ಸೇವಾ ಕೂಟದ ಶೆಡ್ಯೂಲ್
ಮೇ 8ರಿಂದ ಆರಂಭವಾಗುವ ವಾರ
ಗೀತೆ 2
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! ಮತ್ತು ಮೇ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ಒಬ್ಬ ಪ್ರಚಾರಕನಿಗೆ ಒಂದು ಪತ್ರಿಕಾ ಮಾರ್ಗವಿದ್ದು, ಕಾರಣಾಂತರದಿಂದ ಮೇ 1ರ ಕಾವಲಿನಬುರುಜು ಪತ್ರಿಕೆ ಆ ವ್ಯಕ್ತಿಯ ಕೈಸೇರಿರುವುದಿಲ್ಲ; ಆದುದರಿಂದ ಆ ಪ್ರಚಾರಕನು ಆ ವ್ಯಕ್ತಿಗೆ ಮೇ 1 ಮತ್ತು ಮೇ 15ರ ಕಾವಲಿನಬುರುಜು ಪತ್ರಿಕೆಯನ್ನು ಮತ್ತು ಏಪ್ರಿಲ್-ಜೂನ್ ಎಚ್ಚರ! ಪತ್ರಿಕೆಯನ್ನು ನೀಡುತ್ತಿರುವಂತೆ ತೋರಿಸಿರಿ. ಈ ಮೂರು ಪತ್ರಿಕೆಗಳನ್ನು ನೀಡುವಾಗ, ಒಂದೇ ಒಂದು ಸಂಚಿಕೆಯನ್ನು ಮಾತ್ರ ಎತ್ತಿತೋರಿಸಿರಿ. ಪ್ರಚಾರಕರು ತಮ್ಮ ಪತ್ರಿಕಾ ಮಾರ್ಗದಲ್ಲಿರುವ ವ್ಯಕ್ತಿಗಳನ್ನು ತಿಂಗಳಿಗೆ ಒಂದು ಬಾರಿ ಅಥವಾ ಎರಡು ಬಾರಿ ಭೇಟಿಮಾಡಬಹುದು.
20 ನಿ: ‘ನನ್ನನ್ನು ಹಿಂಬಾಲಿಸುತ್ತಾ ಇರಿ.’a ಸರಳವಾದ ಜೀವನವನ್ನು ನಡೆಸಲು ಮತ್ತು ರಾಜ್ಯಾಭಿರುಚಿಗಳನ್ನು ವಿಸ್ತರಿಸುವುದರಲ್ಲಿ ಹಾಗೂ ಇತರರಿಗೆ ನೆರವು ನೀಡುವುದರಲ್ಲಿ ಹೆಚ್ಚನ್ನು ಮಾಡಲಿಕ್ಕಾಗಿ ವೈಯಕ್ತಿಕ ಬೆನ್ನಟ್ಟುವಿಕೆಗಳನ್ನು ಮಿತಗೊಳಿಸಲು ಹೆಣಗಾಡುವಂಥ ಒಬ್ಬ ಆದರ್ಶಪ್ರಾಯ ಪ್ರಚಾರಕನೊಂದಿಗೆ ಚುಟುಕಾದ ಇಂಟರ್‌ವ್ಯೂ ನಡೆಸಿರಿ. ಹೀಗೆ ಮಾಡುವುದರಿಂದ ಅವನಿಗೆ ಸಿಕ್ಕಿರುವ ಆಶೀರ್ವಾದಗಳನ್ನು ಎತ್ತಿತೋರಿಸಿರಿ.
15 ನಿ: ಸ್ಥಳಿಕ ಅನುಭವಗಳು. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಶುಶ್ರೂಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಗ ತಮಗೆ ದೊರೆತ ಆಶೀರ್ವಾದಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ಮತ್ತು ಜ್ಞಾಪಕಾಚರಣೆಗೆ ಹಾಜರಾಗುವಂತೆ ಹೊಸಬರಿಗೆ ಸಹಾಯಮಾಡುವುದರಲ್ಲಿ ದೊರೆತ ಫಲಿತಾಂಶಗಳನ್ನು ಎತ್ತಿಹೇಳಿರಿ. ಗಮನಾರ್ಹವಾದ ಒಂದೆರಡು ಅನುಭವಗಳನ್ನು ಪುನರಭಿನಯಿಸಬಹುದು.
ಗೀತೆ 91 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 15ರಿಂದ ಆರಂಭವಾಗುವ ವಾರ
ಗೀತೆ 9
10 ನಿ: ಸ್ಥಳಿಕ ಪ್ರಕಟನೆಗಳು. ಮೇ 29ರ ವಾರದ ಸೇವಾ ಕೂಟದ ತಯಾರಿಗಾಗಿ, ನೋಹನು ದೇವರೊಂದಿಗೆ ನಡೆದನು (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.
