ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಹೊಸ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಆ ಪುಸ್ತಕದಿಂದ ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಅದರ ಉದ್ದೇಶವಾಗಿರಬೇಕು. ಜೂನ್: ಮಹಾ ಬೋಧಕನಿಂದ ಕಲಿಯಿರಿa ಪುಸ್ತಕವನ್ನು ನೀಡಿರಿ. ಮನೆಯವರ ಭಾಷೆಯಲ್ಲಿ ಈ ಪ್ರಕಾಶನವು ಲಭ್ಯವಿರದಿದ್ದಲ್ಲಿ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ನೀಡಿರಿ. ಜುಲೈ ಮತ್ತು ಆಗಸ್ಟ್: 32 ಪುಟಗಳ ಮುಂದಿನ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, ಪರದೈಸನ್ನು ತರಲಿರುವ ಸರಕಾರ,b “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?,ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಮತ್ತು ಎಚ್ಚರಿಕೆಯಿಂದಿರಿ! ಕೆಲವು ಸ್ಥಳಗಳಲ್ಲಿ, ಈ ಮುಂದಿನ ಬ್ರೋಷರ್‌ಗಳನ್ನು ನೀಡುವುದು ಸೂಕ್ತವಾಗಿರಬಹುದು: ಸಕಲ ಜನರಿಗಾಗಿರುವ ಒಂದು ಗ್ರಂಥ, ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ?,c ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ?d ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ.
◼ ಏಪ್ರಿಲ್‌ನಿಂದ ಆರಂಭಿಸುತ್ತಾ, 2006ರ ಜಿಲ್ಲಾ ಅಧಿವೇಶನಕ್ಕಾಗಿರುವ ಬ್ಯಾಡ್ಜ್ ಕಾರ್ಡ್‌ಗಳು ನಿಮಗೆ ಕಳುಹಿಸಲ್ಪಡುವ ಸಾಹಿತ್ಯದ ರವಾನೆಗಳೊಂದಿಗೆ ಕಳುಹಿಸಲ್ಪಡುವವು. ಪ್ರತಿಯೊಂದು ಸಭೆಯ ಗಾತ್ರಕ್ಕನುಸಾರವಾಗಿ ಕಾರ್ಡ್‌ಗಳನ್ನು 25ರ ಸೆಟ್‌ಗಳಲ್ಲಿ ಕಳುಹಿಸಲಾಗುವುದು. ಅವು ನಿಮ್ಮ ಸಭೆಯ ಪ್ರಥಮ ಭಾಷೆಯಲ್ಲಿರುವವು. ಇವುಗಳಿಗಾಗಿ ನೀವು ವಿನಂತಿಯನ್ನು ಕಳುಹಿಸಬೇಕಾಗಿಲ್ಲ. ಆದರೆ ಒಂದುವೇಳೆ ನಿಮಗೆ ನಿಮ್ಮ ಸಭೆಯ ಪ್ರಥಮ ಭಾಷೆಯಾಗಿರದ ಒಂದು ಭಾಷೆಯಲ್ಲಿ ಈ ಬ್ಯಾಡ್ಜ್ ಕಾರ್ಡ್‌ಗಳು ಬೇಕಾಗಿದ್ದರೆ ಮಾತ್ರ ಅದಕ್ಕಾಗಿ ವಿನಂತಿಯನ್ನು ಕಳುಹಿಸಬೇಕಾಗುವುದು. ಸಭೆಗೆ ಇನ್ನೂ ಹೆಚ್ಚಿನ ಬ್ಯಾಡ್ಜ್ ಕಾರ್ಡ್‌ಗಳು ಬೇಕಾಗಿರುವಲ್ಲಿ, ನಿಮ್ಮ ವಿನಂತಿಯನ್ನು ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ಕಳುಹಿಸಬಹುದು.
◼ ರೆಗ್ಯುಲರ್ ಪಯನೀಯರ್ ಸೇವೆಗಾಗಿರುವ ಅರ್ಜಿ (S-205) ಹಾಗೂ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಜಿ (S-205b)ಗಳ ಸಾಕಷ್ಟು ಸರಬರಾಯಿಯನ್ನು ಹೊಂದಿರುವಂತೆ ಸಭೆಯ ಕಾರ್ಯದರ್ಶಿಗಳು ನೋಡಿಕೊಳ್ಳಬೇಕು. ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ಇವುಗಳಿಗಾಗಿ ಆರ್ಡರ್ ಮಾಡಬಹುದು. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗುವಷ್ಟು ಅರ್ಜಿಗಳನ್ನು ಇಟ್ಟುಕೊಳ್ಳಿರಿ. ರೆಗ್ಯುಲರ್ ಪಯನೀಯರ್ ಸೇವೆಗಾಗಿರುವ ಅರ್ಜಿಗಳನ್ನು ಬ್ರಾಂಚ್‌ಗೆ ಕಳುಹಿಸುವ ಮುಂಚೆ, ಅವು ಪೂರ್ತಿಯಾಗಿ ಭರ್ತಿಮಾಡಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
◼ ಒಂದು ರಾಜ್ಯ ಸಭಾಗೃಹದ ನಿರ್ಮಾಣ ಯೋಜನೆಯನ್ನು—ಅಂದರೆ ಹೊಸ ನಿರ್ಮಾಣಕಾರ್ಯವನ್ನೋ ಅಥವಾ ನವೀಕರಣ ಕೆಲಸವನ್ನೋ—ಪ್ರಾರಂಭಿಸುವುದಕ್ಕೆ ಮುಂಚೆ ಹಿರಿಯರು ಬ್ರಾಂಚ್ ಆಫೀಸ್‌ನಲ್ಲಿರುವ ಕಿಂಗ್‌ಡಮ್ ಹಾಲ್ ಕನ್ಸ್‌ಟ್ರಕ್ಷನ್ ಡೆಸ್ಕ್ ಅನ್ನು ಸಂಪರ್ಕಿಸಬೇಕು. ಸಭೆಗಳು ಜಮೀನು ಮತ್ತು ಸಾಮಗ್ರಿಗಳ ಖರೀದಿ ಹಾಗೂ ಇತರ ವಿಚಾರಗಳಲ್ಲಿ ವಿವೇಕಯುತ ತೀರ್ಮಾನಗಳನ್ನು ಮಾಡಲು ಸಹಾಯಮಾಡುವಂಥ ಮಾಹಿತಿಯು ಅವರ ಬಳಿಯಿದೆ.
