2006ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್
ಸೂಚನೆಗಳು
ಇಸವಿ 2006ರಲ್ಲಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಮಾಹಿತಿಯ ಮೂಲಗಳು: ಸತ್ಯವೇದವು [BSI], ಕಾವಲಿನಬುರುಜು [w-KA], ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ [be-KA], ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ [wt-KA], ಚರ್ಚೆಗಾಗಿ ಬೈಬಲ್ ವಿಷಯಗಳು [td-KA].
ಶಾಲೆಯನ್ನು ಗೀತೆ, ಪ್ರಾರ್ಥನೆ, ಮತ್ತು ಚುಟುಕಾದ ಸ್ವಾಗತದ ಹೇಳಿಕೆಯೊಂದಿಗೆ ಸರಿಯಾದ ಸಮಯಕ್ಕೆ ಆರಂಭಿಸಿದ ಬಳಿಕ ಈ ಮುಂದಿನಂತೆ ಮುಂದುವರಿಯಿರಿ:
ಭಾಷಣ ಗುಣ: 5 ನಿಮಿಷಗಳು. ಶಾಲಾ ಮೇಲ್ವಿಚಾರಕನು, ಸಹಾಯಕ ಸಲಹೆಗಾರನು, ಅಥವಾ ಇನ್ನೊಬ್ಬ ಅರ್ಹ ಹಿರಿಯನು, ಶುಶ್ರೂಷಾ ಶಾಲೆ ಪಠ್ಯಪುಸ್ತಕದ ಮೇಲಾಧಾರಿತವಾದ ಒಂದು ಭಾಷಣ ಗುಣದ ಕುರಿತು ಚರ್ಚಿಸುವನು. (ಮಿತವಾದ ಸಂಖ್ಯೆಯ ಹಿರಿಯರಿರುವ ಸಭೆಗಳಲ್ಲಿ, ಅರ್ಹರಾದ ಶುಶ್ರೂಷಾ ಸೇವಕರನ್ನು ಉಪಯೋಗಿಸಬಹುದು.)
ನೇಮಕ ನಂಬರ್ 1: 10 ನಿಮಿಷಗಳು. ಇದನ್ನು ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ನಿರ್ವಹಿಸಬೇಕು. ಮತ್ತು ಇದು ಕಾವಲಿನಬುರುಜು ಪತ್ರಿಕೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಅಥವಾ ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಎಂಬ ಪುಸ್ತಕಗಳ ಮೇಲೆ ಆಧಾರಿಸಿರುವುದು. ಇದನ್ನು ಹತ್ತು ನಿಮಿಷದ ಉಪದೇಶ ಭಾಷಣವಾಗಿ ನೀಡಬೇಕಾಗಿದ್ದು, ಯಾವುದೇ ಮೌಖಿಕ ಪುನರ್ವಿಮರ್ಶೆಯಿರುವುದಿಲ್ಲ. ಇದರ ಉದ್ದೇಶವು ಕೇವಲ ವಿಷಯಭಾಗವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾಗಿರುವ ವಿಷಯವನ್ನು ಎತ್ತಿಹೇಳುವುದೇ ಆಗಿರಬೇಕು. ಕೊಡಲ್ಪಟ್ಟಿರುವ ಮುಖ್ಯ ವಿಷಯವನ್ನೇ ಉಪಯೋಗಿಸತಕ್ಕದ್ದು. ಈ ಭಾಷಣಕ್ಕೆ ನೇಮಿತರಾದ ಸಹೋದರರು, ಕೊಡಲ್ಪಟ್ಟಿರುವ ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸುವಂತೆ ನಿರೀಕ್ಷಿಸಲಾಗುತ್ತದೆ. ಖಾಸಗಿ ಸಲಹೆಯು ಅಗತ್ಯಕ್ಕನುಸಾರ ನೀಡಲ್ಪಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 10 ನಿಮಿಷಗಳು. ಮೊದಲ ಐದು ನಿಮಿಷಗಳ ವರೆಗೆ, ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ವಿಷಯಭಾಗವನ್ನು ಸ್ಥಳಿಕ ಆವಶ್ಯಕತೆಗಳಿಗೆ ಅನ್ವಯಿಸತಕ್ಕದ್ದು. ಆ ವಾರಕ್ಕಾಗಿರುವ ನೇಮಿತ ಬೈಬಲ್ ವಾಚನದ ಯಾವುದೇ ಭಾಗದ ಕುರಿತು ಅವನು ಹೇಳಿಕೆ ನೀಡಬಹುದು. ಇದು ನೇಮಿತ ವಾಚನದ ಬರೀ ಸಾರಾಂಶವಾಗಿರಬಾರದು. ಈ ಮಾಹಿತಿಯು ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಆರಂಭದ ಭಾಗಕ್ಕಾಗಿ ಐದು ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ವ್ಯಯಿಸಬಾರದು ಎಂಬ ವಿಷಯದಲ್ಲಿ ಭಾಷಣಕರ್ತನು ಜಾಗರೂಕನಾಗಿರಬೇಕು. ಐದು ನಿಮಿಷಗಳು ಸಭಿಕರ ಭಾಗವಹಿಸುವಿಕೆಗಾಗಿ ಬದಿಗಿರಿಸಲ್ಪಡುವಂತೆ ಅವನು ಖಚಿತಪಡಿಸಿಕೊಳ್ಳಬೇಕು. ಬೈಬಲ್ ಓದುವಿಕೆಯಲ್ಲಿ ಯಾವ ಅಂಶಗಳನ್ನು ಅವರು ಆಸಕ್ತಿದಾಯಕವಾಗಿ ಕಂಡುಕೊಂಡರು ಮತ್ತು ಅದರ ಪ್ರಯೋಜನಗಳೇನು ಎಂಬುದರ ಕುರಿತು ಚುಟುಕಾಗಿ (30 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ) ಹೇಳಿಕೆ ನೀಡುವಂತೆ ಸಭಿಕರು ಆಮಂತ್ರಿಸಲ್ಪಡಬೇಕು. ಅನಂತರ ಶಾಲಾ ಮೇಲ್ವಿಚಾರಕನು ಇತರ ಕ್ಲಾಸ್ರೂಮ್ಗಳಿಗೆ ನೇಮಿಸಲ್ಪಟ್ಟಿರುವ ವಿದ್ಯಾರ್ಥಿಗಳನ್ನು ಕಳುಹಿಸುವನು.
ನೇಮಕ ನಂಬರ್ 2: 4 ನಿಮಿಷಗಳು ಅಥವಾ ಅದಕ್ಕಿಂತಲೂ ಕಡಿಮೆ. ಇದು ವಾಚನ ನೇಮಕವಾಗಿದ್ದು, ಒಬ್ಬ ಸಹೋದರನಿಂದ ಕೊಡಲ್ಪಡಬೇಕು. ವಿದ್ಯಾರ್ಥಿಯು ನೇಮಿತ ವಿಷಯಭಾಗವನ್ನು ಒಂದು ಪೀಠಿಕೆ ಅಥವಾ ಸಮಾಪ್ತಿಯನ್ನು ಕೊಡದೆ ಓದಬೇಕು. ಅವನು ಕೀರ್ತನೆಗಳು ಪುಸ್ತಕದಿಂದ ಓದುವಿಕೆಯನ್ನು ಮಾಡುವಾಗ, ಅದರ ಮೇಲ್ಬರಹವನ್ನು ಸೇರಿಸಿ ಓದಬೇಕು. ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ, ನಿರರ್ಗಳವಾಗಿ, ಸರಿಯಾದ ಅರ್ಥಒತ್ತಿನಿಂದ, ಧ್ವನಿಯ ಏರಿಳಿತದೊಂದಿಗೆ, ಸೂಕ್ತವಾದಲ್ಲಿ ನಿಲ್ಲಿಸಿ, ಸ್ವಾಭಾವಿಕತೆಯಿಂದ ಓದುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದರಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತನಾಗಿರುವನು.
ನೇಮಕ ನಂಬರ್ 3: 5 ನಿಮಿಷಗಳು. ಇದು ಒಬ್ಬ ಸಹೋದರಿಗೆ ನೇಮಿಸಲ್ಪಡುವುದು. ಈ ನೇಮಕವನ್ನು ಪಡೆದುಕೊಳ್ಳುವ ವಿದ್ಯಾರ್ಥಿನಿಯರಿಗೆ ಶುಶ್ರೂಷಾ ಶಾಲೆ ಪಠ್ಯಪುಸ್ತಕದ 82ನೆಯ ಪುಟದಲ್ಲಿ ಕಂಡುಬರುವ ಪಟ್ಟಿಯಿಂದ ಒಂದು ಸನ್ನಿವೇಶವು ನೇಮಿಸಲ್ಪಡುವುದು ಅಥವಾ ಅವರು ಸ್ವತಃ ಒಂದು ಸನ್ನಿವೇಶವನ್ನು ಆರಿಸಿಕೊಳ್ಳುವರು. ವಿದ್ಯಾರ್ಥಿನಿಯು ನೇಮಿತ ಮುಖ್ಯ ವಿಷಯವನ್ನೇ ಉಪಯೋಗಿಸಬೇಕು ಮತ್ತು ಅದನ್ನು ಸ್ಥಳಿಕ ಟೆರಿಟೊರಿಗಾಗಿ ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವ ಒಂದು ಕ್ಷೇತ್ರ ಸೇವಾ ಅಂಶಕ್ಕೆ ಅನ್ವಯಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿನಿಯೇ ಸಂಗ್ರಹಿಸುವ ಅಗತ್ಯವಿರುವುದು. ಹೊಸ ವಿದ್ಯಾರ್ಥಿಗಳಿಗೆ, ರೆಫರೆನ್ಸ್ಗಳು ಕೊಡಲ್ಪಟ್ಟಿರುವಂಥ ಭಾಷಣಗಳನ್ನು ನೇಮಿಸತಕ್ಕದ್ದು. ವಿದ್ಯಾರ್ಥಿನಿಯು ವಿಷಯಭಾಗವನ್ನು ಹೇಗೆ ವಿಕಸಿಸುತ್ತಾಳೆ ಮತ್ತು ಮನೆಯವರು ಶಾಸ್ತ್ರವಚನಗಳ ಕುರಿತು ವಿವೇಚಿಸುವಂತೆ ಹಾಗೂ ಆ ಭಾಷಣದ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತಾಳೆ ಎಂಬ ವಿಷಯದಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತಿಯುಳ್ಳವನಾಗಿರುವನು. ಶಾಲಾ ಮೇಲ್ವಿಚಾರಕನು ಒಬ್ಬ ಸಹಾಯಕಿಯನ್ನು ನೇಮಿಸುವನು.
