ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/04 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2004 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಆಗಸ್ಟ್‌ 9ರಿಂದ ಆರಂಭವಾಗುವ ವಾರ
  • ಆಗಸ್ಟ್‌ 16ರಿಂದ ಆರಂಭವಾಗುವ ವಾರ
  • ಆಗಸ್ಟ್‌ 23ರಿಂದ ಆರಂಭಿಸುವ ವಾರ
  • ಆಗಸ್ಟ್‌ 30ರಿಂದ ಆರಂಭವಾಗುವ ವಾರ
  • ಸೆಪ್ಟೆಂಬರ್‌ 6ರಿಂದ ಪ್ರಾರಂಭವಾಗುವ ವಾರ
2004 ನಮ್ಮ ರಾಜ್ಯದ ಸೇವೆ
km 8/04 ಪು. 2

ಸೇವಾ ಕೂಟದ ಶೆಡ್ಯೂಲ್‌

ಸೂಚನೆ: ನಮ್ಮ ರಾಜ್ಯದ ಸೇವೆಯು, ಅಧಿವೇಶನದ ತಿಂಗಳುಗಳಲ್ಲಿ ಪ್ರತಿಯೊಂದು ವಾರಕ್ಕಾಗಿ ಒಂದು ಸೇವಾ ಕೂಟವನ್ನು ಶೆಡ್ಯೂಲ್‌ ಮಾಡುವುದು. “ದೇವರೊಂದಿಗೆ ನಡೆಯಿರಿ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಅನುಮತಿಸುವಂತೆ ಅಗತ್ಯವಿರುವ ಹೊಂದಾಣಿಕೆಗಳನ್ನು ಸಭೆಗಳು ಮಾಡಿಕೊಳ್ಳಬಹುದು. ಸೂಕ್ತವಾಗಿರುವಲ್ಲಿ, ಅಧಿವೇಶನಕ್ಕೆ ಹಾಜರಾಗುವ ಮುಂಚಿನ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿರುವ ಸ್ಥಳಿಕವಾಗಿ ಅನ್ವಯಿಸುವ ನಿರ್ದಿಷ್ಟ ಸಲಹೆಯನ್ನು ಪುನರಾವರ್ತಿಸಲು 15 ನಿಮಿಷಗಳನ್ನು ಉಪಯೋಗಿಸಿರಿ. ಆಸನಗಳನ್ನು ಕಾದಿರಿಸುವುದರ ಕುರಿತಾದ ಸೂಚನೆಯನ್ನು ಒತ್ತಿಹೇಳಿರಿ. ಫೆಬ್ರವರಿ ತಿಂಗಳಿನಲ್ಲಿ, ಅಧಿವೇಶನ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಒಂದು ಇಡೀ ಸೇವಾ ಕೂಟವನ್ನು ಏರ್ಪಡಿಸಲಾಗುವುದು. ಆ ಚರ್ಚೆಗೆ ತಯಾರಿಯೋಪಾದಿ, ಅಧಿವೇಶನದಲ್ಲಿ ನಾವೆಲ್ಲರೂ ಅರ್ಥಭರಿತ ಟಿಪ್ಪಣಿಗಳನ್ನು ಬರೆದುಕೊಳ್ಳಸಾಧ್ಯವಿದೆ. ಇದರೊಂದಿಗೆ ನಮ್ಮ ಸ್ವಂತ ಜೀವಿತದಲ್ಲಿ ಹಾಗೂ ಕ್ಷೇತ್ರ ಶುಶ್ರೂಷೆಯಲ್ಲಿ ನಾವು ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಲು ಬಯಸುವ ನಿರ್ದಿಷ್ಟ ಅಂಶಗಳನ್ನೂ ಪಟ್ಟಿಮಾಡಿಕೊಳ್ಳಬಹುದು. ಬಳಿಕ ನಾವು ಆ ಸಲಹೆಗಳನ್ನು ಹೇಗೆ ಅನ್ವಯಿಸಿಕೊಂಡಿದ್ದೇವೆ ಎಂಬುದನ್ನು ವಿವರಿಸುವುದರ ಮೂಲಕ ಇತರರನ್ನು ಉತ್ತೇಜಿಸಸಾಧ್ಯವಿದೆ.

