ಸೇವಾ ಕೂಟದ ಶೆಡ್ಯೂಲ್
ಆಗಸ್ಟ್ 13ರಿಂದ ಆರಂಭವಾಗುವ ವಾರ
ಗೀತೆ 20
15 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಆಗಸ್ಟ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ ಪ್ರಚಾರಕನು ಪುನರ್ಭೇಟಿಯಲ್ಲಿ ಉತ್ತರಿಸುವ ಒಂದು ಪ್ರಶ್ನೆಯನ್ನು ಕೇಳಲು ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಪುಟ 3, ಪ್ಯಾರ 3ರಲ್ಲಿರುವ ಯಾವುದಾದರೂ ಒಂದು ಸಲಹೆಯನ್ನು ಉಪಯೋಗಿಸಲಿ. “ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ” ಎಂಬ ಭಾಗವನ್ನು ಚರ್ಚಿಸಿರಿ. ಮುಂದಿನ ಸರ್ಕಿಟ್ ಸಮ್ಮೇಳನದ ತಾರೀಖು ಲಭ್ಯವಿರುವಲ್ಲಿ ಅದನ್ನು ತಿಳಿಸಿರಿ.
15 ನಿ: ದೇವಪ್ರಭುತ್ವಾತ್ಮಕ ಅಧೀನತೆಯಿಂದ ಪ್ರಯೋಜನ ಪಡೆಯುವುದು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 15ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.
15 ನಿ: “ಕುಟುಂಬವಾಗಿ ಯೆಹೋವನನ್ನು ಆರಾಧಿಸುವುದು.”a ಕುಟುಂಬವಾಗಿ ಕ್ಷೇತ್ರಸೇವೆಯಲ್ಲಿ ಭಾಗವಹಿಸಿದ್ದರಿಂದ ಹೇಗೆ ಪ್ರಯೋಜನ ಪಡಕೊಂಡರೆಂದು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.
ಗೀತೆ 48 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 20ರಿಂದ ಆರಂಭವಾಗುವ ವಾರ
ಗೀತೆ 100
10 ನಿ: ಸ್ಥಳಿಕ ಪ್ರಕಟನೆಗಳು. “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ” ಭಾಗವನ್ನು ಚರ್ಚಿಸಿರಿ. ಮುಂದಿನ ವಿಶೇಷ ಸಮ್ಮೇಳದ ತಾರೀಖು ತಿಳಿದಿರುವಲ್ಲಿ ಪ್ರಕಟಿಸಿರಿ.
15 ನಿ: ಸೆಪ್ಟೆಂಬರ್‌ನಲ್ಲಿ ಪ್ರಥಮ ಭೇಟಿಯಲ್ಲೇ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿರಿ. ಸಭಿಕರೊಂದಿಗಿನ ಚರ್ಚೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಾವು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಲಿದ್ದೇವೆ ಮತ್ತು ಪ್ರಥಮ ಭೇಟಿಯಲ್ಲೇ ಮನೆಯವರೊಂದಿಗೆ ಕೆಲವು ಪ್ಯಾರಗ್ರಾಫ್‌ಗಳನ್ನು ಚರ್ಚಿಸಲು ಪ್ರಯತ್ನಿಸಲಿದ್ದೇವೆ. 2006ರ ಜನವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ಸಲಹೆಗಳನ್ನು ಪರಿಶೀಲಿಸಿರಿ. ಪ್ರಥಮ ಭೇಟಿಯಲ್ಲಿ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದು ಹೇಗೆಂದು ತೋರಿಸುವ ಒಂದೆರಡು ಪ್ರತ್ಯಕ್ಷಾಭಿನಯಗಳಿರಲಿ.
20 ನಿ: “ಸಭಾ ಪುಸ್ತಕ ಅಧ್ಯಯನದ ಏರ್ಪಾಡು ನಮಗೆ ಹೇಗೆ ಸಹಾಯಮಾಡುತ್ತದೆ?”b ಪ್ಯಾರ 5ನ್ನು ಪರಿಗಣಿಸುವಾಗ ಸಂಘಟಿತರು ಪುಸ್ತಕದ ಪುಟ 41, ಪ್ಯಾರ 2ರಿಂದ ಹೇಳಿಕೆಗಳನ್ನು ಒಳಗೂಡಿಸಿರಿ.
