ಸೇವಾ ಕೂಟದ ಶೆಡ್ಯೂಲ್
ಸೂಚನೆ: ಸಭೆಯು, “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನಕ್ಕೆ ಹಾಜರಾದ ಒಂದು ಅಥವಾ ಎರಡು ತಿಂಗಳಿನ ನಂತರ, ಪ್ರಚಾರಕರು ಅಧಿವೇಶನದಲ್ಲಿ ಕಲಿತ ವಿಷಯಗಳಲ್ಲಿ ಕ್ಷೇತ್ರ ಶುಶ್ರೂಷೆಗೆ ಬಹಳ ಉಪಯುಕ್ತಕರವಾಗಿ ಕಂಡುಕೊಂಡ ಅಂಶಗಳನ್ನು ಪುನರ್ವಿಮರ್ಶಿಸಲು ಸೇವಾ ಕೂಟದಲ್ಲಿ 15ರಿಂದ 20 ನಿಮಿಷಗಳನ್ನು ಬದಿಗಿರಿಸಿರಿ (ಸ್ಥಳಿಕ ಅಗತ್ಯಗಳು ಎಂಬ ಭಾಗವನ್ನು ಒಂದುವೇಳೆ ಉಪಯೋಗಿಸಬಹುದು). ಈ ವಿಶೇಷ ಸೇವಾ ಕೂಟದ ಭಾಗವು, ಅಧಿವೇಶನದಲ್ಲಿ ಕಲಿತಂಥ ವಿಷಯಗಳನ್ನು ನಾವು ಹೇಗೆ ಉಪಯೋಗಿಸುತ್ತಿದ್ದೇವೆ ಮತ್ತು ನಮ್ಮ ಶುಶ್ರೂಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಅವುಗಳು ಹೇಗೆ ಸಹಾಯಮಾಡಿವೆ ಎಂಬುದನ್ನು ವಿವರಿಸಲು ನಮಗೆ ಸಂದರ್ಭವನ್ನು ನೀಡಲಿದೆ.—2005ರ ಏಪ್ರಿಲ್ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪು. 2ನ್ನು ನೋಡಿರಿ.
ಆಗಸ್ಟ್ 8ರಿಂದ ಆರಂಭವಾಗುವ ವಾರ
ಗೀತೆ 125
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 2006ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಮತ್ತು ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮದ ತಾರೀಖುಗಳು ತಿಳಿದಿರುವುದಾದರೆ ಅವನ್ನು ಪ್ರಚಾರಕರಿಗೆ ಜ್ಞಾಪಿಸಿರಿ.
10 ನಿ: “ನೀವು ಕರಪತ್ರಗಳನ್ನು ಉಪಯೋಗಿಸುತ್ತಿದ್ದೀರೊ?” ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಕರಪತ್ರಗಳನ್ನು ಉಪಯೋಗಿಸಿ ದೊರೆತ ಉತ್ತಮ ಫಲಿತಾಂಶಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿರಿ. ಒಬ್ಬ ಪ್ರಚಾರಕನು ಕರಪತ್ರವನ್ನು ಉಪಯೋಗಿಸುತ್ತಾ ಆಸಕ್ತ ವ್ಯಕ್ತಿಯನ್ನು ಕೂಟಕ್ಕೆ ಆಮಂತ್ರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಏರ್ಪಡಿಸಿರಿ.
25 ನಿ: “ಸಾರಬೇಕಾದ ಸಮಯವು ಇದೇ ಆಗಿದೆ!”a ಪಯನೀಯರ್ ಸೇವೆಯನ್ನು ಮಾಡುವ ಸಲುವಾಗಿ ಯಾವ ಕೆಲವು ಹೊಂದಾಣಿಕೆಗಳನ್ನು ಮಾಡಬೇಕಾಯಿತು ಮತ್ತು ಅದರಿಂದ ಯಾವ ಆಶೀರ್ವಾದಗಳನ್ನು ಆನಂದಿಸುತ್ತಿದ್ದಾರೆ ಎಂಬುದನ್ನು ತಿಳಿಸುವಂತೆ ಮುಂಚಿತವಾಗಿಯೇ ಒಬ್ಬ ಅಥವಾ ಇಬ್ಬರು ರೆಗ್ಯುಲರ್ ಪಯನೀಯರರನ್ನು ಏರ್ಪಡಿಸಿರಿ.
