಕೆ, ಮತ್ತು ಇದನ್ನು ಹೇಗೆ ಮಾಡಸಾಧ್ಯವಿದೆ? [be-KA ಪು. 215 ಪ್ಯಾರ 1; ಪು. 216 ಪ್ಯಾರ 1-3, ಚೌಕ]
ನೇಮಕ ನಂ. 1
6. ನಾವು ದೇವರ ವಾಕ್ಯದ ಮೇಲೆ ಭರವಸವಿಡಬಲ್ಲೆವು ಎಂಬುದನ್ನು ಅರ್ಥಮಾಡಿಕೊಳ್ಳಲು ಕೀರ್ತನೆ 119:89, 90 ನಮಗೆ ಹೇಗೆ ಸಹಾಯ ಮಾಡುತ್ತದೆ? [w05-KA 4/15 ಪು. 15 ಪ್ಯಾರ 3]
7. ಯೆಹೆಜ್ಕೇಲನ ಪುಸ್ತಕವು ಏನನ್ನು ಒತ್ತಿಹೇಳುತ್ತದೆ, ಮತ್ತು ಈಗ ತಮ್ಮ ಜೀವನಗಳಲ್ಲಿ ಯೆಹೋವನನ್ನು ಪವಿತ್ರೀಕರಿಸುವವರಿಗೆ ಏನು ಸಿಗುವುದು? [bsi07-KA ಪು. 8 ಪ್ಯಾರ 33]
8. ಯೆಹೋವನ “ವಚನವು” ನಮ್ಮ ಹೃದಯಗಳನ್ನು ಹೇಗೆ ಕಾಪಾಡಬಲ್ಲದು? (ಕೀರ್ತ. 18:30) [w05-KA 9/1 ಪು. 30 ಪ್ಯಾರ 2]
9. ದಾನಿಯೇಲನ ಪುಸ್ತಕದಲ್ಲೆಲ್ಲ ರಾಜ್ಯ ನಿರೀಕ್ಷೆಯನ್ನು ಹೇಗೆ ಒತ್ತಿಹೇಳಲಾಗಿದೆ? [bsi07-KA ಪು. 10 ಪ್ಯಾರ 23]
10. ಹೋಶೇಯನ ಪುಸ್ತಕವು ಯೆಹೋವನ ಪ್ರೇರಿತ ಪ್ರವಾದನೆಗಳಲ್ಲಿ ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸುತ್ತದೆ? [bsi07-KA ಪು. 12 ಪ್ಯಾರ 14]
ವಾರದ ಬೈಬಲ್ ವಾಚನ
11. ಯೆಹೆಜ್ಕೇಲನ ದರ್ಶನದಲ್ಲಿ ಆಲಯದ ಅಳತೆಮಾಡುವಿಕೆಯು ಏನನ್ನು ಸೂಚಿಸಿತು, ಮತ್ತು ಇಂದು ನಮಗೆ ಅದು ಯಾವ ಆಶ್ವಾಸನೆಯನ್ನು ಕೊಡುತ್ತದೆ? (ಯೆಹೆ. 40:2-5) [w99-KA 3/1 ಪು. 9 ಪ್ಯಾರ 6; ಪು. 14 ಪ್ಯಾರ 7]
12. ಯೆಹೆಜ್ಕೇಲನ ದರ್ಶನದ ಅಂತಿಮ ನೆರವೇರಿಕೆಯಲ್ಲಿ “ಪ್ರಭು” ಯಾರಾಗಿರುತ್ತಾನೆ? (ಯೆಹೆ. 48:21) [w99-KA 3/1 ಪು. 16 ಪ್ಯಾರ 13-15; ಪು. 22-3 ಪ್ಯಾರ 19-20]
13. ದಾನಿಯೇಲ 2:21ರ ಅರ್ಥವೇನು? [w98-KA 9/15 ಪು. 12 ಪ್ಯಾರ 9]
14. ಯೆಹೋವನ ದೃಷ್ಟಿಯಲ್ಲಿ ದಾನಿಯೇಲನು “ಅತಿಪ್ರಿಯ”ನಾದದ್ದು ಹೇಗೆ? (ದಾನಿ. 9:23) [dp-KA ಪು. 186 ಪ್ಯಾರ 12; w04-KA 8/1 ಪು. 12 ಪ್ಯಾರ 17]
15. ಯಾವ ಅರ್ಥದಲ್ಲಿ ಇಸ್ರಾಯೇಲಿನಲ್ಲಿ “ದೇವಜ್ಞಾನಗಳು” ಇರಲಿಲ್ಲ, ಮತ್ತು ಆ ಮಾತುಗಳನ್ನು ನಾವು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ತೆಗೆದುಕೊಳ್ಳಬೇಕು? (ಹೋಶೇ. 4:1, 2, 6) [w05-KA 11/15 ಪು. 21 ಪ್ಯಾರ 21; jd ಪು. 57-8 ಪ್ಯಾರ 5; ಪು. 61 ಪ್ಯಾರ 10]