ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/07 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2007 ನಮ್ಮ ರಾಜ್ಯದ ಸೇವೆ
2007 ನಮ್ಮ ರಾಜ್ಯದ ಸೇವೆ
km 9/07 ಪು. 3

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಸೆಪ್ಟೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪ್ರಥಮ ಭೇಟಿಯಲ್ಲೇ ಬೈಬಲ್‌ ಅಧ್ಯಯನವನ್ನು ಆರಂಭಿಸಲು ಹೆಚ್ಚಿನ ಪ್ರಯತ್ನವನ್ನು ಮಾಡಿರಿ. ಮನೆಯವರ ಬಳಿ ಈ ಪುಸ್ತಕವು ಈಗಾಗಲೇ ಇರುವುದಾದರೆ, ಅದರಿಂದ ಅವರು ಹೇಗೆ ಪ್ರಯೋಜನ ಹೊಂದಬಲ್ಲರೆಂದು ತೋರಿಸಲು ಬೈಬಲ್‌ ಅಧ್ಯಯನವನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿ ತೋರಿಸಿರಿ. ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್‌ ಕೊಟ್ಟು ಅದನ್ನು ಚರ್ಚಿಸಿರಿ. ನವೆಂಬರ್‌: ಬೈಬಲ್‌ ಕಥೆಗಳ ನನ್ನ ಪುಸ್ತಕ. ಮನೆಯವರು ತಮಗೆ ಮಕ್ಕಳಿಲ್ಲವೆಂದು ಹೇಳುವಲ್ಲಿ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಡಿಸೆಂಬರ್‌: ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಪುರುಷ. ಬದಲಿ ನೀಡುವಿಕೆಯಾಗಿ ಯೆಹೋವನ ಸಮೀಪಕ್ಕೆ ಬನ್ನಿರಿ ಅಥವಾ ಕುಟುಂಬ ಸಂತೋಷದ ರಹಸ್ಯ ಪುಸ್ತಕಗಳನ್ನು ಉಪಯೋಗಿಸಬಹುದು.

◼ ಸೆಪ್ಟೆಂಬರ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ 2006ರ ವಾಚ್‌ ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ ಮತ್ತು ಸಿಡಿ-ರಾಮ್‌ನಲ್ಲಿ ವಾಚ್‌ಟವರ್‌ ಲೈಬ್ರರಿ​—⁠2007ರ ಆವೃತ್ತಿಯನ್ನು ಸಭೆಗಳು ಮುಂದಿನ ಸಾಹಿತ್ಯ ವಿನಂತಿಯೊಂದಿಗೆ ಆರ್ಡರ್‌ ಮಾಡಲು ಆರಂಭಿಸಬೇಕು. ಆದರೆ, ವಾಚ್‌ಟವರ್‌ ಲೈಬ್ರರಿ​—⁠2007ರ ಆವೃತ್ತಿಯು ಸಭೆಯಲ್ಲಿರುವ ಸ್ನಾತ ಸದಸ್ಯರಿಗಾಗಿ ತಯಾರಿಸಲ್ಪಟ್ಟಿದೆ ಮತ್ತು ಸಭೆಯ ಮೂಲಕ ಮಾತ್ರವೇ ಅದನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ದಯವಿಟ್ಟು ಗಮನಿಸಿರಿ.

◼ ಇಸವಿ 2008ರ ಜ್ಞಾಪಕಾಚರಣೆ ಸಮಯದ ವಿಶೇಷ ಬಹಿರಂಗ ಭಾಷಣವನ್ನು 2008, ಮಾರ್ಚ್‌ 31ನೇ ವಾರದಲ್ಲಿ ನೀಡಲಾಗುವುದು. ಭಾಷಣದ ಶೀರ್ಷಿಕೆಯನ್ನು ಮುಂದೆ ತಿಳಿಸಲಾಗುವುದು. ಆ ವಾರಾಂತ್ಯದಲ್ಲಿ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನ ಅಥವಾ ಸಮ್ಮೇಳನವನ್ನು ಹೊಂದಿರುವಂಥ ಸಭೆಗಳಲ್ಲಿ, ಅದರ ಮುಂದಿನ ವಾರದಲ್ಲಿ ಈ ವಿಶೇಷ ಭಾಷಣವನ್ನು ನೀಡಲಾಗುವುದು. ಯಾವ ಸಭೆಯಲ್ಲಿಯೂ ಮಾರ್ಚ್‌ 31ನೇ ವಾರಕ್ಕೆ ಮುಂಚಿತವಾಗಿ ವಿಶೇಷ ಭಾಷಣವು ನೀಡಲ್ಪಡಬಾರದು.