ಆಗಸ್ಟ್‌ 9ರಿಂದ ಆರಂಭವಾಗುವ ವಾರ

ಗೀತೆ 57

10 ನಿ: ಸ್ಥಳಿಕ ಪ್ರಕಟನೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳು ನಿಮ್ಮ ಸಭೆಯ ಟೆರಿಟೊರಿಗೆ ಪ್ರಾಯೋಗಿಕವಾಗಿರುವುದಾದರೆ, ಅವುಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿರುವ ಮೊದಲನೆಯದ್ದು) ಮತ್ತು ಆಗಸ್ಟ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇತರ ನಿರೂಪಣೆಗಳನ್ನು ಉಪಯೋಗಿಸಬಹುದು. ದಾನಕೊಡುವ ಏರ್ಪಾಡಿನ ಕುರಿತು ತಿಳಿಸುವುದನ್ನೂ ಒಳಗೂಡಿಸಿರಿ. ಮುಂದಿನ ವಾರದ ಕೂಟಕ್ಕೆ ಬರುವಾಗ ಅಪೇಕ್ಷಿಸು ಬ್ರೋಷರಿನ ಒಂದು ಪ್ರತಿಯನ್ನು ತರುವಂತೆ ಸಭಿಕರಿಗೆ ಜ್ಞಾಪಿಸಿರಿ.

15 ನಿ: “ತಾಳ್ಮೆಗೆ ಪ್ರತಿಫಲ ಸಿಗುತ್ತದೆ.”a ಡಿಸೆಂಬರ್‌ 15, 2000, ಕಾವಲಿನಬುರುಜುವಿನ ಪುಟಗಳು 22-3, ಪ್ಯಾರಗ್ರಾಫ್‌ಗಳು 15-18ರ ಮೇಲೆ ಸಂಕ್ಷಿಪ್ತವಾದ ಹೇಳಿಕೆಗಳನ್ನು ಸೇರಿಸಿಕೊಳ್ಳಿ.

20 ನಿ: “ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.”b ಸಭಾ ಸೆಕ್ರಿಟರಿಯು ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಈ ಭಾಗವನ್ನು ನಿರ್ವಹಿಸತಕ್ಕದ್ದು. ಸಭೆಯು ನೇಮಿಸಲ್ಪಟ್ಟಿರುವ ಅಧಿವೇಶನದ ಕುರಿತು ತಿಳಿಸಿರಿ. ಐಸೋಲ್‌ ಮತ್ತು ದುಲೈಜಾನ್‌ ಅಧಿವೇಶನಗಳಲ್ಲಿ ಕಾರ್ಯಕ್ರಮವು ಬೆಳಗ್ಗೆ 8:30ಕ್ಕೆ ಆರಂಭಿಸುವುದು. ಉಳಿದ ಅಧಿವೇಶನಗಳಿಗಾಗಿರುವ ಕಾರ್ಯಕ್ರಮದ ಸಮಯಗಳು ಏಪ್ರಿಲ್‌ 2004ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ಪಟ್ಟಿಮಾಡಲ್ಪಟ್ಟಿವೆ. ಅಗತ್ಯವಿರುವ ಹಾಗೆ ಆ ಪುರವಣಿಯಿಂದ ಇತರ ಅಂಶಗಳನ್ನು ಎತ್ತಿತೋರಿಸಬಹುದು. ಮುಂದಿನ ವಾರದ ಸೇವಾ ಕೂಟದಲ್ಲಿ ಚರ್ಚಿಸಲ್ಪಡಲಿರುವ “ಸರಿಯಾದ ಹೊತ್ತಿಗೆ ಆಧ್ಯಾತ್ಮಿಕ ಆಹಾರ” ಎಂಬ ಲೇಖನದಿಂದ ಎರಡು ಅಥವಾ ಮೂರು ಪ್ರಶ್ನೆಗಳನ್ನು ಕೇಳಿ ಸಮಾಪ್ತಿಗೊಳಿಸಿ.

ಗೀತೆ 74 ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 16ರಿಂದ ಆರಂಭವಾಗುವ ವಾರ

ಗೀತೆ 189

8 ನಿ: ಸ್ಥಳಿಕ ಪ್ರಕಟನೆಗಳು.