ನೇಮಕ ನಂಬರ್ 4: 5 ನಿಮಿಷಗಳು. ವಿದ್ಯಾರ್ಥಿಯು ನೇಮಿತ ಮುಖ್ಯ ವಿಷಯವನ್ನು ವಿಕಸಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿಯೇ ಸಂಗ್ರಹಿಸುವ ಅಗತ್ಯವಿರುವುದು. ಇದು ಒಬ್ಬ ಸಹೋದರನಿಗೆ ನೇಮಿಸಲ್ಪಡುವಾಗ, ರಾಜ್ಯ ಸಭಾಗೃಹದಲ್ಲಿರುವ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಈ ನೇಮಕವನ್ನು ಒಂದು ಭಾಷಣವಾಗಿ ಕೊಡತಕ್ಕದ್ದು. ಒಬ್ಬ ಸಹೋದರಿಗೆ ಈ ಭಾಗವು ಕೊಡಲ್ಪಡುವಾಗ, ಅದನ್ನು ಯಾವಾಗಲೂ ನೇಮಕ ನಂಬರ್ 3ಕ್ಕಾಗಿ ಕೊಡಲ್ಪಟ್ಟಿರುವ ಸೂಚನೆಗಳಿಗೆ ತಕ್ಕಂತೆ ನೀಡಬೇಕಾಗಿದೆ. ಶಾಲಾ ಮೇಲ್ವಿಚಾರಕನು ಯಾವಾಗೆಲ್ಲ ಸೂಕ್ತವಾಗಿರುವುದಾಗಿ ಕಂಡುಕೊಳ್ಳುತ್ತಾನೋ ಆಗೆಲ್ಲಾ ಒಬ್ಬ ಸಹೋದರನಿಗೆ ನೇಮಕ ನಂಬರ್ 4ನ್ನು ನೇಮಿಸುವನು. ನಕ್ಷತ್ರ ಚಿಹ್ನೆ ಇರುವಂಥ ಮುಖ್ಯ ವಿಷಯಗಳು ಭಾಷಣಗಳೋಪಾದಿ ನೀಡಲಿಕ್ಕಾಗಿ ಸಹೋದರರಿಗೆ ಮಾತ್ರ ನೇಮಿಸಲ್ಪಡಬೇಕು ಎಂಬುದನ್ನು ದಯವಿಟ್ಟು ಗಮನಿಸಿರಿ.
ಸಮಯಪಾಲನೆ: ಯಾವುದೇ ಭಾಷಣವಾಗಲಿ ಸಲಹೆಗಾರನ ಹೇಳಿಕೆಗಳಾಗಲಿ ನಿಗದಿತ ಸಮಯವನ್ನು ಮೀರಿ ಹೋಗಬಾರದು. ನೇಮಕ ನಂಬರ್ 2ರಿಂದ 4ರ ವರೆಗಿನ ಭಾಗಗಳಿಗೆ ನಿಗದಿತ ಸಮಯವು ಮುಗಿಯಲಿರುವಾಗ, ಆ ಭಾಷಣಗಳನ್ನು ಜಾಣ್ಮೆಯಿಂದ ನಿಲ್ಲಿಸತಕ್ಕದ್ದು. ಭಾಷಣ ಗುಣದ ಕುರಿತಾದ ಆರಂಭದ ಭಾಷಣವನ್ನು, ನೇಮಕ ನಂಬರ್ 1ನ್ನು, ಅಥವಾ ಬೈಬಲ್ ವಾಚನದಿಂದ ಮುಖ್ಯಾಂಶಗಳನ್ನು ನಿರ್ವಹಿಸುತ್ತಿರುವ ಸಹೋದರರು ಸಮಯವನ್ನು ಮೀರಿಹೋಗುವಲ್ಲಿ, ಅವರಿಗೆ ಖಾಸಗಿ ಸಲಹೆಯನ್ನು ಕೊಡಬೇಕು. ಎಲ್ಲರೂ ತಮ್ಮ ಸಮಯವನ್ನು ಜಾಗರೂಕತೆಯಿಂದ ಗಮನಿಸತಕ್ಕದ್ದು. ಇಡೀ ಕಾರ್ಯಕ್ರಮವು—ಗೀತೆ ಮತ್ತು ಪ್ರಾರ್ಥನೆಯನ್ನು ಬಿಟ್ಟು—45 ನಿಮಿಷಗಳದ್ದಾಗಿರಬೇಕು.
ಸಲಹೆ: 1 ನಿಮಿಷ. ಪ್ರತಿಯೊಂದು ವಿದ್ಯಾರ್ಥಿ ಭಾಷಣದ ಬಳಿಕ, ಭಾಷಣದ ಒಂದು ಪ್ರಶಂಸಾರ್ಹ ಅಂಶದ ಕುರಿತು ಕೆಲವು ಸಕಾರಾತ್ಮಕ ಹೇಳಿಕೆಗಳನ್ನು ನೀಡಲಿಕ್ಕಾಗಿ ಶಾಲಾ ಮೇಲ್ವಿಚಾರಕನು ಒಂದು ನಿಮಿಷಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳದಿರುವನು. “ಚೆನ್ನಾಗಿ ಮಾಡಿದಿರಿ” ಎಂದಷ್ಟೇ ಹೇಳುವುದು ಅವನ ಗುರಿಯಾಗಿರುವುದಿಲ್ಲ, ಬದಲಾಗಿ ಭಾಷಣದ ಆ ಅಂಶವು ಏಕೆ ಪರಿಣಾಮಕಾರಿಯಾಗಿತ್ತು ಎಂಬುದಕ್ಕಿರುವ ನಿರ್ದಿಷ್ಟ ಕಾರಣಗಳ ಕಡೆಗೆ ಗಮನವನ್ನು ಸೆಳೆಯುವುದೇ ಆಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಆವಶ್ಯಕತೆಗನುಸಾರ, ಕೂಟದ ನಂತರ ಅಥವಾ ಬೇರೊಂದು ಸಮಯದಲ್ಲಿ ಹೆಚ್ಚಿನ ರಚನಾತ್ಮಕ ಸಲಹೆಯನ್ನು ಖಾಸಗಿಯಾಗಿ ನೀಡಬಹುದು.
ಸಹಾಯಕ ಸಲಹೆಗಾರ: ಶಾಲಾ ಮೇಲ್ವಿಚಾರಕನ ಜೊತೆಗೆ, ಒಬ್ಬ ಸಹಾಯಕ ಸಲಹೆಗಾರನೋಪಾದಿ ನೇಮಕವನ್ನು ನಿರ್ವಹಿಸಲಿಕ್ಕಾಗಿ, ಹಿರಿಯರ ಮಂಡಲಿಯು ಒಬ್ಬ ಸಮರ್ಥ ಹಿರಿಯನನ್ನು—ಲಭ್ಯವಿರುವಲ್ಲಿ—ಆಯ್ಕೆಮಾಡಬಹುದು. ಸಭೆಯಲ್ಲಿ ಅನೇಕ ಮಂದಿ ಹಿರಿಯರು ಇರುವುದಾದರೆ, ಪ್ರತಿ ವರ್ಷ ಒಬ್ಬೊಬ್ಬ ಸಮರ್ಥ ಹಿರಿಯನಿಗೆ ಈ ನೇಮಕವನ್ನು ಒಪ್ಪಿಸಬಹುದು. ಸಹಾಯಕ ಸಲಹೆಗಾರನ ಜವಾಬ್ದಾರಿಯು, ನೇಮಕ ನಂಬರ್ 1 ಮತ್ತು ಬೈಬಲ್ ಮುಖ್ಯಾಂಶಗಳನ್ನು ನೀಡುವ ಸಹೋದರರಿಗೆ, ಅಗತ್ಯವಿರುವಲ್ಲಿ ಖಾಸಗಿ ಸಲಹೆಯನ್ನು ಕೊಡುವುದಾಗಿದೆ. ಜೊತೆ ಹಿರಿಯರು ಅಥವಾ ಶುಶ್ರೂಷಾ ಸೇವಕರು ಪ್ರತಿ ಬಾರಿ ಅಂಥ ಭಾಷಣಗಳನ್ನು ಕೊಟ್ಟ ಬಳಿಕ ಅವನು ಸಲಹೆಯನ್ನು ಕೊಡಲೇಬೇಕೆಂದಿಲ್ಲ.
ಸಲಹಾ ಪಟ್ಟಿ: ಪಠ್ಯಪುಸ್ತಕದಲ್ಲಿದೆ.
