ಸರ್ಕಿಟ್ ಸಮ್ಮೇಳನದ ಪುನರ್ವಿಮರ್ಶೆ
ಈ ವಿಷಯಭಾಗವನ್ನು, 2006ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನವನ್ನು ಸಭೆಯು ಹಾಜರಾಗುವುದಕ್ಕೆ ಸ್ವಲ್ಪ ಮುಂಚಿನ ಮತ್ತು ಅನಂತರದ ಸೇವಾ ಕೂಟದ ಕಾರ್ಯಕ್ರಮದಲ್ಲಿ ಉಪಯೋಗಿಸಲಾಗುವುದು. ಈ ಮುನ್ನೋಟ ಮತ್ತು ಪುನರ್ವಿಮರ್ಶೆಗಾಗಿ ಅಧ್ಯಕ್ಷ ಮೇಲ್ವಿಚಾರಕನು 2004ರ ಡಿಸೆಂಬರ್ ತಿಂಗಳಿನ ನಮ್ಮ ರಾಜ್ಯದ ಸೇವೆಯ 4ನೇ ಪುಟದಲ್ಲಿ ತಿಳಿಸಿರುವಂತೆ ಏರ್ಪಾಡನ್ನು ಮಾಡುತ್ತಾನೆ. ಪುನರ್ವಿಮರ್ಶೆಯ ಸಮಯದಲ್ಲಿ ಎಲ್ಲ ಪ್ರಶ್ನೆಗಳನ್ನು ಕೇಳಬೇಕು ಮತ್ತು ಪ್ರಸ್ತುತಪಡಿಸಲ್ಪಟ್ಟ ಮಾಹಿತಿಯನ್ನು ಹೇಗೆ ಅನ್ವಯಿಸಬಹುದು ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು.
ಮೊದಲನೆಯ ದಿನ
1. ನಾವು ನೂತನ ವ್ಯಕ್ತಿತ್ವವನ್ನು ಹೇಗೆ ಧರಿಸಿಕೊಳ್ಳಬಲ್ಲೆವು ಮತ್ತು ಅದನ್ನು ನಾವು ಏಕೆ ಕಾಪಾಡಿಕೊಳ್ಳಬೇಕು?
2. ಸಾರುವ ಕೆಲಸದಲ್ಲಿ ಕೆಲವರು ತಮ್ಮ ಪಾಲ್ಗೊಳ್ಳುವಿಕೆಯನ್ನು ಹೇಗೆ ಹೆಚ್ಚಿಸಿದ್ದಾರೆ?
3. ನಾವು ಇತರರೊಂದಿಗೆ ನಮ್ಮನ್ನು ಏಕೆ ಹೋಲಿಸಿನೋಡಬಾರದು?
4. ಕುಟುಂಬ ವೃತ್ತದಲ್ಲಿ ನೂತನ ವ್ಯಕ್ತಿತ್ವವನ್ನು ಕುಟುಂಬದ ಸದಸ್ಯರು ಹೇಗೆ ಪ್ರದರ್ಶಿಸಬಲ್ಲರು?
5. ಸಭೆಯಲ್ಲಿ ನಾವು ಹೇಗೆ ನಿಷ್ಠಾವಂತ ಬೆಂಬಲವನ್ನು ತೋರಿಸಬಲ್ಲೆವು?
6. ಕ್ಷೇತ್ರ ಶುಶ್ರೂಷೆಯಲ್ಲಿ ನಾವು ನೂತನ ವ್ಯಕ್ತಿತ್ವವನ್ನು ಏಕೆ ಪ್ರದರ್ಶಿಸಬೇಕು?
7. ಯೋಗ್ಯ ರೀತಿಯಲ್ಲಿ ಧ್ಯಾನಿಸುವುದರಲ್ಲಿ ಏನೆಲ್ಲ ಒಳಗೂಡಿದೆ, ಮತ್ತು ಅಂಥ ಧ್ಯಾನದಿಂದ ನಾವು ಹೇಗೆ ಪ್ರಯೋಜನವನ್ನು ಪಡೆಯಬಲ್ಲೆವು?
8. ಯಾವ ಗುಣಗಳು ನಮ್ಮನ್ನು ಯೆಹೋವನ ಕೈಯಲ್ಲಿ ರೂಪುಗೊಳಿಸಬಲ್ಲವರಾಗಿ ಮಾಡುತ್ತದೆ?
ಎರಡನೆಯ ದಿನ
9. ನಮ್ಮ ನಾಲಿಗೆಯನ್ನು ಸರಿಯಾಗಿ ಉಪಯೋಗಿಸುವುದು ಎಷ್ಟು ಪ್ರಾಮುಖ್ಯವಾಗಿದೆ?
10. ಜೊತೆ ಕೆಲಸಗಾರರೊಂದಿಗೆ, ಸಹಪಾಠಿಗಳೊಂದಿಗೆ ಮತ್ತು ಇತರರೊಂದಿಗೆ ಸ್ವಸ್ಥಕರವಾದ ಮಾತುಗಳನ್ನು ಆಡುವುದರಿಂದ ಯಾವ ಪ್ರಯೋಜನಗಳು ದೊರಕುತ್ತವೆ?
11. ಜೊತೆ ವಿಶ್ವಾಸಿಗಳೊಂದಿಗಿನ ನಮ್ಮ ವ್ಯವಹಾರಗಳಲ್ಲಿ, ಎಫೆಸ 4:25-32ರಲ್ಲಿನ ಪೌಲನ ಸಲಹೆಯನ್ನು ನಾವು ಹೇಗೆ ಅನ್ವಯಿಸಬಲ್ಲೆವು?
12. ನಮ್ಮ ನಾಲಿಗೆಯನ್ನು ಅತಿ ಗೌರವಯುಕ್ತ ರೀತಿಯಲ್ಲಿ ಉಪಯೋಗಿಸುವ ವಿಧವು ಯಾವುದು?
13. ಕೆಡುಕನನ್ನು ಜಯಿಸಲು ನಾವೇನನ್ನು ಮಾಡತಕ್ಕದ್ದು?
14. ಯಾವ ಯಾವ ಕ್ಷೇತ್ರಗಳಲ್ಲಿ, ಲೋಕದ ಮಲಿನತೆಯು ನಮಗೆ ತಟ್ಟದಂತೆ ನಾವು ಜಾಗ್ರತೆವಹಿಸಬೇಕು?
15. ನಮ್ಮ ಆಂತರ್ಯವನ್ನು ದಿನೇದಿನೇ ಹೊಸದುಗೊಳಿಸುತ್ತಾ ಇರುವುದು ಏಕೆ ಪ್ರಾಮುಖ್ಯವಾಗಿದೆ, ಮತ್ತು ನಾವಿದನ್ನು ಹೇಗೆ ಮಾಡಬಲ್ಲೆವು?
16. ಈ ವರುಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಯಾವ ಸಲಹೆಯನ್ನು ಅನ್ವಯಿಸಲು ನೀವು ಯೋಚಿಸುತ್ತಿದ್ದೀರಿ?