ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/07 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2007 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಭಾಗ 2 ರಲ್ಲಿರುವ ಮೀಡಿಯಾ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಭಾಗ 1ರಲ್ಲಿರುವ ಮೀಡಿಯಾ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಇಂಟರ್‌ನೆಟ್‌ನ ಉಪಯೋಗ—ಅಪಾಯಗಳ ಕುರಿತು ಎಚ್ಚರಿಕೆ!
    1999 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2007 ನಮ್ಮ ರಾಜ್ಯದ ಸೇವೆ
km 9/07 ಪು. 3

ಪ್ರಶ್ನಾ ಚೌಕ

◼ ಬೈಬಲ್‌ನ ಸಂಶೋಧನೆಗಾಗಿ ಹಾಗೂ ಚರ್ಚೆಗಾಗಿ ಒಟ್ಟುಗೂಡುವ ಸಾಕ್ಷಿಗಳ ಸ್ವತಂತ್ರ ಗುಂಪುಗಳನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಅನುಮೋದಿಸುತ್ತದೋ?​—⁠ಮತ್ತಾಯ 24:45, 47.

ಇಲ್ಲ, ಅನುಮೋದಿಸುವುದಿಲ್ಲ. ಆದರೂ ಲೋಕದ ನಾನಾ ಕಡೆಗಳಲ್ಲಿ, ನಮ್ಮ ಸಂಘಟನೆಯೊಂದಿಗೆ ಸಹವಸಿಸುವ ಕೆಲವರು ಬೈಬಲ್‌ ಸಂಬಂಧಿತ ವಿಷಯಗಳ ಕುರಿತು ತಾವೇ ಸ್ವತಂತ್ರವಾಗಿ ಸಂಶೋಧನೆ ಮಾಡಲು ಗುಂಪುಗಳನ್ನು ರಚಿಸಿದ್ದಾರೆ. ಕೆಲವರು ನೂತನ ಲೋಕ ಭಾಷಾಂತರದ ನಿಷ್ಕೃಷ್ಟತೆಯನ್ನು ವಿಶ್ಲೇಷಿಸಲಿಕ್ಕಾಗಿ ಬೈಬಲ್‌ನ ಹೀಬ್ರು ಹಾಗೂ ಗ್ರೀಕ್‌ ಶಾಸ್ತ್ರಗಳ ಸ್ವತಂತ್ರ ಗುಂಪು ಅಧ್ಯಯನದಲ್ಲಿ ತೊಡಗಿದ್ದಾರೆ. ಇತರರು ಬೈಬಲ್‌ಗೆ ಸಂಬಂಧಿಸಿದ ವೈಜ್ಞಾನಿಕ ವಿಷಯಗಳನ್ನು ಪರಿಶೋಧಿಸುತ್ತಾರೆ. ತಮ್ಮ ಅಭಿಪ್ರಾಯಗಳ ವಿಚಾರ ವಿನಿಮಯಕ್ಕಾಗಿ ಮತ್ತು ಚರ್ಚೆಗಾಗಿ ಅವರು ವೆಬ್‌ ಸೈಟ್‌ಗಳನ್ನೂ ಚ್ಯಾಟ್‌ ರೂಮ್‌ಗಳನ್ನೂ ರಚಿಸಿದ್ದಾರೆ. ಮಾತ್ರವಲ್ಲ, ಅವರು ಸಮ್ಮೇಳನಗಳನ್ನೂ ಏರ್ಪಡಿಸಿದ್ದಾರೆ. ತಮ್ಮ ಸಂಶೋಧನೆಗಳನ್ನು ವಿವರಿಸಲಿಕ್ಕಾಗಿ ಮತ್ತು ನಮ್ಮ ಕೂಟಗಳ ಹಾಗೂ ಸಾಹಿತ್ಯಗಳ ಮೂಲಕ ಒದಗಿಸಲ್ಪಡುವುದಕ್ಕೆ ಅನುಬಂಧವಾಗಿ ವಿಷಯಗಳನ್ನು ತಿಳಿಸಲಿಕ್ಕಾಗಿ ಅವರು ತಮ್ಮದೇ ಸಾಹಿತ್ಯಗಳನ್ನು ತಯಾರಿಸಿದ್ದಾರೆ.