ಮೌಖಿಕ ಪುನರ್ವಿಮರ್ಶೆ: 30 ನಿಮಿಷಗಳು. ಪ್ರತಿ ಎರಡು ತಿಂಗಳಿಗೊಮ್ಮೆ ಶಾಲಾ ಮೇಲ್ವಿಚಾರಕನು ಒಂದು ಮೌಖಿಕ ಪುನರ್ವಿಮರ್ಶೆಯನ್ನು ನಡೆಸುವನು. ಇದಕ್ಕೆ ಮುಂಚೆ, ಮೇಲೆ ವಿವರಿಸಲ್ಪಟ್ಟಿರುವಂಥ ರೀತಿಯಲ್ಲೇ ಭಾಷಣ ಗುಣ ಹಾಗೂ ಬೈಬಲ್ ವಾಚನದ ಮುಖ್ಯಾಂಶಗಳ ಪರಿಗಣನೆ ಇರುವುದು. ಸದ್ಯದ ವಾರವನ್ನೂ ಸೇರಿಸಿ ಹಿಂದಿನ ಎರಡು ತಿಂಗಳುಗಳಲ್ಲಿ ಶಾಲೆಯಲ್ಲಿ ಪರಿಗಣಿಸಲ್ಪಟ್ಟ ವಿಷಯಭಾಗದ ಮೇಲೆ ಮೌಖಿಕ ಪುನರ್ವಿಮರ್ಶೆಯು ಆಧಾರಿತವಾಗಿರುವುದು. ಮೌಖಿಕ ಪುನರ್ವಿಮರ್ಶೆಯು ನಡೆಸಲ್ಪಡಲಿರುವ ವಾರದಲ್ಲಿ ನಿಮ್ಮ ಸಭೆಗೆ ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗಲಿರುವುದಾದರೆ, ಪುನರ್ವಿಮರ್ಶೆಯನ್ನು (ಹಾಗೂ ಈ ವಾರಕ್ಕೆ ಶೆಡ್ಯೂಲ್ ಮಾಡಲ್ಪಟ್ಟಿರುವ ಎಲ್ಲ ಭಾಗಗಳನ್ನು) ಒಂದು ವಾರ ಮುಂದಕ್ಕೆ ಹಾಕಬೇಕು ಮತ್ತು ಮುಂದಿನ ವಾರಕ್ಕೆ ಶೆಡ್ಯೂಲ್ ಮಾಡಲ್ಪಟ್ಟಿರುವ ಭಾಗಗಳನ್ನು ಈ ವಾರದಲ್ಲಿ ನಿರ್ವಹಿಸಬೇಕು. ಅಥವಾ ಮೌಖಿಕ ಪುನರ್ವಿಮರ್ಶೆಯು ನಡೆಸಲ್ಪಡಲಿರುವ ವಾರದಲ್ಲಿ ಸರ್ಕಿಟ್ ಮೇಲ್ವಿಚಾರಕನು ನಿಮ್ಮ ಸಭೆಯನ್ನು ಸಂದರ್ಶಿಸಲಿಕ್ಕಿರುವುದಾದರೆ, ಆಗ ಗೀತೆ, ಭಾಷಣ ಗುಣ ಮತ್ತು ಬೈಬಲ್ ಮುಖ್ಯಾಂಶಗಳನ್ನು ಶೆಡ್ಯೂಲ್ ಮಾಡಲ್ಪಟ್ಟಿರುವ ರೀತಿಯಲ್ಲೇ ಪ್ರಸ್ತುತಪಡಿಸಬೇಕು. (ಭಾಷಣ ಗುಣದ ನಂತರ ನೀಡಲ್ಪಡುವ) ಉಪದೇಶ ಭಾಷಣವನ್ನು ಮುಂದಿನ ವಾರದ ಶೆಡ್ಯೂಲ್ನಿಂದ ತೆಗೆಯಬೇಕು. ಮುಂದಿನ ವಾರದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು, ಶೆಡ್ಯೂಲ್ ಮಾಡಲ್ಪಟ್ಟಿರುವಂತೆ ಭಾಷಣ ಗುಣ ಮತ್ತು ಬೈಬಲ್ ಮುಖ್ಯಾಂಶಗಳೊಂದಿಗೆ ಆರಂಭವಾಗುವುದು ಮತ್ತು ಅದರ ತರುವಾಯ ಮೌಖಿಕ ಪುನರ್ವಿಮರ್ಶೆ ಇರುವುದು.
ಶೆಡ್ಯೂಲ್
ಜನ. 2 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 29-32 ಗೀತೆ 91
ಭಾಷಣ ಗುಣ: ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ (be-KA ಪು. 5 ¶1-ಪು. 8 ¶1)
ನಂ. 1: ದೇವರ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳಿರಿ (be-KA ಪು. 9 ¶1-ಪು. 10 ¶1)
ನಂ. 2: 2 ಪೂರ್ವಕಾಲವೃತ್ತಾಂತ 30:1-12
ನಂ. 3: ನಿಜ ಕ್ರೈಸ್ತರು ದುರ್ಭಾಷೆಯನ್ನು ಉಪಯೋಗಿಸುವುದರಿಂದ ಏಕೆ ದೂರವಿರುತ್ತಾರೆ?
ನಂ. 4: td-KA 1ಎ ಮನುಷ್ಯನೊಳಗೆ ಅಮರವಾದದ್ದೇನೂ ಇಲ್ಲ
ಜನ. 9 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 33-36 ಗೀತೆ 144
ಭಾಷಣ ಗುಣ: ನಿಷ್ಕೃಷ್ಟ ವಾಚನ (be-KA ಪು. 83 ¶1-ಪು. 84 ¶1)
ನಂ. 1: ದುಷ್ಟತ್ವವನ್ನು ದೇವರು ಏಕೆ ಅನುಮತಿಸಿದ್ದಾನೆ? (wt-KA ಪು. 60-3 ¶1-7)
ನಂ. 2: 2 ಪೂರ್ವಕಾಲವೃತ್ತಾಂತ 34:1-11
ನಂ. 3: td-KA 2ಎ ದುಷ್ಟತನವನ್ನು ಅಂತ್ಯಗೊಳಿಸುವುದಕ್ಕಾಗಿ ದೇವರ ಯುದ್ಧ
ನಂ. 4: ಬೈಬಲಿನ ನೈತಿಕ ಮಟ್ಟಗಳಿಗೆ ಅಂಟಿಕೊಂಡಿರಲು ಎಂದಿಗೂ ನಾಚಿಕೊಳ್ಳಬೇಡಿ
ಜನ. 16 ಬೈಬಲ್ ವಾಚನ: ಎಜ್ರ 1-5 ಗೀತೆ 137
ಭಾಷಣ ಗುಣ: ನಿಷ್ಕೃಷ್ಟ ವಾಚನವನ್ನು ಮಾಡುವ ವಿಧ (be-KA ಪು. 84 ¶2-ಪು. 85 ¶3)
ನಂ. 1: ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ? (wt-KA ಪು. 63-9 ¶8-18)
ನಂ. 2: ಎಜ್ರ 1:1-11
ನಂ. 3: ಪ್ರಾಮಾಣಿಕ ಮನಸ್ಸಾಕ್ಷಿಯನ್ನು ಹೊಂದಿರುವುದರ ಪ್ರಯೋಜನಗಳು
ನಂ. 4: td-KA 2ಬಿ ಅರ್ಮಗೆದೋನ್ನಿಂದ ದೇವರ ಪ್ರೀತಿಯು ಭಂಗಗೊಂಡಿಲ್ಲ
ಜನ. 23 ಬೈಬಲ್ ವಾಚನ: ಎಜ್ರ 6-10 ಗೀತೆ 106
ಭಾಷಣ ಗುಣ: ಪದಗಳನ್ನು ಸ್ಪಷ್ಟವಾಗಿ ಆಡುವುದು (be-KA ಪು. 86 ¶1-6)
ನಂ. 1: ‘ದುರಾತ್ಮಗಳ ಸೇನೆಯ ಮೇಲೆ ಹೋರಾಡುವುದು’ (wt-KA ಪು. 70-5 ¶1-12)
ನಂ. 2: ಎಜ್ರ 6:1-12
ನಂ. 3: td-KA 3ಎ ಯೇಸುವಿನ ಮಾನವ ಜೀವವು “ಎಲ್ಲರ ವಿಮೋಚನಾರ್ಥವಾಗಿ” ಕೊಡಲ್ಪಟ್ಟಿತು
ನಂ. 4: a ವಿವಾಹದ ಕುರಿತಾದ ದೇವರ ದೃಷ್ಟಿಕೋನ
ಜನ. 30 ಬೈಬಲ್ ವಾಚನ: ನೆಹೆಮೀಯ 1-4 ಗೀತೆ 161
ಭಾಷಣ ಗುಣ: ಸ್ಪಷ್ಟವಾಗಿ ಮಾತನಾಡುವ ವಿಧ (be-KA ಪು. 87 ¶1-ಪು. 88 ¶3)
ನಂ. 1: ವಿಜಯಿಗಳಾಗಲು ಸನ್ನದ್ಧರು (wt-KA ಪು. 76-8 ¶13-15)
ನಂ. 2: ನೆಹೆಮೀಯ 2:1-10
ನಂ. 3: ಅತಿ ಪ್ರಮುಖ ರೀತಿಯ ಭದ್ರತೆ
ನಂ. 4: td-KA 3ಬಿ ಈಡು ಅನುರೂಪವಾದ ಬೆಲೆಯಾಗಿತ್ತು
ಫೆಬ್ರ. 6 ಬೈಬಲ್ ವಾಚನ: ನೆಹೆಮೀಯ 5-8 ಗೀತೆ 40
ಭಾಷಣ ಗುಣ: ಸರಿಯಾದ ಉಚ್ಚಾರಣೆ—ಪರಿಗಣಿಸತಕ್ಕ ವಿಷಯಗಳು (be-KA ಪು. 89 ¶1-ಪು. 90 ¶3)
ನಂ. 1: ಬೈಬಲನ್ನು ದಿನಾಲೂ ಓದಿರಿ (be-KA ಪು. 10 ¶2-ಪು. 12 ¶4)
ನಂ. 2: ನೆಹೆಮೀಯ 5:1-13
ನಂ. 3: td-KA 4ಎ ‘ಲೋಕದ ಅಂತ್ಯದ’ ಅರ್ಥವೇನು?