10 ನಿ: ಕ್ರಿಸ್ತನ ನಾಯಕತ್ವದ ಕೆಳಗೆ ಐಕ್ಯದಿಂದ ಕೂಡಿ ಕಾರ್ಯನಡೆಸುವುದು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ 14-15ನೇ ಪುಟಗಳಲ್ಲಿರುವ, “ಅವನ ಪಾತ್ರವನ್ನು ಗುರುತಿಸಿ ಮಾನ್ಯಮಾಡುವುದರ ಅರ್ಥವೇನು?” ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯದ ಮೇಲಾಧಾರಿತವಾದ ಒಂದು ಭಾಷಣ.
25 ನಿ: “ರಾಜ್ಯ ಸಭಾಗೃಹ ನಿರ್ಮಾಣಕಾರ್ಯ—ನಮ್ಮ ಪವಿತ್ರ ಸೇವೆಯ ಪ್ರಮುಖ ಅಂಶ.”b 2ನೇ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಒಂದು ಅಪ್ಲಿಕೇಶನ್ ಫೋರ್ ಕಿಂಗ್‌ಡಮ್ ಹಾಲ್ ಕನ್ಸಟ್ರಕ್ಷನ್ ವಾಲಂಟೀಯರ್ ಪ್ರೋಗ್ರಾಮ್ (A-25) ಫಾರ್ಮನ್ನು ತೋರಿಸಿರಿ ಮತ್ತು ಅದರ ಪ್ರತಿಗಳನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ವಿವರಿಸಿರಿ. ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯದಲ್ಲಿ ಅಥವಾ ಅವುಗಳ ನವೀಕರಣದಲ್ಲಿ ಭಾಗವಹಿಸಿರುವಂಥ ಕೆಲವರನ್ನು ಇಂಟರ್‌ವ್ಯೂ ಮಾಡಿ.
ಗೀತೆ 133 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 22ರಿಂದ ಆರಂಭವಾಗುವ ವಾರ
ಗೀತೆ 86
12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! ಮತ್ತು ಜೂನ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತ್ಯಕ್ಷಾಭಿನಯಗಳಿಗಾಗಿರುವ ಸೆಟಿಂಗ್‌ನೋಪಾದಿ, ಒಂದು ಕುಟುಂಬವು ಒಂದು ಅಭ್ಯಾಸ ಸೆಶನ್ ನಡೆಸುತ್ತಿರುವುದನ್ನು ತೋರಿಸಿರಿ.
15 ನಿ: “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ದಯಾಪರರಾಗಿರುವ ಮೂಲಕ.”c
18 ನಿ: ಉತ್ತಮ ವೈಯಕ್ತಿಕ ತೋರಿಕೆ. ಶುಶ್ರೂಷಾ ಶಾಲೆ ಪುಸ್ತಕದ 131-3ನೇ ಪುಟಗಳ ಮೇಲಾಧಾರಿಸಿ ಸಭಿಕರೊಂದಿಗೆ ಚರ್ಚೆ. ನಮ್ಮ ಉಡುಪು ಮತ್ತು ಕೇಶಾಲಂಕಾರಕ್ಕೆ ಸಂಬಂಧಿಸಿ ಅಲ್ಲಿ ಪಟ್ಟಿಮಾಡಲ್ಪಟ್ಟಿರುವ ಐದು ಮೂಲತತ್ತ್ವಗಳನ್ನು ಪರಿಗಣಿಸಿರಿ. ಸಭಾ ಕೂಟಗಳಿಗೆ ಸೂಕ್ತವಾದ ರೀತಿಯಲ್ಲಿ ಹೇಗೆ ಉಡುಪನ್ನು ಧರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಲಿಕ್ಕಾಗಿ ನಾವು ಈ ವಿಷಯಭಾಗವನ್ನು ಜಾಣ್ಮೆಯಿಂದ ಉಪಯೋಗಿಸಸಾಧ್ಯವಿದೆ ಎಂಬುದನ್ನು ತಿಳಿಸಿರಿ.
ಗೀತೆ 215 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 29ರಿಂದ ಆರಂಭವಾಗುವ ವಾರ
ಗೀತೆ 42
10 ನಿ: ಸ್ಥಳಿಕ ಪ್ರಕಟನೆಗಳು. ಮೇ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ನೀಡುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ.
10 ನಿ: ಜೂನ್ ತಿಂಗಳಿನಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. 1994, ಡಿಸೆಂಬರ್ ತಿಂಗಳಿನ ನಮ್ಮ ರಾಜ್ಯದ ಸೇವೆಯ 8ನೇ ಪುಟಗಳಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಸಮಯವು ಅನುಮತಿಸಿದಂತೆ, ಈ ಪ್ರಕಾಶನವನ್ನು ಕ್ಷೇತ್ರದಲ್ಲಿ ಅಥವಾ ತಮ್ಮ ಕುಟುಂಬದೊಂದಿಗೆ ಉಪಯೋಗಿಸಿರುವುದರಿಂದ ದೊರೆತ ಒಳ್ಳೇ ಫಲಿತಾಂಶಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.
