ಸೇವಾ ಕೂಟದ ಶೆಡ್ಯೂಲ್
ಸೂಚನೆ: ವರ್ಷದ ಪ್ರತಿಯೊಂದು ವಾರಕ್ಕಾಗಿ ನಮ್ಮ ರಾಜ್ಯದ ಸೇವೆಯಲ್ಲಿ ಸೇವಾ ಕೂಟದ ಶೆಡ್ಯೂಲ್ ಇದೆ. “ಕ್ರಿಸ್ತನನ್ನು ಅನುಸರಿಸೋಣ!” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುವಂತೆ ಸಭೆಗಳು ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಸೂಕ್ತವಾಗಿರುವಲ್ಲಿ, ಅಧಿವೇಶನದ ಮುಂಚಿನ ವಾರದ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿರುವ ವಿಷಯಗಳಲ್ಲಿ ಸ್ಥಳಿಕವಾಗಿ ಅನ್ವಯವಾಗುವ ಸಲಹೆ ಮತ್ತು ಮರುಜ್ಞಾಪನಗಳನ್ನು ಪುನರಾವರ್ತಿಸಲು 15 ನಿಮಿಷಗಳನ್ನು ಉಪಯೋಗಿಸಿರಿ. ಅಧಿವೇಶನದ ಬಳಿಕ ಒಂದೆರಡು ತಿಂಗಳುಗಳಲ್ಲಿ ನಿಮ್ಮ ಸೇವಾ ಕೂಟದಲ್ಲಿ 15ರಿಂದ 20 ನಿಮಿಷಗಳನ್ನು ಬದಿಗಿಟ್ಟು, ಅಧಿವೇಶನದಿಂದ ಶುಶ್ರೂಷೆಗೆ ಸಹಾಯಕರವಾಗಿ ಕಂಡುಕೊಂಡ ಅಂಶಗಳನ್ನು ಚರ್ಚಿಸಿರಿ (ಇದಕ್ಕಾಗಿ ಸ್ಥಳಿಕ ಅಗತ್ಯಗಳು ಭಾಗವನ್ನು ಉಪಯೋಗಿಸಬಹುದು). ಇದನ್ನು ಸೇವಾ ಮೇಲ್ವಿಚಾರಕನು ನಿರ್ವಹಿಸಬೇಕು. ಸಭಿಕರು ಆ ಮಾಹಿತಿಯನ್ನು ತಮ್ಮ ಶುಶ್ರೂಷೆಯಲ್ಲಿ ಹೇಗೆ ಅನ್ವಯಿಸುತ್ತಿದ್ದಾರೆ ಅಥವಾ ಅನ್ವಯಿಸಲಿದ್ದಾರೆ ಎಂದು ಕೇಳಿರಿ.
ಏಪ್ರಿಲ್ 9ರಿಂದ ಆರಂಭವಾಗುವ ವಾರ
ಗೀತೆ 201
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಏಪ್ರಿಲ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದರಲ್ಲಿ, ಪ್ರಚಾರಕನು ಪುನರ್ಭೇಟಿಯಲ್ಲಿ ಉತ್ತರಿಸಲಾಗುವ ಪ್ರಶ್ನೆಯೊಂದನ್ನು ಬಿಟ್ಟು ಹೋಗಲಿ.
15 ನಿ: “ಹೊಸ ಶಿಷ್ಯರನ್ನು ಮಾಡುವುದರಲ್ಲಿ ಎಲ್ಲರೂ ಭಾಗವಹಿಸಬಲ್ಲರು.”a ಪ್ಯಾರ 4ನ್ನು ಪರಿಗಣಿಸುವಾಗ, ದೀಕ್ಷಾಸ್ನಾನಕ್ಕೆ ಮುಂಚೆ ಸಭೆಯಲ್ಲಿರುವವರು ತಮ್ಮನ್ನು ಹೇಗೆ ಉತ್ತೇಜಿಸಿದರು ಎಂಬುದರ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿರಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.
20 ನಿ: “‘ಕ್ರಿಸ್ತನನ್ನು ಅನುಸರಿಸೋಣ!’ ಜಿಲ್ಲಾ ಅಧಿವೇಶನವನ್ನು ಪ್ರಕಟಪಡಿಸಲು ಲೋಕವ್ಯಾಪಕ ವಿಶೇಷ ಪ್ರಯತ್ನ.”b ಪ್ಯಾರ 3ನ್ನು ಪರಿಗಣಿಸುವಾಗ, ಕಳೆದ ವರ್ಷ ಜಿಲ್ಲಾ ಅಧಿವೇಶನದ ಆಮಂತ್ರಣ ಪತ್ರವನ್ನು ವಿತರಿಸುವಾಗ ಸಿಕ್ಕಿದ ಗಮನಾರ್ಹ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ ಅಥವಾ 2007 ವರ್ಷಪುಸ್ತಕದ (ಇಂಗ್ಲಿಷ್) ಪುಟ 7 ರಿಂದ ಪುಟ 10ರಲ್ಲಿರುವ ಉಪಶೀರ್ಷಿಕೆಯ ವರೆಗೆ ಮೇಲಾಧಾರಿತವಾದ ಹೇಳಿಕೆಗಳನ್ನು ಸೇರಿಸಿರಿ.