ನಂ. 4: ‘ನಿನ್ನ ಹೃದಯವನ್ನು ಕಾಪಾಡಿಕೋ’ (ಜ್ಞಾನೋ. 4:23)
ಫೆಬ್ರ. 13 ಬೈಬಲ್ ವಾಚನ: ನೆಹೆಮೀಯ 9-11 ಗೀತೆ 159
ಭಾಷಣ ಗುಣ: ಉಚ್ಚಾರಣೆಯನ್ನು ಉತ್ತಮಗೊಳಿಸುವ ವಿಧಗಳು (be-KA ಪು. 90 ¶4-ಪು. 92)
ನಂ. 1: ಯುದ್ಧಕ್ಕೆ ಬದಲಾಗಿ ಶಾಂತಿಯನ್ನು ಕಲಿಯುವುದು (w04-KA 1/1 ಪು. 6 ¶8-ಪು. 7 ¶5)
ನಂ. 2: ನೆಹೆಮೀಯ 10:28-37
ನಂ. 3: ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಎಂಬುದಕ್ಕೆ ಪುರಾವೆ
ನಂ. 4: td-KA 4ಬಿ ಕಡೇ ದಿವಸಗಳ ಸೂಚನೆಗಳ ಕುರಿತು ಎಚ್ಚರದಿಂದಿರುವುದು ಆವಶ್ಯಕ
ಫೆಬ್ರ. 20 ಬೈಬಲ್ ವಾಚನ: ನೆಹೆಮೀಯ 12-13 ಗೀತೆ 118
ಭಾಷಣ ಗುಣ: ನಿರರ್ಗಳವಾಗಿ ಭಾಷಣ ನೀಡುವುದು (be-KA ಪು. 93 ¶1-ಪು. 94 ¶3)
ನಂ. 1: ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ (wt-KA ಪು. 79-83 ¶1-8)
ನಂ. 2: ನೆಹೆಮೀಯ 13:1-14
ನಂ. 3: td-KA 5ಎ ಅನ್ಯಜನಾಂಗಗಳ ಕಾಲಗಳು (ಸಾ.ಶ.) 1914ರಲ್ಲಿ ಮುಕ್ತಾಯಗೊಂಡವು
ನಂ. 4: b ಹಿಂಸಾತ್ಮಕವಾದ ವಿಡಿಯೋ ಆಟಗಳು ಕ್ರೈಸ್ತರಿಗೆ ಯೋಗ್ಯವಲ್ಲ
ಫೆಬ್ರ. 27 ಬೈಬಲ್ ವಾಚನ: ಎಸ್ತೇರಳು 1-5 ಗೀತೆ 215
ಭಾಷಣ ಗುಣ: ನಿರರ್ಗಳತೆಯನ್ನು ಉತ್ತಮಗೊಳಿಸುವ ವಿಧ (be-KA ಪು. 94 ¶4-ಪು. 96 ¶3, ಪು. 95ರಲ್ಲಿರುವ ಚೌಕವನ್ನು ಹೊರತುಪಡಿಸಿ)
ಮೌಖಿಕ ಪುನರ್ವಿಮರ್ಶೆ
ಮಾರ್ಚ್ 6 ಬೈಬಲ್ ವಾಚನ: ಎಸ್ತೇರಳು 6-10 ಗೀತೆ 74
ಭಾಷಣ ಗುಣ: ತೊದಲಿಕೆಯನ್ನು ನಿಭಾಯಿಸುವುದು (be-KA ಪು. 95, ಚೌಕ)
ನಂ. 1: “ಹೇಡೀಸ್ನ ಬೀಗದಕೈ” (wt-KA ಪು. 83-9 ¶9-18)
ನಂ. 2: ಎಸ್ತೇರಳು 6:1-10
ನಂ. 3: ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸಸಾಧ್ಯವಿದೆ
ನಂ. 4: td-KA 6ಎ ಕ್ರಿಸ್ತನ ಹಿಂದಿರುಗುವಿಕೆಯು ಮಾನವರ ಕಣ್ಣಿಗೆ ಅದೃಶ್ಯವಾಗಿರುತ್ತದೆ
ಮಾರ್ಚ್ 13 ಬೈಬಲ್ ವಾಚನ: ಯೋಬ 1-5 ಗೀತೆ 160
ಭಾಷಣ ಗುಣ: ವಿರಾಮಚಿಹ್ನೆಗಳಿರುವಲ್ಲಿ ಮತ್ತು ವಿಚಾರದಲ್ಲಿ ಬದಲಾವಣೆಗಾಗಿ ನಿಲ್ಲಿಸಿ ಮಾತಾಡುವುದು (be-KA ಪು. 97 ¶1-ಪು. 98 ¶5)
ನಂ. 1: ‘ಎಂದಿಗೂ ಅಳಿಯದ’ ರಾಜ್ಯ (wt-KA 90-6 ¶1-10)
ನಂ. 2: ಯೋಬ 2:1-13
ನಂ. 3: td-KA 6ಬಿ ಕ್ರಿಸ್ತನ ಹಿಂದಿರುಗುವಿಕೆಯು ಪ್ರಾಕೃತಿಕ ವಾಸ್ತವಾಂಶಗಳಿಂದ ಗುರುತಿಸಲ್ಪಡುವುದು
ನಂ. 4: ಸತ್ಯ ಕ್ರೈಸ್ತರು ಗುಣುಗುಟ್ಟುವುದನ್ನು ಏಕೆ ತ್ಯಜಿಸುತ್ತಾರೆ?
ಮಾರ್ಚ್ 20 ಬೈಬಲ್ ವಾಚನ: ಯೋಬ 6-10 ಗೀತೆ 214
ಭಾಷಣ ಗುಣ: ಒತ್ತಿ ಹೇಳಲಿಕ್ಕಾಗಿ ಮತ್ತು ಕಿವಿಗೊಡಲಿಕ್ಕಾಗಿ ನಿಲ್ಲಿಸಿ ಮಾತಾಡುವುದು (be-KA ಪು. 99 ¶1-ಪು. 100 ¶4)
ನಂ. 1: ಆಧ್ಯಾತ್ಮಿಕ ಮೌಲ್ಯಗಳ ಶ್ರೇಷ್ಠತೆ (w04-KA 10/15 ಪು. 4 ¶2-ಪು. 5 ¶3)
ನಂ. 2: ಯೋಬ 7:1-21
ನಂ. 3: ನಿರ್ಮಲಚಿತ್ತರಾಗಿರುವುದರ ಅರ್ಥ
ನಂ. 4: td-KA 7ಎ ಆಧ್ಯಾತ್ಮಿಕ ಚರ್ಚು ಕ್ರಿಸ್ತನ ಮೇಲೆ ಕಟ್ಟಲ್ಪಟ್ಟಿದೆ
ಮಾರ್ಚ್ 27 ಬೈಬಲ್ ವಾಚನ: ಯೋಬ 11-15 ಗೀತೆ 8
ಭಾಷಣ ಗುಣ: ಸರಿಯಾದ ಅರ್ಥಒತ್ತು (be-KA ಪು. 101 ¶1-ಪು. 102 ¶3)
ನಂ. 1: “ನೀವು ಕಿವಿಗೊಡುವ ವಿಧಕ್ಕೆ ಗಮನ ಕೊಡಿರಿ” (be-KA ಪು. 13 ¶1-ಪು. 14 ¶5)
ನಂ. 2: ಯೋಬ 12:1-25
ನಂ. 3: td-KA 7ಬಿ ಚರ್ಚು ಪೇತ್ರನ ಮೇಲೆ ಕಟ್ಟಲ್ಪಡಲಿಲ್ಲ
ನಂ. 4: ಶುಶ್ರೂಷೆಯು ಏಕೆ ನಮಗೆ ಆನಂದವನ್ನು ತರುತ್ತದೆ?
ಏಪ್ರಿ. 3 ಬೈಬಲ್ ವಾಚನ: ಯೋಬ 16-20 ಗೀತೆ 50
ಭಾಷಣ ಗುಣ: ಅರ್ಥಒತ್ತನ್ನು ಅಭಿವೃದ್ಧಿಮಾಡುವುದು (be-KA ಪು. 102 ¶4-ಪು. 104 ¶4)
ನಂ. 1: ದೇವರನ್ನು ಪ್ರೀತಿಸುತ್ತೇವೆಂದು ನಾವು ತೋರಿಸುವ ವಿಧ (w04-KA 3/1 ಪು. 19-21)
ನಂ. 2: ಯೋಬ 16:1-22
ನಂ. 3: ತನ್ನನ್ನು ಆರಾಧಿಸುವಂತೆ ಯೆಹೋವನು ಜನರನ್ನು ಹೇಗೆ ಸೆಳೆಯುತ್ತಾನೆ?
ನಂ. 4: td-KA 8ಎ ವಿಧೇಯ ಮಾನವಕುಲಕ್ಕೆ ನಿತ್ಯಜೀವದ ಭರವಸೆ ಕೊಡಲ್ಪಟ್ಟಿದೆ
ಏಪ್ರಿ. 10 ಬೈಬಲ್ ವಾಚನ: ಯೋಬ 21-27 ಗೀತೆ 119
ಭಾಷಣ ಗುಣ: ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು (be-KA ಪು. 105 ¶1-ಪು. 106 ¶2)
ನಂ. 1: ಆಧ್ಯಾತ್ಮಿಕ ಮೌಲ್ಯಗಳು ಪ್ರತಿಫಲಗಳನ್ನು ತರುತ್ತವೆ (w04-KA 10/15 ಪು. 5 ¶4-ಪು. 7 ¶2)
ನಂ. 2: ಯೋಬ 24:1-20
ನಂ. 3: ಯೆಹೋವನು ಬಲಾಧಿಕ್ಯವನ್ನು ಕೊಡುತ್ತಾನೆ
ನಂ. 4: td-KA 8ಬಿ ಕ್ರಿಸ್ತನ ದೇಹದಲ್ಲಿರುವವರಿಗೆ ಮಾತ್ರ ಸ್ವರ್ಗೀಯ ನಿರೀಕ್ಷೆಯಿದೆ
ಏಪ್ರಿ. 17 ಬೈಬಲ್ ವಾಚನ: ಯೋಬ 28-32 ಗೀತೆ 100
ಭಾಷಣ ಗುಣ: ಸಭಿಕರಿಗೆ ಸೂಕ್ತವಾದ ಧ್ವನಿ (be-KA ಪು. 107 ¶1-ಪು. 108 ¶4)
ನಂ. 1: ಕೂಟಗಳು ಮತ್ತು ಸಮ್ಮೇಳನಗಳಲ್ಲಿ ಕಿವಿಗೊಡುವುದು (be-KA ಪು. 15 ¶1-ಪು. 16 ¶5)
ನಂ. 2: ಯೋಬ 29:1-25
ನಂ. 3: td-KA 8ಸಿ ಭೂಜೀವಿತವು ಅಸಂಖ್ಯಾತ ಸಂಖ್ಯೆಯಲ್ಲಿರುವ “ಬೇರೆ ಕುರಿ”ಗಳಿಗೆ ವಾಗ್ದಾನಿಸಲಾಗಿದೆ
ನಂ. 4: ಜನರ ಗುಂಪುಗಳು ಯೇಸುವಿನ ಉಪದೇಶವನ್ನು ಕೇಳಿ ಏಕೆ ಆತ್ಯಾಶ್ಚರ್ಯಪಟ್ಟವು?
