ಸೇವಾ ಕೂಟದ ಶೆಡ್ಯೂಲ್
ಸೂಚನೆ: ಮುಂಬರುವ ತಿಂಗಳುಗಳಲ್ಲಿ ಪ್ರತಿಯೊಂದು ವಾರಕ್ಕಾಗಿ ನಮ್ಮ ರಾಜ್ಯದ ಸೇವೆಯಲ್ಲಿ ಒಂದು ಸೇವಾ ಕೂಟವು ಶೆಡ್ಯೂಲ್ ಮಾಡಲ್ಪಡುವುದು. “ಬಿಡುಗಡೆಯು ಸಮೀಪವಿದೆ!” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುವಂತೆ ಸಭೆಗಳು ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳಸಾಧ್ಯವಿದೆ. ಸೂಕ್ತವಾಗಿರುವಲ್ಲಿ, ಅಧಿವೇಶನದ ಮುಂಚಿನ ವಾರದಲ್ಲಿ ನಡೆಸಲ್ಪಡುವ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿ ಕೊಡಲ್ಪಟ್ಟಿರುವ ವಿಷಯಗಳಲ್ಲಿ ಸ್ಥಳಿಕವಾಗಿ ಅನ್ವಯವಾಗುವ ಸಲಹೆಗಳು ಮತ್ತು ಮರುಜ್ಞಾಪನಗಳನ್ನು ಪುನರಾವರ್ತಿಸಿ ಹೇಳಲು 15 ನಿಮಿಷಗಳನ್ನು ಉಪಯೋಗಿಸಿರಿ. ಅಧಿವೇಶನವು ನಡೆಸಲ್ಪಟ್ಟು ಒಂದು ಅಥವಾ ಎರಡು ತಿಂಗಳುಗಳು ಕಳೆದ ಬಳಿಕ, ಅಧಿವೇಶನದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಒಂದು ಸೇವಾ ಕೂಟದಲ್ಲಿ 15ರಿಂದ 20 ನಿಮಿಷಗಳನ್ನು ಬದಿಗಿರಿಸಿರಿ (ಇದಕ್ಕೆ ಪ್ರಾಯಶಃ ಸ್ಥಳಿಕ ಅಗತ್ಯಗಳ ಒಂದು ಭಾಗವನ್ನು ಉಪಯೋಗಿಸಬಹುದು). ಇದು ಇಡೀ ಅಧಿವೇಶನ ಕಾರ್ಯಕ್ರಮದ ಒಂದು ಪುನರ್ವಿಮರ್ಶೆಯಾಗಿರಬಾರದು. ಬದಲಿಗೆ, ಕ್ಷೇತ್ರ ಸೇವೆಯ ಚಟುವಟಿಕೆಗೆ ನೇರವಾಗಿ ಅನ್ವಯಿಸುವ ಭಾಗಗಳನ್ನು ಮಾತ್ರ ಎತ್ತಿತೋರಿಸಿರಿ. ಆ ಮಾಹಿತಿಯನ್ನು ತಮ್ಮ ಶುಶ್ರೂಷೆಯಲ್ಲಿ ಹೇಗೆ ಅನ್ವಯಿಸುತ್ತಿದ್ದಾರೆ ಎಂಬುದರ ಬಗ್ಗೆ ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.
ಏಪ್ರಿಲ್ 10ರಿಂದ ಆರಂಭವಾಗುವ ವಾರ
ಗೀತೆ 49
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಏಪ್ರಿಲ್ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ಬೈಬಲಿನ ಸಂದೇಶದಲ್ಲಿ ವಿಶೇಷ ಆಸಕ್ತಿಯನ್ನು ತೋರಿಸುವ ಒಬ್ಬ ಮನೆಯವನಿಗೆ ಪ್ರಚಾರಕನು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಸಹ ನೀಡುವಂತೆ ಮಾಡಿ.
15 ನಿ: “ಹುರುಪನ್ನು ಕಾಪಾಡಿಕೊಳ್ಳುವ ವಿಧ.”a 2002, ಜೂನ್ 15ರ ಕಾವಲಿನಬುರುಜುವಿನ ಪುಟ 14, ಪ್ಯಾರಗ್ರಾಫ್ 13ರ ಮೇಲೆ ಆಧಾರಿತವಾಗಿರುವ ಹೇಳಿಕೆಗಳನ್ನು ಸೇರಿಸಿಕೊಳ್ಳಿರಿ.