25 ನಿ: “ಎಲ್ಲ ವಯಸ್ಸಿನವರಿಗೂ ಒಂದು ಮಾದರಿ.” ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ, ಮತ್ತು ಎರಡನೇ ಪ್ಯಾರಗ್ರಾಫ್‌ನಲ್ಲಿ ಪಟ್ಟಿಮಾಡಲಾಗಿರುವ ಎಲ್ಲ ಪ್ರಶ್ನೆಗಳನ್ನು ಉಪಯೋಗಿಸುತ್ತಾ ನೋಹ ವಿಡಿಯೋದ ಪ್ರಶ್ನಾವಳಿ (ಕ್ವಿಸ್)ಯ ಕುರಿತು ಸಭಿಕರೊಂದಿಗೆ ಚರ್ಚೆಯನ್ನು ಆರಂಭಿಸಿರಿ. ತದನಂತರ, ಡಿವಿಡಿಯಲ್ಲಿ ಸೂಚಿಸಲಾಗಿರುವ “ಕಲಿಕೆಯ ಚಟುವಟಿಕೆಗಳಲ್ಲಿ” (ಲರ್ನಿಂಗ್ ಆ್ಯಕ್ಟಿವಿಟೀಸ್) ಪಾಲ್ಗೊಳ್ಳುವ ಮೂಲಕ ತಾವು ಹೇಗೆ ಪ್ರಯೋಜನ ಪಡೆದೆವು ಎಂಬುದನ್ನು ಕುಟುಂಬಗಳು ತಿಳಿಸುವಂತೆ ಹೇಳಿ. ಇದಾದ ಬಳಿಕ, ಮೂರನೆಯ ಪ್ಯಾರಗ್ರಾಫ್‌ನಲ್ಲಿರುವ ಪ್ರಶ್ನೆಯನ್ನು ಮತ್ತು ಶಾಸ್ತ್ರವಚನಗಳನ್ನು ಚರ್ಚಿಸಿರಿ.
ಗೀತೆ 9 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 5ರಿಂದ ಆರಂಭವಾಗುವ ವಾರ
ಗೀತೆ 176
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ಪುನರ್ಭೇಟಿಗಳನ್ನು ಮಾಡುವುದರಲ್ಲಿ ಸಫಲರಾಗುವ ವಿಧ. 2003, ನವೆಂಬರ್ 15ರ ಕಾವಲಿನಬುರುಜು ಪತ್ರಿಕೆಯ 16ನೇ ಪುಟದಲ್ಲಿರುವ ಚೌಕದ ಮೇಲಾಧಾರಿಸಿ ಸಭಿಕರೊಂದಿಗೆ ಚರ್ಚೆ. ಆ ಏಳು ಸಲಹೆಗಳಲ್ಲಿ ಪ್ರತಿಯೊಂದನ್ನೂ ಪರಿಗಣಿಸಿರಿ ಮತ್ತು ಇವುಗಳನ್ನು ಸ್ಥಳಿಕವಾಗಿ ಹೇಗೆ ಅನ್ವಯಿಸಸಾಧ್ಯವಿದೆ ಎಂಬುದನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಯಾರು ಸಾಹಿತ್ಯವನ್ನು ಸ್ವೀಕರಿಸುತ್ತಾರೋ ಅಥವಾ ಆಸಕ್ತಿಯನ್ನು ತೋರಿಸುತ್ತಾರೋ ಅವರೊಂದಿಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಗುರಿಯೊಂದಿಗೆ ಪುನರ್ಭೇಟಿಗಳನ್ನು ಮಾಡುವಂತೆ ಪ್ರಚಾರಕರನ್ನು ಉತ್ತೇಜಿಸಿರಿ. 2006, ಜನವರಿ ತಿಂಗಳಿನ ನಮ್ಮ ರಾಜ್ಯದ ಸೇವೆಯ 6ನೇ ಪುಟದಲ್ಲಿ ಕಂಡುಬರುವ ಸಲಹೆಗಳಲ್ಲಿ ಒಂದನ್ನು ಉಪಯೋಗಿಸುತ್ತಾ, ಒಂದು ಪುನರ್ಭೇಟಿಯ ಸಮಯದಲ್ಲಿ ಬೈಬಲ್ ಅಧ್ಯಯನದ ಕುರಿತು ಹೇಗೆ ಪ್ರಸ್ತಾಪಿಸಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
ಗೀತೆ 57 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.