ಸೇವಾ ಕೂಟದ ಶೆಡ್ಯೂಲ್
ಆಗಸ್ಟ್ 14ರಿಂದ ಆರಂಭವಾಗುವ ವಾರ
ಗೀತೆ 163
15 ನಿ: ಸ್ಥಳಿಕ ಪ್ರಕಟನೆಗಳು. “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ”ವನ್ನು ಚರ್ಚಿಸಿರಿ. ಮುಂದಿನ ವಿಶೇಷ ಸಮ್ಮೇಳನ ದಿನದ ತಾರೀಖು ಲಭ್ಯವಿರುವಲ್ಲಿ ಅದನ್ನು ತಿಳಿಸಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್ ಎಚ್ಚರ! ಮತ್ತು ಆಗಸ್ಟ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ‘ಯೆಹೋವನ ಸಾಕ್ಷಿಗಳಲ್ಲಿ ನನಗೆ ಅಭಿರುಚಿಯಿಲ್ಲ’ ಎಂಬ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ತೋರಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 9ನ್ನು ನೋಡಿರಿ.
15 ನಿ: “ಅಕ್ಟೋಬರ್‌ನಲ್ಲಿ ವಿತರಿಸಲಾಗುವ ಎಚ್ಚರ! ಪತ್ರಿಕೆಯ ವಿಶೇಷ ಸಂಚಿಕೆ.”a ಪ್ಯಾರ. 4ನ್ನು ಪರಿಗಣಿಸುವಾಗ, ಒಬ್ಬ ಹದಿವಯಸ್ಕ ಪ್ರಚಾರಕ/ಳು ತನ್ನ ಉಪಾಧ್ಯಾಯರೊಬ್ಬರಿಗೆ ಎಚ್ಚರ!ದ ಅಕ್ಟೋಬರ್-ಡಿಸೆಂಬರ್ ಸಂಚಿಕೆಯನ್ನು ನೀಡುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವಿರಲಿ.
15 ನಿ: ನಾನು ಓದಲೇಬೇಕೆಂದು ಏಕೆ ಹೇಳುತ್ತೀರಿ? 2006ರ ಜುಲೈ-ಸೆಪ್ಟೆಂಬರ್ ಎಚ್ಚರ! ಸಂಚಿಕೆಯ ಪುಟ 21-23ಗಳ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಭಿಕರಲ್ಲಿ ಯಾರು ಕ್ರೈಸ್ತ ಕುಟುಂಬಗಳಲ್ಲಿ ಬೆಳೆಸಲ್ಪಟ್ಟಿದ್ದಾರೋ ಅವರು, ತಮ್ಮ ಹೆತ್ತವರು ಅವರನ್ನು ಬೈಬಲ್ ಓದಲು ಮತ್ತು ಅದರ ಮೂಲತತ್ತ್ವಗಳನ್ನು ವಿಶೇಷವಾಗಿ ಶಾಲೆಯಲ್ಲಿ ಅನ್ವಯಿಸಿಕೊಳ್ಳಲು ಹೇಗೆ ತರಬೇತುಗೊಳಿಸಿದರು ಎಂಬುದರ ಬಗ್ಗೆ ತಿಳಿಸುವಂತೆ ಆಮಂತ್ರಿಸಿರಿ. ಒಬ್ಬರು ಅಥವಾ ಇಬ್ಬರು ಹೇಳಿಕೆ ನೀಡುವಂತೆ ಮುಂಚಿತವಾಗಿಯೇ ಏರ್ಪಾಡುಮಾಡಬಹುದು.
ಗೀತೆ 164 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 21ರಿಂದ ಆರಂಭವಾಗುವ ವಾರ
ಗೀತೆ 62
10 ನಿ: ಸ್ಥಳಿಕ ಪ್ರಕಟನೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. “ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ”ವನ್ನು ಚರ್ಚಿಸಿರಿ ಮತ್ತು ಮುಂದಿನ ಸರ್ಕಿಟ್ ಸಮ್ಮೇಳನದ ದಿನಾಂಕವು ತಿಳಿದಿರುವುದಾದರೆ ಅದನ್ನು ಪ್ರಕಟಿಸಿರಿ.
15 ನಿ: ಕಾವಲಿನಬುರುಜು ಅಧ್ಯಯನ ಮತ್ತು ಸಾರ್ವಜನಿಕ ಕೂಟದಿಂದ ಪ್ರಯೋಜನ ಪಡೆದುಕೊಳ್ಳುವುದು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 59 ರಿಂದ ಪುಟ 64ರಲ್ಲಿರುವ ಉಪಶೀರ್ಷಿಕೆಯ ವರೆಗಿನ ವಿಷಯಗಳ ಮೇಲಾಧರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.