20 ನಿ: “ನೀವು ನಿಮ್ಮ ಕಾಲತಖ್ತೆಯನ್ನು ಹೊಂದಿಸಿಕೊಳ್ಳಬಲ್ಲಿರೋ?”b ವಿಷಯಭಾಗದ ಸ್ಥಳಿಕ ಅನ್ವಯವನ್ನು ಮಾಡಿರಿ. ಸಂಜೆ ಸಾಕ್ಷಿಕಾರ್ಯಕ್ಕಾಗಿ ಸಭೆಯು ಯಾವುದೇ ಏರ್ಪಾಡನ್ನು ಮಾಡಿರುವುದಾದರೆ ಅದರ ಕುರಿತು ತಿಳಿಸಿರಿ.
ಗೀತೆ 13 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 17ರಿಂದ ಆರಂಭವಾಗುವ ವಾರ
ಗೀತೆ 104
15 ನಿ: ಸ್ಥಳಿಕ ಪ್ರಕಟನೆಗಳು. ವಿಶೇಷ ಸಾರ್ವಜನಿಕ ಭಾಷಣಕ್ಕಾಗಿ ಮಾಡಲಾಗಿರುವ ಸ್ಥಳಿಕ ಏರ್ಪಾಡುಗಳ ಮೇಲೆ ಒತ್ತುನೀಡಿರಿ. ಜ್ಞಾಪಕಾಚರಣೆಗೆ ಹಾಜರಾದವರು, ಬೈಬಲ್ ವಿದ್ಯಾರ್ಥಿಗಳು ಮತ್ತು ಇತರ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸಲು ಏಪ್ರಿಲ್ 1ರ ಕಾವಲಿನಬುರುಜುವಿನ ಕೊನೆಯ ಪುಟವನ್ನು ಉಪಯೋಗಿಸುವುದನ್ನು ಮುಂದುವರಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಜನರನ್ನು ವಿಶೇಷ ಸಾರ್ವಜನಿಕ ಭಾಷಣಕ್ಕೆ ಆಮಂತ್ರಿಸುವುದರಲ್ಲಿ ಕಾವಲಿನಬುರುಜುವಿನ ಈ ಸಂಚಿಕೆಯನ್ನು ಉಪಯೋಗಿಸುವ ಮೂಲಕ ಸಿಕ್ಕಿದ ಎರಡು ಅಥವಾ ಮೂರು ಅನುಭವಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
12 ನಿ: ಸ್ಥಳಿಕ ಅಗತ್ಯಗಳು.
18 ನಿ: “ಮನೆಬಾಗಿಲಿನಲ್ಲಿ ಮತ್ತು ಟೆಲಿಫೋನಿನ ಮೂಲಕ ಪ್ರಗತಿಪರವಾದ ಬೈಬಲ್ ಅಧ್ಯಯನಗಳನ್ನು ನಡೆಸಿರಿ.”c ಒಬ್ಬ ಪ್ರಚಾರಕನು ಒಂದು ಮನೆಬಾಗಿಲಲ್ಲಿ ನಡೆಸಲ್ಪಡುವ ಅಧ್ಯಯನವನ್ನು ಮನೆಯೊಳಗೆ ನಡೆಸಲ್ಪಡುವ ಅಧ್ಯಯನವನ್ನಾಗಿ ಪರಿವರ್ತಿಸಲು ಏನನ್ನು ಹೇಳಸಾಧ್ಯವಿದೆ ಎಂಬುದನ್ನು ತೋರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿ.
ಗೀತೆ 162 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 24ರಿಂದ ಆರಂಭವಾಗುವ ವಾರ
ಗೀತೆ 66
15 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಮೇ ತಿಂಗಳಲ್ಲಿ ಸಹ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಲಿದ್ದೇವೆ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಮೇ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತ್ಯಕ್ಷಾಭಿನಯಗಳನ್ನು ಹಿಂಬಾಲಿಸಿ ಸ್ಥಳಿಕ ಟೆರಿಟೊರಿಯಲ್ಲಿ ಜನರ ಗಮನವನ್ನು ಸೆಳೆಯಬಹುದಾದ ಆ ಸಂಚಿಕೆಗಳಲ್ಲಿನ ಇತರ ಲೇಖನಗಳ ಕಡೆಗೆ ಗಮನ ಸೆಳೆಯಿರಿ.