◼ ಜನವರಿ 2008ರಿಂದ ಆರಂಭಿಸಿ ಎಚ್ಚರ! ಪತ್ರಿಕೆಯು ತೆಲುಗು, ನೇಪಾಲಿ, ಬಂಗಾಲಿ ಮತ್ತು ಮರಾಠಿಯಲ್ಲಿ ಪ್ರಕಾಶಿಸಲ್ಪಡುವುದಿಲ್ಲ. ಕನ್ನಡ, ಗುಜರಾಥಿ, ತಮಿಳು, ಪಂಜಾಬಿ, ಮಲೆಯಾಳಂ ಮತ್ತು ಹಿಂದಿಯಲ್ಲಿ ತ್ರೈಮಾಸಿಕವಾಗಿ ಪ್ರಕಾಶಿಸಲ್ಪಡುವುದು.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವರು ಜೂನ್‌, ಜುಲೈ, ಆಗಸ್ಟ್‌ ತಿಂಗಳ ಸಭೆಯ ಅಕೌಂಟ್ಸ್‌ ಅನ್ನು ಆಡಿಟ್‌ ಮಾಡಬೇಕು. ಅನಂತರ ಮುಂದಿನ ಅಕೌಂಟ್ಸ್‌ ವರದಿಯೊಂದಿಗೆ ಇದರ ಕುರಿತು ಸಭೆಗೆ ಪ್ರಕಟನೆಯೊಂದನ್ನು ಮಾಡಬೇಕು.​—⁠ಇನ್‌ಸ್ಟ್ರಕ್ಷನ್ಸ್‌ ಫಾರ್‌ ಕಾಂಗ್ರಿಗೇಷನ್‌ ಅಕೌಟಿಂಗ್‌ (S-27)ನ್ನು ನೋಡಿರಿ.