20 ನಿ: ಆಕ್ಸಿಲಿಯರಿ ಪಯನೀಯರ್ ಮಾಡಲು ಈಗಲೇ ಯೋಜಿಸಿ! ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಹೊಸ ಸೇವಾ ವರ್ಷದಲ್ಲಿ ಒಂದು ತಿಂಗಳಾದರೂ ಆಕ್ಸಿಲಿಯರಿ ಪಯನೀಯರನ್ನು ಮಾಡುವ ಗುರಿಯನ್ನಿಡುವಂತೆ ಪ್ರೋತ್ಸಾಹಿಸಿರಿ. (1 ಕೊರಿಂ. 9:26) ಕೆಲವರು ವಿಶೇಷ ಚಟುವಟಿಕೆಯ ತಿಂಗಳನ್ನು ಅಥವಾ ರಜೆ ಇಲ್ಲವೆ ಐದು ವಾರಾಂತ್ಯಗಳಿರುವ ತಿಂಗಳನ್ನು ಆರಿಸಿಕೊಳ್ಳಬಹುದು. ಸಭಿಕರನ್ನು ಹೀಗೆ ಕೇಳಿರಿ: “ನೀವು ಈ ಹಿಂದೆ ಆಕ್ಸಿಲಿಯರಿ ಪಯನೀಯರನ್ನು ಮಾಡುವಾಗ ಯಾವ ಪಂಥಾಹ್ವಾನಗಳನ್ನು ಜಯಿಸಿದ್ದೀರಿ? ಆಕ್ಸಿಲಿಯರಿ ಪಯನೀಯರ್ ಮಾಡುವುದರಿಂದ ಯಾವ ಆಶೀರ್ವಾದಗಳು ದೊರೆಯುತ್ತವೆ? ನಿಮಗೆ ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವ ಇಚ್ಛೆಯಿದ್ದರೂ, ಅನಿಶ್ಚಿತ ಭಾವನೆಯಿರುವುದಾದರೆ ನೀವೇಕೆ ಅದಕ್ಕಾಗಿ ಪ್ರಾರ್ಥಿಸಬೇಕು? (ಅ. ಕೃ. 4:29; 2 ಕೊರಿಂ. 4:7; ಯಾಕೋ. 1:5) ನೀವು ಇದರ ಬಗ್ಗೆ ನಿಮ್ಮ ಕುಟುಂಬದೊಂದಿಗೆ ಮತ್ತು ಸಭೆಯಲ್ಲಿರುವ ಇತರರೊಂದಿಗೆ, ವಿಶೇಷವಾಗಿ ತದ್ರೀತಿಯ ಪರಿಸ್ಥಿತಿಯಲ್ಲಿರುವವರೊಂದಿಗೆ ಚರ್ಚಿಸುವುದು ಉತ್ತಮವೇಕೆ? (ಜ್ಞಾನೋ. 15:22) ಯಾವಾಗ ಆಕ್ಸಿಲಿಯರಿ ಪಯನೀಯರ್ ಮಾಡಲು ನೀವು ಯೋಜಿಸಿದ್ದೀರಿ?
ಗೀತೆ 216 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 28ರಿಂದ ಆರಂಭವಾಗುವ ವಾರ
ಗೀತೆ 17
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಆಗಸ್ಟ್ ತಿಂಗಳ ಸೇವಾವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಪತ್ರಿಕಾ ಮಾರ್ಗದಲ್ಲಿ ಸಂದರ್ಶಿಸುವ ವ್ಯಕ್ತಿಯನ್ನು ಪುನಃರ್ಭೇಟಿ ಮಾಡುತ್ತಿರುವಾಗ ಜುಲೈ-ಸೆಪ್ಟೆಂಬರ್ ಎಚ್ಚರ! ಅಥವಾ ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ನೀವು ಉತ್ತೇಜನದ ಮೂಲವಾಗಿರಬಲ್ಲಿರಿ. (ರೋಮಾ. 1:11, 12) ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಭೆಯಲ್ಲಿರುವ ರೆಗ್ಯುಲರ್ ಪಯನೀಯರರ ಸಂಖ್ಯೆಯನ್ನು ತಿಳಿಸಿರಿ. ನಾವು ಅವರನ್ನು ಉತ್ತೇಜಿಸಸಾಧ್ಯವಿರುವ ವಿಧಾನಗಳನ್ನು ತಿಳಿಸಿರಿ. ಉದಾಹರಣೆಗೆ, ಪ್ರಶಂಸಿಸುವ ಮೂಲಕ, ಪಯನೀಯರ್ ಸೇವೆಯ ಕುರಿತು ಸಕಾರಾತ್ಮಕವಾಗಿ ಮಾತಾಡುವ ಮೂಲಕ, ಅವರೊಂದಿಗೆ ಸೇವೆಮಾಡುವ ಮೂಲಕ, ಊಟಕ್ಕೆ ಅವರನ್ನು ಆಮಂತ್ರಿಸುವ ಮೂಲಕ ಮತ್ತು ಪ್ರಯಾಣದ ವೆಚ್ಚಕ್ಕೆ ಅವರಿಗೆ ಸಹಾಯಮಾಡುವ ಮೂಲಕ. ರೆಗ್ಯೂಲರ್ ಪಯನೀಯರರು ಇತರರಿಂದ ಹೇಗೆ ಉತ್ತೇಜನವನ್ನು ಪಡೆದುಕೊಂಡಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಆಮಂತ್ರಿಸಿ. ಸಭೆಯಲ್ಲಿ ರೆಗ್ಯೂಲರ್ ಪಯನೀಯರರು ಇಲ್ಲದಿರುವಲ್ಲಿ, ಆಕ್ಸಿಲಿಯರಿ ಪಯನೀಯರ್ ಮಾಡುವವರನ್ನು ನಾವು ಹೇಗೆ ಉತ್ತೇಜಿಸಸಾಧ್ಯವಿದೆ ಎಂಬುದನ್ನು ಚರ್ಚಿಸಿರಿ.