◼ ಎಲ್ಲ ಅಧ್ಯಕ್ಷ ಮೇಲ್ವಿಚಾರಕರು ಮತ್ತು ಕಾರ್ಯದರ್ಶಿಗಳ ಸದ್ಯದ ವಿಳಾಸಗಳು ಮತ್ತು ಟೆಲಿಫೋನ್ ನಂಬರುಗಳ ದಾಖಲೆಯು ಬ್ರಾಂಚ್ ಆಫೀಸಿನ ಬಳಿ ಇರುವುದು ಬಹಳ ಅಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಗಳಿರುವುದಾದರೆ, ಸಭೆಯ ಸೇವಾ ಕಮಿಟಿಯು ಅಧ್ಯಕ್ಷ ಮೇಲ್ವಿಚಾರಕ/ಸೆಕ್ರಿಟರಿಯ ವಿಳಾಸದ ಬದಲಾವಣೆ (S-29) ಫಾರ್ಮ್ ಅನ್ನು ಭರ್ತಿಮಾಡಿ, ತಡಮಾಡದೆ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಇದರಲ್ಲಿ ಎಸ್‌ಟಿಡಿ ಕೋಡ್‌ಗಳಲ್ಲಾಗುವ ಯಾವುದೇ ಬದಲಾವಣೆಗಳೂ ಒಳಗೂಡಿರುತ್ತದೆ.
◼ ‘ಯಿಯರ್‌ಲಿ ಕ್ಯಾಲೆಂಡರ್ ಆಫ್ ಲಿಟ್‌ರೇಚರ್ ಐಟಮ್ಸ್’ಗನುಸಾರ, ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ಪಟ್ಟಿಮಾಡಲ್ಪಟ್ಟಿರುವ ಫಾರ್ಮ್‌ಗಳಿಗಾಗಿರುವ ವಿನಂತಿಯನ್ನು ಏಪ್ರಿಲ್ ತಿಂಗಳಿನಲ್ಲಿ ಕಳುಹಿಸಬೇಕಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ—ಈ ಫಾರ್ಮ್‌ಗಳು ಮುಂದಿನ ಸೇವಾ ವರ್ಷದ ಉಪಯೋಗಕ್ಕಾಗಿವೆ. ಆದುದರಿಂದ, ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನ ಎರಡನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಎಲ್ಲ ಫಾರ್ಮ್‌ಗಳು ಇಡೀ ವರ್ಷಕ್ಕೆ ನಿಮಗೆ ಎಷ್ಟು ಬೇಕಾಗಿವೆ ಎಂಬುದನ್ನು ಮರುಪರಿಶೀಲಿಸಿರಿ ಮತ್ತು ನಿಮ್ಮ ಮುಂದಿನ ತಿಂಗಳ ಸಾಹಿತ್ಯ ಬೇಡಿಕೆಯೊಂದಿಗೆ ಈ ಫಾರ್ಮ್‌ಗಳಿಗಾಗಿಯೂ ವಿನಂತಿಸಿರಿ. ಅನೇಕವೇಳೆ ಸಭೆಗಳು ಒಂದು ಅಥವಾ ಎರಡು ಫಾರ್ಮ್‌ಗಳಿಗಾಗಿ ತುರ್ತಿನ ಬೇಡಿಕೆಯೊಂದನ್ನು ಕಳುಹಿಸುವುದನ್ನು ಗಮನಿಸಲಾಗಿದೆ. ಸೇವಾ ಫಾರ್ಮ್‌ಗಳಿಗಾಗಿರುವ ವಿನಂತಿಯನ್ನು ಸಾಹಿತ್ಯದ ವಿನಂತಿಯೊಂದಿಗೆ ಕಳುಹಿಸುವುದು ಉತ್ತಮ. ಏಕೆಂದರೆ ಇದು ನಿರ್ವಹಣಾ ವೆಚ್ಚಗಳು ಮತ್ತು ಸಮಯವನ್ನು ಉಳಿತಾಯ ಮಾಡುವುದು.
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.