ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/06 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2006 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜೂನ್‌ 12ರಿಂದ ಆರಂಭವಾಗುವ ವಾರ
  • ಜೂನ್‌ 19ರಿಂದ ಆರಂಭವಾಗುವ ವಾರ
  • ಜೂನ್‌ 26ರಿಂದ ಆರಂಭವಾಗುವ ವಾರ
  • ಜುಲೈ 3ರಿಂದ ಆರಂಭವಾಗುವ ವಾರ
2006 ನಮ್ಮ ರಾಜ್ಯದ ಸೇವೆ
km 6/06 ಪು. 2

ಸೇವಾ ಕೂಟದ ಶೆಡ್ಯೂಲ್‌

ಜೂನ್‌ 12ರಿಂದ ಆರಂಭವಾಗುವ ವಾರ

ಗೀತೆ 218

10 ನಿ: ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜೂನ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇವುಗಳಲ್ಲಿ ಒಂದು ನಿರೂಪಣೆಯನ್ನು ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಬಳಸಿ ಆ ಪತ್ರಿಕೆಗಳನ್ನು ನೀಡುವುದನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ: “ನಮ್ಮ ಶುಶ್ರೂಷೆ​—⁠ಕನಿಕರವನ್ನು ಪ್ರತಿಬಿಂಬಿಸುವ ಕೆಲಸ.”a ಸಮಯವು ಅನುಮತಿಸಿದಂತೆ, ಸಭಿಕರು ಕೊಡಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಕೇಳಿರಿ.

15 ನಿ: ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಲ್ಲಿ’ ಭರವಸವಿಡುವುದು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 3ರ ಮೇಲಾಧರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.

ಗೀತೆ 47 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 19ರಿಂದ ಆರಂಭವಾಗುವ ವಾರ

ಗೀತೆ 21

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

20 ನಿ: ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು! 2006, ಜನವರಿ 1ರ ಕಾವಲಿನಬುರುಜು ಪತ್ರಿಕೆಯ 16-19ನೆಯ ಪುಟಗಳ ಮೇಲಾಧರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಆರಂಭದ ಭಾಷಣದಲ್ಲಿ, “ಸಕಾರಾತ್ಮಕ ಫಲಗಳು” ಎಂಬ ಉಪಶೀರ್ಷಿಕೆಯ ಕೆಳಗೆ ಕೊಡಲಾಗಿರುವಂಥ, ಬೇರೆಯವರನ್ನು ಶ್ಲಾಘಿಸುವುದರ ನಾಲ್ಕು ಪ್ರಯೋಜನಗಳನ್ನು ಎತ್ತಿಹೇಳಿರಿ. ತದನಂತರ ಸಭಿಕರಿಗೆ ಈ ಮುಂದಿನ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಆಮಂತ್ರಿಸಿರಿ: ಎಲ್ಲರಿಗಿಂತಲೂ ಯಾರು ಸ್ತುತಿಗೆ ಹೆಚ್ಚು ಅರ್ಹನು? ಜೊತೆ ಆರಾಧಕರು ಸೂಕ್ತವಾದ ಶ್ಲಾಘನೆಯನ್ನು ಪಡೆಯಲು ಅರ್ಹರೇಕೆ? ಸಭೆಯಲ್ಲಿ ಶ್ಲಾಘನೆಯನ್ನು ನೀಡಲು ನಮಗೆ ಯಾವ ಅವಕಾಶಗಳಿವೆ? ಕುಟುಂಬ ಸದಸ್ಯರನ್ನು ಶ್ಲಾಘಿಸುವುದು ಏಕೆ ಪ್ರಯೋಜನಕರವಾಗಿದೆ, ಮತ್ತು ನಾವದನ್ನು ಹೇಗೆ ಮಾಡಬಲ್ಲೆವು? ನೀವು ಪಡೆದಿರುವಂಥ ಶ್ಲಾಘನೆಯಿಂದ ಹೇಗೆ ಉತ್ತೇಜಿಸಲ್ಪಟ್ಟಿದ್ದೀರಿ ಇಲ್ಲವೆ ಬಲಹೊಂದಿದ್ದೀರಿ?

15 ನಿ: “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ​—⁠ಪ್ರಶಂಸಿಸುವ ಮೂಲಕ.”b ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯದಲ್ಲಿ ಪ್ರಚಾರಕರೊಬ್ಬರು ಮನೆಯವರಿಗೆ ಜಾಗರೂಕತೆಯಿಂದ ಕಿವಿಗೊಡುತ್ತಿರುವುದನ್ನು, ಪ್ರಾಮಾಣಿಕವಾಗಿ ಪ್ರಶಂಸಿಸುವುದನ್ನು ಮತ್ತು ನಂತರ ಮನೆಯವನು ಹೇಳಿದಂಥ ಮಾತಿಗೆ ತಕ್ಕಂತೆ ಒಂದು ಸೂಕ್ತ ವಚನವನ್ನು ಓದಿಹೇಳುತ್ತಾ ಸಂಭಾಷಣೆ ಮುಂದುವರಿಸುವುದನ್ನು ತೋರಿಸಿರಿ.

ಗೀತೆ 96 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 26ರಿಂದ ಆರಂಭವಾಗುವ ವಾರ

ಗೀತೆ 63

12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರಪತ್ರಗಳನ್ನು ಓದಿಹೇಳಿ. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸಿ, ಇಲ್ಲವೆ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರಾವುದೇ ನಿರೂಪಣೆಗಳನ್ನು ಬಳಸಿ, ಜುಲೈ-ಸೆಪ್ಟೆಂಬರ್‌ ಎಚ್ಚರ! ಮತ್ತು ಜುಲೈ 1 ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಈ ಎರಡೂ ನಿರೂಪಣೆಗಳ ಅಂತ್ಯದಲ್ಲಿ, ಪ್ರಚಾರಕನು ಮುಂದಿನ ಭೇಟಿಯಲ್ಲಿ ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಬಳಸಿ ಉತ್ತರಿಸಬಹುದಾದಂಥ ಒಂದು ವಿಚಾರ-ಪ್ರೇರಕ ಪ್ರಶ್ನೆಯನ್ನು ಕೇಳುತ್ತಾನೆ.