ಗೀತೆ 197 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 15ರಿಂದ ಆರಂಭವಾಗುವ ವಾರ
ಗೀತೆ 11
10 ನಿ: ಸ್ಥಳಿಕ ಪ್ರಕಟನೆಗಳು. ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಆಗಸ್ಟ್ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಒಬ್ಬ ಹಿರಿಯನು ಮತ್ತು ಒಬ್ಬ ಅಸ್ವಸ್ಥ ಪ್ರಚಾರಕನು ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವುದನ್ನು ತೋರಿಸಿರಿ.
15 ನಿ: ನಿಮಗೆ ನೆನಪಿದೆಯೇ? 2005, ಏಪ್ರಿಲ್ 15ರ ಕಾವಲಿನಬುರುಜು ಪುಟ 30ರ ಮೇಲಾಧಾರಿತವಾದ ಸಭಿಕರೊಂದಿಗಿನ ಚರ್ಚೆ. ಪ್ರತಿಯೊಂದು ಪ್ರಶ್ನೆಗೆ ಉತ್ತರಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಕೊಡಲ್ಪಟ್ಟಿರುವ ವಿಷಯದ ಪ್ರಾಯೋಗಿಕ ಮೌಲ್ಯವನ್ನು ಗಣ್ಯಮಾಡುವಂತೆ ಸಹಾಯಮಾಡಿರಿ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನು ಜಾಗರೂಕತೆಯಿಂದ ಓದುವಂತೆ ಎಲ್ಲರನ್ನು ಉತ್ತೇಜಿಸಿರಿ.
20 ನಿ: “ಮನೆಬಾಗಿಲಲ್ಲಿ ಮತ್ತು ಟೆಲಿಫೋನಿನ ಮೂಲಕ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು.”b ಅಪೇಕ್ಷಿಸು ಬ್ರೋಷರಿನ ಕೇವಲ ಒಂದು ಅಥವಾ ಎರಡು ಪ್ಯಾರಗ್ರಾಫ್‌ಗಳನ್ನು ಉಪಯೋಗಿಸುತ್ತಾ ಆರಂಭದ ಭೇಟಿಯಲ್ಲಿಯೇ ಒಂದು ಬೈಬಲ್ ಅಧ್ಯಯನವನ್ನು ಹೇಗೆ ಆರಂಭಿಸುವುದು ಎಂಬುದನ್ನು ತೋರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ. ಟೆಲಿಫೋನಿನ ಮೂಲಕ ಅಧ್ಯಯನಗಳನ್ನು ಆರಂಭಿಸುವುದರ ಕುರಿತಾದ ಒಂದು ಅಥವಾ ಎರಡು ಉತ್ತೇಜನದಾಯಕ ಅನುಭವಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
ಗೀತೆ 30 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 22ರಿಂದ ಆರಂಭವಾಗುವ ವಾರ
ಗೀತೆ 161
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ರಾಜ್ಯ ಸಾರುವಿಕೆ—ಒಂದು ಅಮೂಲ್ಯ ನೇಮಕ.”c ನಾಲ್ಕನೇ ಪ್ಯಾರಗ್ರಾಫ್ ಅನ್ನು ಚರ್ಚಿಸುವಾಗ, ವೃದ್ಧಾಪ್ಯ ಅಥವಾ ಅನಾರೋಗ್ಯದ ಕಾರಣ ಬಹಳಷ್ಟು ಇತಿಮಿತಿಗಳನ್ನು ಹೊಂದಿರುವವರು ಕ್ಷೇತ್ರ ಸೇವಾ ಸಮಯವನ್ನು 15 ನಿಮಿಷಗಳ ಅವಧಿಗಳಲ್ಲಿ ವರದಿಮಾಡುವಂತೆ ಅನುಮತಿಸುವ ಏರ್ಪಾಡಿನ ಕುರಿತು ಪುನರ್ವಿಮರ್ಶಿಸಿರಿ.—2002ರ ಅಕ್ಟೋಬರ್ ತಿಂಗಳಿನ ನಮ್ಮ ರಾಜ್ಯದ ಸೇವೆ, ಪು. 8, ಪ್ಯಾರ. 6ನ್ನು ನೋಡಿ.
ಗೀತೆ 204 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 29ರಿಂದ ಆರಂಭವಾಗುವ ವಾರ
ಗೀತೆ 45
10 ನಿ: ಸ್ಥಳಿಕ ಪ್ರಕಟನೆಗಳು. ಆಗಸ್ಟ್ ತಿಂಗಳಿನ ಕ್ಷೇತ್ರ ಸೇವಾ ವರದಿಯನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಒಂದು ನಿರೂಪಣೆಯಲ್ಲಿ, ಪತ್ರಿಕಾ ಮಾರ್ಗದಲ್ಲಿ ಒಬ್ಬ ವ್ಯಕ್ತಿಯನ್ನು ಪುನರ್ಭೇಟಿ ಮಾಡುತ್ತಿರುವುದಾಗಿ ತೋರಿಸಿರಿ.
