ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2006ರ ಏಪ್ರಿಲ್ 24ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2006ರ ಮಾರ್ಚ್ 6ರಿಂದ ಏಪ್ರಿಲ್ 24ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಬೋಧಿಸುವಾಗ, ವಿಚಾರದಲ್ಲಿ ಬದಲಾವಣೆ ಮಾಡುವ ಪ್ರತಿಯೊಂದು ಸಂದರ್ಭದಲ್ಲಿ ನಾವೇಕೆ ಸ್ವಲ್ಪ ನಿಲ್ಲಿಸಬೇಕು, ಆದರೆ ಹಾಗೆ ಮಾಡುವುದರಿಂದ ನಮ್ಮನ್ನು ಯಾವುದು ತಡೆಯಬಹುದು? [be-KA ಪು. 98 ಪ್ಯಾರ. 2–3]
2. ಇತರರಿಗೆ ಸಾಕ್ಷಿ ನೀಡುತ್ತಿರುವಾಗ ಮಧ್ಯೆ ಮಧ್ಯೆ ನಿಲ್ಲಿಸಿ ಮಾತಾಡುವುದು ಏಕೆ ಪ್ರಾಮುಖ್ಯ? [be-KA ಪು. 99 ಪ್ಯಾರ. 5–ಪು. 100 ಪ್ಯಾರ. 4]
3. ಒಂದು ಭಾಷಣವನ್ನು ನೀಡುತ್ತಿರುವಾಗ ಅರ್ಥಒತ್ತು ಪ್ರಾಮುಖ್ಯವೇಕೆ, ಮತ್ತು ನಾವು ಹೇಗೆ ಸರಿಯಾದ ಅರ್ಥಒತ್ತನ್ನು ಕೊಡಲು ಕಲಿಯಸಾಧ್ಯವಿದೆ? [be-KA ಪು. 101 ಪ್ಯಾರ. 1-5, ಚೌಕ]
4. ಸಾರ್ವಜನಿಕವಾಗಿ ಓದುವಾಗ, ನಮ್ಮ ವಿಷಯಭಾಗದ ಪ್ರಧಾನ ವಿಚಾರಗಳು ಒತ್ತಿಹೇಳಲ್ಪಡುವುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? [be-KA ಪು. 105 ಪ್ಯಾರ. 1-6]
5. ಬೋಧಿಸುವಾಗ ಸೂಕ್ತವಾದ ಧ್ವನಿ ಪ್ರಾಮುಖ್ಯವೇಕೆ, ಮತ್ತು ಧ್ವನಿಯ ಮಟ್ಟ ಎಷ್ಟಿರಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸಬಲ್ಲೆವು? [be-KA ಪು. 107-8]
ನೇಮಕ ನಂ. 1
6. ಇಂದು ಕ್ರೈಸ್ತರಿರುವ ಸನ್ನಿವೇಶವು ಎಸ್ತೇರಳು ಮತ್ತು ಮೊರ್ದೆಕೈಯಿದ್ದ ಸನ್ನಿವೇಶದಂತಿದೆ ಹೇಗೆ, ಹಾಗೂ ಅವರ ಮಾದರಿಯನ್ನು ನಾವು ಹೇಗೆ ಅನುಕರಿಸಸಾಧ್ಯವಿದೆ? [bsi06-KA ಪು. 11 ಪ್ಯಾರ. 17]
7. “ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ” ಎಂದು ಸೊಲೊಮೋನನು ಹೇಳಿದಾಗ ಅವನೇನನ್ನು ವರ್ಣಿಸುತ್ತಿದ್ದನು? (ಪ್ರಸಂ. 2:11) [w04-KA 10/15 ಪು. 4 ಪ್ಯಾರ. 3-4]
8. ದೇವರ ಮೇಲಣ ಪ್ರೀತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ? (ಮಾರ್ಕ 12:30) [w04-KA 3/1 ಪು. 19-21]
9. ಆಧ್ಯಾತ್ಮಿಕ ಮೌಲ್ಯಗಳು ಮತ್ತು ಪ್ರಾಪಂಚಿಕತೆಯ ಮಧ್ಯೆ ಯಾವ ವ್ಯತ್ಯಾಸಗಳಿವೆ? [w04-KA 10/15 ಪು. 5-7]
10. ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಅಪಕರ್ಷಿತರಾಗದೆ ಕಿವಿಗೊಡಲು ನಮಗೆ ಯಾವುದು ಸಹಾಯಮಾಡಬಲ್ಲದು? [be-KA ಪು. 15-16]
ವಾರದ ಬೈಬಲ್ ವಾಚನ
11. ಹಾಮಾನನ ಮುಖಕ್ಕೆ ಮುಸುಕು ಹಾಕಲ್ಪಟ್ಟದ್ದೇಕೆ? (ಎಸ್ತೇ. 7:8)
12. ಯಾವ ರೀತಿಯ ಆತ್ಮಜೀವಿಯು ಎಲೀಫಜನ ಆಲೋಚನೆಗಳನ್ನು ಪ್ರಭಾವಿಸಿತ್ತು? (ಯೋಬ 4:15, 16) [w05-KA 9/15 ಪು. 26 ಪ್ಯಾರ. 2]
13. ಯೋಬ 7:9, 10 ಮತ್ತು ಯೋಬ 10:21ರಲ್ಲಿ ದಾಖಲಿಸಲ್ಪಟ್ಟಿರುವ ಯೋಬನ ಹೇಳಿಕೆಗಳು ಅವನಿಗೆ ಪುನರುತ್ಥಾನದಲ್ಲಿ ನಂಬಿಕೆ ಇರಲಿಲ್ಲ ಎಂಬುದನ್ನು ಸೂಚಿಸುತ್ತವೊ?
14. “ನಾನು ನನ್ನ ಹಲ್ಲುಗಳ ತೊಗಲಿನೊಂದಿಗೆ ತಪ್ಪಿಸಿಕೊಂಡೆನು” ಎಂದು ಯೋಬನು ಹೇಳಿದ್ದರ ಅರ್ಥವೇನಾಗಿದ್ದಿರಬಹುದು? (ಯೋಬ 19:20, NIBV)
15. “ನನ್ನ ಯಥಾರ್ಥತ್ವದ ಹೆಸರನ್ನು [ಸಮಗ್ರತೆಯನ್ನು] ಕಳಕೊಳ್ಳೆನು” ಎಂದು ಹೇಳಿದಾಗ ಯೋಬನ ಅರ್ಥವೇನಾಗಿತ್ತು, ಮತ್ತು ಇದರಿಂದ ನಾವೇನನ್ನು ಕಲಿಯಸಾಧ್ಯವಿದೆ? (ಯೋಬ 27:5)