ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/05 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2005 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಮೇ 9ರಿಂದ ಆರಂಭವಾಗುವ ವಾರ
  • ಮೇ 16ರಿಂದ ಆರಂಭವಾಗುವ ವಾರ
  • ಮೇ 23ರಿಂದ ಆರಂಭವಾಗುವ ವಾರ
  • ಮೇ 30ರಿಂದ ಆರಂಭವಾಗುವ ವಾರ
  • ಜೂನ್‌ 6ರಿಂದ ಆರಂಭವಾಗುವ ವಾರ
2005 ನಮ್ಮ ರಾಜ್ಯದ ಸೇವೆ
km 5/05 ಪು. 2

ಸೇವಾ ಕೂಟದ ಶೆಡ್ಯೂಲ್‌

ಮೇ 9ರಿಂದ ಆರಂಭವಾಗುವ ವಾರ

ಗೀತೆ 217

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಮೇ 15ರ ಕಾವಲಿನಬುರುಜು ಮತ್ತು ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ವಾಸ್ತವಿಕ ನಿರೂಪಣೆಗಳನ್ನೂ ಉಪಯೋಗಿಸಬಹುದು. ಒಂದು ಪ್ರತ್ಯಕ್ಷಾಭಿನಯದಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಅನೌಪಚಾರಿಕವಾಗಿ ಸಾಹಿತ್ಯವನ್ನು ನೀಡುವ ದೃಶ್ಯವನ್ನು ತೋರಿಸಿರಿ. ಎಚ್ಚರಿಕೆಯಿಂದಿರಿ! ಬ್ರೋಷರ್‌ ವಿತರಣೆಯ ವಿಶೇಷ ಕಾರ್ಯಾಚರಣೆಯು ಮೇ 15ರಂದು ಮುಕ್ತಾಯಗೊಳ್ಳುತ್ತದೆ. ಮೇ ತಿಂಗಳಿನ ಉಳಿದ ದಿವಸಗಳಲ್ಲಿ ನಾವು ಪತ್ರಿಕೆಗಳನ್ನು ನೀಡುತ್ತೇವೆ.