15 ನಿ: “ಮೌನ ಸಾಕ್ಷಿ.”d ಯೆಹೋವನ ಜನರ ಉತ್ತಮ ನಡತೆಯನ್ನು ಗಮನಿಸಿದ್ದು ತಾವೂ ಯೆಹೋವನ ಸೇವಕರಾಗುವಂತೆ ಹೇಗೆ ಸಹಾಯಮಾಡಿತು ಎಂಬುದರ ಕುರಿತು ಕೆಲವು ಆಯ್ದ ಪ್ರಚಾರಕರು ಹೇಳಿಕೆ ನೀಡುವಂತೆ ಆಮಂತ್ರಿಸಿರಿ.
20 ನಿ: ಆರಂಭದ ಭೇಟಿಯಲ್ಲೇ ಬೈಬಲನ್ನು ಉಪಯೋಗಿಸಿರಿ. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಆರಂಭದ ಭೇಟಿಯಲ್ಲಿ ದೇವರ ವಾಕ್ಯದ ಕಡೆಗೆ ಹೇಗೆ ಗಮನವನ್ನು ಸೆಳೆಯುವುದು ಎಂಬ ವಿಷಯದಲ್ಲಿ 2004ರ ಸೆಪ್ಟೆಂಬರ್ ತಿಂಗಳಿನ ನಮ್ಮ ರಾಜ್ಯದ ಸೇವೆ, ಪುಟ 4, ಪ್ಯಾರಗ್ರಾಫ್ 2ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಸೆಪ್ಟೆಂಬರ್ ತಿಂಗಳಿಗಾಗಿನ ಸಾಹಿತ್ಯ ನೀಡುವಿಕೆಯೊಂದಿಗೆ ಈ ಸೂಚಿತ ನಿರೂಪಣೆಗಳಲ್ಲಿ ಒಂದು ಅಥವಾ ಎರಡನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಸಮಯವು ಅನುಮತಿಸುವುದಾದರೆ, ತಿಂಗಳಿನ ನೀಡುವಿಕೆಯನ್ನು ಹೇಗೆ ಕೊಡಬಹುದು ಎಂಬುದಕ್ಕಾಗಿ, 2005ರ ಜನವರಿ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಸಹ ಚರ್ಚಿಸಿ, ಪ್ರತ್ಯಕ್ಷಾಭಿನಯಿಸಬಹುದು.
ಗೀತೆ 71 ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 5ರಿಂದ ಆರಂಭವಾಗುವ ವಾರ
ಗೀತೆ 98
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: “ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಭಾಗ 12.”e ಬೈಬಲ್ ಅಧ್ಯಯನಗಳನ್ನು ಆರಂಭಿಸಿ, ನಡೆಸುವುದರಲ್ಲಿ ಪ್ರಗತಿಯನ್ನು ಮಾಡಲು ಯಾವುದು ಸಹಾಯಮಾಡಿತು ಎಂಬುದನ್ನು ತಿಳಿಸುವಂತೆ ಒಬ್ಬ ಇಲ್ಲವೆ ಇಬ್ಬರು ಪ್ರಚಾರಕರನ್ನು ಮುಂಚಿತವಾಗಿಯೇ ಏರ್ಪಡಿಸಿರಿ.
20 ನಿ: ವೃದ್ಧರಿಗೆ ನೆರವು ನೀಡುವಂತೆ ಏರ್ಪಡಿಸುವುದು. 1993, ಆಗಸ್ಟ್ 15ರ ಕಾವಲಿನಬುರುಜು ಪುಟ 28-9ರಲ್ಲಿರುವ “ಏರ್ಪಡಿಸುವಿಕೆ ಉಪಯುಕ್ತವಾಗಿದೆ” ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯದ ಮೇಲಾಧಾರಿತವಾದ ಹಿರಿಯನಿಂದ ನೀಡಲ್ಪಡುವ ಭಾಷಣ. ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ನೆರವು ನೀಡಲು ಸಭೆಯಲ್ಲಿ ಮಾಡಲ್ಪಟ್ಟಿರುವ ಏರ್ಪಾಡುಗಳ ಕುರಿತು ತಿಳಿಸಿರಿ.
ಗೀತೆ 164 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.