ಸೇವಾ ಕೂಟದ ಶೆಡ್ಯೂಲ್
ಮಾರ್ಚ್ 14ರಿಂದ ಆರಂಭವಾಗುವ ವಾರ
ಗೀತೆ 132
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಏಪ್ರಿಲ್ 4ರ ವಾರದ ಸೇವಾ ಕೂಟದಲ್ಲಿರುವ ಚರ್ಚೆಗಾಗಿ, ದಾವೀದನು ದೇವರಲ್ಲಿ ಭರವಸೆಯಿಟ್ಟನು (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಜನವರಿ-ಮಾರ್ಚ್‌ರ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಮಾರ್ಚ್ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸುತ್ತಾ ಪ್ರತ್ಯಕ್ಷಾಭಿನಯಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಒಂದು ನೀಡುವಿಕೆಯಲ್ಲಿ, ಪತ್ರಿಕಾ ಮಾರ್ಗದಲ್ಲಿ ಸಂಪರ್ಕಿಸಲ್ಪಡುತ್ತಿರುವ ಒಬ್ಬ ವ್ಯಕ್ತಿಯನ್ನು ಪುನರ್ಭೇಟಿ ಮಾಡುತ್ತಿರುವುದನ್ನು ಪ್ರತ್ಯಕ್ಷಾಭಿನಯಿಸಿರಿ. ನೀಡುವಿಕೆಯನ್ನು ಮುಕ್ತಾಯಗೊಳಿಸುವಾಗ, ಮನೆಯವರಿಗೆ ಮುಂಬರುತ್ತಿರುವ ಜ್ಞಾಪಕಾಚರಣೆಯ ಬಗ್ಗೆ ಜ್ಞಾಪಿಸಲಿಕ್ಕಾಗಿ ಮಾರ್ಚ್ 15ರ ಕಾವಲಿನಬುರುಜುವಿನ ಪುಟ 32ನ್ನು ಉಪಯೋಗಿಸಿರಿ.
20 ನಿ: “ಬೈಬಲಿನ ಮೇಲೆ ಹೆಚ್ಚಿನ ಒತ್ತು!”a
15 ನಿ: ನಮ್ಮನ್ನು ಬಲಪಡಿಸಲು ಒಂದು ಒದಗಿಸುವಿಕೆ. ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯ ಪೀಠಿಕೆಯ ಅನಂತರ, “ಆಡಳಿತ ಮಂಡಲಿಯಿಂದ ಒಂದು ಪತ್ರ” ಎಂಬ ಲೇಖನವನ್ನು ಸಭಿಕರೊಂದಿಗೆ ಚರ್ಚಿಸಿರಿ.
ಗೀತೆ 137 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 21ರಿಂದ ಆರಂಭವಾಗುವ ವಾರ
ಗೀತೆ 140
5 ನಿ: ಸ್ಥಳಿಕ ಪ್ರಕಟನೆಗಳು.
15 ನಿ: “ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಭಾಗ 7.”b ಈ ಭಾಗಕ್ಕಾಗಿ ತಯಾರಿಸುತ್ತಿರುವಾಗ, ಜುಲೈ 15, 2002ರ ಕಾವಲಿನಬುರುಜುವಿನ ಪುಟ 27, ಪ್ಯಾರಗ್ರಾಫ್ 5-6ನ್ನು ಪರಿಶೀಲಿಸಿರಿ.
25 ನಿ: “ಯೆಹೋವನ ಸಾಕ್ಷಿಗಳ 2005ರ “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನ.”c ಸಭಾ ಕಾರ್ಯದರ್ಶಿಯಿಂದ ನಿರ್ವಹಿಸಲ್ಪಡತಕ್ಕದ್ದು. ಪ್ಯಾರಗ್ರಾಫ್ 2ನ್ನು ಪರಿಗಣಿಸಿದ ತರುವಾಯ, ನಿಮ್ಮ ಸಭೆಯು ಹಾಜರಾಗುವಂತೆ ನೇಮಿಸಲ್ಪಟ್ಟಿರುವ ಅಧಿವೇಶನದ ನಿವೇಶನ ಮತ್ತು ತಾರೀಖುಗಳನ್ನು ಪ್ರಕಟಿಸಿರಿ. ಪ್ಯಾರಗ್ರಾಫ್ 4ನ್ನು ಚರ್ಚಿಸುತ್ತಿರುವಾಗ, ಪುಟ 4ರಲ್ಲಿ ಕೊಡಲ್ಪಟ್ಟಿರುವ ಚೌಕಗಳಲ್ಲಿರುವ ಎಲ್ಲಾ ಅಂಶಗಳನ್ನು ಪರಿಗಣಿಸಿರಿ. ತಮ್ಮ ಅಧಿವೇಶನದ ಏರ್ಪಾಡುಗಳನ್ನು ಆದಷ್ಟು ಬೇಗನೆ ಮಾಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.