15 ನಿ:  ಹೊಸ ಬ್ರೋಷರನ್ನು ಉಪಯೋಗಿಸುತ್ತಾ ಆಸಕ್ತಿಯನ್ನು ಬೆಳೆಸಿರಿ. ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಎಚ್ಚರಿಕೆಯಿಂದಿರಿ! ಬ್ರೋಷರಿನ ಪ್ರತಿಯನ್ನು ತೆಗೆದುಕೊಂಡಿರುವ ಪ್ರತಿಯೊಬ್ಬರ ಆಸಕ್ತಿಯನ್ನು ಬೆಳೆಸಲು ನಾವು ಪುನರ್ಭೇಟಿಯನ್ನು ಮಾಡಬೇಕು. ಪುಟ 2ರಲ್ಲಿರುವ ವಿಷಯಸೂಚಿಯನ್ನು ಉಪಯೋಗಿಸುತ್ತಾ, ಚುಟುಕಾಗಿ ಎತ್ತಿತೋರಿಸಿರುವಂಥ ಭಾಗದ (ಅಂದರೆ, ದಪ್ಪ ಅಕ್ಷರಗಳಲ್ಲಿರುವ ಶೀರ್ಷಿಕೆಯ ಕೆಳಗೆ ಪಟ್ಟಿಮಾಡಲಾಗಿರುವ ಅಂಶಗಳ) ಕಡೆಗೆ ಗಮನವನ್ನು ಸೆಳೆಯುತ್ತಾ ಬ್ರೋಷರಿನ ಸಂಕ್ಷಿಪ್ತ ಪರಿಚಯವನ್ನು ಮಾಡಿಸಿರಿ. ಈ ಬ್ರೋಷರನ್ನು ಚುಟುಕಾದ, ಅರ್ಥಭರಿತವಾದ ಚರ್ಚೆಗಳಿಗೆ ಉಪಯೋಗಿಸಸಾಧ್ಯವಿದೆ. ಉದಾಹರಣೆಗೆ, ಪುಟ 3-4ನ್ನು ಮೊದಲನೇ ಭೇಟಿಯಲ್ಲಿ ನೀವು ತೋರಿಸಿ ಚರ್ಚಿಸಿರುವಲ್ಲಿ, ಪುನರ್ಭೇಟಿಯ ಸಮಯದಲ್ಲಿ ಪುಟ 5ರಲ್ಲಿರುವ “ದೇವರು ನಿಜವಾಗಿಯೂ ನಮ್ಮ ಕುರಿತು ಕಾಳಜಿ ವಹಿಸುತ್ತಾನೆಯೆ?” ಎಂಬ ಎತ್ತಿತೋರಿಸಿರುವಂಥ ಭಾಗವನ್ನು ಉಪಯೋಗಿಸಬಹುದು. ಇದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ಚರ್ಚಿಸಿರಿ. ಪುಟ 6-8 ಮತ್ತು 17-18ರಲ್ಲಿರುವ ಚೌಕಗಳನ್ನು ಅಥವಾ ಸ್ಥಳಿಕ ಕ್ಷೇತ್ರದಲ್ಲಿರುವ ಜನರಿಗೆ ಸೂಕ್ತವಾಗಿರುವ ಇತರ ಚೌಕಗಳನ್ನು ಚರ್ಚಿಸಿರಿ. ಯಾವುದಾದರೊಂದು ಚೌಕವನ್ನು ಉಪಯೋಗಿಸುತ್ತಾ ಒಂದು ಪುನರ್ಭೇಟಿಯನ್ನು ಪ್ರತ್ಯಕ್ಷಾಭಿನಯಿಸಿರಿ. ಉದ್ಧರಿಸಲ್ಪಟ್ಟಿರುವ ಒಂದು ಅಥವಾ ಹೆಚ್ಚಿನ ಶಾಸ್ತ್ರವಚನಗಳನ್ನು ಓದಿ ಚರ್ಚಿಸಬೇಕು. ಪ್ರಚಾರಕನು, ಮುಂದಿನ ಭೇಟಿಯಲ್ಲಿ ಚರ್ಚಿಸಲಿಕ್ಕಾಗಿ ಇನ್ನೊಂದು ಚೌಕದ ಕಡೆಗೆ ಮನೆಯವರ ಗಮನವನ್ನು ಸೆಳೆಯುತ್ತಾ ತನ್ನ ನಿರೂಪಣೆಯನ್ನು ಮುಕ್ತಾಯಗೊಳಿಸುತ್ತಾನೆ.

20 ನಿ:  “ಒಂದು ಪ್ರಾಯೋಗಿಕವಾದ ಕುಟುಂಬ ಕಾಲತಖ್ತೆಯನ್ನು ಮಾಡಿರಿ.” ಎರಡು ನಿಮಿಷಕ್ಕಿಂತಲೂ ಕಡಿಮೆ ಅವಧಿಯ ಪೀಠಿಕೆಯಲ್ಲಿ, ಲಿಖಿತ ಕಾಲತಖ್ತೆಯ ಮಹತ್ವವನ್ನು ಎತ್ತಿತೋರಿಸಿರಿ ಮತ್ತು ಪುಟ 6ರಲ್ಲಿರುವ ಖಾಲಿ ಕಾಲತಖ್ತೆಯನ್ನು ಭರ್ತಿಮಾಡುವ ವಿಧಾನವನ್ನು ಚರ್ಚಿಸಿರಿ. ನಂತರ, “ಕುಟುಂಬ ಕಾಲತಖ್ತೆ​—⁠ಸಭಾ ಕೂಟಗಳು” ಎಂಬ ಲೇಖನದ ಪ್ರಶ್ನೋತ್ತರ ಚರ್ಚೆಯನ್ನು ಮಾಡಿರಿ. ಇತರ ಚಟುವಟಿಕೆಗಳು ಸಭಾ ಕೂಟಗಳ ಸಮಯಕ್ಕೆ ಅಡ್ಡಿಬರದಂತೆ ತಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬುದನ್ನು ಸಭಿಕರು ಹೇಳುವಂತೆ ಉತ್ತೇಜಿಸಿರಿ. ಕುಟುಂಬ ಕಾಲತಖ್ತೆಯ ಹೆಚ್ಚಿನ ಅಂಶಗಳನ್ನು ನಂತರದ ವಾರಗಳಲ್ಲಿ ಚರ್ಚಿಸಲಾಗುವುದು.

