ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ—ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಸಿಸದೆ ಇರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿ, ಆ ಮೂಲಕ ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವ ಗುರಿಯನ್ನಿಡಿರಿ. ಜೂನ್: ಸೃಷ್ಟಿಕರ್ತ (ಇಂಗ್ಲಿಷ್) ಪುಸ್ತಕ ಅಥವಾ ಕುಟುಂಬ ಸಂತೋಷ ಪುಸ್ತಕವನ್ನು ನೀಡಿರಿ. ಜುಲೈ ಮತ್ತು ಆಗಸ್ಟ್: ಮುಂದೆ ಪಟ್ಟಿಮಾಡಿರುವ 32 ಪುಟಗಳ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.
◼ ಮೇ ತಿಂಗಳಿಂದ ಆರಂಭಿಸುತ್ತಾ, 2007ರ ಜಿಲ್ಲಾ ಅಧಿವೇಶನದ ಬ್ಯಾಡ್ಜ್ ಕಾರ್ಡ್‌ಗಳು ನಿಮಗೆ ಕಳುಹಿಸಲ್ಪಡುವ ಸಾಹಿತ್ಯದ ರವಾನೆಗಳೊಂದಿಗೆ ಕಳುಹಿಸಲ್ಪಡುವವು. ಪ್ರತಿಯೊಂದು ಸಭೆಯ ಗಾತ್ರಕ್ಕನುಸಾರವಾಗಿ ಕಾರ್ಡ್‌ಗಳನ್ನು 25ರ ಸೆಟ್‌ಗಳಲ್ಲಿ ಕಳುಹಿಸಲಾಗುವುದು. ಆದುದರಿಂದ ಇವುಗಳಿಗಾಗಿ ನೀವು ವಿನಂತಿಯನ್ನು ಕಳುಹಿಸಬೇಕಾಗಿಲ್ಲ. ಆದರೆ ಬೇರೆ ಭಾಷೆಗಳಲ್ಲಿ ಅಥವಾ ಅಧಿಕ ಬ್ಯಾಡ್ಜ್ ಕಾರ್ಡ್‌ಗಳು ಬೇಕಾಗಿದ್ದಲ್ಲಿ ಮಾತ್ರ ವಿನಂತಿಯನ್ನು ಕಳುಹಿಸಿರಿ. ಇದಕ್ಕಾಗಿ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14) ಮೂಲಕ ವಿನಂತಿಸತಕ್ಕದ್ದು.
◼ ರೆಗ್ಯುಲರ್ ಪಯನೀಯರ್ ಸೇವೆಗಾಗಿರುವ ಅರ್ಜಿ (S-205) ಹಾಗೂ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಜಿ (S-205b)ಗಳ ಸಾಕಷ್ಟು ಸರಬರಾಯಿಯನ್ನು ಹೊಂದಿರುವಂತೆ ಸಭೆಯ ಕಾರ್ಯದರ್ಶಿಗಳು ನೋಡಿಕೊಳ್ಳಬೇಕು. ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ಇವುಗಳಿಗಾಗಿ ಆರ್ಡರ್ ಮಾಡಬಹುದು. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗುವಷ್ಟು ಅರ್ಜಿಗಳನ್ನು ಇಟ್ಟುಕೊಳ್ಳಿರಿ. ರೆಗ್ಯುಲರ್ ಪಯನೀಯರ್ ಸೇವೆಯ ಅರ್ಜಿಗಳನ್ನು ಬ್ರಾಂಚ್‌ಗೆ ಕಳುಹಿಸುವ ಮುಂಚೆ, ಅವು ಪೂರ್ತಿಯಾಗಿ ಭರ್ತಿಮಾಡಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
◼ ಎಲ್ಲ ಅಧ್ಯಕ್ಷ ಮೇಲ್ವಿಚಾರಕರು ಮತ್ತು ಕಾರ್ಯದರ್ಶಿಗಳ ಸದ್ಯದ ವಿಳಾಸಗಳು ಮತ್ತು ಟೆಲಿಫೋನ್ ನಂಬರುಗಳ ದಾಖಲೆಯು ಬ್ರಾಂಚ್ ಆಫೀಸಿನ ಬಳಿ ಇರುವುದು ಬಹಳ ಅಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಗಳಿರುವುದಾದರೆ, ಸಭೆಯ ಸೇವಾ ಕಮಿಟಿಯು ಅಧ್ಯಕ್ಷ ಮೇಲ್ವಿಚಾರಕ/ಸೆಕ್ರಿಟರಿಯ ವಿಳಾಸದ ಬದಲಾವಣೆ (S-29) ಫಾರ್ಮ್ ಅನ್ನು ಭರ್ತಿಮಾಡಿ, ತಡಮಾಡದೆ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಇದರಲ್ಲಿ ಎಸ್‌ಟಿಡಿ ಕೋಡ್‌ಗಳಲ್ಲಾಗುವ ಯಾವುದೇ ಬದಲಾವಣೆಗಳೂ ಒಳಗೂಡಿರುತ್ತದೆ.
