ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪತ್ರಿಕೆಗಳನ್ನು ನೀಡಿರಿ. ನೀವು ಆಸಕ್ತ ವ್ಯಕ್ತಿಗಳಿಗೆ ಪುನರ್ಭೇಟಿ ಮಾಡುವಾಗ—ಇವರಲ್ಲಿ ಜ್ಞಾಪಕಾಚರಣೆಗೆ ಅಥವಾ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾಗುವುದಾದರೂ ಸಂಸ್ಥೆಯೊಂದಿಗೆ ಸಕ್ರಿಯವಾಗಿ ಭಾಗವಹಿಸದಿರುವವರೂ ಒಳಗೂಡಿರಬಹುದು—ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಆರಂಭಿಸಲು ಸಕಲ ಪ್ರಯತ್ನವನ್ನೂ ಮಾಡತಕ್ಕದ್ದು, ವಿಶೇಷವಾಗಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡಿರುವವರಿಗೆ. ಜೂನ್: ಮಹಾ ಬೋಧಕನಿಂದ ಕಲಿತುಕೊಳ್ಳಿರಿ.a ವ್ಯಕ್ತಿಗಳು ತಮಗೆ ಮಕ್ಕಳಿಲ್ಲವೆಂದು ಹೇಳುವುದಾದರೆ, ಅವರಿಗೆ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಈ ಬ್ರೋಷರನ್ನು ಉಪಯೋಗಿಸುವಾಗ, ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿ. ಜುಲೈ ಮತ್ತು ಆಗಸ್ಟ್: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ನಿತ್ಯಕ್ಕೂ ಬಾಳುವ ದೈವಿಕ ನಾಮ,b ಪರದೈಸನ್ನು ತರಲಿರುವ ಸರಕಾರ,c ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,d ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್ ಅನ್ನು ಜೂನ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯು ಓದಲ್ಪಟ್ಟ ನಂತರ ಇದರ ಕುರಿತು ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಕುಟುಂಬ ಜೀವನವನ್ನು ಆನಂದಿಸಿರಿ (ಟ್ರ್ಯಾಕ್ಟ್ ನಂ. 21) —ಸಿಂಧಿ
ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? (ಟ್ರ್ಯಾಕ್ಟ್ ನಂ. 26) —ಒರಿಯ, ಕೊಂಕಣಿ, ಸಿಂಧಿ
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಚರ್ಚೆಗಾಗಿ ಬೈಬಲ್ ವಿಷಯಗಳು —ಹಿಂದಿ
ಮನಗುಂದಿದವರಿಗೆ ಸಾಂತ್ವನ (ಟ್ರ್ಯಾಕ್ಟ್ ನಂ. 20) —ತಮಿಳು
ಕುಟುಂಬ ಜೀವನವನ್ನು ಆನಂದಿಸಿರಿ (ಟ್ರ್ಯಾಕ್ಟ್ ನಂ. 21) —ಉರ್ದು
ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? (ಟ್ರ್ಯಾಕ್ಟ್ ನಂ. 22) —ಇಂಗ್ಲಿಷ್, ಗುಜರಾಥಿ, ತೆಲುಗು, ಮರಾಠಿ
ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? (ಟ್ರ್ಯಾಕ್ಟ್ ನಂ. 26) —ಉರ್ದು
◼ ಸಿ.ಡಿ. ರಾಮ್‌ನಲ್ಲಿ ವಾಚ್‌ಟವರ್ ಲೈಬ್ರರಿ—2003 ರ ಆವೃತ್ತಿ (cdly03) ಶೀಘ್ರವೇ ಲಭ್ಯಗೊಳಿಸಲ್ಪಡುವುದು. ಇದು ಕಂಪ್ಯೂಟರ್ ಸೌಲಭ್ಯಗಳುಳ್ಳ ಸಭಾ ಸದಸ್ಯರಿಗೆ ಮಾತ್ರ ಸೀಮಿತವಾಗಿದೆ ಮತ್ತು ಸಭೆಯ ಮೂಲಕ ಮಾತ್ರವೇ ಇದನ್ನು ವಿನಂತಿಸತಕ್ಕದ್ದು. cdly03 ಆವೃತ್ತಿಯು ಬಿಡುಗಡೆ ಮಾಡಲ್ಪಟ್ಟಿರುವುದರಿಂದ, cdly01 ಆವೃತ್ತಿಗಾಗಿ ಮಾಡಲ್ಪಟ್ಟ ಎಲ್ಲಾ ಬಾಕಿ ವಿನಂತಿಗಳನ್ನು ನಾವು ರದ್ದುಮಾಡಿದ್ದೇವೆ. ಆದುದರಿಂದ, cdly01 ಆವೃತ್ತಿಗಾಗಿ ವಿನಂತಿಸಿದ್ದವರು, ದಯವಿಟ್ಟು cdly03 ಆವೃತ್ತಿಗಾಗಿ ಒಂದು ಹೊಸ ವಿನಂತಿಯನ್ನು ಸಲ್ಲಿಸುವಂತೆ ಕೇಳಿಕೊಳ್ಳುತ್ತೇವೆ.
◼ ಮರುಜ್ಞಾಪನ: ವಾರ್ಷಿಕ ಐಟಮ್‌ಗಳಿಗಾಗಿರುವ ವಿಶೇಷ ವಿನಂತಿ ಫಾರ್ಮ್‌ಗಳು (ಸ್ಪೆಷಲ್ ರಿಕ್ವೆಸ್ಟ್ ಫಾರ್ಮ್ ಫಾರ್ ಆ್ಯನ್ಯುಅಲ್ ಐಟಮ್ಸ್) ಸಭೆಗಳಿಗೆ ಕಳುಹಿಸಲ್ಪಟ್ಟಿವೆ. ಇಸವಿ 2004ರ ಅಧಿವೇಶನ ಬ್ಯಾಡ್ಜ್ ಕಾರ್ಡ್ ಮತ್ತು 2005ಕ್ಕಾಗಿರುವ ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು, ವರ್ಷಪುಸ್ತಕ, ಮತ್ತು ಕ್ಯಾಲೆಂಡರ್‌ಗಳಂಥ ಇತರ ವಾರ್ಷಿಕ ಐಟಮ್‌ಗಳಿಗಾಗಿ ವಿನಂತಿಸಿಕೊಂಡಿರದ ಸಭೆಗಳು, ವಿಶೇಷ ವಿನಂತಿ ಫಾರ್ಮ್ ಅನ್ನು ಪಡೆದುಕೊಂಡ ತಕ್ಷಣವೇ ತಮ್ಮ ವಿನಂತಿಗಳನ್ನು ಕಳುಹಿಸತಕ್ಕದ್ದು.
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.