ಗೀತೆ 176 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 16ರಿಂದ ಆರಂಭವಾಗುವ ವಾರ

ಗೀತೆ 201

10 ನಿ:  ಸ್ಥಳಿಕ ಪ್ರಕಟನೆಗಳು.

15 ನಿ:  “ಕುಟುಂಬ ಕಾಲತಖ್ತೆ​—⁠ಕುಟುಂಬದ ಕ್ಷೇತ್ರ ಸೇವೆ.”a ಕುಟುಂಬವಾಗಿ ಒಟ್ಟಿಗೆ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವುದರಿಂದ ಸಿಗುವ ಪ್ರಯೋಜನಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

20 ನಿ:  ಹೊಸ ಬ್ರೋಷರನ್ನು ಸ್ವೀಕರಿಸಿರುವವರೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸುವುದು. ಸೇವಾ ಮೇಲ್ವಿಚಾರಕನಿಂದ ನೀಡಲ್ಪಡುವ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಕೆಲವು ವಾರಗಳ ಹಿಂದೆ ಸೇವಾ ಕೂಟದಲ್ಲಿ ನಾವು ನೋಡಿದ ಪುನರ್ಭೇಟಿಯ ಪ್ರತ್ಯಕ್ಷಾಭಿನಯವನ್ನು ಪುನರ್ವಿಮರ್ಶಿಸಿರಿ ಮತ್ತು ಆ ಭೇಟಿಯಲ್ಲಿ ಕೊನೆಯಲ್ಲಿ ಪ್ರಚಾರಕನು ಮನೆಯವನ ಗಮನವನ್ನು ಯಾವ ಚೌಕದ ಕಡೆಗೆ ಸೆಳೆದನೊ ಅದನ್ನು ಉಲ್ಲೇಖಿಸಿರಿ. ಆ ಚೌಕವನ್ನು ಉಪಯೋಗಿಸುತ್ತಾ, (ಸಾಧ್ಯವಿರುವುದಾದರೆ) ಅದೇ ಪ್ರಚಾರಕನು ಮುಂದಿನ ಭೇಟಿಯನ್ನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ. ನಂತರ ಪ್ರಚಾರಕನು ಬ್ರೋಷರಿನ ಕೊನೆಯ ಪುಟವನ್ನು ತೋರಿಸಿ ಅದನ್ನು ಚರ್ಚಿಸುವ ಮೂಲಕ ಬೈಬಲ್‌ ಅಧ್ಯಯನದ ನೀಡುವಿಕೆಯನ್ನು ಮಾಡುತ್ತಾನೆ ಮತ್ತು ಅಪೇಕ್ಷಿಸು ಬ್ರೋಷರಿನ ಪಾಠ 1ನ್ನು ಮುಂದಿನ ಭೇಟಿಯಲ್ಲಿ ಪರಿಗಣಿಸಲು ಏರ್ಪಾಡನ್ನು ಮಾಡುತ್ತಾನೆ. ಎಚ್ಚರಿಕೆಯಿಂದಿರಿ! ಬ್ರೋಷರಿನ ಪ್ರತಿಯನ್ನು ಪಡೆದುಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸುವುದರ ಕಡೆಗೆ ಗಮನವನ್ನು ಕೊಡುವಂತೆ ಎಲ್ಲರನ್ನು ಉತ್ತೇಜಿಸಿರಿ.

ಗೀತೆ 58 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 23ರಿಂದ ಆರಂಭವಾಗುವ ವಾರ

ಗೀತೆ 194

12 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿಯನ್ನು ಮತ್ತು ದಾನದ ಅಂಗೀಕಾರ ಪತ್ರಗಳನ್ನು ಓದಿ ಹೇಳಿರಿ. ಪುಟ 8ರಲ್ಲಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸುತ್ತಾ, ಜೂನ್‌ 1ರ ಕಾವಲಿನಬುರುಜು ಮತ್ತು ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇತರ ವಾಸ್ತವಿಕ ನಿರೂಪಣೆಗಳನ್ನೂ ಉಪಯೋಗಿಸಬಹುದು.