ಗೀತೆ 79 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 28ರಿಂದ ಆರಂಭವಾಗುವ ವಾರ
ಗೀತೆ 144
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಮಾರ್ಚ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಮುಂದಿನ ವಾರದ ಸೇವಾ ಕೂಟದಲ್ಲಿರುವ ಚರ್ಚೆಗಾಗಿ, ದಾವೀದನು ದೇವರಲ್ಲಿ ಭರವಸೆಯಿಟ್ಟನು (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಏಪ್ರಿಲ್ 10ರಂದು ನೀಡಲ್ಪಡಲಿರುವ ವಿಶೇಷ ಬಹಿರಂಗ ಭಾಷಣಕ್ಕೆ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಏಪ್ರಿಲ್ ಮತ್ತು ಮೇ ತಿಂಗಳುಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಪುಟ 8ರಲ್ಲಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಏಪ್ರಿಲ್ 1ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇತರ ವಾಸ್ತವಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಪ್ರತಿ ನಿರೂಪಣೆಯಲ್ಲೂ, ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣ ಸಹಾಯ ಎಲ್ಲಿಂದ ಬರುತ್ತದೆ ಎಂಬುದರ ಕುರಿತು ವಿವರಿಸಿರಿ.—ಕಾವಲಿನಬುರುಜುವಿನ ಪುಟ 2, ಅಥವಾ ಎಚ್ಚರ! ಪತ್ರಿಕೆಯ ಪುಟ 5ನ್ನು ನೋಡಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಶುಶ್ರೂಷಾ ತರಬೇತಿ ಶಾಲೆ—ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭ.” ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. 2004ರ ವರ್ಷಪುಸ್ತಕ (ಇಂಗ್ಲಿಷ್)ದ 239-40ನೇ ಪುಟಗಳಿಂದ ಹೇಳಿಕೆಗಳನ್ನು ಸೇರಿಸಿರಿ. ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗಲು ಬಯಸುವವರಿಗೆ ಸರ್ಕಿಟ್ ಸಮ್ಮೇಳನದ ಸಮಯದಲ್ಲಿ ಒಂದು ಕೂಟವು ಏರ್ಪಡಿಸಲ್ಪಡುತ್ತದೆ ಎಂಬುದನ್ನು ತಿಳಿಸಿರಿ. ಅರ್ಹತೆಯುಳ್ಳವರು ಈ ಕೂಟಕ್ಕೆ ಹಾಜರಾಗುವಂತೆ ಪ್ರೋತ್ಸಾಹಿಸಿರಿ.
ಗೀತೆ 116 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 4ರಿಂದ ಆರಂಭವಾಗುವ ವಾರ
ಗೀತೆ 119
5 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿರಲಿ. (ಯೋಹಾ. 13:35) ಫೆಬ್ರವರಿ 1, 2003ರ ಕಾವಲಿನಬುರುಜುವಿನ ಪುಟ 15-18, ಪ್ಯಾರಗ್ರಾಫ್ 10-21ರ ಮೇಲಾಧಾರಿತವಾದ ಹಿರಿಯನಿಂದ ನೀಡಲ್ಪಡುವ ಭಾಷಣ. ಏಪ್ರಿಲ್ ಮತ್ತು ಮೇ ತಿಂಗಳುಗಳಿಗಾಗಿರುವ ಸಾಹಿತ್ಯ ನೀಡುವಿಕೆಯಲ್ಲಿ ತಿಳಿಸಲ್ಪಟ್ಟಿರುವಂತೆ, ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರ್‌ನಲ್ಲಿ ಅಧ್ಯಯನ ಮಾಡಿರುವವರೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸುವಂತೆ ನಾವು ಉತ್ತೇಜಿಸಲ್ಪಟ್ಟಿದ್ದೇವೆ. ದುರ್ಬಲರಾಗಿರುವವರಿಗೆ ನೆರವು ನೀಡುವುದರಲ್ಲಿ ಪ್ರಚಾರಕರು ಹೇಗೆ ಹಿರಿಯರೊಂದಿಗೆ ಸಹಕರಿಸಸಾಧ್ಯವಿದೆ ಎಂಬುದನ್ನು ಎತ್ತಿತೋರಿಸಿರಿ.
25 ನಿ: “ಕಾಲಾತೀತ ಸಂದೇಶವನ್ನು ಹೊಂದಿರುವ ಒಂದು ವಿಡಿಯೋ.” ಕೀರ್ತನೆ 91:2 ಮತ್ತು 31:14ನ್ನು ಓದಿ, ಈ ಎರಡೂ ವಚನದ ಕುರಿತು ಅತಿ ಚುಟುಕಾದ ಹೇಳಿಕೆಯನ್ನು ಮಾಡಿ. ಅನಂತರ ಕೂಡಲೇ, ಎರಡನೇ ಪ್ಯಾರಗ್ರಾಫ್‌ನಲ್ಲಿ ಕೊಡಲ್ಪಟ್ಟಿರುವ ಎಲ್ಲಾ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಮತ್ತು ಮೂರನೇ ಪ್ಯಾರಗ್ರಾಫ್‌ನಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಯನ್ನು ಕೇಳುವ ಮೂಲಕ, ದಾವೀದನು ವಿಡಿಯೋದಲ್ಲಿರುವ ಕ್ವಿಝ್ ಪ್ರಶ್ನೆಗಳ ಸಭಿಕರೊಂದಿಗಿನ ಚರ್ಚೆಯನ್ನು ನಡೆಸಿರಿ. ತರುವಾಯ, ಡಿವಿಡಿಯಲ್ಲಿ ಸೂಚಿಸಲ್ಪಟ್ಟಿರುವ “ಕಲಿಕೆಯ ಚಟುವಟಿಕೆಗಳು” ಎಂಬ ವಿಷಯದಲ್ಲಿ ಭಾಗವಹಿಸುವುದರಿಂದ ಕುಟುಂಬಗಳು ಹೇಗೆ ಪ್ರಯೋಜನವನ್ನು ಪಡೆದುಕೊಂಡವು ಎಂಬುದನ್ನು ಕೇಳಿರಿ. ಕೀರ್ತನೆ 56:11ನ್ನು ಓದುವ ಮೂಲಕ ಸಮಾಪ್ತಿಗೊಳಿಸಿರಿ.
ಗೀತೆ 36 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.