ಲೋಕಾದ್ಯಂತ ಯೆಹೋವನ ಜನರು ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಉತ್ತೇಜನವನ್ನು ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ಯಥೇಷ್ಟವಾಗಿ ಪಡೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಯೆಹೋವನ ಸಂಘಟನೆಯ ಸಾಹಿತ್ಯಗಳ ಮೂಲಕವೂ ಪಡೆದುಕೊಳ್ಳುತ್ತಿದ್ದಾರೆ. ಯೆಹೋವನು ತನ್ನ ಪವಿತ್ರಾತ್ಮದ ಮಾರ್ಗದರ್ಶನದ ಮೂಲಕ ಮತ್ತು ತನ್ನ ವಾಕ್ಯದ ಆಧಾರದ ಮೇರೆಗೆ ತನ್ನ ಜನರಿಗೆ ಅಗತ್ಯವಿರುವುದನ್ನು ಒದಗಿಸುತ್ತಾನೆ. ಹೀಗೆ ಅವರೆಲ್ಲರೂ “ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು” ‘ನಂಬಿಕೆಯಲ್ಲಿ ನೆಲೆಗೊಂಡಿರುವರು.’ (1 ಕೊರಿಂ. 1:10; ಕೊಲೊ. 2:6, 7) ಈ ಕಡೇ ದಿವಸಗಳಲ್ಲಿ ಯೆಹೋವನು ಆಧ್ಯಾತ್ಮಿಕ ಒದಗಿಸುವಿಕೆಗಳನ್ನು ನೀಡುತ್ತಿರುವುದಕ್ಕಾಗಿ ನಾವೆಲ್ಲರೂ ಖಂಡಿತವಾಗಿಯೂ ಕೃತಜ್ಞರು. ಆದುದರಿಂದ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ಅದರ ಮೇಲ್ವಿಚಾರಣೆಯಿಲ್ಲದೆ ಪ್ರಕಟಗೊಂಡ ಇಲ್ಲವೆ ಏರ್ಪಡಿಸಿದ ಸಾಹಿತ್ಯ, ಕೂಟ ಅಥವಾ ವೆಬ್‌ ಸೈಟ್‌ಗಳನ್ನು ಅನುಮೋದಿಸುವುದಿಲ್ಲ.​—⁠ಮತ್ತಾ. 24:45-47.

ಸುವಾರ್ತೆಯನ್ನು ಬೆಂಬಲಿಸಲಿಕ್ಕಾಗಿ ತಮ್ಮ ಯೋಚನಾ ಸಾಮರ್ಥ್ಯವನ್ನು ಉಪಯೋಗಿಸ ಬಯಸುವ ವ್ಯಕ್ತಿಗಳನ್ನು ನಾವು ಶ್ಲಾಘಿಸುತ್ತೇವೆ. ಆದರೆ ಯಾವುದೇ ವೈಯಕ್ತಿಕ ಬೆನ್ನಟ್ಟುವಿಕೆಯು, ಯೇಸು ಕ್ರಿಸ್ತನು ಇಂದು ಭೂಮಿಯಲ್ಲಿ ತನ್ನ ಸಭೆಯ ಮೂಲಕ ಏನನ್ನು ಪೂರೈಸುತ್ತಿರುವನೋ ಅದರಿಂದ ಅಪಕರ್ಷಿಸಬಾರದು. ಒಂದನೆಯ ಶತಮಾನದಲ್ಲಿ, ಬಳಲಿಸುವ ಮತ್ತು ಸಮಯ ಕಬಳಿಸುವ ವಿಷಯಗಳಲ್ಲಿ ಒಳಗೂಡುವ ವಿಷಯದಲ್ಲಿ ಅಪೊಸ್ತಲ ಪೌಲನು ಎಚ್ಚರಿಸಿದನು. ಉದಾಹರಣೆಗೆ, “ಯಾವುದರಲ್ಲಿಯೂ ಅಂತ್ಯಗೊಳ್ಳದ ಮತ್ತು ನಂಬಿಕೆಯ ಸಂಬಂಧದಲ್ಲಿ ದೇವರಿಂದ ಯಾವುದನ್ನಾದರೂ ವಿತರಿಸುವ ಬದಲಿಗೆ ಸಂಶೋಧನೆಗಾಗಿ ಪ್ರಶ್ನೆಗಳನ್ನು ಒದಗಿಸುವ ವಂಶಾವಳಿಗಳ” ಕುರಿತು ಅವನು ಎಚ್ಚರಿಸಿದನು. (1 ತಿಮೊ. 1:3-7, NW) ಕ್ರೈಸ್ತರೆಲ್ಲರೂ ‘ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ಧರ್ಮಶಾಸ್ತ್ರದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರಬೇಕು. ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ.’​—⁠ತೀತ 3:⁠9.

ಹೆಚ್ಚಿನ ಬೈಬಲ್‌ ಅಧ್ಯಯನ ಮತ್ತು ಸಂಶೋಧನೆ ಮಾಡಬಯಸುವವರಿಗೆ, ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌,) “ಶಾಸ್ತ್ರವೆಲ್ಲವೂ ವಿಶ್ವಾಸಾರ್ಹ ಮತ್ತು ಪ್ರಯೋಜನಕರ” (ಇಂಗ್ಲಿಷ್‌) ಹಾಗೂ ಬೈಬಲ್‌ನ ಪುಸ್ತಕಗಳಾದ ದಾನಿಯೇಲ, ಯೆಶಾಯ, ಪ್ರಕಟನೆಗಳಲ್ಲಿರುವ ಪ್ರವಾದನೆಗಳನ್ನು ಚರ್ಚಿಸುವ ಇತರ ಸಾಹಿತ್ಯಗಳನ್ನು ಸಂಶೋಧನೆ ಮಾಡುವಂತೆ ನಾವು ಶಿಫಾರಸ್ಸುಮಾಡುತ್ತೇವೆ. ಇವು ಬೈಬಲ್‌ ಅಧ್ಯಯನ ಮತ್ತು ಧ್ಯಾನಿಸಲಿಕ್ಕಾಗಿ ಹೇರಳ ವಿಷಯಗಳನ್ನು ಒದಗಿಸುತ್ತವೆ. ಈ ಮೂಲಕ ನಾವು ‘ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿ ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗಬಲ್ಲೆವು.’​—⁠ಕೊಲೊ. 1:9, 10.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