ಸೇವಾ ಕೂಟದ ಶೆಡ್ಯೂಲ್
ಸೆಪ್ಟೆಂಬರ್ 10ರಿಂದ ಆರಂಭವಾಗುವ ವಾರ
ಗೀತೆ 225
5 ನಿ: ಸ್ಥಳಿಕ ಪ್ರಕಟನೆಗಳು.
20 ನಿ: “ಇಂಟರ್‌ನೆಟ್‌ನ ಉಪಯೋಗ—ಅಪಾಯಗಳ ಕುರಿತು ಎಚ್ಚರಿಕೆ!” ಒಬ್ಬ ಅರ್ಹ ಹಿರಿಯನಿಂದ ಪ್ರಶ್ನೋತ್ತರಗಳ ಚರ್ಚೆ. 1999ರ ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆ ಪುರವಣಿಯ ಪ್ಯಾರ 10-18 ಮತ್ತು 27-36ರ ಮೇಲೆ ಆಧಾರಿತ. ಪ್ಯಾರ 12, 13 ಮತ್ತು 18ನ್ನು ಓದಿರಿ.
20 ನಿ: “ಯೇಸುವಿಟ್ಟ ಮಾದರಿಯನ್ನು ಅನುಸರಿಸಿರಿ.”a ಇತರರ ಒಳ್ಳೆಯ ಮಾದರಿಯಿಂದ ಹೇಗೆ ಪ್ರಯೋಜನ ಪಡೆದುಕೊಂಡರೆಂದು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿರಿ.
ಗೀತೆ 130 ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 17ರಿಂದ ಆರಂಭವಾಗುವ ವಾರ
ಗೀತೆ 60
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್ ಎಚ್ಚರ! ಮತ್ತು ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಕೇವಲ ಒಂದು ಪತ್ರಿಕೆಯ ಕುರಿತು ಮಾತಾನಾಡಿದರೂ ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ ಎರಡು ಪತ್ರಿಕೆಗಳನ್ನು ಜೊತೆಯಾಗಿ ನೀಡಬೇಕು.
15 ನಿ: ಕಳೆದ ವರ್ಷ ನಾವು ಏನನ್ನು ಸಾಧಿಸಿದೆವು? ಶುಶ್ರೂಷೆಯಲ್ಲಿ ಸಾಧಿಸಿದ ಒಳ್ಳೆಯ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತಾ ಸೇವಾ ಮೇಲ್ವಿಚಾರಕನು ಕಳೆದ ಸೇವಾ ವರ್ಷವನ್ನು ಪರಿಶೀಲಿಸುತ್ತಾನೆ. ಯೋಗ್ಯ ಶ್ಲಾಘನೆಯನ್ನು ನೀಡಿರಿ. ಹೊಸ ಸೇವಾ ವರ್ಷದಲ್ಲಿ ಗಮನಕೊಡಬೇಕಾದ ಒಂದೆರಡು ಕ್ಷೇತ್ರಗಳ ಕುರಿತು ತಿಳಿಸಿ. ಪಯನೀಯರರ ಚಟುವಟಿಕೆಯ ಬಗ್ಗೆ ಹೇಳಿಕೆ ನೀಡುತ್ತಾ ಅವರು ಮಾಡುತ್ತಿರುವ ಸತ್ಕಾರ್ಯಕ್ಕಾಗಿ ಶ್ಲಾಘಿಸಿರಿ. ಅಕ್ರಿಯ ವ್ಯಕ್ತಿಗಳಿಗೆ ನೆರವು ನೀಡಲು ಮಾಡಲ್ಪಟ್ಟ ಪ್ರಯತ್ನಗಳಿಂದ ಪಡೆದುಕೊಂಡಿರುವ ಒಳ್ಳೆಯ ಫಲಿತಾಂಶಗಳ ಕುರಿತು ತಿಳಿಸಿರಿ.
20 ನಿ: ಸಂಯುಕ್ತವಾದ ಒಂದು ಸಹೋದರತ್ವ. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 16ರ ಮೇಲೆ ಆಧಾರಿತ.
ಗೀತೆ 74 ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 24ರಿಂದ ಆರಂಭವಾಗುವ ವಾರ
ಗೀತೆ 162
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ.
15 ನಿ: ಪ್ರಶ್ನಾ ಚೌಕ. ಹಿರಿಯನೊಬ್ಬನಿಂದ ಸಭಿಕರೊಂದಿಗಿನ ಚರ್ಚೆ. ಸಮಯವಿರುವಲ್ಲಿ ಕೊಡಲ್ಪಟ್ಟಿರುವ ವಚನಗಳನ್ನು ಓದಿ ಚರ್ಚಿಸಿರಿ.