ಗೀತೆ 43 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 16ರಿಂದ ಆರಂಭವಾಗುವ ವಾರ
ಗೀತೆ 161
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು.
15 ನಿ: “ದೇವರ ವಾಕ್ಯವನ್ನು ನಿರ್ಭಯದಿಂದ ಹೇಳಿರಿ.”c ಸಮಯವು ಅನುಮತಿಸುವ ಮೇರೆಗೆ ಕೊಡಲ್ಪಟ್ಟಿರುವ ವಚನಗಳ ಮೇಲೆ ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
20 ನಿ: “ಸಮಗ್ರ ಸಾಕ್ಷಿಯನ್ನು ನೀಡಲು ತರಬೇತುಗೊಳಿಸಲ್ಪಟ್ಟವರು”—ಭಾಗ 1. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. 2005, ಜನವರಿ 1ರ ಕಾವಲಿನಬುರುಜು ಪುಟ 12-14, ಪ್ಯಾರ 1ರಿಂದ 10ರ ಮೇಲಾಧಾರಿತ. ಮುಂದಿನ ವಾರದ ಚರ್ಚೆಯ ತಯಾರಿಗಾಗಿ ಲೇಖನದ ಉಳಿದ ಭಾಗವನ್ನು ಓದುವಂತೆ ಪ್ರತಿಯೊಬ್ಬರನ್ನು ಉತ್ತೇಜಿಸಿರಿ.
ಗೀತೆ 207 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 23ರಿಂದ ಆರಂಭವಾಗುವ ವಾರ
ಗೀತೆ 215
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಮೇ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
10 ನಿ: ಸತ್ಯವನ್ನೇ ಹೇಳಬೇಕು ಏಕೆ? 2007, ಫೆಬ್ರವರಿ 1ರ ಕಾವಲಿನಬುರುಜು ಪುಟ 4-7ರ ಮೇಲಾಧಾರಿತವಾದ ಭಾಷಣ.
25 ನಿ: “ಸಮಗ್ರ ಸಾಕ್ಷಿಯನ್ನು ನೀಡಲು ತರಬೇತುಗೊಳಿಸಲ್ಪಟ್ಟವರು”—ಭಾಗ 2. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. 2005, ಜನವರಿ 1ರ ಕಾವಲಿನಬುರುಜು ಪುಟ 14-17, ಪ್ಯಾರ 11ರಿಂದ 24ರ ಮೇಲಾಧಾರಿತ.
ಗೀತೆ 126 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 30ರಿಂದ ಆರಂಭವಾಗುವ ವಾರ
ಗೀತೆ 186
5 ನಿ: ಸ್ಥಳಿಕ ಪ್ರಕಟನೆಗಳು. ಏಪ್ರಿಲ್ ತಿಂಗಳ ಕ್ಷೇತ್ರಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ.
10 ನಿ: ಸ್ಥಳಿಕ ಅಗತ್ಯಗಳು
30 ನಿ: “ಘನತೆ ತೋರಿಸುವ ಮೂಲಕ ಕ್ರಿಸ್ತನನ್ನು ಅನುಸರಿಸಿರಿ.”d ಸಭಾ ಸೆಕ್ರಿಟರಿಯಿಂದ ನಿರ್ವಹಿಸಲ್ಪಡತಕ್ಕದ್ದು. ಸಭೆಯು ಯಾವ ಅಧಿವೇಶನಕ್ಕೆ ನೇಮಕವಾಗಿದೆ ಎಂದು ತಿಳಿಸಿರಿ. “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಚೌಕವನ್ನು ಚರ್ಚಿಸಿರಿ.
ಗೀತೆ 44 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 7ರಿಂದ ಆರಂಭವಾಗುವ ವಾರ
ಗೀತೆ 164
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ಆರಾಧನಾ ಸ್ಥಳಗಳಿಗಾಗಿ ಏರ್ಪಾಡುಗಳು. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 11ರ ಮೇಲಾಧಾರಿತ.
20 ನಿ: “ಜನರು ಮನೆಯಲ್ಲಿರದಿರುವಾಗ . . .”e ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡತಕ್ಕದ್ದು.
ಗೀತೆ 178 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.