18 ನಿ:  “ಯೆಹೋವನ ದಿನವು ಹತ್ತಿರವಿದೆ.”b ಈ ಭಾಗವನ್ನು ತಯಾರಿಸುವಾಗ, ದಾನಿಯೇಲನ ಪ್ರವಾದನೆ ಪುಸ್ತಕದ ಪುಟ 59 ಪ್ಯಾರಗ್ರಾಫ್‌ 28ನ್ನು ನೋಡಿರಿ.

15 ನಿ:  “ಕುಟುಂಬ ಕಾಲತಖ್ತೆ​—⁠ಕುಟುಂಬ ಅಧ್ಯಯನ.”c ತಮ್ಮ ಕುಟುಂಬ ಅಧ್ಯಯನದ ಕಾಲತಖ್ತೆಯನ್ನು ತಾವು ಹೇಗೆ ಮಾಡುತ್ತೇವೆ ಮತ್ತು ಅದನ್ನು ಕ್ರಮವಾಗಿ ಮಾಡಲು ಯಾವ ಪ್ರಯತ್ನಗಳು ಅಗತ್ಯವಿದೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಒಬ್ಬರು ಅಥವಾ ಇಬ್ಬರೊಂದಿಗೆ ಮುಂಚಿತವಾಗಿಯೇ ಏರ್ಪಾಡು ಮಾಡಿರಿ.

ಗೀತೆ 152 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 30ರಿಂದ ಆರಂಭವಾಗುವ ವಾರ

ಗೀತೆ 190

10 ನಿ:  ಸ್ಥಳಿಕ ಪ್ರಕಟನೆಗಳು. ಮೇ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಸಭಿಕರಿಗೆ ಜ್ಞಾಪಿಸಿರಿ. ಜೂನ್‌ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಜನವರಿ 2005ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಸೂಚಿತ ನಿರೂಪಣೆಗಳಲ್ಲಿ (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಒಂದು ಅಥವಾ ಎರಡು ನಿರೂಪಣೆಗಳನ್ನು ಉಪಯೋಗಿಸುತ್ತಾ ತಿಂಗಳಿನ ನೀಡುವಿಕೆಯನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು.

20 ನಿ:  “ಕುಟುಂಬ ಕಾಲತಖ್ತೆ​—⁠ದಿನದ ವಚನ.”d ಒಟ್ಟಾಗಿ ದಿನದ ವಚನವನ್ನು ಪರಿಗಣಿಸುವ ಮೂಲಕ ತಮ್ಮ ಕುಟುಂಬವು ಹೇಗೆ ಪ್ರಯೋಜನವನ್ನು ಪಡೆದುಕೊಂಡಿದೆ ಮತ್ತು ಇದನ್ನು ಮಾಡಲು ಅವರಿಗೆ ಪ್ರಾಯೋಗಿಕವಾಗಿ ಕಂಡುಬಂದ ಕಾಲತಖ್ತೆ ಯಾವುದು ಎಂಬುದನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.