30 ನಿ: “ಯೆಹೋವನಿಗಾಗಿ ಎದುರುನೋಡುತ್ತಾ ಇರಿ.”d ಸಭಾ ಸೆಕ್ರಿಟರಿಯಿಂದ ನಿರ್ವಹಿಸಲ್ಪಡುವುದು. ಸಭೆಯು ಯಾವ ಅಧಿವೇಶನಕ್ಕೆ ನೇಮಿಸಲ್ಪಟ್ಟಿದೆ ಎಂಬುದನ್ನು ತಿಳಿಸಿರಿ. ಅಧಿವೇಶನದ ನಗರದಲ್ಲಿರುವಾಗ ಎಲ್ಲ ಸಮಯದಲ್ಲಿ ನಮ್ಮ ಅಧಿವೇಶನದ ಬ್ಯಾಡ್ಜ್ ಕಾರ್ಡನ್ನು ಧರಿಸಿರುವುದು ಹೇಗೆ ಸಾಕ್ಷಿನೀಡಲು ಅವಕಾಶವನ್ನು ಮಾಡಿಕೊಡಬಹುದು ಎಂಬುದರ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಕೇಳಿರಿ. ಅನೌಪಚಾರಿಕವಾಗಿ ಸಾಕ್ಷಿನೀಡಲು ಸಿಗುವ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುವಂತೆ ಮತ್ತು ಆಸಕ್ತಿ ತೋರಿಸಿದ ವ್ಯಕ್ತಿಗಳ ಕುರಿತು ವರದಿಸಲು ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಅನ್ನು ಉಪಯೋಗಿಸುವಂತೆ ಸಭಿಕರನ್ನು ಪ್ರೋತ್ಸಾಹಿಸಿರಿ.
ಗೀತೆ 191 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 1ರಿಂದ ಆರಂಭವಾಗುವ ವಾರ
ಗೀತೆ 211
5 ನಿ:ಸ್ಥಳಿಕ ಪ್ರಕಟನೆಗಳು. ಏಪ್ರಿಲ್ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ನೀಡುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಪುಟ 6ರಲ್ಲಿರುವ, “ನೀವು ನಾಮ ಪ್ರಸ್ತಾವನೆಗಳಿಗಾಗಿ ಕೇಳಿದ್ದೀರೊ?” ಎಂಬ ಭಾಗವನ್ನು ಚರ್ಚಿಸಿರಿ.
10 ನಿ: “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಒಳ್ಳೇ ದೃಷ್ಟಿಸಂಪರ್ಕದ ಮೂಲಕ.”e ಒಬ್ಬ ಪ್ರಚಾರಕನು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ದೃಷ್ಟಿಸಂಪರ್ಕವನ್ನು ಸ್ಥಾಪಿಸಿ, ಸಂಭಾಷಣೆಯನ್ನು ಆರಂಭಿಸಿ, ನಂತರ ಸಾಕ್ಷಿಯನ್ನು ನೀಡುವ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿ.
15 ನಿ: ಯೆಹೋವನ ಕಾರ್ಯಗಳ ಕುರಿತು ಧ್ಯಾನಿಸಿರಿ. (ಕೀರ್ತ. 77:12) ಮಾರ್ಚ್ 2006ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಮೇಲಾಧಾರಿಸಿದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಆಡಳಿತ ಮಂಡಲಿಯ ಪತ್ರದಲ್ಲಿರುವ ಪ್ರೋತ್ಸಾಹದಾಯಕ ಅಂಶಗಳನ್ನು ಪರಿಗಣಿಸಿರಿ.
15 ನಿ: “‘ಬಿಡುಗಡೆಯು ಸಮೀಪವಿದೆ!’ ಜಿಲ್ಲಾ ಅಧಿವೇಶನದ ಕುರಿತು ಪ್ರಕಟಪಡಿಸಲು ಒಂದು ಲೋಕವ್ಯಾಪಕ ಕಾರ್ಯಾಚರಣೆ.”f ಪ್ರತಿಯೊಂದು ಪ್ಯಾರಗ್ರಾಫ್‌ಗಳನ್ನು ಖಂಡಿತ ಓದಿರಿ.
ಗೀತೆ 82 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
f ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.