◼ ನೀವು ವೈಯಕ್ತಿಕ ಪ್ರಯಾಣದ ಯೋಜನೆಗಳನ್ನು ಮಾಡುವಾಗ, ಅದರಲ್ಲಿ ಮತ್ತೊಂದು ದೇಶದಲ್ಲಿನ ಸಭಾ ಕೂಟಗಳಿಗೆ, ಒಂದು ಸಮ್ಮೇಳನಕ್ಕೆ, ಅಥವಾ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವುದು ಸೇರಿರುವುದಾದರೆ, ಅದರ ತಾರೀಖುಗಳು, ಸಮಯಗಳು, ಮತ್ತು ನಿವೇಶನಗಳ ಕುರಿತಾದ ಮಾಹಿತಿಗಾಗಿರುವ ನಿಮ್ಮ ವಿನಂತಿಯನ್ನು ಆ ದೇಶದಲ್ಲಿನ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿರುವ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಬ್ರಾಂಚ್ ಆಫೀಸುಗಳ ವಿಳಾಸಗಳು ಸದ್ಯದ ವರ್ಷಪುಸ್ತಕದ (ಇಂಗ್ಲಿಷ್) ಕೊನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿವೆ.
◼ ಯಿಯರ್‌ಲಿ ಕ್ಯಾಲೆಂಡರ್ ಆಫ್ ಲಿಟ್‌ರೇಚರ್ ಐಟಮ್ಸ್‌ಗನುಸಾರ, ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ಪಟ್ಟಿಮಾಡಲಾಗಿರುವ ಫಾರ್ಮ್‌ಗಳನ್ನು ಈ ಏಪ್ರಿಲ್‌ನಲ್ಲಿ ಮುಂದಿನ ವರ್ಷಕ್ಕಾಗಿ ವಿನಂತಿಸಬೇಕಾಗಿದೆ. ಆದುದರಿಂದ, ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನ ಎರಡನೇ ಪುಟದಲ್ಲಿ ಪಟ್ಟಿಮಾಡಲಾಗಿರುವ ಎಲ್ಲ ಫಾರ್ಮ್‌ಗಳು ಇಡೀ ವರ್ಷಕ್ಕೆ ಎಷ್ಟು ಬೇಕಾಗಿವೆ ಎಂಬುದನ್ನು ಪರಿಶೀಲಿಸಿರಿ ಮತ್ತು ನಿಮ್ಮ ಮುಂದಿನ ತಿಂಗಳ ಸಾಹಿತ್ಯ ಬೇಡಿಕೆಯೊಂದಿಗೆ ಈ ಫಾರ್ಮ್‌ಗಳಿಗಾಗಿಯೂ ವಿನಂತಿಸಿರಿ. ಅನೇಕವೇಳೆ ಸಭೆಗಳು ಒಂದೆರಡು ಫಾರ್ಮ್‌ಗಳಿಗಾಗಿ ತುರ್ತಿನ ಬೇಡಿಕೆಯನ್ನು ಕಳುಹಿಸುವುದನ್ನು ಗಮನಿಸಲಾಗಿದೆ. ಸೇವಾ ಫಾರ್ಮ್‌ಗಳಿಗಾಗಿರುವ ವಿನಂತಿಯನ್ನು ಸಾಹಿತ್ಯದ ವಿನಂತಿಯೊಂದಿಗೆ ಕಳುಹಿಸುವುದು ಉತ್ತಮ. ಇದರಿಂದ ಬ್ರಾಂಚ್‌ಗೆ ವೆಚ್ಚ ಮತ್ತು ಸಮಯ ಉಳಿತಾಯವಾಗುವುದು.