18 ನಿ: ಜೊತೆ ವಿಶ್ವಾಸಿಗಳೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದು. (ಜ್ಞಾನೋ. 18:24; 27:⁠9) 2000, ಡಿಸೆಂಬರ್‌ 1ರ ಕಾವಲಿನಬುರುಜು, ಪುಟಗಳು 22-3ರ ಮೇಲಾಧರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸತ್ಯಾರಾಧನೆಯ ಆಶೀರ್ವಾದಗಳಲ್ಲಿ ಒಂದು, ನಿಜ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶವೇ ಆಗಿದೆ. ಕೂಟಗಳಲ್ಲಿ, ಕ್ಷೇತ್ರ ಸೇವೆಯಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ನಮಗೆ ಸಿಗುವ ಒಡನಾಟವು ಬಹಳಷ್ಟು ಉತ್ತೇಜನವನ್ನು ಕೊಡುತ್ತದೆ. ಸಭೆಯಲ್ಲಿರುವ ಇತರರೊಂದಿಗೆ ನಾವು ಹೇಗೆ ಸ್ನೇಹವನ್ನು ಬೆಳೆಸಿಕೊಳ್ಳಬಹುದು? “ಬಾಳುವಂತಹ ಸ್ನೇಹಕ್ಕಾಗಿ ಆರು ಸೂತ್ರಗಳು” ಎಂಬ ಚೌಕವನ್ನು ಪುನವಿರ್ಮರ್ಶಿಸಿರಿ, ಮತ್ತು ಪ್ರತಿಯೊಂದು ಅಂಶವನ್ನು ನಮ್ಮ ಸಹೋದರರೊಂದಿಗೆ ವ್ಯವಹರಿಸುವಾಗ ಹೇಗೆ ಅನ್ವಯಿಸಬಹುದೆಂದು ಸಭಿಕರು ಹೇಳಿಕೆ ನೀಡುವಂತೆ ಕೇಳಿಕೊಳ್ಳಿರಿ.

15 ನಿ: ಜುಲೈ ತಿಂಗಳಲ್ಲಿ ಸುವಾರ್ತೆಯನ್ನು ಪ್ರಸ್ತುತಪಡಿಸುವುದು. ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಸಾಮಾನ್ಯವಾಗಿ ಯಾವ ವಿಷಯಗಳು ಆಸಕ್ತಿಕರವಾಗಿವೆ? ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸಿ, ಬಹುಶಃ ಬೈಬಲ್‌ ಅಧ್ಯಯನವನ್ನೂ ಆರಂಭಿಸಿರುವ ಒಬ್ಬರು ಅಥವಾ ಇಬ್ಬರು ಪ್ರಚಾರಕರನ್ನು ಚುಟುಕಾಗಿ ಇಂಟರ್‌ವ್ಯೂ ಮಾಡಿರಿ. ತದನಂತರ ಅವರು ಮನೆಯಿಂದ ಮನೆಯಲ್ಲಿ ಆ ಸಾಹಿತ್ಯ ನೀಡುವುದನ್ನು ಪ್ರತ್ಯಕ್ಷಾಭಿನಯಿಸಲಿ. ಇದಕ್ಕಾಗಿ ನಿಮ್ಮ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ರುಜುವಾಗಿರುವ ಇನ್ನೊಂದು ನಿರೂಪಣೆಯನ್ನು ಬಳಸಿರಿ.​—⁠ದಯವಿಟ್ಟು ಜನವರಿ 2005ರ ನಮ್ಮ ರಾಜ್ಯದ ಸೇವೆ, ಪು. 8, ಪ್ಯಾರ. 5ನ್ನು ನೋಡಿ.

ಗೀತೆ 208 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 3ರಿಂದ ಆರಂಭವಾಗುವ ವಾರ

ಗೀತೆ 111

10 ನಿ: ಸ್ಥಳಿಕ ಪ್ರಕಟನೆಗಳು. ಒಂದುವೇಳೆ ಪ್ರಚಾರಕರು ಜೂನ್‌ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ಇನ್ನೂ ಕೊಟ್ಟಿರದಿದ್ದಲ್ಲಿ ಅದನ್ನು ಕೊಡುವಂತೆ ಮರುಜ್ಞಾಪಿಸಿರಿ.

15 ನಿ: ಸ್ಥಳಿಕ ಅಗತ್ಯಗಳು.

20 ನಿ: “ನೀವು ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಹೇಗೆ ತಲಪಬಲ್ಲಿರಿ?”c ಸಭೆಯಲ್ಲಿರುವ ಯುವಜನರು ತಮ್ಮ ಆಧ್ಯಾತ್ಮಿಕ ಗುರಿಗಳ ಬಗ್ಗೆ ಮತ್ತು ಅವುಗಳನ್ನು ತಲಪಲು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಹೇಳಿಕೆಕೊಡುವಂತೆ ಕೇಳಿರಿ. ಮುಂಚಿತವಾಗಿಯೇ ಒಂದೆರಡು ಹೇಳಿಕೆಗಳನ್ನು ಏರ್ಪಡಿಸಸಾಧ್ಯವಿದೆ.

ಗೀತೆ 30 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