17 ನಿ: “ಸರಿಯಾದ ಹೊತ್ತಿಗೆ ಆಧ್ಯಾತ್ಮಿಕ ಆಹಾರ.”c ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಪ್ಯಾರಗ್ರಾಫ್‌ 2ನ್ನು ಚರ್ಚಿಸುತ್ತಿರುವಾಗ, ಸಭಿಕರಿಂದ ಒಬ್ಬರು ಅಥವಾ ಇಬ್ಬರು ತಾವು ಹಾಜರಾದ ಒಂದು ಸ್ಮರಣೀಯ ಅಧಿವೇಶನದ ಕುರಿತು ಚುಟುಕಾಗಿ ಹೇಳಿಕೆ ನೀಡುವಂತೆ ಮಾಡಿ. ಮುಂದಿನ ವಾರದ ಸೇವಾ ಕೂಟದಲ್ಲಿ ಚರ್ಚಿಸಲ್ಪಡಲಿರುವ “ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರ್ರಿ” ಎಂಬ ಲೇಖನದಿಂದ ಎರಡು ಅಥವಾ ಮೂರು ಪ್ರಶ್ನೆಗಳನ್ನು ಕೇಳಿ ಸಮಾಪ್ತಿಗೊಳಿಸಿ.

20 ನಿ: “ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು​—⁠ಭಾಗ 2.”d ಐದು ನಿಮಿಷದ ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿ. ಒಬ್ಬ ಬೈಬಲ್‌ ವಿದ್ಯಾರ್ಥಿಯು ಪ್ರಗತಿಯನ್ನು ಮಾಡುವಂತೆ ಹೇಗೆ ಸಹಾಯಮಾಡುವುದು ಎಂದು ಒಬ್ಬ ಪ್ರಚಾರಕನು ಹಿರಿಯನೊಬ್ಬನನ್ನು ಕೇಳುತ್ತಾನೆ. ಒಂದು ಸಾಮಾನ್ಯ ಸಮಸ್ಯೆಯು, ಅಧ್ಯಯನದ ಸಮಯದಲ್ಲಿ ಬಹುಮಟ್ಟಿಗೆ ಪ್ರಾಮುಖ್ಯವಲ್ಲದ ವಿಷಯಗಳನ್ನು ಚರ್ಚಿಸುವುದರಲ್ಲಿ ಮತ್ತು ಸ್ವಲ್ಪ ಸಂಬಂಧವಿರುವುದಾದರೂ ಒಂದು ಅಂಶವನ್ನು ಸ್ಥಾಪಿಸಲು ಅಗತ್ಯವಿಲ್ಲದ ಅಂಶಗಳನ್ನು ಚರ್ಚಿಸುವುದರಲ್ಲಿ ತೀರ ಹೆಚ್ಚು ಸಮಯವನ್ನು ವ್ಯಯಿಸುವುದೇ ಆಗಿದೆ ಎಂದು ಹಿರಿಯನು ಹೇಳುತ್ತಾನೆ. ಅಪೇಕ್ಷಿಸು ಬ್ರೋಷರಿನ ಪಾಠ 9ನ್ನು ಉಪಯೋಗಿಸುತ್ತಾ, (1) ವಿಷಯಭಾಗದ ಮುಖ್ಯಾಂಶಗಳ ಮೇಲೆ ಕೇಂದ್ರೀಕರಿಸುವುದು, (2) ಉಲ್ಲೇಖಿತ ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು, ಮತ್ತು (3) ವಿದ್ಯಾರ್ಥಿಯ ಅಗತ್ಯಗಳಿಗನುಸಾರ ಪಾಠವನ್ನು ಸರಿಹೊಂದಿಸುವುದು ಹೇಗೆ ಎಂಬುದನ್ನು ಹಿರಿಯನು ಪ್ರಚಾರಕನಿಗೆ ತೋರಿಸುತ್ತಾನೆ. ಪ್ರತಿ ಸಾರಿ ಒಂದು ಅಧ್ಯಯನವು ನಡೆಸಲ್ಪಡುವಾಗ ಒಳ್ಳೆಯ ತಯಾರಿಯು ಅಗತ್ಯ ಎಂದು ಹಿರಿಯನು ಹೇಳುತ್ತಾನೆ.

ಗೀತೆ 85 ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 23ರಿಂದ ಆರಂಭಿಸುವ ವಾರ