◼ ನಮ್ಮ ರಾಜ್ಯದ ಸೇವೆಯ ನವೆಂಬರ್ 27ನೇ ವಾರದ ಸೇವಾ ಕೂಟದ “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” ಎಂಬ ಭಾಗಕ್ಕೆ ಹೊಂದಿಕೆಯಲ್ಲಿ, ಪ್ರಚಾರಕರಿಗೆ ಯಾವುದೇ ಹೆಚ್ಚಿನ ಮರುಜ್ಞಾಪನಗಳು ಅಗತ್ಯವಿರುವುದಾದರೆ ಪುಸ್ತಕ ಅಧ್ಯಯನ ಮೇಲ್ವಿಚಾರಕನು ಅದನ್ನು ನೀಡತಕ್ಕದ್ದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಬೈಬಲ್ ಕಥೆಗಳ ನನ್ನ ಪುಸ್ತಕದ ಅಧ್ಯಯನ ಪ್ರಶ್ನೆಗಳು —ಮೀಸೊ
◼ ಲಭ್ಯವಿರುವ ಪರಿಷ್ಕೃತ ಕಾಂಪ್ಯಾಕ್ಟ್ ಡಿಸ್ಕ್:
ಕಿಂಗ್ಡಮ್ ಮೆಲೊಡೀಸ್ (MP3), ವಾಲ್ಯೂಮ್ 4
◼ ಲಭ್ಯವಿರುವ ಹೊಸ ಡಿವಿಡಿಗಳು:
ಯೋಹಾನನ ಸುವಾರ್ತೆ —ಅಮೆರಿಕನ್ ಸನ್ನೆ ಭಾಷೆ
ಸುವಾರ್ತೆಯನ್ನು ಸಾರಲು ಸಂಘಟಿತರು ಮತ್ತು ನಮ್ಮ ಸಹೋದರರ ಇಡೀ ಬಳಗ —ಇಂಗ್ಲಿಷ್
ಈ ಡಿವಿಡಿಯ ಒಂದು ಪ್ರತಿಯನ್ನು 2007ರ ಮಾರ್ಚ್ ತಿಂಗಳ ನಮ್ಮ ರಾಜ್ಯದ ಸೇವೆಯೊಂದಿಗೆ ಎಲ್ಲ ಸಭೆಗಳಿಗೆ ಕಳುಹಿಸಲಾಗಿದೆ. ಈ ಡಿವಿಡಿಯನ್ನು ನೋಡಲಿಚ್ಛಿಸುವ ಪ್ರಚಾರಕರು ಸಭೆಯ ಲೈಬ್ರರಿಯಿಂದ ಅದನ್ನು ಪಡೆದುಕೊಳ್ಳಬಹುದು ಮತ್ತು ನೋಡಿದ ಬಳಿಕ ಹಿಂದಿರುಗಿಸತಕ್ಕದ್ದು. ಮುಂದೆ ಈ ಡಿವಿಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗುವಲ್ಲಿ ಅದನ್ನು ನಮ್ಮ ರಾಜ್ಯದ ಸೇವೆಯಲ್ಲಿ ಪ್ರಕಟಿಸಲಾಗುವುದು. ಆ ಬಳಿಕವೇ ಹೆಚ್ಚಿನ ಪ್ರತಿಗಳಿಗಾಗಿ ವಿನಂತಿಸಿರಿ.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಎಚ್ಚರಿಕೆಯಿಂದಿರಿ! —ನೇಪಾಲಿ
ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ —ಇಂಗ್ಲಿಷ್, ಕನ್ನಡ, ತೆಲುಗು, ಮರಾಠಿ