ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ನಮಗೆ ಪ್ರಯೋಜನವನ್ನು ತರುವ ವಿಧ
1 ದೇವಪ್ರಭುತ್ವಾತ್ಮಕ ಶಿಕ್ಷಣವನ್ನು ಪಡೆಯುವ ಅದ್ವಿತೀಯ ಸುಯೋಗವು ಯೆಹೋವನ ಜನರಿಗಿದೆ. (ಯೆಶಾ. 54:13; ಯೋಹಾ. 6:45) ಆದರೂ, ಅದರಿಂದ ಎಷ್ಟು ಪ್ರಯೋಜನವನ್ನು ಪಡೆಯುತ್ತೇವೆಂಬುದು ಹೆಚ್ಚಾಗಿ ನಾವು ಹಾಕುವ ಪ್ರಯತ್ನದ ಮೇಲೆ ಹೊಂದಿಕೊಂಡಿರುತ್ತದೆ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ನಿಮ್ಮ ಆಧ್ಯಾತ್ಮಿಕತೆಯ ಮೇಲೆ ಬೀರುತ್ತಿರುವ ಪರಿಣಾಮವನ್ನು ನೀವು ಗಮನಿಸಿದ್ದೀರೋ?
2 ಗಣ್ಯತಾಭರಿತ ಹೇಳಿಕೆಗಳು: ಭಾಷಣ ಗುಣಗಳ ಗಾಢವಾದ ಅಧ್ಯಯನವು ಕ್ಷೇತ್ರ ಸೇವೆಯಲ್ಲಿ ತಮ್ಮ ಸಭೆಯ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಿದೆ ಎಂಬುದನ್ನು ಅನೇಕ ಶಾಲಾ ಮೇಲ್ವಿಚಾರಕರು ಗಮನಿಸಿದ್ದಾರೆ. ಇದರ ಜೊತೆಗೆ, ಬೈಬಲ್ ಮುಖ್ಯಾಂಶಗಳಲ್ಲಿ ಸಭಿಕರು ಭಾಗವಹಿಸುವ ಏರ್ಪಾಡಿನ ಫಲಿತಾಂಶವಾಗಿ ಹೆಚ್ಚಿನವರು ಬೈಬಲ್ ವಾಚನದ ಶೆಡ್ಯೂಲಿಗೆ ಅಂಟಿಕೊಳ್ಳುತ್ತಿದ್ದಾರೆಂಬುದನ್ನು ಒಬ್ಬ ಶಾಲಾ ಮೇಲ್ವಿಚಾರಕರು ಗಮನಿಸಿದ್ದಾರೆ. ನೇಮಕ ನಂ. 2ರ ವಿಷಯದಲ್ಲಿ, ಒಂದು ಪೀಠಿಕೆ ಮತ್ತು ಸಮಾಪ್ತಿಯನ್ನು ತಯಾರಿಸದೆ ಓದಲಿಕ್ಕಾಗಿರುವ ವಿಷಯಭಾಗದ ಮೇಲೆ ಗಮನವನ್ನು ಕೇಂದ್ರೀಕರಿಸುವುದರ ಕುರಿತು ಅನೇಕ ಸಹೋದರರು ಸಕಾರಾತ್ಮಕವಾಗಿ ಹೇಳಿಕೆಯನ್ನು ನೀಡಿದ್ದಾರೆ. ಈ ನೇಮಕವನ್ನು ಪಡೆದುಕೊಳ್ಳುವವರು, ಈಗ ತಮ್ಮ ವಾಚನ ಕೌಶಲಗಳನ್ನು ಉತ್ತಮಗೊಳಿಸುವುದರ ಕಡೆಗೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದಾರೆ.—1 ತಿಮೊ. 4:13.
