ಒಂದು ಪ್ರಾಯೋಗಿಕವಾದ ಕುಟುಂಬ ಕಾಲತಖ್ತೆಯನ್ನು ಮಾಡಿರಿ
1 ಪರ್ವತ ಪ್ರಸಂಗದಲ್ಲಿ ಯೇಸು ತನ್ನ ಕೇಳುಗರಿಗೆ ಉತ್ತೇಜಿಸಿದ್ದು: “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” (ಮತ್ತಾ. 6:33) ಆಧ್ಯಾತ್ಮಿಕ ವಿಚಾರಗಳಿಗೆ ಆದ್ಯತೆಯನ್ನು ನೀಡುವ ರೀತಿಯಲ್ಲಿ ಕುಟುಂಬದ ಚಟುವಟಿಕೆಗಳನ್ನು ಯೋಜಿಸಲು ಪ್ರಾಯೋಗಿಕ ವಿಧಾನವು, ಒಂದು ಲಿಖಿತ ಕಾಲತಖ್ತೆಯನ್ನು ಹೊಂದಿರುವುದೇ ಆಗಿದೆ. ಈ ಪುರವಣಿಯ 6ನೇ ಪುಟದಲ್ಲಿರುವ ಖಾಲಿ ಕಾಲತಖ್ತೆಯನ್ನು ಉಪಯೋಗಿಸುತ್ತಾ, ನಿಮ್ಮ ಸ್ವಂತ ವಾರದ ಕುಟುಂಬ ಕಾಲತಖ್ತೆಯನ್ನು ತಯಾರಿಸಲು ಕೆಲವು ನಿಮಿಷಗಳನ್ನು ವಿನಿಯೋಗಿಸಿರಿ. ಇದನ್ನು ಇಡೀ ಕುಟುಂಬದ ಒಂದು ಯೋಜನೆಯೋಪಾದಿ ಮಾಡುತ್ತಾ, ಕುಟುಂಬದ ಕೆಲವು ಸದಸ್ಯರು 6ನೇ ಪುಟದಲ್ಲಿ ಕೊಡಲ್ಪಟ್ಟಿರುವ ಚೌಕಗಳನ್ನು ಕತ್ತರಿಸಿ ತೆಗೆದು ಅವುಗಳನ್ನು ತಮ್ಮ ಕುಟುಂಬಕ್ಕಾಗಿನ ಕಾಲತಖ್ತೆಯಲ್ಲಿ ಅಂಟಿಸಬಹುದು. ಇತರರು, ಕಾಲತಖ್ತೆಯಲ್ಲಿ ಚಟುವಟಿಕೆಗಳನ್ನು ಬರೆಯುವ ಆಯ್ಕೆಯನ್ನು ಮಾಡಬಹುದು.
2 ನೀವು ನಿಮ್ಮ ಕಾಲತಖ್ತೆಯನ್ನು ತಯಾರಿಸಲು ಕುಳಿತುಕೊಳ್ಳುವಾಗ ಈ ಪುಟದಲ್ಲಿ ಕೆಳಗೆ ಕೊಡಲ್ಪಟ್ಟಿರುವ ಸ್ಯಾಂಪಲ್ ಕಾಲತಖ್ತೆಯು ನಿಮಗೆ ಸಹಾಯಕರವಾಗಿರಬಹುದು. ಇದರಲ್ಲಿ ಕೇವಲ ನಾಲ್ಕು ಮೂಲ ಚಟುವಟಿಕೆಗಳಿವೆ ಎಂಬುದನ್ನು ಗಮನಿಸಿ: (1) ಸಭಾ ಕೂಟಗಳಿಗೆ ಹಾಜರಾಗುವುದು, (2) ಕುಟುಂಬದ ಕ್ಷೇತ್ರ ಸೇವೆ, (3) ಕುಟುಂಬ ಅಧ್ಯಯನ, ಮತ್ತು (4) ದಿನದ ವಚನದ ಚರ್ಚೆ. ಈ ಎಲ್ಲ ವಿಚಾರಗಳನ್ನು ನಿಮ್ಮ ಕಾಲತಖ್ತೆಯಲ್ಲಿ ಅಳವಡಿಸಿಕೊಳ್ಳುವಾಗ, “ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸುವವ”ರಾಗುವಂತೆ ಅದು ನಿಮಗೆ ಸಹಾಯಮಾಡುತ್ತದೆ. (ಫಿಲಿ. 1:10) ಈ ನಾಲ್ಕು ಕ್ಷೇತ್ರಗಳ ಕುರಿತಾದ ಹೆಚ್ಚಿನ ಸಲಹೆಗಳು ಪುಟ 4-5ರಲ್ಲಿ ಕಂಡುಬರುತ್ತವೆ.
