ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2004ರ ಆಗಸ್ಟ್ 30ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. ಇಸವಿ 2004ರ ಜುಲೈ 5ರಿಂದ ಆಗಸ್ಟ್ 30ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಮ್ಮ ನಿರೀಕ್ಷೆಗೆ ಕಾರಣವನ್ನು ನಾವು “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ಹೇಗೆ ವಿವರಿಸಬಹುದು? (1 ಪೇತ್ರ 3:15, NW) [be-KA ಪು. 192 ಪ್ಯಾರ. 2-4]
2. ನಿಶ್ಚಿತಾಭಿಪ್ರಾಯದಿಂದ ಮಾತಾಡುವುದು ಪ್ರಾಮುಖ್ಯವೇಕೆ? (ರೋಮಾ. 8:38, 39; 1 ಥೆಸ. 1:5; 1 ಪೇತ್ರ 5:12, NW) [be-KA ಪು. 194]
3. ನಿಶ್ಚಿತಾಭಿಪ್ರಾಯವನ್ನು ಹೇಗೆ ತೋರಿಸಲಾಗುತ್ತದೆ? [be-KA ಪು. 195 ಪ್ಯಾರ. 3-ಪು. 196 ಪ್ಯಾರ. 4]
4. ಸಮಯೋಚಿತ ಜಾಣ್ಮೆ ಏನಾಗಿದೆ, ಅದು ಪ್ರಾಮುಖ್ಯವೇಕೆ, ಮತ್ತು ಈ ಗುಣವನ್ನು ನಾವು ದೃಢತೆಯೊಂದಿಗೆ ಹೇಗೆ ಸರಿದೂಗಿಸಬಹುದು? (ರೋಮಾ. 12:18) [be-KA ಪು. 197]
5. ಮಾತಾಡುವ ಮುಂಚೆ, ಸಮಯೋಚಿತ ಜಾಣ್ಮೆಯುಳ್ಳ ಒಬ್ಬ ವ್ಯಕ್ತಿಯು ಏನನ್ನು ಪರಿಗಣಿಸುವನು? (ಜ್ಞಾನೋ. 25:11; ಯೋಹಾ. 16:12) [be-KA ಪು. 199]
ನೇಮಕ ನಂಬರ್ 1
6. ನಮ್ಮ ಸಂಭಾಷಣೆಗಳು ಮತ್ತು ಬೈಬಲ್ ಅಧ್ಯಯನ ರೂಢಿಗಳು ನಾವು ಸತ್ಯದಲ್ಲಿ ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದೇವೆಂಬದನ್ನು ಹೇಗೆ ಸೂಚಿಸಬಹುದು? [be-KA ಪು. 74 ಪ್ಯಾರ. 3-ಪು. 75 ಪ್ಯಾರ. 2]
7. ‘ನಿಮಗೋಸ್ಕರ ಸೂಕ್ತವಾದ ಸಮಯವನ್ನು ಕೊಂಡುಕೊಳ್ಳುವುದರ’ ಅರ್ಥವೇನು, ಮತ್ತು ನಾವದನ್ನು ಹೇಗೆ ಮಾಡಬಲ್ಲೆವು? (ಎಫೆ. 5:16, NW) [w-KA02 11/15 ಪು. 23]
8. ಎಲ್ಲಾ ಮಾನವರು ದೇವರ ಮುಂದೆ ಸಮಾನರಾಗಿದ್ದಾರೆ ಎಂಬುದನ್ನು ಶಾಸ್ತ್ರವಚನಗಳು ಹೇಗೆ ಸ್ಪಷ್ಟವಾಗಿ ತಿಳಿಸುತ್ತವೆ, ಮತ್ತು ಇದು ನಮ್ಮ ಶುಶ್ರೂಷೆಯ ಮೇಲೆ ಯಾವ ಪರಿಣಾಮವನ್ನು ಬೀರಬೇಕು? [w-KA02 1/1 ಪು. 5, 7]
9. ಸೃಷ್ಟಿಕರ್ತನ ಯೆಹೋವ ಎಂಬ ಅಪೂರ್ವ ಹೆಸರಿನ ಮಹತ್ವಾರ್ಥವೇನು? [w-KA02 1/15 ಪು. 5]
10. ಹೇಬೆಲನ ಯಜ್ಞವನ್ನು, ಕಾಯಿನನ ಯಜ್ಞಕ್ಕಿಂತ “ಶ್ರೇಷ್ಠ”ವನ್ನಾಗಿ ಮಾಡಿದಂಥ ಸಂಗತಿ ಯಾವುದು, ಮತ್ತು ಇದರಿಂದ ನಾವು ನಮ್ಮ “ಸ್ತೋತ್ರಯಜ್ಞ”ದ ಕುರಿತಾಗಿ ಯಾವ ಪಾಠವನ್ನು ಕಲಿಯಬಲ್ಲೆವು? (ಇಬ್ರಿ. 11:4; 13:15) [w-KA02 1/15 ಪು. 21 ಪ್ಯಾರ. 6-8]
ಸಾಪ್ತಾಹಿಕ ಬೈಬಲ್ ವಾಚನ
11. ಯಾಜಕಕಾಂಡ 18:3, ತಪ್ಪುಒಪ್ಪುಗಳ ಕುರಿತಾದ ತಿರುಚಲ್ಪಟ್ಟ ಪ್ರಜ್ಞೆಯನ್ನು ಪಡೆದುಕೊಳ್ಳುವುದರಿಂದ ದೂರವಿರುವಂತೆ ನಮಗೆ ಹೇಗೆ ಸಹಾಯಮಾಡಬಲ್ಲದು? (ಎಫೆ. 4:17-19) [w-KA02 2/1 ಪು. 29]
12. ಪಂಚಾಶತ್ತಮ ದಿನದ ಜಾತ್ರೆಗಳ ಸಮಯದಲ್ಲಿ ಮಹಾಯಾಜಕನಿಂದ “ನೈವೇದ್ಯ”ವಾಗಿ ಅರ್ಪಿಸಲ್ಪಡುತ್ತಿದ್ದ ‘ಎರಡು ರೊಟ್ಟಿ’ಗಳಿಂದ ಪ್ರವಾದನಾತ್ಮಕವಾಗಿ ಏನು ಚಿತ್ರಿಸಲ್ಪಟ್ಟಿತು? (ಯಾಜ. 23:15-17) [w-KA98 3/1 ಪು. 13 ಪ್ಯಾರ. 21]
13. ಅರಣ್ಯಕಾಂಡ 5ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವಂಥ ರೀತಿಯ ವ್ಯಭಿಚಾರವು ನಡೆದಿರುವಲ್ಲಿ, ದೋಷಿಯಾಗಿರುವ ಸ್ತ್ರೀಯ ‘ತೊಡೆಗಳು ಕ್ಷೀಣವಾಗಿ ಹೋಗುವುದು’ ಯಾವ ಅರ್ಥದಲ್ಲಿ? (ಅರಣ್ಯ. 5:27) [w-KA84 5/1 ಪು. 19]
14. ಕೂಷ್ ದೇಶದ ಹೆಂಡತಿಯ ಕಾರಣದಿಂದ ಮಿರ್ಯಾಮ್ ಆರೋನರು ಮೋಶೆಯ ವಿರುದ್ಧ ಯಾಕೆ ಮಾತಾಡಿದರು? (ಅರಣ್ಯ. 12:1)
15. “ಯೆಹೋವವಿಜಯ ಎಂಬ ಗ್ರಂಥ” ಏನಾಗಿತ್ತು? (ಅರಣ್ಯ. 21:14)