◼ ಟ್ರಸ್ಟ್‌ (ನ್ಯಾಸ)ಗಳಿರುವ ಸಭೆಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಯನ್ನು ವಾಯಿದೆಯ ತಾರೀಖಿಗೆ ಮೊದಲೇ ನಡೆಸಬೇಕೆಂದು ಜ್ಞಾಪಕಹುಟ್ಟಿಸಲಾಗುತ್ತದೆ. ಈ ವಾರ್ಷಿಕ ಸಭೆಯ ಮತ್ತು ಇತರ ಟ್ರಸ್ಟ್‌ ಮೀಟಿಂಗ್‌ಗಳ ಕಾರ್ಯಕಲಾಪಗಳ ಸಂಕ್ಷಿಪ್ತವರದಿಗಳನ್ನು (ಮಿನಿಟ್ಸ್‌) ಸರಿಯಾಗಿ ಒಂದು ಮಿನಿಟ್‌ ಪುಸ್ತಕದಲ್ಲಿ ದಾಖಲೆಮಾಡಬೇಕು. ಟ್ರಸ್ಟ್‌ ಅಕೌಂಟನ್ನು ಒಬ್ಬ ಚಾರ್ಟರ್ಡ್‌ ಅಕೌಂಟೆಟ್‌ (CA) ಪರಿಶೋಧಿಸುವುದು ಒಳ್ಳೆಯದು. ಪರಿಶೋಧಿಸಲ್ಪಟ್ಟ ಟ್ರಸ್ಟ್‌ ಅಕೌಂಟ್‌ನ ಒಂದು ಪ್ರತಿಯನ್ನು ಬ್ರಾಂಚ್‌ ಆಫೀಸಿಗೆ ಕಳುಹಿಸಬೇಕು. 2006​—⁠2007ನೇ ಆರ್ಥಿಕ ವರ್ಷದಲ್ಲಿ, ನಿಮ್ಮ ಟ್ರಸ್ಟ್‌ಗೆ ಸಂಬಂಧಿಸಿದಂತೆ ಖರ್ಚುಮಾಡುವ ಮೊದಲು ನಿಮ್ಮ ಟ್ರಸ್ಟ್‌ನ ಒಟ್ಟು ಆದಾಯ ರೂ. 1,00,000ವನ್ನು ಮೀರುವುದಾದರೆ ನಿಮ್ಮ ಆದಾಯದ ವಿವರಗಳನ್ನು ಆದಾಯ ತೆರಿಗೆಯ ಇಲಾಖೆಗೆ ಕಡ್ಡಾಯವಾಗಿ ಕಳುಹಿಸಬೇಕು. ಈ ಟ್ರಸ್ಟ್‌, 1961 ಆದಾಯ ತೆರಿಗೆ ಅಧಿನಿಯಮದ 12A ವಿಭಾಗಕ್ಕನುಸಾರ ರಿಜಿಸ್ಟರ್‌ ಮಾಡಲಾಗಿದೆಯೆಂಬುದನ್ನು ಸಹ ದಯವಿಟ್ಟು ಖಚಿತಮಾಡಿಕೊಳ್ಳಿ. ನಿಮ್ಮ ಚಾರ್ಟರ್ಡ್‌ ಅಕೌಂಟೆಟ್‌, ಅಧಿನಿಯಮದ 12A ವಿಭಾಗಕ್ಕನುಸಾರ ನಿಮ್ಮ ಆದಾಯ ತೆರಿಗೆ ವಿವರಗಳನ್ನು ತಯಾರಿಸುವುದರಲ್ಲಿ ಮತ್ತು ರೆಜಿಸ್ಟ್ರೇಷನ್‌ ಮಾಡುವುದರಲ್ಲಿ ನಿಮಗೆ ಸಹಾಯಮಾಡಶಕ್ತನು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (29 ಗೀತೆಗಳು) ​—⁠ಗುಜರಾಥಿ

ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? (ಟ್ರಾಕ್ಟ್‌ ನಂ. 26) ​—⁠ಕೊಂಕಣಿ (ದೇವನಗಿರಿ)

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಮಹಾ ಬೋಧಕನಿಂದ ಕಲಿಯಿರಿ ​—⁠ತಮಿಳು

ಕುಟುಂಬ ಸಂತೋಷದ ರಹಸ್ಯ ​—⁠ಕನ್ನಡ, ನೇಪಾಲಿ, ಪಂಜಾಬಿ, ಮಲೆಯಾಳಂ, ಹಿಂದಿ

ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ​—⁠ಇಂಗ್ಲಿಷ್‌, ತಮಿಳು, ನೇಪಾಲಿ, ಹಿಂದಿ

ನಿಮ್ಮ ಮಾತನಾಡುವ ಮತ್ತು ಕಲಿಸುವ ಸಾಮರ್ಥ್ಯವನ್ನು ಉತ್ತಮಗೊಳಿಸುವ ವಿಧ ​—⁠ನೇಪಾಲಿ

‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿ, ಅವರಿಗೆ ದೀಕ್ಷಾಸ್ನಾನಮಾಡಿಸಿ’ ​—⁠ಬಂಗಾಲಿ

ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (29 ಗೀತೆಗಳು) ​—⁠ನೇಪಾಲಿ

ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ? (ಟ್ರ್ಯಾಕ್ಟ್‌ ನಂ. 75) ​—⁠ಅಸ್ಸಾಮಿ, ಇಂಗ್ಲಿಷ್‌, ಕನ್ನಡ, ಗುಜರಾಥಿ, ತಮಿಳು, ತೆಲುಗು, ಪಂಜಾಬಿ, ಮರಾಠಿ, ಮಲೆಯಾಳಂ, ಹಿಂದಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