ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2007ರ ಏಪ್ರಿಲ್ 30ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2007ರ ಮಾರ್ಚ್ 5ರಿಂದ ಏಪ್ರಿಲ್ 30ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಭಾಷಣದ ಹೊರಮೇರೆಯನ್ನು ನಾವು ಹೇಗೆ ಸರಳವಾಗಿಡಬಲ್ಲೆವು? [be-KA ಪು. 168 ಪ್ಯಾರ. 4]
2. ನಾವು ಭಾಷಣದ ವಿಷಯಭಾಗವನ್ನು ತರ್ಕಬದ್ಧವಾಗಿ ಸಾದರಪಡಿಸಬಹುದಾದ ನಾಲ್ಕು ವಿಧಗಳನ್ನು ಹೆಸರಿಸಿ. [be-KA ಪು. 170 ಪ್ಯಾರ. 3-ಪು. 172 ಪ್ಯಾರ. 5]
3. ಒಂದು ಭಾಷಣದಲ್ಲಿ ಏನನ್ನು ಒಳಗೂಡಿಸಬೇಕು ಎಂಬುದನ್ನು ನಿರ್ಧರಿಸುವಾಗ ಯಾವ ಅಂಶಗಳನ್ನು ಮನಸ್ಸಿನಲ್ಲಿಡತಕ್ಕದ್ದು? [be-KA ಪು. 173 ಪ್ಯಾರ. 1-2]
4. ಆಶುಭಾಷಣವನ್ನು ಕೊಡುವುದರ ಕೆಲವು ಪ್ರಯೋಜನಗಳಾವುವು? [be-KA ಪು. 175 ಪ್ಯಾರ. 2-4]
5. ಸಂಭಾಷಣಾ ರೀತಿಯಲ್ಲಿ ಮಾತಾಡುವುದು ಪ್ರಾಮುಖ್ಯವೇಕೆ, ಮತ್ತು ಈ ಸಾಮರ್ಥ್ಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? [be-KA ಪು. 179 ಪ್ಯಾರ. 4, ಚೌಕ; ಪು. 180, ಚೌಕ]
ನೇಮಕ ನಂ. 1
6. ಒಬ್ಬ ಸಹೋದರನಿಗೆ ವಾರದ ಬೈಬಲ್ ವಾಚನ ಮುಖ್ಯಾಂಶಗಳು ನೇಮಿಸಲ್ಪಟ್ಟಿರುವಾಗ ಅವನು ಅದನ್ನು ಹೇಗೆ ತಯಾರಿಸಬೇಕು? [be-KA ಪು. 47 ಪ್ಯಾರ. 3-4]
7. ಕ್ರಿಸ್ತನ ವಿಮೋಚನಾ ಮೌಲ್ಯದಿಂದ ನಾವು ಪಡೆಯುವ ಪ್ರಯೋಜನಗಳಿಗಿಂತಲೂ ಯಾವುದು ಹೆಚ್ಚು ಪ್ರಾಮುಖ್ಯವಾದದ್ದು? [w05-KA 11/1 ಪು. 14 ಪ್ಯಾರ. 1]
8. ಬಹಿರಂಗ ಭಾಷಣ ನೀಡುವಾಗ ಹೊರಮೇರೆಯಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ಹೇಗೆ ಉಪಯೋಗಿಸಬೇಕು? [be-KA ಪು. 53 ಪ್ಯಾರ. 1-2]
9. ಬೋಧಕನೋಪಾದಿ ಯೇಸುವಿನ ಉದ್ದೇಶವೇನಾಗಿತ್ತು, ಮತ್ತು ನಾವು ಅವನನ್ನು ಹೇಗೆ ಅನುಕರಿಸಬಲ್ಲೆವು? [be-KA ಪು. 57 ಪ್ಯಾರ. 1]
10. ಬೋಧಿಸುವಾಗ ವೈದೃಶ್ಯಗಳನ್ನು ಬಳಸುವುದು ಪರಿಣಾಮಕಾರಿಯಾಗಿರುತ್ತದೆ ಏಕೆ? [be-KA ಪು. 57 ಪ್ಯಾರ. 3-4]
ವಾರದ ಬೈಬಲ್ ವಾಚನ
11. “ಪುರಾತನ ಮಾರ್ಗಗಳು ಯಾವವು, ಆ ಸನ್ಮಾರ್ಗವು ಎಲ್ಲಿ ಎಂದು ವಿಚಾರಿಸಿ” ಅದರಲ್ಲೇ ನಡೆಯಬೇಕೆಂಬ ಯೆರೆಮೀಯ 6:16ರಲ್ಲಿರುವ ಸಲಹೆಯನ್ನು ಅನ್ವಯಿಸಲು ನಾವು ಹೇಗೆ ಪ್ರಯತ್ನಿಸಸಾಧ್ಯವಿದೆ?
12. ಅಪನಂಬಿಗಸ್ತ ಯೆಹೂದ್ಯರಿಗೆ ಪಾಠ ಕಲಿಸಲು ಯೆಹೋವನು ಬಕಪಕ್ಷಿಯನ್ನು ವಸ್ತುಪಾಠದೋಪಾದಿ ಆರಿಸಿಕೊಂಡದ್ದೇಕೆ, ಮತ್ತು ಇದರಿಂದ ನಾವೇನು ಕಲಿಯಬಹುದು? (ಯೆರೆ. 8:7)
13. ಯೆರೆಮೀಯ 15:17ನೇ ವಚನವು ಇಂದು ಮನೋರಂಜನೆಯ ಕುರಿತು ನಮಗಿರುವ ನೋಟದ ಮೇಲೆ ಯಾವ ಪರಿಣಾಮ ಬೀರಬೇಕು?
14. ಮಾನವರು ಮಹಾ ಕುಂಬಾರನಾದ ಯೆಹೋವನ ಕೈಯಲ್ಲಿರುವ ಮಣ್ಣಿನಂತಿರುವುದು ಹೇಗೆ? (ಯೆರೆ. 18:5-11)
15. ಯೆರೆಮೀಯ 25:17-26ರಲ್ಲಿ ಜನಾಂಗಗಳನ್ನು ಯಾವ ಕ್ರಮದಲ್ಲಿ ಪಟ್ಟಿಮಾಡಲಾಗಿದೆಯೊ ಅದು ನಮ್ಮ ದಿನಗಳಿಗೆ ಗಮನಾರ್ಹವಾಗಿರುವುದು ಹೇಗೆ?