15 ನಿ:  “ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು​—⁠ಭಾಗ 9.”e 2ನೇ ಪ್ಯಾರಗ್ರಾಫ್‌ ಅನ್ನು ಚರ್ಚಿಸುವಾಗ, 2004ರ ಡಿಸೆಂಬರ್‌ ನಮ್ಮ ರಾಜ್ಯದ ಸೇವೆಯ ಪುಟ 8ರಲ್ಲಿರುವ ಒಂದು ಅಥವಾ ಎರಡು ಮುಖ್ಯ ಅಂಶಗಳನ್ನು ಎತ್ತಿತೋರಿಸಿರಿ. ಒಂದು ಬೈಬಲ್‌ ಅಧ್ಯಯನದ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿ. ಅಪೇಕ್ಷಿಸು ಬ್ರೋಷರಿನಲ್ಲಿ ಪಾಠ 2ನ್ನು ಮುಗಿಸಿದ ನಂತರ, ಅಧ್ಯಯನ ನಡೆಸುವವನು ವಿದ್ಯಾರ್ಥಿಯನ್ನು ಹೀಗೆ ಕೇಳುತ್ತಾನೆ: “ದೇವರ ಹೆಸರು ಏನು ಎಂಬುದನ್ನು ನೀವು ನಿಮ್ಮ ಸ್ನೇಹಿತನಿಗೆ ಹೇಗೆ ವಿವರಿಸುವಿರಿ?” ಕೀರ್ತನೆ 83:18ನ್ನು ಉಪಯೋಗಿಸುತ್ತಾ ತಾನು ಹೇಗೆ ವಿವರಿಸುವೆನು ಎಂಬುದನ್ನು ವಿದ್ಯಾರ್ಥಿಯು ತಿಳಿಸುತ್ತಾನೆ. ಅದನ್ನು ಕೇಳಿಸಿಕೊಂಡು ಅಧ್ಯಯನ ನಡೆಸುವವನು ವಿದ್ಯಾರ್ಥಿಯನ್ನು ಶ್ಲಾಘಿಸುತ್ತಾನೆ.

ಗೀತೆ 134 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 6ರಿಂದ ಆರಂಭವಾಗುವ ವಾರ

ಗೀತೆ 155

10 ನಿ:  ಸ್ಥಳಿಕ ಪ್ರಕಟನೆಗಳು.

15 ನಿ:  ಸ್ಥಳಿಕ ಅಗತ್ಯಗಳು.

20 ನಿ:  “ಪತ್ರಿಕಾ ಮಾರ್ಗದ ಮೂಲಕ ಆಸಕ್ತಿಯನ್ನು ಬೆಳೆಸಿರಿ.”f ಪ್ಯಾರಗ್ರಾಫ್‌ 3ನ್ನು ಚರ್ಚಿಸುವಾಗ, ತರ್ಕಿಸು (ಇಂಗ್ಲಿಷ್‌) ಪುಸ್ತಕದ ಪುಟ 227-32ರಲ್ಲಿರುವ ವಿಷಯಗಳ ಕಡೆಗೆ ಗಮನವನ್ನು ಸೆಳೆಯಿರಿ. ದೇವರ ರಾಜ್ಯವು ಏನನ್ನು ಸಾಧಿಸಲಿದೆ ಎಂಬುದರ ಮೇಲಾಧಾರಿತವಾದ ಒಂದೇ ವಚನವನ್ನು ಒಳಗೊಂಡ ಚರ್ಚೆಗಳ ಶ್ರೇಣಿಯನ್ನು ತಯಾರಿಸಲು ಈ ವಿಷಯಭಾಗವನ್ನು ಉಪಯೋಗಿಸಸಾಧ್ಯವಿದೆ. ಒಬ್ಬ ಪ್ರಚಾರಕನು ತನ್ನ ಪತ್ರಿಕಾ ಮಾರ್ಗದಲ್ಲಿನ ಒಬ್ಬ ವ್ಯಕ್ತಿಯೊಂದಿಗೆ ಒಂದೇ ವಚನವನ್ನು ಒಳಗೊಂಡ ಚರ್ಚೆಯನ್ನು ಹೇಗೆ ಮಾಡುತ್ತಾನೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರಚಾರಕನು ವಚನವನ್ನು ಸಂಕ್ಷಿಪ್ತವಾಗಿ ಚರ್ಚಿಸಬೇಕು ಮತ್ತು ಆ ವಚನವನ್ನು ಮನೆಯವನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಮತ್ತು ತನ್ನ ಜೀವಿತದಲ್ಲಿ ಅದರ ಮೌಲ್ಯವನ್ನು ಅರಿತುಕೊಳ್ಳುವಂತೆ ಅದರ ಅನ್ವಯವನ್ನು ದೃಷ್ಟಾಂತಿಸಬೇಕು.

ಗೀತೆ 107 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

f ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