ಏಪ್ರಿ. 24 ಬೈಬಲ್ ವಾಚನ: ಯೋಬ 33-37 ಗೀತೆ 94
ಭಾಷಣ ಗುಣ: ನಿಮ್ಮ ಧ್ವನಿಯನ್ನು ಉತ್ತಮಗೊಳಿಸುವ ವಿಧ (be-KA ಪು. 108 ¶5-ಪು. 110 ¶2)
ಮೌಖಿಕ ಪುನರ್ವಿಮರ್ಶೆ
ಮೇ 1 ಬೈಬಲ್ ವಾಚನ: ಯೋಬ 38-42 ಗೀತೆ 154
ಭಾಷಣ ಗುಣ: ಧ್ವನಿಯ ಏರಿಳಿತ—ನಿಮ್ಮ ಧ್ವನಿಯ ಮಟ್ಟವನ್ನು ಹೊಂದಿಸಿಕೊಳ್ಳಿರಿ (be-KA ಪು. 111 ¶1-ಪು. 112 ¶2)
ನಂ. 1: ರಾಜ್ಯದ ಉದ್ದೇಶಗಳು—ಅವು ಸಾಧಿಸಲ್ಪಡುವ ವಿಧ (wt-KA ಪು. 96-100 ¶11-17)
ನಂ. 2: ಯೋಬ 38:1-24
ನಂ. 3: ಯೆಶಾಯ 60:22ರ ಮಾತುಗಳು ಇಂದು ಹೇಗೆ ನೆರವೇರುತ್ತಿವೆ?
ನಂ. 4: td-KA 9ಎ ಕರ್ತನ ಸಂಧ್ಯಾ ಭೋಜನದ ಆಚರಣೆ
ಮೇ 8 ಬೈಬಲ್ ವಾಚನ: ಕೀರ್ತನೆಗಳು 1-10 ಗೀತೆ 168
ಭಾಷಣ ಗುಣ: ಧ್ವನಿಯ ಏರಿಳಿತ—ನಿಮ್ಮ ವೇಗವನ್ನು ಬದಲಾಯಿಸಿರಿ (be-KA ಪು. 112 ¶3-ಪು. 113 ¶1)
ನಂ. 1: ‘ಪ್ರಥಮವಾಗಿ ರಾಜ್ಯವನ್ನು ಹುಡುಕುತ್ತಾ ಇರ್ರಿ’ (wt-KA ಪು. 101-6 ¶1-9)
ನಂ. 2: ಕೀರ್ತನೆ 4:1-5:12
ನಂ. 3: ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸುವದು
ನಂ. 4: td-KA 9ಬಿ ಮಾಸ್ ಅಶಾಸ್ತ್ರೀಯವಾಗಿದೆ
ಮೇ 15 ಬೈಬಲ್ ವಾಚನ: ಕೀರ್ತನೆಗಳು 11-18 ಗೀತೆ 217
ಭಾಷಣ ಗುಣ: ಧ್ವನಿಯ ಏರಿಳಿತ—ಸ್ವರದ ತೀವ್ರತೆಯನ್ನು ಬದಲಾಯಿಸಿರಿ (be-KA ಪು. 113 ¶2-ಪು. 114 ¶3)
ನಂ. 1: ರಾಜ್ಯವನ್ನು ನಿಮ್ಮ ಜೀವನದಲ್ಲಿ ಪ್ರಥಮವಾಗಿಡಿರಿ (wt-KA ಪು. 106-9 ¶10-15)
ನಂ. 2: ಕೀರ್ತನೆ 14:1-16:6
ನಂ. 3: ಸತ್ಯ ಕ್ರೈಸ್ತರು ಲೋಕದ ಭಾಗವಾಗಿಲ್ಲದಿರುವುದು ಯಾವ ವಿಧಗಳಲ್ಲಿ?
ನಂ. 4: td-KA 10ಎ ದೇವರು, ತಂದೆ, ಏಕ ವ್ಯಕ್ತಿ, ವಿಶ್ವದಲ್ಲಿ ಅತ್ಯಂತ ಪರಮಶ್ರೇಷ್ಠನು
ಮೇ 22 ಬೈಬಲ್ ವಾಚನ: ಕೀರ್ತನೆಗಳು 19-25 ಗೀತೆ 23
ಭಾಷಣ ಗುಣ: ಭಾವಪೂರ್ಣರಾಗಿ ಮಾತಾಡಿರಿ (be-KA ಪು. 115 ¶1-ಪು. 116 ¶4)
ನಂ. 1: ಸುಬುದ್ಧಿಯು ದಯಾಸ್ಪದವು (w04-KA 7/15 ಪು. 27 ¶4-ಪು. 28 ¶4)
ನಂ. 2: ಕೀರ್ತನೆ 22:1-22
ನಂ. 3: td-KA 10ಬಿ ಭೂಮಿಗೆ ಬರುವ ಮೊದಲೂ ಅದರ ಅನಂತರವೂ ಮಗನು ತಂದೆಗಿಂತ ಕೆಳಸ್ಥಾನದಲ್ಲಿದ್ದಾನೆ
ನಂ. 4: c ದೇವರ ಮರುಜ್ಞಾಪನಗಳು ಅಂದರೇನು, ಮತ್ತು ನಾವು ಅವುಗಳಿಗೆ ಏಕೆ ಕಿವಿಗೊಡಬೇಕು?
ಮೇ 29 ಬೈಬಲ್ ವಾಚನ: ಕೀರ್ತನೆಗಳು 26-33 ಗೀತೆ 203
ಭಾಷಣ ಗುಣ: ವಿಷಯಭಾಗಕ್ಕೆ ತಕ್ಕದ್ದಾಗಿರುವ ಉತ್ಸಾಹ (be-KA ಪು. 116 ¶5-ಪು. 117 ¶4)
ನಂ. 1: ನೀವು ನಿಮ್ಮ ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸಿಕೊಳ್ಳಬಲ್ಲಿರಿ (be-KA ಪು. 17 ¶1-ಪು. 19 ¶2)
ನಂ. 2: ಕೀರ್ತನೆ 30:1-31:8
ನಂ. 3: ಸತ್ಯವು ಒಬ್ಬನನ್ನು ಯಾವ ವಿಧಗಳಲ್ಲಿ ಬಿಡುಗಡೆಮಾಡುತ್ತದೆ?
ನಂ. 4: td-KA 10ಸಿ ದೇವರು ಮತ್ತು ಕ್ರಿಸ್ತನು ಒಂದಾಗಿದ್ದಾರೆ
ಜೂನ್ 5 ಬೈಬಲ್ ವಾಚನ: ಕೀರ್ತನೆಗಳು 34-37 ಗೀತೆ 167
ಭಾಷಣ ಗುಣ: ಹಾರ್ದಿಕತೆಯನ್ನು ವ್ಯಕ್ತಪಡಿಸುವುದು (be-KA ಪು. 118 ¶1-ಪು. 119 ¶5)
ನಂ. 1: ಪ್ರಾರ್ಥನೆಯ ಬಲ (w04-KA 8/15 ಪು. 18 ¶6-ಪು. 19 ¶10)
ನಂ. 2: ಕೀರ್ತನೆ 34:1-22
ನಂ. 3: td-KA 10ಡಿ ದೇವರ ಪವಿತ್ರಾತ್ಮವು ಆತನ ಕಾರ್ಯಕಾರಿ ಶಕ್ತಿಯಾಗಿದೆ
ನಂ. 4: ನಾವು ವಿಗ್ರಹಾರಾಧನೆಯ ಯಾವ ರೂಪಗಳಿಂದ ದೂರವಿರಬೇಕು?
ಜೂನ್ 12 ಬೈಬಲ್ ವಾಚನ: ಕೀರ್ತನೆಗಳು 38-44 ಗೀತೆ 216
ಭಾಷಣ ಗುಣ: ಭಾವಗಳನ್ನು ವ್ಯಕ್ತಪಡಿಸುವುದು (be-KA ಪು. 119 ¶6-ಪು. 120 ¶5)
ನಂ. 1: ಜ್ಞಾಪಕದಲ್ಲಿಟ್ಟುಕೊಳ್ಳುವುದರಲ್ಲಿ ದೇವರಾತ್ಮದ ಪಾತ್ರ (be-KA ಪು. 19 ¶3-ಪು. 20 ¶3)
ನಂ. 2: ಕೀರ್ತನೆ 40:1-17
ನಂ. 3: ನಿಜವಾದ ವಿಜ್ಞಾನವು ಬೈಬಲಿಗೆ ವಿರುದ್ಧವಾಗಿಲ್ಲ
ನಂ. 4: td-KA 11ಎ ದೀಕ್ಷಾಸ್ನಾನವು ಒಂದು ಕ್ರಿಸ್ತೀಯ ಆವಶ್ಯಕತೆ
ಜೂನ್ 19 ಬೈಬಲ್ ವಾಚನ: ಕೀರ್ತನೆಗಳು 45-51 ಗೀತೆ 104
ಭಾಷಣ ಗುಣ: ಭಾವಾಭಿನಯಗಳು ಮತ್ತು ಮುಖಭಾವಗಳ ಪ್ರಾಮುಖ್ಯತೆ (be-KA ಪು. 121 ¶1-4)
ನಂ. 1: ಯೇಸು ಯಾವಾಗ ಬರುತ್ತಾನೆ? (w04-KA 3/1 ಪು. 16, ಚೌಕ)
ನಂ. 2: ಕೀರ್ತನೆ 46:1-47:9
ನಂ. 3: td-KA 11ಬಿ ದೀಕ್ಷಾಸ್ನಾನವು ಪಾಪಗಳನ್ನು ತೊಳೆಯುವುದಿಲ್ಲ
ನಂ. 4: ಒಬ್ಬ ಕ್ರೈಸ್ತನು ನಿರ್ಬಲನಾಗಿರುವಾಗಲೇ ಬಲವುಳ್ಳವನಾಗಿರುವುದು ಹೇಗೆ? (2 ಕೊರಿಂ. 12:10)
ಜೂನ್ 26 ಬೈಬಲ್ ವಾಚನ: ಕೀರ್ತನೆಗಳು 52-59 ಗೀತೆ 103
ಭಾಷಣ ಗುಣ: ಭಾವಾಭಿನಯಗಳು ಮತ್ತು ಮುಖಭಾವಗಳನ್ನು ಉಪಯೋಗಿಸುವುದು (be-KA ಪು. 122 ¶1-ಪು. 123 ¶3)
ಮೌಖಿಕ ಪುನರ್ವಿಮರ್ಶೆ
ಜುಲೈ 3 ಬೈಬಲ್ ವಾಚನ: ಕೀರ್ತನೆಗಳು 60-68 ಗೀತೆ 45
ಭಾಷಣ ಗುಣ: ಶುಶ್ರೂಷೆಯಲ್ಲಿ ದೃಷ್ಟಿ ಸಂಪರ್ಕ (be-KA ಪು. 124 ¶1-ಪು. 125 ¶4)
ನಂ. 1: ಯೆಹೋವನ ದೀನತೆಯು ನಮಗೆ ಯಾವ ಅರ್ಥದಲ್ಲಿದೆ? (w04-KA 11/1 ಪು. 29-30)
ನಂ. 2: ಕೀರ್ತನೆ 60:1-61:8
ನಂ. 3: ಕ್ರೈಸ್ತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ದೇವರ ನಿಯಮಗಳನ್ನು ಪಾಲಿಸುವುದರಿಂದ ವಿನಾಯಿತಿ ಕೊಡುತ್ತದೋ?
