ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/04 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2004 ನಮ್ಮ ರಾಜ್ಯದ ಸೇವೆ
2004 ನಮ್ಮ ರಾಜ್ಯದ ಸೇವೆ
km 5/04 ಪು. 3

ಪ್ರಶ್ನಾ ಚೌಕ

◼ ಬೇರೆ ಭಾಷೆಯ ಒಂದು ಗುಂಪನ್ನು ರೂಪಿಸುವುದು ಯಾವಾಗ ಯುಕ್ತವಾಗಿರುವುದು?

ಒಂದು ಸಭೆಯ ಟೆರಿಟೊರಿಯಲ್ಲಿ ಬೇರೆ ಭಾಷೆಯನ್ನಾಡುವ ಜನರು ಗಣನೀಯ ಪ್ರಮಾಣದಲ್ಲಿರುವುದಾದರೆ, ಆ ಭಾಷೆಯಲ್ಲಿ ಸಾರುವ ಕೆಲಸವನ್ನು ಸಂಘಟಿಸಲು ಹಿರಿಯರು ಅಗತ್ಯವಿರುವ ಏರ್ಪಾಡುಗಳನ್ನು ಮಾಡಬೇಕು. (km-KA 7/02 ಪು. 1; km-KA 2/98 ಪು. 3-4) ಬೇರೆ ಭಾಷೆಯನ್ನಾಡುವ ಈ ಜನಸಮೂಹವು ಹತ್ತಿರದಲ್ಲಿರುವ ಎರಡು ಅಥವಾ ಮೂರು ಸಭೆಗಳ ಟೆರಿಟೊರಿಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರಬಹುದು. ಇಂತಹ ವಿದ್ಯಮಾನದಲ್ಲಿ, ಸರ್ಕಿಟ್‌ ಮೇಲ್ವಿಚಾರಕನು(ರು) ಸಂಬಂಧಪಟ್ಟಿರುವ ಸಭೆಗಳಿಗೆ ಬೇಕಾದ ಮಾರ್ಗದರ್ಶನವನ್ನು ನೀಡಿ, ಅವು ಸಾರುವ ಕೆಲಸದಲ್ಲಿ ಸಹಕರಿಸುವಂತೆ ಸಹಾಯಮಾಡುವನು(ರು). ಆಗಿಂದಾಗ್ಗೆ, ಆ ಭಾಷೆಯನ್ನು ಮಾತಾಡುವ ಕೂಟಗಳಿಗೆ ಎಷ್ಟು ಮಂದಿ ಹಾಜರಾಗುವರು ಎಂಬುದನ್ನು ದೃಢಪಡಿಸಿಕೊಳ್ಳಲು ಒಂದು ಬಹಿರಂಗ ಭಾಷಣ ಅಥವಾ ಕಾವಲಿನಬುರುಜು ಅಧ್ಯಯನವನ್ನು ಏರ್ಪಡಿಸಬಹುದು.

ಈ ಮುಂದೆ ತಿಳಿಸಲ್ಪಟ್ಟಿರುವ ಆವಶ್ಯಕತೆಗಳು ಪೂರೈಸಲ್ಪಡುವುದಾದರೆ ಬೇರೆ ಭಾಷೆಯ ಒಂದು ಗುಂಪನ್ನು ರೂಪಿಸಬಹುದು: (1) ಈ ಬೇರೆ ಭಾಷೆಯಲ್ಲಿ ಸುವಾರ್ತೆಯನ್ನು ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲ ಪ್ರಚಾರಕರು ಅಥವಾ ಆಸಕ್ತ ವ್ಯಕ್ತಿಗಳಿದ್ದಾರೆ. (2) ಕಡಿಮೆಪಕ್ಷ ಒಂದು ಸಾಪ್ತಾಹಿಕ ಕೂಟವನ್ನು ಮುನ್ನಡೆಸಲು ಒಬ್ಬ ಸಮರ್ಥ ಹಿರಿಯನು ಅಥವಾ ಶುಶ್ರೂಷಾ ಸೇವಕನು ಇದ್ದಾನೆ. (3) ಈ ಗುಂಪನ್ನು ಬೆಂಬಲಿಸಲು ಒಂದು ಹಿರಿಯರ ಮಂಡಲಿಯು ಸಿದ್ಧವಿದೆ. ಈ ಆವಶ್ಯಕತೆಗಳು ಪೂರೈಸಲ್ಪಡುವುದಾದರೆ, ಈ ಗುಂಪು ಅಧಿಕೃತವಾಗಿ ಅಂಗೀಕರಿಸಲ್ಪಡಲು ಮತ್ತು ಹೆಚ್ಚಿನ ಮಾರ್ಗದರ್ಶನಗಳನ್ನು ಕೊಡಸಾಧ್ಯವಾಗಲು ಇದರ ಕುರಿತು ಬ್ರಾಂಚ್‌ ಆಫೀಸಿಗೆ ತಿಳಿಸಬೇಕು.