3 ನಿಮ್ಮ ಕುಟುಂಬ ಕಾಲತಖ್ತೆಯು ಕೇವಲ ಆ ನಾಲ್ಕು ಚಟುವಟಿಕೆಗಳಿಗೇ ಸೀಮಿತವಾಗಿರಬೇಕಾದ ಅಗತ್ಯವಿಲ್ಲ. ಯಾವುದೇ ನಿರ್ದಿಷ್ಟ ಕೂಟಕ್ಕೆ ನೀವು ಕುಟುಂಬವಾಗಿ ತಯಾರಿಸುವುದಾದರೆ, ಅದನ್ನು ನಿಮ್ಮ ಕಾಲತಖ್ತೆಯಲ್ಲಿ ಗುರುತಿಸಿರಿ. ಒಂದುವೇಳೆ ನೀವು ನಿಮ್ಮ ದಿನದ ವಚನದ ಚರ್ಚೆಯ ನಂತರ ಅಥವಾ ಬೇರೆ ಯಾವುದೇ ಸಮಯದಲ್ಲಿ ಬೈಬಲಿನ ಒಂದು ಭಾಗವನ್ನು ಒಟ್ಟಿಗೆ ಓದುತ್ತೀರಾದರೆ ಅದನ್ನೂ ನಿಮ್ಮ ಕಾಲತಖ್ತೆಯಲ್ಲಿ ಗುರುತಿಸಿರಿ. ಒಂದುವೇಳೆ ನೀವು ಸಾಮಾನ್ಯವಾಗಿ ಕುಟುಂಬ ಮನೋರಂಜನೆಯಲ್ಲಿ ಭಾಗವಹಿಸುತ್ತೀರಾದರೆ ಅದನ್ನು ಸಹ ನಿಮ್ಮ ಕಾಲತಖ್ತೆಯಲ್ಲಿ ಸೇರಿಸಲು ಬಯಸಬಹುದು.
4 ನಿಮ್ಮ ಕುಟುಂಬದಲ್ಲಿರುವ ಎಲ್ಲರ ಪರಿಸ್ಥಿತಿ ಮತ್ತು ಅಗತ್ಯಗಳಿಗೆ ಹೊಂದಿಕೆಯಾಗಿರುವಂತೆ ನಿಮ್ಮ ಕುಟುಂಬ ಕಾಲತಖ್ತೆಯನ್ನು ತಯಾರಿಸಿರಿ. ಅದು ಎಷ್ಟು ಕಾರ್ಯಸಾಧಕವಾಗಿದೆ ಎಂಬುದನ್ನು ಆಗಿಂದಾಗ್ಗೆ ಪರೀಕ್ಷಿಸಿರಿ ಮತ್ತು ಯಾವುದೇ ಹೊಂದಾಣಿಕೆಗಳು ಬೇಕಾಗಿರುವಲ್ಲಿ ಅದನ್ನು ಮಾಡಿರಿ.
[ಪುಟ 3 ರಲ್ಲಿರುವಚಿತ್ರ]
ಸ್ಯಾಂಪಲ್ ಕುಟುಂಬ ಕಾಲತಖ್ತೆ
ಬೆಳಗ್ಗೆ ಮಧ್ಯಾಹ್ನ ಸಂಜೆ
ಭಾನು. ದಿನದ ವಚನ
ಸಾರ್ವಜನಿಕ ಭಾಷಣ ಮತ್ತು
ಕಾವಲಿನಬುರುಜು ಅಧ್ಯಯನ
ಸೋಮ. ದಿನದ ವಚನ ಕುಟುಂಬ ಅಧ್ಯಯನ
ಮಂಗಳ. ದಿನದ ವಚನ ಸಭಾ ಪುಸ್ತಕ
ಅಧ್ಯಯನ
ಬುಧ. ದಿನದ ವಚನ
ಗುರು. ದಿನದ ವಚನ ದೇವಪ್ರಭುತ್ವಾತ್ಮಕ
ಶುಶ್ರೂಷಾ ಶಾಲೆ ಮತ್ತು
ಸೇವಾ ಕೂಟ
ಶುಕ್ರ. ದಿನದ ವಚನ
ಶನಿ. ದಿನದ ವಚನ
ಕುಟುಂಬದ ಕ್ಷೇತ್ರ
ಸೇವೆ (ಪತ್ರಿಕಾ ದಿನ)
[ಪುಟ 6 ರಲ್ಲಿರುವಚಿತ್ರ]
ಕುಟುಂಬ ಕಾಲತಖ್ತೆ
ಬೆಳಗ್ಗೆ ಮಧ್ಯಾಹ್ನ ಸಂಜೆ
ಭಾನು.
ಸೋಮ.
ಮಂಗಳ.
ಬುಧ.
ಗುರು.
ಶುಕ್ರ.
ಶನಿ.
...........................................................................................................
ದಿನದ ದಿನದ ದಿನದ ದಿನದ ದಿನದ ದಿನದ ದಿನದ
ವಚನ ವಚನ ವಚನ ವಚನ ವಚನ ವಚನ ವಚನ
ಸಾರ್ವಜ ದೇವಪ್ರಭು ಸಭಾ ಕುಟುಂಬ ಕುಟುಂ ಕುಟುಂಬ ಕುಟುಂ
ನಿಕ ಭಾಷಣ ತ್ವಾತ್ಮಕ ಪುಸ್ತಕ ಅಧ್ಯ ಬದ ಬೈಬಲ್ ಬದ
ಮತ್ತು ಶುಶ್ರೂಷಾ ಅಧ್ಯ ಯನ ಕ್ಷೇತ್ರ ಓದುವಿಕೆ ಮನೋ
ಕಾವಲಿನ ಶಾಲೆ ಯನ ಸೇವೆ ರಂಜನೆ
ಬುರುಜು ಮತ್ತು
ಅಧ್ಯಯನ ಸೇವಾ
ಕೂಟ