ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಆಗಸ್ಟ್: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ನಿತ್ಯಕ್ಕೂ ಬಾಳುವ ದೈವಿಕ ನಾಮ,a ಪರದೈಸನ್ನು ತರಲಿರುವ ಸರಕಾರ,b ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,c ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್: ಸಂತೃಪ್ತಿಕರವಾದ ಜೀವನ ಬ್ರೋಷರ್. ಈ ಬ್ರೋಷರ್ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿರುವಲ್ಲಿ, ಬೈಬಲ್ ಕಥೆಗಳ ನನ್ನ ಪುಸ್ತಕ ಇಲ್ಲವೆ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಆಸಕ್ತಿಯು ಕಂಡುಬಂದಲ್ಲಿ, ಅಪೇಕ್ಷಿಸು ಬ್ರೋಷರನ್ನು ದಯವಿಟ್ಟು ಪರಿಚಯಿಸಿರಿ, ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಗುರಿಯೊಂದಿಗೆ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸಿರಿ. ನವೆಂಬರ್: ಸಂತೃಪ್ತಿಕರವಾದ ಜೀವನ ಬ್ರೋಷರ್. ಈ ಬ್ರೋಷರ್ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿರುವಲ್ಲಿ, ಬೈಬಲ್ ಕಥೆಗಳ ನನ್ನ ಪುಸ್ತಕ ಇಲ್ಲವೆ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು, ಸಭೆಯ ಅಕೌಂಟ್ಸನ್ನು ಸೆಪ್ಟೆಂಬರ್ 1ರಂದು ಅಥವಾ ತದನಂತರ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯನ್ನು ಓದಿದ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಪ್ರತಿ ಸಭೆಯು ಕಾಂಗ್ರಿಗೇಷನ್ ಅನಾಲಸಸ್ ರಿಪೋರ್ಟ್ ಫಾರ್ಮ್‌ಗಳ (S-AB-10) ಎರಡು ಪ್ರತಿಗಳನ್ನು ಆಗಸ್ಟ್ ತಿಂಗಳಿನಲ್ಲಿ ಪಡೆದುಕೊಳ್ಳುವುದು. ಸಭೆಯ ಆಗಸ್ಟ್ ಸೇವಾ ವರದಿಯು ಸಂಕಲಿಸಲ್ಪಟ್ಟ ನಂತರ ಇದನ್ನು ಭರ್ತಿಮಾಡತಕ್ಕದ್ದು. ಇವುಗಳನ್ನು ಭರ್ತಿಮಾಡುವುದರಲ್ಲಿ ನಿಷ್ಕೃಷ್ಟತೆಯನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕನು ಒಟ್ಟಿಗೆ ಕೆಲಸಮಾಡಬೇಕು. ರೆಗ್ಯುಲರ್ ಪಯನೀಯರರ ಬಗ್ಗೆ ಮಾಹಿತಿಯನ್ನು ನೀಡಲಿಕ್ಕಾಗಿ ಫಾರ್ಮ್‌ನ ಹಿಂಬದಿಯನ್ನು ಉಪಯೋಗಿಸಬೇಕು. ದಯವಿಟ್ಟು ಫಾರ್ಮ್‌ನ ಮೂಲ ಪ್ರತಿಯನ್ನು ಬ್ರಾಂಚ್ ಆಫೀಸಿಗೆ ಸೆಪ್ಟೆಂಬರ್ 10ರೊಳಗೆ ಕಳುಹಿಸಿಕೊಡಿ. ಒಂದು ಪ್ರತಿಯನ್ನು ನಿಮ್ಮ ಫೈಲ್‌ಗಾಗಿ ಇಟ್ಟುಕೊಳ್ಳಿ.
◼ ಸ್ಟಾಕ್‌ನಲ್ಲಿರುವ ಎಲ್ಲಾ ಸಾಹಿತ್ಯ ಹಾಗೂ ಪತ್ರಿಕೆಗಳ ವಾರ್ಷಿಕ ಇನ್ವೆಂಟರಿಯನ್ನು, 2004ರ ಆಗಸ್ಟ್ 31ರಂದು ಅಥವಾ ಅದಕ್ಕೆ ಸಾಧ್ಯವಿರುವಷ್ಟು ಹತ್ತಿರದ ತಾರೀಖಿನಂದು ತೆಗೆಯತಕ್ಕದ್ದು. ಈ ಇನ್ವೆಂಟರಿಯು ಸಾಹಿತ್ಯ ಸಂಯೋಜಕನಿಂದ ಮಾಸಿಕವಾಗಿ ಮಾಡಲ್ಪಡುವ ಲೆಕ್ಕದಂತೆಯೇ ಇರುವುದು, ಮತ್ತು ಒಟ್ಟು ಮೊತ್ತಗಳನ್ನು ಲಿಟ್‌ರೇಚರ್ ಇನ್ವೆಂಟರಿ (S-18) ಫಾರ್ಮ್‌ನಲ್ಲಿ ಭರ್ತಿಮಾಡಬೇಕು. ಸದ್ಯಕ್ಕೆ ಸ್ಟಾಕ್‌ನಲ್ಲಿ ಎಷ್ಟು ಪತ್ರಿಕೆಗಳಿವೆ ಎಂಬುದನ್ನು ಪತ್ರಿಕಾ ಸೇವಕನಿಂದ(ರಿಂದ) ಕೇಳಿ ತಿಳಿದುಕೊಳ್ಳಬೇಕು. ಸಹಯೋಜಕ ಸಭೆಯ ಸೆಕ್ರಿಟರಿಯು ಇನ್ವೆಂಟರಿಯನ್ನು ಪರಿಶೀಲಿಸಬೇಕು. ಅವರು ಮತ್ತು ಸಹಯೋಜಕ ಸಭೆಯ ಅಧ್ಯಕ್ಷ ಮೇಲ್ವಿಚಾರಕರು ಫಾರ್ಮ್‌ಗೆ ಸಹಿಹಾಕುವರು. ಪ್ರತಿಯೊಂದು ಸಹಯೋಜಕ ಸಭೆಯು ಮೂರು ಲಿಟ್‌ರೇಚರ್ ಇನ್ವೆಂಟರಿ (S-18) ಫಾರ್ಮ್‌ಗಳನ್ನು ಪಡೆದುಕೊಳ್ಳುವುದು. ದಯವಿಟ್ಟು ಮೂಲ ಪ್ರತಿಯನ್ನು ಸೆಪ್ಟೆಂಬರ್ 6ನೆಯ ತಾರೀಖಿನೊಳಗೆ ಬ್ರಾಂಚ್ ಆಫೀಸಿಗೆ ಅಂಚೆಯ ಮೂಲಕ ಕಳುಹಿಸಿಕೊಡಿ. ಒಂದು ಪ್ರತಿಯನ್ನು ನಿಮ್ಮ ಫೈಲ್‌ಗಳಿಗಾಗಿ ಇಟ್ಟುಕೊಳ್ಳಿ. ಮೂರನೆಯ ಪ್ರತಿಯನ್ನು ಒಂದು ವರ್ಕ್ ಷೀಟ್‌ನೋಪಾದಿ ಉಪಯೋಗಿಸಬಹುದು.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? —ಬಂಗಾಲಿ
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ —ಗುಜರಾಥಿ ಮತ್ತು ಪಂಜಾಬಿ
ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?—ಮರಾಠಿ
ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? —ಮರಾಠಿ
ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ (ಮುಸ್ಲಿಮರಿಗಾಗಿ) —ತಮಿಳು
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.