ಸೇವಾ ಕೂಟದ ಶೆಡ್ಯೂಲ್
ಮೇ 14ರಿಂದ ಆರಂಭವಾಗುವ ವಾರ
ಗೀತೆ 205
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಏಪ್ರಿಲ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ: ಸ್ಥಳಿಕವಾಗಿಯೂ ಲೋಕವ್ಯಾಪಕವಾಗಿಯೂ ರಾಜ್ಯ ಚಟುವಟಿಕೆಗೆ ಬೆಂಬಲ ಕೊಡುವುದು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ 12ನೇ ಅಧ್ಯಾಯದ ಮೇಲೆ ಆಧರಿಸಿದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.
15 ನಿ: ‘ಆತನು ದಣಿದವನಿಗೆ ಶಕ್ತಿಯನ್ನು ಕೊಡುತ್ತಾನೆ’a ಸಮಯವು ಅನುಮತಿಸಿದಂತೆ, ಕೊಡಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿರಿ.
ಗೀತೆ 1 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 21ರಿಂದ ಆರಂಭವಾಗುವ ವಾರ
ಗೀತೆ 41
10 ನಿ: ಸ್ಥಳಿಕ ಪ್ರಕಟನೆಗಳು. ಪ್ರಶ್ನಾ ಚೌಕವನ್ನು ಚರ್ಚಿಸಿರಿ.
15 ನಿ: ಹೊಸ ಭಾಷೆಯನ್ನು ಕಲಿಯಲು ನಿಮಗೆ ಸಾಧ್ಯ! ಏಪ್ರಿಲ್-ಜೂನ್ 2007ರ ಎಚ್ಚರ! ಪತ್ರಿಕೆಯ 12-14ನೇ ಪುಟಗಳ ಮೇಲೆ ಆಧರಿಸಿದ ಭಾಷಣ. ರಾಜ್ಯ ಸಂದೇಶವನ್ನು ವ್ಯಾಪಕವಾಗಿ ತಿಳಿಸುವ ಸಲುವಾಗಿ ಇನ್ನೊಂದು ಭಾಷೆಯನ್ನು ಕಲಿಯುವ ಪ್ರಮುಖತೆಯನ್ನು ಎತ್ತಿಹೇಳಿರಿ.
20 ನಿ: “ದೇವರ ವಾಕ್ಯವನ್ನು ನೀವು ಸಮರ್ಥಿಸುತ್ತೀರೊ?”b ಶುಶ್ರೂಷಾ ಶಾಲೆ ಪುಸ್ತಕದ ಪುಟ 143-4 ರಲ್ಲಿರುವ ಚೌಕಗಳ ಮೇಲೆ ಆಧರಿತವಾದ ಹೇಳಿಕೆಗಳನ್ನು ಸೇರಿಸಿರಿ.
ಗೀತೆ 202 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 28ರಿಂದ ಆರಂಭವಾಗುವ ವಾರ
ಗೀತೆ 46
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಮೇ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಎರಡನೆಯದ್ದು) ಮತ್ತು ಜೂನ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ: ಜೂನ್ ತಿಂಗಳಿನಲ್ಲಿ ಕುಟುಂಬ ಸಂತೋಷದ ರಹಸ್ಯ ಪುಸ್ತಕವನ್ನು ನೀಡಿರಿ. ಪುಸ್ತಕದ ಕೆಲವೊಂದು ಸಮಯೋಚಿತ ವೈಶಿಷ್ಟ್ಯಗಳನ್ನು ಎತ್ತಿಹೇಳಿರಿ ಮತ್ತು ಸ್ಥಳಿಕವಾಗಿ ಹೆಚ್ಚು ಪ್ರಯೋಜನಕಾರಿಯಾದ ಬೇರೆ ನಿರೂಪಣೆಗಳನ್ನು ಬಳಸಿ ಆ ಪುಸ್ತಕವನ್ನು ಹೇಗೆ ನೀಡಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಸಮಯ ಅನುಮತಿಸುವಲ್ಲಿ, ಈ ಪುಸ್ತಕಗಳನ್ನು ಪರಿಚಯಸ್ಥರಿಗೆ ಅಥವಾ ಕುಟುಂಬ ಸದಸ್ಯರಿಗೆ ನೀಡಿದ್ದರಿಂದ ದೊರೆತ ಒಳ್ಳೆಯ ಫಲಿತಾಂಶಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿರಿ.
15 ನಿ: ಕ್ಷೇತ್ರ ಸೇವಾ ಅನುಭವಗಳು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಆನಂದಿಸಿದವರ ಮತ್ತು ಕ್ಷೇತ್ರ ಚಟುವಟಿಕೆಯನ್ನು ಅಧಿಕಗೊಳಿಸಲು ಪ್ರಯಾಸಪಟ್ಟ ಇತರ ಪ್ರಚಾರಕರಿಗೆ ದೊರತ ಅನುಭವಗಳನ್ನು ತಿಳಿಸಿರಿ. ಹಾಗೆಯೇ, ಬೈಬಲ್ ಅಧ್ಯಯನದ ಗುರಿಯೊಂದಿಗೆ ಪತ್ರಿಕೆ ನೀಡಿದ ಜನರಿಗೆ ಪುನರ್ಭೇಟಿಮಾಡಿದವರ ಅನುಭವಗಳನ್ನು ತಿಳಿಸಿರಿ. ಒಂದೆರಡು ಗಮನಾರ್ಹ ಅನುಭವಗಳನ್ನು ಪುನರಾಭಿನಯಿಸಿರಿ.
ಗೀತೆ 21 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 4ರಿಂದ ಆರಂಭವಾಗುವ ವಾರ
ಗೀತೆ 99
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: ಸ್ಥಳಿಕ ಅಗತ್ಯತೆಗಳು.
20 ನಿ: “ನಿಮ್ಮ ಮಕ್ಕಳಿಗೆ ಯೆಹೋವನನ್ನು ಸ್ತುತಿಸಲು ಕಲಿಸಿರಿ.”c ಪ್ಯಾರ 4ಅನ್ನು ಚರ್ಚಿಸುವಾಗ 2005, ಜುಲೈ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 3ರಲ್ಲಿರುವ ಹೇಳಿಕೆಗಳನ್ನು ಸೇರಿಸಿರಿ.
ಗೀತೆ 169 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.