ನಂ. 4: td-KA 12ಎ ಲೋಕಸಂಕಟಕ್ಕೆ ಯಾರು ಕಾರಣರು?
ಜುಲೈ 10 ಬೈಬಲ್ ವಾಚನ: ಕೀರ್ತನೆಗಳು 69-73 ಗೀತೆ 225
ಭಾಷಣ ಗುಣ: ಒಂದು ಭಾಷಣವನ್ನು ಕೊಡುವಾಗ ದೃಷ್ಟಿ ಸಂಪರ್ಕ (be-KA ಪು. 126 ¶1-ಪು. 127 ¶2)
ನಂ. 1: ಏಕೆ ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಬೇಕು? (be-KA ಪು. 21 ¶1-ಪು. 23 ¶3)
ನಂ. 2: ಕೀರ್ತನೆ 71:1-18
ನಂ. 3: td-KA 12ಬಿ ದುಷ್ಟತ್ವವು ಏಕೆ ಅನುಮತಿಸಲ್ಪಟ್ಟಿದೆ?
ನಂ. 4: d ಕ್ರೈಸ್ತರು ನಿಷ್ಪಕ್ಷಪಾತಿಗಳಾಗಿರಬೇಕಾದ ಕಾರಣ
ಜುಲೈ 17 ಬೈಬಲ್ ವಾಚನ: ಕೀರ್ತನೆಗಳು 74-78 ಗೀತೆ 28
ಭಾಷಣ ಗುಣ: ಕ್ಷೇತ್ರ ಶುಶ್ರೂಷೆಯಲ್ಲಿ ಸ್ವಾಭಾವಿಕತೆ (be-KA ಪು. 128 ¶1-ಪು. 129 ¶1)
ನಂ. 1: ಯೋಗ್ಯ ಹೇತುವಿನೊಂದಿಗೆ ಓದಿರಿ (be-KA ಪು. 23 ¶4-ಪು. 26 ¶5)
ನಂ. 2: ಕೀರ್ತನೆ 75:1-76:12
ನಂ. 3: ಯೆಹೋವನನ್ನು ಹುಡುಕುವುದರಲ್ಲಿ ಏನು ಒಳಗೂಡಿದೆ? (ಚೆಫ. 2:3)
ನಂ. 4: td-KA 12ಸಿ ಅಂತ್ಯ ಸಮಯವು ದೀರ್ಘಗೊಳಿಸಲ್ಪಟ್ಟಿರುವುದು ಒಂದು ಕರುಣಾಭರಿತ ಒದಗಿಸುವಿಕೆಯಾಗಿದೆ
ಜುಲೈ 24 ಬೈಬಲ್ ವಾಚನ: ಕೀರ್ತನೆಗಳು 79-86 ಗೀತೆ 112
ಭಾಷಣ ಗುಣ: ವೇದಿಕೆಯ ಮೇಲೆ ಸ್ವಾಭಾವಿಕತೆ (be-KA ಪು. 129 ¶2-ಪು. 130 ¶1)
ನಂ. 1: “ಶಿಷ್ಟರ ಗುಡಾರಕ್ಕೆ ಏಳಿಗೆ” (w04-KA 11/15 ಪು. 26 ¶1-ಪು. 28 ¶2)
ನಂ. 2: ಕೀರ್ತನೆ 82:1-83:18
ನಂ. 3: td-KA 12ಡಿ ಲೋಕಸಂಕಟಕ್ಕೆ ಮನುಷ್ಯರಿಂದ ಪರಿಹಾರ ಸಿಗುವುದಿಲ್ಲ
ನಂ. 4: ಅಪರಿಪೂರ್ಣ ಮಾನವರು ದೇವರನ್ನು ಮೆಚ್ಚಿಸಲು ನಿಜವಾಗಿಯೂ ಸಾಧ್ಯವಿದೆಯೋ?
ಜುಲೈ 31 ಬೈಬಲ್ ವಾಚನ: ಕೀರ್ತನೆಗಳು 87-91 ಗೀತೆ 57
ಭಾಷಣ ಗುಣ: ಸಾರ್ವಜನಿಕವಾಗಿ ಓದುವಾಗ ಸ್ವಾಭಾವಿಕತೆ (be-KA ಪು. 130 ¶2-4)
ನಂ. 1: ‘ಜ್ಞಾನವು ಸುಲಭವಾಗಿ ದೊರೆಯುವಾಗ’ ಮತ್ತು ವಿವೇಕವು ನಮ್ಮನ್ನು ಮಾರ್ಗದರ್ಶಿಸುವಾಗ (w04-KA 11/15 ಪು. 28 ¶3-ಪು. 29 ¶7)
ನಂ. 2: ಕೀರ್ತನೆ 89:1-21
ನಂ. 3: ಬೈಬಲಿನ ಅಧ್ಯಯನವು ನಮ್ಮ ಆರಾಧನೆಯ ಭಾಗವಾಗಿದೆ
ನಂ. 4: td-KA 13ಎ ಒಂದೇ ಒಂದು ಸತ್ಯ ಧರ್ಮ
ಆಗ. 7 ಬೈಬಲ್ ವಾಚನ: ಕೀರ್ತನೆಗಳು 92-101 ಗೀತೆ 190
ಭಾಷಣ ಗುಣ: ವೈಯಕ್ತಿಕ ಶುದ್ಧತೆ ನಮ್ಮ ಸಂದೇಶವನ್ನು ಅಲಂಕರಿಸುತ್ತದೆ (be-KA ಪು. 131 ¶1-3)
ನಂ. 1: ಅಧ್ಯಯನವನ್ನು ಮಾಡುವ ವಿಧ (be-KA ಪು. 27 ¶1-ಪು. 31 ¶2)
ನಂ. 2: ಕೀರ್ತನೆ 92:1-93:5
ನಂ. 3: td-KA 13ಬಿ ಸುಳ್ಳು ಬೋಧನೆಯು ಸೂಕ್ತವಾಗಿಯೇ ಖಂಡಿಸಲ್ಪಟ್ಟಿದೆ
ನಂ. 4: ನೈತಿಕ ಸಮಗ್ರತೆಯ ಪ್ರಾಮುಖ್ಯತೆ
ಆಗ. 14 ಬೈಬಲ್ ವಾಚನ: ಕೀರ್ತನೆಗಳು 102-105 ಗೀತೆ 1
ಭಾಷಣ ಗುಣ: ನಿರಾಡಂಬರತೆ ಮತ್ತು ಸ್ವಸ್ಥಮನಸ್ಸು ಒಬ್ಬನ ಉಡುಪು ಮತ್ತು ಕೇಶಾಲಂಕಾರದ ಮೇಲೆ ಪ್ರಭಾವ ಬೀರುವ ವಿಧ (be-KA ಪು. 131 ¶4-ಪು. 132 ¶3)
ನಂ. 1: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ”! (w04-KA 11/15 ಪು. 8-9)
ನಂ. 2: ಕೀರ್ತನೆ 104:1-24
ನಂ. 3: ನಾವು ಏಕೆ ಎಚ್ಚರಿಕೆಯಿಂದಿರಬೇಕು?
ನಂ. 4: td-KA 13ಸಿ ಒಬ್ಬನ ಧರ್ಮವು ತಪ್ಪೆಂದು ರುಜುವಾದರೆ, ಅದನ್ನು ಬದಲಾಯಿಸುವುದು ಅವಶ್ಯ
ಆಗ. 21 ಬೈಬಲ್ ವಾಚನ: ಕೀರ್ತನೆಗಳು 106-109 ಗೀತೆ 201
ಭಾಷಣ ಗುಣ: ಸುವ್ಯವಸ್ಥಿತವಾದ ಉಡುಪಿನ ಮೌಲ್ಯ (be-KA ಪು. 132 ¶4-ಪು. 133 ¶1)
ನಂ. 1: ಯುವ ಜನರೇ—ಹಿಂದೆ ಮುಂದೆ ಯೋಚಿಸದೆ ನಿಮ್ಮ ಸಮವಯಸ್ಕರನ್ನು ಹಿಂಬಾಲಿಸಬೇಡಿ (w04-KA 10/15 ಪು. 22 ¶4-ಪು. 24 ¶5)
ನಂ. 2: ಕೀರ್ತನೆ 107:20-43
ನಂ. 3: td-KA 13ಡಿ ಸ್ವಲ್ಪಮಟ್ಟಿಗೆ “ಎಲ್ಲಾ ಧರ್ಮಗಳಲ್ಲಿ ಒಳ್ಳೇದಿದೆ” ಎಂದಮಾತ್ರಕ್ಕೆ, ಅದು ದೇವರ ಅನುಗ್ರಹವನ್ನು ಖಾತ್ರಿಪಡಿಸುವುದಿಲ್ಲ
ನಂ. 4: ನಾವು ಯಾವ ವಿಧಗಳಲ್ಲಿ ದೇವರನ್ನು ಅನುಕರಿಸಬಲ್ಲೆವು?