3 ಎಲ್ಲರೂ ಪ್ರಯೋಜನ ಹೊಂದಬಲ್ಲರು: ಕೂಟಗಳಲ್ಲಿ ಉತ್ತರಗಳನ್ನು ಕೊಡುವುದು ಉಲ್ಲಾಸಕರವಾದ ವಿಷಯವಾಗಿರಬಲ್ಲದು. (ಜ್ಞಾನೋ. 15:23) ಮೌಖಿಕ ಪುನರ್ವಿಮರ್ಶೆಯ ಪ್ರಶ್ನೆಗಳನ್ನು ಮುಂಚಿತವಾಗಿಯೇ ಪಡೆದುಕೊಳ್ಳುವ ಏರ್ಪಾಡಿನಿಂದ, ನಮಗೆ ಪುನರ್ವಿಮರ್ಶೆಗಾಗಿ ತಯಾರಿಸುವುದು ಮತ್ತು ಅದರಲ್ಲಿ ಮನಃಪೂರ್ವಕವಾಗಿ ಭಾಗವಹಿಸುವುದು ಸುಲಭವಾಗಿದೆ. ಮಾತ್ರವಲ್ಲದೆ, ಜನವರಿ 1, 2004ರ ಸಂಚಿಕೆಯಿಂದ ಆರಂಭಿಸುತ್ತಾ ಕಾವಲಿನಬುರುಜು ಪತ್ರಿಕೆಯು ಬೈಬಲ್ ಪುಸ್ತಕಗಳ ಮುಖ್ಯಾಂಶಗಳನ್ನು ಪ್ರಕಟಿಸುತ್ತಿದೆ ಮತ್ತು ಇವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ನೇಮಿತ ವಾಚನದೊಂದಿಗೆ ತಾಳೆ ಬೀಳುತ್ತದೆ. ಬೈಬಲ್ ಮುಖ್ಯಾಂಶಗಳ ಸಮಯದಲ್ಲಿ ಆತ್ಮೋನ್ನತಿ ಮಾಡುವ ಹೇಳಿಕೆಗಳನ್ನು ನೀಡುವಂತೆ ಈ ಲೇಖನಗಳು ಅನೇಕರಿಗೆ ಸಹಾಯಮಾಡಿವೆ.
4 ಶಾಲೆಯಲ್ಲಿ ನೋಂದಾಯಿಸಿಕೊಂಡಿರುವ ಎಲ್ಲರಿಗೂ ನೇಮಕಗಳಿಗಾಗಿ ತಯಾರಿಸುವ ಮತ್ತು ಅವನ್ನು ಪ್ರಸ್ತುತಪಡಿಸುವ ವಿಶೇಷ ಸುಯೋಗವಿದೆ. ಶಾಲೆಯ ಮೇಲ್ವಿಚಾರಕನು ವೇದಿಕೆಯಿಂದ ಮಾಡುವ ಸಕಾರಾತ್ಮಕ ಹೇಳಿಕೆಗಳಿಂದ ನಾವೆಲ್ಲರೂ ಪ್ರಯೋಜನವನ್ನು ಹೊಂದಬಲ್ಲೆವು. ವಿದ್ಯಾರ್ಥಿಗಳು ಕೂಟದ ಅನಂತರ ಮೇಲ್ವಿಚಾರಕನು ನೀಡುವ ವೈಯಕ್ತಿಕ ಸಲಹೆಗಳಿಂದ ವ್ಯಕ್ತಿಗತವಾಗಿ ಪ್ರಯೋಜನವನ್ನು ಹೊಂದಬಲ್ಲರು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ ಭಾಷಣ ಗುಣಗಳನ್ನು ಚರ್ಚಿಸುವ ಅಧ್ಯಾಯದ ಅಂತ್ಯದಲ್ಲಿ ಕಂಡುಬರುವ ಅಭ್ಯಾಸಪಾಠಗಳು ಹೆಚ್ಚಿನ ಸಹಾಯವನ್ನು ಒದಗಿಸುತ್ತವೆ.
5 ಶಾಲೆಯ ಸಮಯದಲ್ಲಿ ಮತ್ತು ಶಾಲೆಯ ಅನಂತರ ನಿಮ್ಮ ಗಮನಕ್ಕೆ ತರಲ್ಪಡುವ ಪ್ರಾಯೋಗಿಕ ಹಾಗೂ ಶಾಸ್ತ್ರಾಧಾರಿತ ವಿಚಾರಗಳನ್ನು ಶುಶ್ರೂಷಾ ಶಾಲೆ ಪಠ್ಯಪುಸ್ತಕದ ನಿಮ್ಮ ಸ್ವಂತ ಪ್ರತಿಯಲ್ಲಿ ಬರೆದಿಟ್ಟುಕೊಳ್ಳಿ. ನೀವು ಕಲಿತಿರುವ ವಿಷಯಗಳ ಕುರಿತು ಮನನ ಮಾಡಿರಿ, ಮತ್ತು ಈ ದೈವಿಕ ಶಿಕ್ಷಣವು ನಿಮ್ಮ ಆಧ್ಯಾತ್ಮಿಕತೆಯನ್ನು ಹೇಗೆ ಹೆಚ್ಚಿಸುತ್ತಿದೆ ಎಂಬುದನ್ನು ಪರಿಗಣಿಸಿರಿ.