ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಏಪ್ರಿ.15
“ಇಂದು ಬಹಳಷ್ಟು ಮಾಹಿತಿಯು ಲಭ್ಯವಿದೆ ಎಂಬುದು ನಿಜವಲ್ಲವೇ? [ಪ್ರತಿಕ್ರಿಯೆಗೆ ಅನುಮತಿಸಿರಿ.] ಹಾಗಿದ್ದರೂ, ಈ ವಚನದಲ್ಲಿ ತಿಳಿಸಿರುವ ಮಾಹಿತಿಗಿಂತ ಹೆಚ್ಚು ಮೌಲ್ಯವುಳ್ಳ ಮಾಹಿತಿಯು ಎಲ್ಲಿಯೂ ಇಲ್ಲ. [ಯೋಹಾನ 17:3ನ್ನು ಓದಿ.] “ನಿತ್ಯಜೀವ” ಎಂದರೆ ಏನು ಮತ್ತು ಅದಕ್ಕೆ ನಡೆಸುವ ಜ್ಞಾನವನ್ನು ನಾವು ಹೇಗೆ ಪಡೆದುಕೊಳ್ಳಬಲ್ಲೆವು ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ದೈಹಿಕ ಪರಿಶ್ರಮದ ಕೆಲಸವನ್ನು ಮಾಡುವುದು ತಮ್ಮ ಅಂತಸ್ತಿಗೆ ತಕ್ಕದ್ದಲ್ಲವೆಂದು ಅನೇಕರು ನೆನಸುತ್ತಾರೆ, ಆದರೆ ಶಾಸ್ತ್ರವಚನಗಳು ಕಷ್ಟಪಟ್ಟು ದುಡಿಯುವುದನ್ನು ಉತ್ತೇಜಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪ್ರಸಂಗಿ 2:24ನ್ನು ಓದಿರಿ. ಪುಟ 20ರಲ್ಲಿರುವ ಲೇಖನಕ್ಕೆ ತಿರುಗಿಸಿರಿ.] ಕಷ್ಟಪಟ್ಟು ಕೆಲಸಮಾಡುವುದು ಮತ್ತು ದೈಹಿಕ ಪರಿಶ್ರಮದ ಕುರಿತು ಯುವ ಜನರಿಗೆ ಯಾವ ದೃಷ್ಟಿಕೋನವಿರಬೇಕು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ.”
ಕಾವಲಿನಬುರುಜು ಮೇ1
“ನಾವು ಪ್ರೀತಿಸುವ ಯಾರಾದರೂ ಸತ್ತಾಗ ಅವರನ್ನು ಪುನಃ ನೋಡಬೇಕೆಂದು ಬಯಸುವುದು ಸ್ವಾಭಾವಿಕ. ನೀವು ಸಹ ಈ ಮಾತನ್ನು ಒಪ್ಪುತ್ತೀರಿ ಅಲ್ಲವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕರು ಬೈಬಲಿನಲ್ಲಿರುವ ಪುನರುತ್ಥಾನದ ವಾಗ್ದಾನದಿಂದ ಸಾಂತ್ವನವನ್ನು ಪಡೆದುಕೊಂಡಿದ್ದಾರೆ. [ಯೋಹಾನ 5:28, 29ನ್ನು ಓದಿ.] ಪುನರುತ್ಥಾನವು ಯಾವಾಗ ಸಂಭವಿಸುವುದು ಮತ್ತು ಇದರಿಂದ ಯಾರು ಪ್ರಯೋಜನವನ್ನು ಪಡೆದುಕೊಳ್ಳುವರು ಎಂಬುದರ ಕುರಿತು ಈ ಪತ್ರಿಕೆಯು ಚರ್ಚಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಇಂದಿನ ಕಾರ್ಯಮಗ್ನ ಲೋಕದಲ್ಲಿ ತಮ್ಮ ಮಕ್ಕಳಿಗಾಗಿ ಸಮಯವನ್ನು ಕಂಡುಕೊಳ್ಳುವುದು ಅನೇಕರಿಗೆ ತೀರ ಕಷ್ಟಕರವಾಗಿದೆ. ಮಕ್ಕಳನ್ನು ತರಬೇತುಗೊಳಿಸುವ ಜವಾಬ್ದಾರಿಯನ್ನು ಶಾಸ್ತ್ರವಚನಗಳು ತಂದೆಯ ಮೇಲೆ ಹೊರಿಸುತ್ತವೆ. [ಎಫೆಸ 6:4ನ್ನು ಓದಿ, ಪುಟ 12ರಲ್ಲಿರುವ ಲೇಖನಕ್ಕೆ ತಿರುಗಿಸಿರಿ.] ಮಕ್ಕಳನ್ನು ತರಬೇತುಗೊಳಿಸುವ ವಿಷಯದಲ್ಲಿ ಸಹಾಯಮಾಡಸಾಧ್ಯವಿರುವ ಪ್ರಾಯೋಗಿಕ ಸಲಹೆಗಳನ್ನು ಈ ಲೇಖನವು ನೀಡುತ್ತದೆ.”