20 ನಿ: ಸೆಪ್ಟೆಂಬರ್ ತಿಂಗಳಿನಲ್ಲಿ ನೀವು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಬಲ್ಲಿರೋ? ಭಾಷಣ ಮತ್ತು ಪ್ರತ್ಯಕ್ಷಾಭಿನಯಗಳು. ಸೆಪ್ಟೆಂಬರ್ ತಿಂಗಳಿನಲ್ಲಿ ನಾವು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುತ್ತಾ ಪ್ರಥಮ ಭೇಟಿಯಲ್ಲೇ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡಲಿರುವೆವು. ಅಂದರೆ ನಾವು ಮನೆಯವರಿಗೆ ಪುಸ್ತಕವನ್ನು ನೀಡುವ ಸಮಯದಲ್ಲೇ ಕೆಲವು ಪ್ಯಾರಗ್ರಾಫ್‌ಗಳನ್ನು ಅವರೊಂದಿಗೆ ಚರ್ಚಿಸಲು ಪ್ರಯತ್ನಿಸಲಿದ್ದೇವೆ. ಸ್ಥಳಿಕ ಟೆರಿಟೊರಿಗೆ ಸೂಕ್ತವಾಗಿರುವ ವಿಷಯಗಳ ಮೇಲಾಧಾರಿತವಾಗಿ ಎರಡು ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ ಪುನರ್ಭೇಟಿಗಾಗಿ ಮತ್ತು ಚರ್ಚೆಯನ್ನು ಮುಂದುವರಿಸಲಿಕ್ಕಾಗಿ ಹೇಗೆ ನಿಶ್ಚಿತ ಏರ್ಪಾಡುಗಳನ್ನು ಮಾಡಬೇಕೆಂಬುದನ್ನು ತೋರಿಸಿರಿ.
ಗೀತೆ 37 ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 4ರಿಂದ ಆರಂಭವಾಗುವ ವಾರ
ಗೀತೆ 90
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ನಿಷ್ಪಕ್ಷಪಾತದಿಂದ ಸಾರುವ ಮೂಲಕ.”b ಪ್ಯಾರಗ್ರಾಫ್ 2ರ ಕೊನೆಯಲ್ಲಿ ಉಲ್ಲೇಖಿಸಲ್ಪಟ್ಟಿರುವ ರೋಮಾಪುರ 1:14ನ್ನು ಚರ್ಚಿಸುವಾಗ, ಒಳನೋಟ (ಇಂಗ್ಲಿಷ್) ಸಂಪುಟ 1, ಪುಟ 255ರಲ್ಲಿ “ವಿದೇಶಿಯರು” (ಬಾರ್ಬೇರಿಅನ್) ಎಂಬ ಮುಖ್ಯವಿಷಯದ ಕೆಳಗಿರುವ ಮೊದಲನೆ ಪ್ಯಾರಗ್ರಾಫಿನಲ್ಲಿರುವ ವಿಷಯದ ಕುರಿತು ಚುಟುಕಾದ ಹೇಳಿಕೆ ನೀಡಿರಿ. ಪ್ಯಾರಗ್ರಾಫ್ 3ನ್ನು ಚರ್ಚಿಸುವಾಗ, ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಪುಸ್ತಿಕೆಯ ಪುಟ 2ರಲ್ಲಿರುವ ಮೂರು ಹೆಜ್ಜೆಗಳನ್ನು ಪರಿಶೀಲಿಸಿರಿ. ಮತ್ತು ಈ ಪುಸ್ತಿಕೆಯನ್ನು, ಸ್ಥಳಿಕ ಟೆರಿಟೊರಿಯಲ್ಲಿ ಪರಭಾಷೆಯನ್ನಾಡುವ ಜನರೊಂದಿಗೆ ಮಾತಾಡುವಾಗ ಹೇಗೆ ಉಪಯೋಗಿಸಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
ಗೀತೆ 225 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.