ಗೀತೆ 6 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 27ರಿಂದ ಆರಂಭವಾಗುವ ವಾರ
ಗೀತೆ 98
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
10 ನಿ: ‘ಅನ್ಯಾಯದ ಧನದ ಮೂಲಕ ಸ್ನೇಹಿತರನ್ನು ಮಾಡಿಕೊಳ್ಳಿರಿ.’ ಒಬ್ಬ ಹಿರಿಯನಿಂದ ಭಾಷಣ. 1994, ಡಿಸೆಂಬರ್ 1ರ ಕಾವಲಿನಬುರುಜು ಪುಟ. 13-18ರ ಮೇಲೆ ಆಧಾರಿತ.
25 ನಿ: “ಹೊಸ ಸೇವಾ ವರ್ಷಕ್ಕೆ ಯೋಗ್ಯ ಗುರಿ.”c ಇತ್ತೀಚಿಗೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದ ಒಬ್ಬಿಬ್ಬರನ್ನು ಇಂಟರ್‌ವ್ಯೂ ಮಾಡಿರಿ. ಅವರು ತಮ್ಮ ಶೆಡ್ಯೂಲ್‌ನಲ್ಲಿ ಯಾವೆಲ್ಲಾ ಹೊಂದಾಣಿಕೆಗಳನ್ನು ಮಾಡಿದರು? ಹೇಗೆ ಪ್ರಯೋಜನ ಪಡೆದುಕೊಂಡರು? ತಮ್ಮ ಕುಟುಂಬದವರ ಬೆಂಬಲ ಮತ್ತು ನೆರವಿನಿಂದ ಆಕ್ಸಿಲಿಯರಿ ಪಯನೀಯರ್ ಮಾಡಿದವರು ಯಾರಾದರೂ ಇರುವಲ್ಲಿ, ಅವರನ್ನು ಆ ಇಂಟರ್‌ವ್ಯೂಗಳಲ್ಲಿ ಒಬ್ಬರನ್ನಾಗಿ ಸೇರಿಸಸಾಧ್ಯವಿದೆ. ಸರ್ಕಿಟ್ ಮೇಲ್ವಿಚಾರಕರ ಮುಂದಿನ ಭೇಟಿಯ ತಾರೀಖುಗಳು ತಿಳಿದಿರುವಲ್ಲಿ ಪ್ಯಾರಗ್ರಾಫ್ 9ನ್ನು ಚರ್ಚಿಸುವಾಗ ಅದನ್ನು ತಿಳಿಸಿರಿ.
ಗೀತೆ 196 ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 3ರಿಂದ ಆರಂಭವಾಗುವ ವಾರ
ಗೀತೆ 50
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಆಗಸ್ಟ್ ತಿಂಗಳ ಕ್ಷೇತ್ರಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ.
15 ನಿ: “ನಮ್ಮ ಸುಯೋಗಗಳು ನಮಗೆ ಅತ್ಯಮೂಲ್ಯವು!”d ಸಮಯವಿರುವಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳ ಮೇಲೆ ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
20 ನಿ: “ಪತ್ರಿಕೆ ಸ್ವೀಕರಿಸಿದವರೊಂದಿಗೆ ಬೈಬಲ್ ಅಧ್ಯಯನ ಪ್ರಾರಂಭಿಸುವ ವಿಧ.”e ಪ್ಯಾರ 2ರಲ್ಲಿರುವ ಯಾವುದಾದರು ಒಂದು ಸಲಹೆಯ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ. ಮನೆಯವರಿಗೆ ಅಧ್ಯಯನದ ಏರ್ಪಾಡನ್ನು ಅಭಿನಯಿಸಿ ತೋರಿಸಿದ ಬಳಿಕ ಎರಡು ಬಾರಿ ಅಧ್ಯಯನವು ನಡೆಸಲ್ಪಟ್ಟಿರುವಲ್ಲಿ ಮತ್ತು ಅದು ಮುಂದುವರಿಯುವುದೆಂದು ತೋರುವಲ್ಲಿ ಆ ಅಧ್ಯಯನವನ್ನು ವರದಿಸಬಹುದೆಂದು ಪ್ರಚಾರಕರಿಗೆ ನೆನಪುಹುಟ್ಟಿಸಿರಿ.
ಗೀತೆ 2 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.