20 ನಿ: ಅಕ್ಟೋಬರ್‌ನಲ್ಲಿ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟನ್ನು ಉಪಯೋಗಿಸಿರಿ. ಅಕ್ಟೋಬರ್ ತಿಂಗಳ ಸಾಹಿತ್ಯ ನೀಡುವಿಕೆಯು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಾಗಿವೆ. ಆಸಕ್ತಿ ತೋರಿಸಲ್ಪಟ್ಟಲ್ಲಿ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಿಕ್ಕಾಗಿ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟನ್ನು ಉಪಯೋಗಿಸಬಹುದು. ಆ ಟ್ರ್ಯಾಕ್ಟ್ ಸಾಕಷ್ಟು ಲಭ್ಯವಿರುವಲ್ಲಿ, ಅಟೆಂಡೆಂಟ್ ಹಾಜರಿರುವವರೆಲ್ಲರಿಗೆ ಒಂದೊಂದು ಪ್ರತಿಯನ್ನು ಹಂಚಿದ ಬಳಿಕ ಅದನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ. ಮನೆಯವರೊಂದಿಗೆ ಆ ಟ್ರ್ಯಾಕ್ಟನ್ನು ಪ್ರಥಮ ಭೇಟಿಯಲ್ಲೇ ಅಥವಾ ಪುನರ್ಭೇಟಿಯಲ್ಲಿ ಪೂರ್ಣವಾಗಿ ಇಲ್ಲವೆ ಸ್ವಲ್ಪವಾಗಿ ಪರಿಗಣಿಸಬಹುದೆಂದು ವಿವರಿಸಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಅಕ್ಟೋಬರ್-ಡಿಸೆಂಬರ್ ಎಚ್ಚರ! ಮತ್ತು ಅಕ್ಟೋಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ ಮನೆಯವನು ಪತ್ರಿಕೆಗಳನ್ನು ನಿರಾಕರಿಸಿದಾಗ ಪ್ರಚಾರಕನು ಆ ಟ್ರ್ಯಾಕ್ಟನ್ನು ನೀಡುತ್ತಾನೆ. ಇನ್ನೊಂದು ಪ್ರತ್ಯಕ್ಷಾಭಿನಯದಲ್ಲಿ ಮನೆಯವನು ಪತ್ರಿಕೆಗಳನ್ನು ಸ್ವೀಕರಿಸಿದ ಬಳಿಕ ಪ್ರಚಾರಕನು ಆ ಟ್ರ್ಯಾಕ್ಟನ್ನು ನೀಡಿ ಪುಟ 5ನ್ನು ಅವನೊಂದಿಗೆ ಚರ್ಚಿಸುತ್ತಾನೆ. ಅಲ್ಲದೆ, ಬೈಬಲ್ ಬೋಧಿಸುತ್ತದೆ ಪುಸ್ತಕದ ಪರಿವಿಡಿಯನ್ನು ತೋರಿಸುತ್ತಾನೆ ಮತ್ತು ಆ ಪುಸ್ತಕವು ಬೈಬಲ್ ಅಧ್ಯಯನಕ್ಕಾಗಿ ತಯಾರಿಸಲ್ಪಟ್ಟಿದೆ ಎಂದು ವಿವರಿಸಿ ಅದನ್ನು ನೀಡುತ್ತಾನೆ.
ಗೀತೆ 222 ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 1ರಿಂದ ಆರಂಭವಾಗುವ ವಾರ
ಗೀತೆ 88
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಸೆಪ್ಟೆಂಬರ್ ತಿಂಗಳ ಕ್ಷೇತ್ರಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ.
15 ನಿ: ಬ್ರಾಂಚ್‌ನಿಂದ ಪತ್ರ. ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಮೊದಲನೇ ಪುಟದಲ್ಲಿ ಕಂಡುಬರುವ ಬ್ರಾಂಚ್ ಪತ್ರದ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಕಳೆದ ವರ್ಷದ “ಬಿಡುಗಡೆಯು ಸಮೀಪವಿದೆ” ಜಿಲ್ಲಾ ಅಧಿವೇಶನದ ಅಥವಾ ಈ ವರ್ಷದ ಜ್ಞಾಪಕಾಚರಣೆಯ ಕರಪತ್ರಗಳನ್ನು ಹಂಚಲು ಕೈಗೊಂಡ ವಿಶೇಷ ಕಾರ್ಯಾಚರಣೆಯ ಸ್ಥಳಿಕ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.
20 ನಿ: “ಕಾವಲಿನಬುರುಜುವಿನ ರೋಮಾಂಚಕಾರಿ ಬದಲಾವಣೆಗಳು!”b
ಗೀತೆ 189 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.