ಗೀತೆ 33

12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿರುವ ಮೂರನೆಯದ್ದು) ಮತ್ತು ಸೆಪ್ಟೆಂಬರ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ನಿರೂಪಣೆಯಲ್ಲಿ, ಒಬ್ಬ ಶಾಲಾ ಶಿಕ್ಷಕರಿಗೆ ಸಾಕ್ಷಿನೀಡುವುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ಸೆಪ್ಟೆಂಬರ್‌ ತಿಂಗಳಿನಲ್ಲಿ ಸಂತೃಪ್ತಿಕರವಾದ ಜೀವನ ಬ್ರೋಷರನ್ನು ನೀಡುವುದು. ಭಾಷಣ ಮತ್ತು ಪ್ರತ್ಯಕ್ಷಾಭಿನಯ. ದೈವಪ್ರೇರಿತವಾದ ಒಂದು ಪುಸ್ತಕದ ಯಾವುದೇ ತಿಳಿವಳಿಕೆಯಿಲ್ಲದ ವ್ಯಕ್ತಿಗಳೊಂದಿಗೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸುವ ಉದ್ದೇಶದೊಂದಿಗೆ ಈ ಬ್ರೋಷರನ್ನು ತಯಾರಿಸಲಾಗಿತ್ತು. ಬ್ರೋಷರಿನಲ್ಲಿ ಅಡಕವಾಗಿರುವ ವಿಷಯಗಳ ಬಗ್ಗೆ ಸಾರಾಂಶವನ್ನು ಕೊಡಿ, ಮತ್ತು ಸ್ಥಳಿಕ ಟೆರಿಟೊರಿಯಲ್ಲಿರುವವರ ಗಮನವನ್ನು ಸೆಳೆಯಬಹುದಾದಂಥ ನಿರ್ದಿಷ್ಟ ಅಂಶಗಳನ್ನು ಎತ್ತಿತೋರಿಸಿರಿ. ತರ್ಕಿಸು (ಇಂಗ್ಲಿಷ್‌) ಪುಸ್ತಕ ಅಥವಾ ನಮ್ಮ ರಾಜ್ಯದ ಸೇವೆಯಿಂದ ತೆಗೆಯಲ್ಪಟ್ಟ ಒಂದು ಪೀಠಿಕೆ, ಒಂದು ಶಾಸ್ತ್ರವಚನ, ಮತ್ತು ಸಂತೃಪ್ತಿಕರ ಬ್ರೋಷರಿನಿಂದ ಒಂದು ಅಂಶ ಅಥವಾ ಅಧ್ಯಾಯವನ್ನು ಒಳಗೊಂಡ ಒಂದು ಸರಳವಾದ ನಿರೂಪಣೆಯ ಕುರಿತು ತಿಳಿಸಿ. ಈ ನಿರೂಪಣೆಯನ್ನು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿ.

18 ನಿ: “ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರ್ರಿ.”e ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಅಧಿವೇಶನಗಳಲ್ಲಿನ ಒಳ್ಳೆಯ ನಡವಳಿಕೆಯು ಯೆಹೋವನಿಗೆ ಸ್ತುತಿಯನ್ನು ತರುತ್ತದೆಂಬುದನ್ನು ಸಭಿಕರು ಹೇಗೆ ಅವಲೋಕಿಸಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಅವರನ್ನು ಕೇಳಿಕೊಳ್ಳಿ. ಮುಂದಿನ ವಾರದ ಸೇವಾ ಕೂಟದಲ್ಲಿ ಚರ್ಚಿಸಲ್ಪಡಲಿರುವ “ಪರಿಶುದ್ಧ, ಸ್ತುತ್ಯರ್ಹವಾದ ವೈಯಕ್ತಿಕ ತೋರಿಕೆ” ಎಂಬ ಲೇಖನದಿಂದ ಎರಡು ಅಥವಾ ಮೂರು ಪ್ರಶ್ನೆಗಳನ್ನು ಕೇಳಿ ಸಮಾಪ್ತಿಗೊಳಿಸಿ.

ಗೀತೆ 220 ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 30ರಿಂದ ಆರಂಭವಾಗುವ ವಾರ

ಗೀತೆ 90

8 ನಿ: ಸ್ಥಳಿಕ ಪ್ರಕಟನೆಗಳು. ಆಗಸ್ಟ್‌ ತಿಂಗಳಿಗಾಗಿರುವ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.