ಆಗ. 28 ಬೈಬಲ್ ವಾಚನ: ಕೀರ್ತನೆಗಳು 110-118 ಗೀತೆ 125
ಭಾಷಣ ಗುಣ: ಉತ್ತಮ ವೈಯಕ್ತಿಕ ತೋರಿಕೆಯು ಮುಗ್ಗರಿಸುವುದಕ್ಕೆ ಯಾವುದೇ ಕಾರಣವನ್ನು ಕೊಡುವುದಿಲ್ಲ (be-KA ಪು. 133 ¶2-4)
ಮೌಖಿಕ ಪುನರ್ವಿಮರ್ಶೆ
ಸೆಪ್ಟೆಂ. 4 ಬೈಬಲ್ ವಾಚನ: ಕೀರ್ತನೆ 119 ಗೀತೆ 59
ಭಾಷಣ ಗುಣ: ಸರಿಯಾದ ದೇಹಭಂಗಿ ಮತ್ತು ಅಚ್ಚುಕಟ್ಟಾದ ಸಾಧನ (be-KA ಪು. 134 ¶1-5)
ನಂ. 1: ಅಧ್ಯಯನವು ಪ್ರತಿಫಲದಾಯಕವಾಗಿದೆ (be-KA ಪು. 31 ¶3-ಪು. 32 ¶4)
ನಂ. 2: ಕೀರ್ತನೆ 119:25-48
ನಂ. 3: ಐಹಿಕ ಅಧಿಕಾರಿಗಳಿಗೆ ನಾವು ಏಕೆ ಗೌರವವನ್ನು ತೋರಿಸಬೇಕು?
ನಂ. 4: td-KA 14ಎ ಪವಿತ್ರಾತ್ಮವು ಏನಾಗಿದೆ?
ಸೆಪ್ಟೆಂ. 11 ಬೈಬಲ್ ವಾಚನ: ಕೀರ್ತನೆಗಳು 120-134 ಗೀತೆ 65
ಭಾಷಣ ಗುಣ: ಭಾಷಣಕ್ಕೆ ಸಂಬಂಧಿಸಿದ ಕಳವಳವನ್ನು ಕುಗ್ಗಿಸುವ ವಿಧ (be-KA ಪು. 135 ¶1-ಪು. 137 ¶3)
ನಂ. 1: ಸಂಶೋಧನೆ ಮಾಡುವ ವಿಧ (be-KA ಪು. 33 ¶1-ಪು. 35 ¶4)
ನಂ. 2: ಕೀರ್ತನೆ 121:1-123:4
ನಂ. 3: td-KA 15ಎ ಪಾತಾಳವು ಬೆಂಕಿಯಿಂದ ಯಾತನೆಗೊಳಪಡುವಂತಹ ಒಂದು ಅಕ್ಷರಾರ್ಥ ಸ್ಥಳವಲ್ಲ
ನಂ. 4: ಉತ್ಪ್ರೇಕ್ಷಾಲಂಕಾರ ಎಂದರೇನು, ಮತ್ತು ಇದನ್ನು ಯೇಸು ಹೇಗೆ ಉಪಯೋಗಿಸಿದನು?
ಸೆಪ್ಟೆಂ. 18 ಬೈಬಲ್ ವಾಚನ: ಕೀರ್ತನೆಗಳು 135-141 ಗೀತೆ 97
ಭಾಷಣ ಗುಣ: ಸಮಚಿತ್ತತೆಯನ್ನು ಗಳಿಸುವ ವಿಧ (be-KA ಪು. 137 ¶4-ಪು. 138 ¶6)
ನಂ. 1: ನಿಮ್ಮ ದೀಕ್ಷಾಸ್ನಾನದ ಅರ್ಥ (wt-KA ಪು. 110-15 ¶1-10)
ನಂ. 2: ಕೀರ್ತನೆ 136:1-26
ನಂ. 3: ಜ್ಞಾಪಕಾಚರಣೆಯು ಯಾವ ವಿಧದಲ್ಲಿ ಒಂದು ಸಹಭಾಗಿ ಭೋಜನವಾಗಿದೆ?
ನಂ. 4: td-KA 15ಬಿ ಬೆಂಕಿಯು ಸರ್ವನಾಶದ ಒಂದು ಸಂಕೇತವಾಗಿದೆ
ಸೆಪ್ಟೆಂ. 25 ಬೈಬಲ್ ವಾಚನ: ಕೀರ್ತನೆಗಳು 142-150 ಗೀತೆ 5
ಭಾಷಣ ಗುಣ: ಸ್ವರವರ್ಧನೆಯ ಪ್ರಾಮುಖ್ಯತೆ (be-KA ಪು. 139 ¶1-ಪು. 140 ¶1)
ನಂ. 1: ನಮ್ಮ ದೀಕ್ಷಾಸ್ನಾನಕ್ಕನುಸಾರ ಜೀವಿಸುವುದು (wt-KA ಪು. 115-9 ¶11-16)
ನಂ. 2: ಕೀರ್ತನೆ 142:1-143:12
ನಂ. 3: td-KA 15ಸಿ ಐಶ್ವರ್ಯವಂತನು ಮತ್ತು ಲಾಜರನ ವೃತ್ತಾಂತವು, ನಿತ್ಯಯಾತನೆಯ ರುಜುವಾತನ್ನು ಕೊಡುವುದಿಲ್ಲ
ನಂ. 4: ನಾವು ಯಾವ ವಿಧಗಳಲ್ಲಿ ನಮ್ಮ ಅಗತ್ಯಗಳಿಗಿಂತ ಇತರರ ಅಗತ್ಯಗಳಿಗೆ ಪ್ರಾಧಾನ್ಯತೆ ನೀಡಬಲ್ಲೆವು?
ಅಕ್ಟೋ. 2 ಬೈಬಲ್ ವಾಚನ: ಜ್ಞಾನೋಕ್ತಿಗಳು 1-6 ಗೀತೆ 111
ಭಾಷಣ ಗುಣ: ಮೈಕ್ರೊಫೋನ್ಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ (be-KA ಪು. 140 ¶2-ಪು. 142 ¶1)
ನಂ. 1: ಯೆಹೋವನ ಸಿಂಹಾಸನದ ಮುಂದೆ ಇರುವ ಮಹಾ ಸಮೂಹ (wt-KA ಪು. 120-7 ¶1-17)
ನಂ. 2: ಜ್ಞಾನೋಕ್ತಿ 5:1-23
ನಂ. 3: td-KA 16ಎ ಪಾಪ ಎಂದರೇನು?
ನಂ. 4: e ಕಲ್ಪನಾಕಥೆಗಳನ್ನು ಹಬ್ಬಿಸಬೇಡಿರಿ (2 ತಿಮೊ. 4:4)
ಅಕ್ಟೋ. 9 ಬೈಬಲ್ ವಾಚನ: ಜ್ಞಾನೋಕ್ತಿಗಳು 7-11 ಗೀತೆ 73
ಭಾಷಣ ಗುಣ: ಉತ್ತರ ಕೊಡುವಾಗ ಬೈಬಲಿನ ಉಪಯೋಗ (be-KA ಪು. 143 ¶1-3)
ನಂ. 1: ಯೆಹೋವನು ತನ್ನ ಸಂಸ್ಥೆಯನ್ನು ನಡೆಸುವ ವಿಧ—ಭಾಗ 1 (wt-KA ಪು. 128-31 ¶1-7)
ನಂ. 2: ಜ್ಞಾನೋಕ್ತಿ 7:1-27
ನಂ. 3: ಕ್ರೈಸ್ತ ತಾಟಸ್ಥ್ಯವು ನಮ್ಮ ಸಹೋದರತ್ವದ ಐಕ್ಯವನ್ನು ಎತ್ತಿಹಿಡಿಯುತ್ತದೆ
ನಂ. 4: td-KA 16ಬಿ ಆದಾಮನ ಪಾಪದಿಂದ ಎಲ್ಲರೂ ಕಷ್ಟಾನುಭವಿಸಿರುವ ಕಾರಣ
ಅಕ್ಟೋ. 16 ಬೈಬಲ್ ವಾಚನ: ಜ್ಞಾನೋಕ್ತಿಗಳು 12-16 ಗೀತೆ 180
ಭಾಷಣ ಗುಣ: ಬೈಬಲನ್ನು ಉಪಯೋಗಿಸುವುದರಲ್ಲಿ ಪ್ರಗತಿಯನ್ನು ಮಾಡುವ ವಿಧ (be-KA ಪು. 144 ¶1-4)
ನಂ. 1: ಬೇರೆ ಸಂಶೋಧನಾ ಸಾಧನಗಳನ್ನು ಉಪಯೋಗಿಸಲು ಕಲಿಯುವುದು (be-KA ಪು. 35 ¶3-ಪು. 38 ¶5)
ನಂ. 2: ಜ್ಞಾನೋಕ್ತಿ 14:1-21
ನಂ. 3: td-KA 16ಸಿ ನಿಷೇಧಿಸಲ್ಪಟ್ಟ ಹಣ್ಣು ಅವಿಧೇಯತೆಯಾಗಿತ್ತೇ ಹೊರತು ಲೈಂಗಿಕ ಕೃತ್ಯವಾಗಿರಲಿಲ್ಲ
ನಂ. 4: ಕೂಟಗಳಲ್ಲಿ ನಿಕಟ ಗಮನವನ್ನು ಕೊಡುವಂತೆ ನಮಗೆ ಯಾವುದು ಸಹಾಯಮಾಡಬಲ್ಲದು?