ಹೆಚ್ಚಿನ ಗುಂಪುಗಳು ಸಭಾ ಪುಸ್ತಕ ಅಧ್ಯಯನವನ್ನು ಸಾಪ್ತಾಹಿಕವಾಗಿ ನಡೆಸುವುದರೊಂದಿಗೆ ಆರಂಭಿಸುತ್ತವೆ. ನಂತರ, ಸಾರ್ವಜನಿಕ ಕೂಟ ಅಥವಾ ಕಾವಲಿನಬುರುಜು ಅಧ್ಯಯನದಂತಹ ಇತರ ಕೂಟಗಳನ್ನು ನಡೆಸುವಂತೆ ಹಿರಿಯರು ಸಮ್ಮತಿಸಬಹುದು. ಈ ಭಾಷೆಯನ್ನಾಡಬಲ್ಲ ಒಬ್ಬ ಸಮರ್ಥ ಹಿರಿಯನು ಅಥವಾ ಶುಶ್ರೂಷಾ ಸೇವಕನು ಸಲಹೆಗಾರನಾಗಿ ಸೇವಿಸಲು ಸಾಧ್ಯವಿರುವುದಾದರೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ನೇಮಕ ನಂ. 2, 3, ಮತ್ತು 4ನ್ನು ಉಪಕ್ಲಾಸ್‌ರೂಮ್‌ನಲ್ಲಿ ಪ್ರಸ್ತುತಪಡಿಸಬಹುದು. ಆದರೂ, ಉಪದೇಶ ಭಾಷಣ, ಬೈಬಲ್‌ ಮುಖ್ಯಾಂಶಗಳು, ಮತ್ತು ಸೇವಾ ಕೂಟಕ್ಕಾಗಿ ಆ ಗುಂಪು ಸಭೆಯನ್ನು ಸೇರಿಕೊಳ್ಳುವುದು. ಗುಂಪಿಗಾಗಿ ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನು ಸಹ ಏರ್ಪಡಿಸಬಹುದು.

ಹಿರಿಯರ ಮಂಡಲಿಯ ಮೇಲ್ವಿಚಾರಣೆಯ ಕೆಳಗೆ ಗುಂಪಿನಲ್ಲಿರುವ ಎಲ್ಲರೂ ನಿಕಟವಾಗಿ ಕೆಲಸಮಾಡಬೇಕು. ಹಿರಿಯರು ಸಮತೂಕದ ನಿರ್ದೇಶನವನ್ನು ಕೊಡಬೇಕು ಮತ್ತು ಗುಂಪಿನ ಅಗತ್ಯಗಳನ್ನು ಪೂರೈಸುವುದರಲ್ಲಿ ಕ್ರಿಯಾಶೀಲ ಆಸಕ್ತಿಯನ್ನು ವಹಿಸಬೇಕು. ಬೆಂಬಲ ನೀಡುತ್ತಿರುವ ಸಭೆಯನ್ನು ಸರ್ಕಿಟ್‌ ಮೇಲ್ವಿಚಾರಕನು ಸಂದರ್ಶಿಸುವಾಗ, ಈ ಗುಂಪನ್ನು ಆಧ್ಯಾತ್ಮಿಕವಾಗಿ ಆತ್ಮೋನ್ನತಿ ಮಾಡುವ ಸಲುವಾಗಿ ಅದರೊಂದಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡಲು ಸಹ ಏರ್ಪಡಿಸಬೇಕು. ಯೆಹೋವನ ಆಶೀರ್ವಾದದೊಂದಿಗೆ, ಬೇರೆ ಭಾಷೆಯ ಒಂದು ಗುಂಪು ಕಾಲಕ್ರಮೇಣ ಒಂದು ಸಭೆಯಾಗಿ ಪರಿಣಮಿಸಬಹುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