17 ನಿ: ನೀವು ಪ್ರಯೋಜನವನ್ನು ಹೊಂದಿದ್ದೀರೋ? ಸಭಿಕರೊಂದಿಗಿನ ಚರ್ಚೆ. ಕಳೆದ ಸೇವಾ ವರ್ಷದಲ್ಲಿ ನಮ್ಮ ರಾಜ್ಯದ ಸೇವೆಯಲ್ಲಿ ತೋರಿಬಂದ ಮುಂದಿನ ಸಲಹೆಗಳನ್ನು ಪುನರ್ವಿಮರ್ಶಿಸಿರಿ: ನಿಮ್ಮ ಪೀಠಿಕೆಯನ್ನು ಒಂದು ಸಣ್ಣ ಕಾಗದದ ಮೇಲೆ ಬರೆದುಕೊಳ್ಳಿರಿ. (km-KA 10/03 ಪು. 8) ವೈಯಕ್ತಿಕ, ನಿರ್ದಿಷ್ಟ, ಮತ್ತು ಪ್ರಾಮಾಣಿಕವಾಗಿರುವ ಪ್ರಶಂಸೆಯನ್ನು ಕೊಡಿರಿ. (km-KA 11/03 ಪು. 1) ಜನರು ಮನೆಯಲ್ಲಿರುವುದು ಹೆಚ್ಚು ಸಂಭವನೀಯವಾಗಿರುವಾಗ ಸಾಕ್ಷಿಕಾರ್ಯದಲ್ಲಿ ಒಳಗೂಡಿರಿ. (km-KA 12/03 ಪು. 1) ಬೈಬಲ್‌ ವಾಚನಕ್ಕೆ, ಕೂಟದ ತಯಾರಿಗೆ, ಮತ್ತು ಕ್ಷೇತ್ರ ಸೇವೆಗಾಗಿ ನಿರ್ದಿಷ್ಟ ಸಮಯಗಳನ್ನು ಗೊತ್ತುಪಡಿಸಿರಿ. (km-KA 1/04 ಪು. 4) ವೈಯಕ್ತಿಕ ಅಧ್ಯಯನ ಮತ್ತು ಬೈಬಲ್‌ ವಾಚನದ ಸಮಯದಲ್ಲಿ “ಒಳ್ಳೆಯ ದೇಶ” ಬ್ರೋಷರನ್ನು ಉಪಯೋಗಿಸಿರಿ. (km-KA 3/04 ಪು. 2) ಇಡೀ ಬೈಬಲನ್ನು ಓದುವ ಗುರಿಯನ್ನು ಇಡಿರಿ. (km-KA 4/04 ಪು. 1) ವ್ಯಾಪಾರದ ಟೆರಿಟೊರಿಯಲ್ಲಿ ಸಾಕ್ಷಿಕೊಡಿರಿ. (km-KA 7/04 ಪು. 4) ಈ ಸಲಹೆಗಳನ್ನು ಅನ್ವಯಿಸಿದ್ದರಿಂದ ಪಡೆದುಕೊಂಡ ಪ್ರಯೋಜನಗಳ ಕುರಿತು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.

20 ನಿ: “ಪರಿಶುದ್ಧ, ಸ್ತುತ್ಯರ್ಹವಾದ ವೈಯಕ್ತಿಕ ತೋರಿಕೆ.”f ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಸಮಯವು ಅನುಮತಿಸುವಂತೆ, ಉಲ್ಲೇಖಿಸಲ್ಪಟ್ಟಿರುವ ಶಾಸ್ತ್ರವಚನಗಳನ್ನು ಓದಿ ಚರ್ಚಿಸಿರಿ.

ಗೀತೆ 145 ಮತ್ತು ಸಮಾಪ್ತಿಯ ಪ್ರಾರ್ಥನೆ.

ಸೆಪ್ಟೆಂಬರ್‌ 6ರಿಂದ ಪ್ರಾರಂಭವಾಗುವ ವಾರ

ಗೀತೆ 197

5 ನಿ: ಸ್ಥಳಿಕ ಪ್ರಕಟನೆಗಳು.

15 ನಿ: ಸ್ಥಳಿಕ ಅಗತ್ಯಗಳು.

25 ನಿ: “ಪಯನೀಯರ್‌ ಆತ್ಮವನ್ನು ಪ್ರದರ್ಶಿಸಿರಿ.”g ಒಬ್ಬರು ಅಥವಾ ಇಬ್ಬರು ಪಯನೀಯರರನ್ನು ಸಂಕ್ಷಿಪ್ತವಾಗಿ ಇಂಟರ್‌ವ್ಯೂ ಮಾಡಿರಿ. ಹೆತ್ತವರ, ಹಿರಿಯರ, ಅಥವಾ ಇತರರ ಮಾದರಿಯು ಪೂರ್ಣ ಸಮಯದ ಸೇವೆಯನ್ನು ಬೆನ್ನಟ್ಟುವಂತೆ ಅವರಿಗೆ ಹೇಗೆ ಸಹಾಯಮಾಡಿತು ಎಂಬುದರ ಕುರಿತು ಹೇಳಿಕೆ ನೀಡುವಂತೆ ಮಾಡಿ.

ಗೀತೆ 142 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

f ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

g ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