ಅಕ್ಟೋ. 23 ಬೈಬಲ್ ವಾಚನ: ಜ್ಞಾನೋಕ್ತಿಗಳು 17-21 ಗೀತೆ 131
ಭಾಷಣ ಗುಣ: ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು (be-KA ಪು. 145-6)
ನಂ. 1: ಯೆಹೋವನು ತನ್ನ ಸಂಸ್ಥೆಯನ್ನು ನಡೆಸುವ ವಿಧ—ಭಾಗ 2 (wt-KA ಪು. 131-5 ¶8-15)
ನಂ. 2: ಜ್ಞಾನೋಕ್ತಿ 17:1-20
ನಂ. 3: ಕ್ರೈಸ್ತರು ವಯೋವೃದ್ಧರನ್ನು ವೀಕ್ಷಿಸುವ ವಿಧ
ನಂ. 4: td-KA 16ಡಿ ಪವಿತ್ರಾತ್ಮದ ವಿರುದ್ಧ ಪಾಪಮಾಡುವುದರ ಅರ್ಥ
ಅಕ್ಟೋ. 30 ಬೈಬಲ್ ವಾಚನ: ಜ್ಞಾನೋಕ್ತಿಗಳು 22-26 ಗೀತೆ 9
ಭಾಷಣ ಗುಣ: ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದರ ಪ್ರಾಮುಖ್ಯತೆ (be-KA ಪು. 147 ¶1-ಪು. 148 ¶2)
ಮೌಖಿಕ ಪುನರ್ವಿಮರ್ಶೆ
ನವೆಂ. 6 ಬೈಬಲ್ ವಾಚನ: ಜ್ಞಾನೋಕ್ತಿಗಳು 27-31 ಗೀತೆ 51
ಭಾಷಣ ಗುಣ: ಶಾಸ್ತ್ರವಚನಗಳನ್ನು ಪರಿಚಯಿಸಲಿಕ್ಕಾಗಿ ಯೋಗ್ಯವಾದ ಹೇಳಿಕೆಗಳನ್ನು ಆರಿಸಿಕೊಳ್ಳುವುದು (be-KA ಪು. 148 ¶3-ಪು. 149 ¶3)
ನಂ. 1: ಸಲಹೆಗೆ ಕಿವಿಗೊಡಿರಿ (wt-KA ಪು. 136-9 ¶1-9)
ನಂ. 2: ಜ್ಞಾನೋಕ್ತಿ 28:1-18
ನಂ. 3: td-KA 17ಎ ಪಿಶಾಚನು ಒಬ್ಬ ಆತ್ಮ ವ್ಯಕ್ತಿಯಾಗಿದ್ದಾನೆ
ನಂ. 4: ನಾವು ಶುಶ್ರೂಷೆಯಲ್ಲಿ ಭೇಟಿಮಾಡುವ ವ್ಯಕ್ತಿಗಳ ಹೊರತೋರಿಕೆಗನುಸಾರ ಅವರಿಗೆ ತೀರ್ಪಮಾಡಬಾರದೇಕೆ?
ನವೆಂ. 13 ಬೈಬಲ್ ವಾಚನ: ಪ್ರಸಂಗಿ 1-6 ಗೀತೆ 25
ಭಾಷಣ ಗುಣ: ಸರಿಯಾದ ಒತ್ತನ್ನು ನೀಡುವುದರಲ್ಲಿ ಭಾವಪೂರ್ಣತೆಯು ಸೇರಿದೆ (be-KA ಪು. 150 ¶1-2)
ನಂ. 1: ಶಿಸ್ತನ್ನು ಅಂಗೀಕರಿಸಿರಿ (wt-KA ಪು. 139-43 ¶10-16)
ನಂ. 2: ಪ್ರಸಂಗಿ 5:1-15
ನಂ. 3: ಬೈಬಲ್ ಸತ್ಯಗಳು ಜ್ಞಾನಿಗಳಿಗೂ ಬುದ್ಧಿವಂತರಿಗೂ ಮರೆಮಾಡಲ್ಪಟ್ಟಿರುವುದು ಹೇಗೆ? (ಮತ್ತಾ. 11:25)
ನಂ. 4: td-KA 17ಬಿ ಪಿಶಾಚನು ಈ ಲೋಕದ ಅದೃಶ್ಯ ಅಧಿಪತಿಯಾಗಿದ್ದಾನೆ
ನವೆಂ. 20 ಬೈಬಲ್ ವಾಚನ: ಪ್ರಸಂಗಿ 7-12 ಗೀತೆ 37
ಭಾಷಣ ಗುಣ: ಸರಿಯಾದ ಪದಗಳಿಗೆ ಒತ್ತುನೀಡಿರಿ (be-KA ಪು. 150 ¶3-ಪು. 151 ¶2)
ನಂ. 1: “ನಿಮ್ಮನಿಮ್ಮೊಳಗೆ ಗಾಢವಾದ ಪ್ರೀತಿಯಿರಲಿ” (wt-KA ಪು. 144-50 ¶1-14)
ನಂ. 2: ಪ್ರಸಂಗಿ 9:1-12
ನಂ. 3: td-KA 17ಸಿ ದೆವ್ವಗಳು ದಂಗೆಕೋರ ದೇವದೂತರಾಗಿದ್ದಾರೆ
ನಂ. 4: ಈರ್ಷ್ಯೆಯಲ್ಲಿ ತಪ್ಪೇನಿದೆ?
ನವೆಂ. 27 ಬೈಬಲ್ ವಾಚನ: ಪರಮ ಗೀತ 1-8 ಗೀತೆ 11
ಭಾಷಣ ಗುಣ: ಒತ್ತುನೀಡುವ ವಿಧಾನಗಳು (be-KA ಪು. 151 ¶3-ಪು. 152 ¶5)
ನಂ. 1: ಮನೆಯಲ್ಲಿ ದೈವಿಕ ಭಕ್ತಿಯನ್ನು ಆಚರಣೆಗೆ ತನ್ನಿರಿ (wt-KA ಪು. 151-8 ¶1-13)
ನಂ. 2: ಪರಮ ಗೀತ 7:1-8:4
ನಂ. 3: ಕ್ರೈಸ್ತರು ತಮ್ಮ ಉಡುಪಿನ ವಿಷಯದಲ್ಲಿ ಅಚ್ಚುಕಟ್ಟಾಗಿಯೂ, ಶುದ್ಧರಾಗಿಯೂ, ನಿರಾಡಂಬರವಾಗಿಯೂ ಇರಬೇಕು ಏಕೆ?
ನಂ. 4: td-KA 18ಎ ಸತ್ತವರಿಗಾಗಿ ನಿರೀಕ್ಷೆ
ಡಿಸೆಂ. 4 ಬೈಬಲ್ ವಾಚನ: ಯೆಶಾಯ 1-5 ಗೀತೆ 90
ಭಾಷಣ ಗುಣ: ಶಾಸ್ತ್ರವಚನಗಳನ್ನು ಸರಿಯಾಗಿ ಅನ್ವಯಿಸುವುದು (be-KA ಪು. 153 ¶1-ಪು. 154 ¶3)
ನಂ. 1: “ಇವರು ಲೋಕದವರಲ್ಲ” (wt-KA ಪು. 159-66 ¶1-15)
ನಂ. 2: ಯೆಶಾಯ 3:1-15
ನಂ. 3: td-KA 18ಬಿ ಸ್ವರ್ಗ ಅಥವಾ ಭೂಮಿಯ ಮೇಲಿನ ಜೀವಿತಕ್ಕೆ ಪುನರುತ್ಥಾನ
ನಂ. 4: f ಕ್ರೈಸ್ತರು ‘ಕೋಪಿಸುವುದರಲ್ಲಿ ನಿಧಾನವಾಗಿರಬೇಕಾದ’ ಕಾರಣ (ಯಾಕೋ. 1:19)
ಡಿಸೆಂ. 11 ಬೈಬಲ್ ವಾಚನ: ಯೆಶಾಯ 6-10 ಗೀತೆ 204
ಭಾಷಣ ಗುಣ: ಶಾಸ್ತ್ರವಚನಗಳ ಅನ್ವಯವನ್ನು ಸ್ಪಷ್ಟಪಡಿಸುವುದು (be-KA ಪು. 154 ¶4-ಪು. 155 ¶5)
ನಂ. 1: ಭಾಷಣದ ಹೊರಮೇರೆಯನ್ನು ತಯಾರಿಸುವುದು (be-KA ಪು. 39-42)
ನಂ. 2: ಯೆಶಾಯ 10:1-14
ನಂ. 3: ಕ್ಷಮಿಸಲು ಶಕ್ತರಾಗಿರುವುದು ಏಕೆ ಅಷ್ಟು ಪ್ರಾಮುಖ್ಯವಾಗಿದೆ?
ನಂ. 4: td-KA 19ಎ ಪೂರ್ವಜರ ಆರಾಧನೆಯು ವ್ಯರ್ಥವಾಗಿದೆ
ಡಿಸೆಂ. 18 ಬೈಬಲ್ ವಾಚನ: ಯೆಶಾಯ 11-16 ಗೀತೆ 47
ಭಾಷಣ ಗುಣ: ಶಾಸ್ತ್ರವಚನಗಳಿಂದ ತರ್ಕಿಸಿರಿ (be-KA ಪು. 155 ¶6-ಪು. 156 ¶5)
ನಂ. 1: ಯುವ ಜನರೇ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಿಮ್ಮ ಹೆತ್ತವರು ನಿಮಗೆ ಸಹಾಯಮಾಡುವಂತೆ ಬಿಡಿರಿ (w04-KA 10/15 ಪು. 20 ¶1-ಪು. 22 ¶3)
ನಂ. 2: ಯೆಶಾಯ 11:1-12
ನಂ. 3: td-KA 19ಬಿ ಮಾನವರನ್ನು ಗೌರವಿಸಬಹುದು, ಆದರೆ ದೇವರೊಬ್ಬನನ್ನೇ ಆರಾಧಿಸಬೇಕು
ನಂ. 4: ಸತ್ಯ ಕ್ರೈಸ್ತರು ಅರ್ಮಗೆದೋನ್ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ
ಡಿಸೆಂ. 25 ಬೈಬಲ್ ವಾಚನ: ಯೆಶಾಯ 17-23 ಗೀತೆ 53
ಭಾಷಣ ಗುಣ: ಪ್ರಾಯೋಗಿಕ ಮೌಲ್ಯವನ್ನು ಸ್ಪಷ್ಟಪಡಿಸುವುದು (be-KA ಪು. 157 ¶1-ಪು. 158 ¶1)
ಮೌಖಿಕ ಪುನರ್ವಿಮರ್ಶೆ
[ಪಾದಟಿಪ್ಪಣಿಗಳು]
a ಸಹೋದರರಿಗೆ ಮಾತ್ರ ನೇಮಿಸಿರಿ.
b ಸಹೋದರರಿಗೆ ಮಾತ್ರ ನೇಮಿಸಿರಿ.
c ಸಹೋದರರಿಗೆ ಮಾತ್ರ ನೇಮಿಸಿರಿ.
d ಸಹೋದರರಿಗೆ ಮಾತ್ರ ನೇಮಿಸಿರಿ.
e ಸಹೋದರರಿಗೆ ಮಾತ್ರ ನೇಮಿಸಿರಿ.
f ಸಹೋದರರಿಗೆ ಮಾತ್ರ ನೇಮಿಸಿರಿ.