ಸೇವಾ ಕೂಟದ ಶೆಡ್ಯೂಲ್
ಮೇ 10ರಿಂದ ಆರಂಭವಾಗುವ ವಾರ
ಗೀತೆ 193
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 4ರಲ್ಲಿರುವ ಸಲಹೆಗಳು ನಿಮ್ಮ ಸಭೆಯ ಟೆರಿಟೊರಿಗೆ ಪ್ರಾಯೋಗಿಕವಾಗಿರುವುದಾದರೆ, ಅವನ್ನು ಉಪಯೋಗಿಸುತ್ತಾ ಮೇ 15ರ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಎರಡನೆಯದ್ದು) ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಬೇರೆ ನಿರೂಪಣೆಗಳನ್ನು ಉಪಯೋಗಿಸಬಹುದು. ಪ್ರತಿಯೊಂದು ನಿರೂಪಣೆಯಲ್ಲೂ, “ನನಗೆ ನನ್ನ ಸ್ವಂತ ಧರ್ಮವಿದೆ” ಎಂಬ ಸಂಭಾಷಣಾ ತಡೆಗಟ್ಟನ್ನು ನಿಭಾಯಿಸುವ ಭಿನ್ನವಾದ ವಿಧವನ್ನು ಪ್ರತ್ಯಕ್ಷಾಭಿನಯಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 10-11 ಪುಟಗಳನ್ನು ನೋಡಿರಿ.
15 ನಿ: ಪ್ರಶ್ನಾ ಚೌಕವನ್ನು ಪರಿಗಣಿಸಿರಿ. ಅಕ್ಟೋಬರ್ 15, 1998ರ ಎಲ್ಲಾ ಸಭೆಗಳಿಗೆ ಬರೆಯಲ್ಪಟ್ಟ ಪತ್ರದಲ್ಲಿ ವಿವರಿಸಲ್ಪಟ್ಟಂತೆ, ಬೇರೊಂದು ಭಾಷೆಯನ್ನು ಮಾತನಾಡುವ ಜನರನ್ನು ಭೇಟಿಯಾಗುವುದಾದರೆ ಪ್ಲೀಸ್ ಫಾಲೋ ಅಪ್ (ದಯವಿಟ್ಟು ಸಂಪರ್ಕಿಸಿರಿ) (S-43) ಫಾರ್ಮನ್ನು ಉಪಯೋಗಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿರಿ. ಒಬ್ಬ ವ್ಯಕ್ತಿಯು ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸದಿರುವಾಗಲೂ, ಇದೇ ಉದ್ದೇಶಕ್ಕಾಗಿ ಈ ಫಾರ್ಮನ್ನು ಉಪಯೋಗಿಸಬೇಕು.
20 ನಿ: “ವಿಶಾಲಮಾಡಿಕೊಳ್ಳಿರಿ.”a ದೇವರನ್ನು ಆರಾಧಿಸಿರಿ ಪುಸ್ತಕದ ಪುಟ 150, ಪ್ಯಾರಗ್ರಾಫ್ 14ರ ಮೇಲೆ ಹೇಳಿಕೆಗಳನ್ನು ಸೇರಿಸಿಕೊಳ್ಳಿ.
ಗೀತೆ 18 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 17ರಿಂದ ಆರಂಭವಾಗುವ ವಾರ
ಗೀತೆ 188
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: “ಕೃತಜ್ಞತಾಭಾವವನ್ನು ತೋರಿಸಿರಿ.”b ಸಮಯವು ಅನುಮತಿಸಿದಂತೆ, ಉದ್ಧರಿಸಲ್ಪಟ್ಟಿರುವ ಶಾಸ್ತ್ರವಚನಗಳ ಮೇಲೆ ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. ಪ್ಯಾರಗ್ರಾಫ್ 3ನ್ನು ಚರ್ಚಿಸುತ್ತಿರುವಾಗ, ಇತ್ತೀಚೆಗೆ ಆಕ್ಸಿಲಿಯರಿ ಪಯನೀಯರ್ ಮಾಡಿರುವ ಒಬ್ಬರು ಅಥವಾ ಇಬ್ಬರನ್ನು, ಹೀಗೆ ಮಾಡಿದ್ದರಿಂದ ಅವರಿಗೆ ಸಿಕ್ಕಿದ ಆಶೀರ್ವಾದಗಳ ಕುರಿತು ಹೇಳಿಕೆ ನೀಡುವಂತೆ ಮಾಡಿ.
20 ನಿ: ನಾವು ಪರಸ್ಪರವಾಗಿ ಚಿಂತೆ ವಹಿಸುತ್ತೇವೆ. (1 ಕೊರಿಂ. 12:24, 26) ನಮ್ಮ ಶುಶ್ರೂಷೆ ಪುಸ್ತಕದ 157-9ಪುಟಗಳಲ್ಲಿರುವ, “ಪರಸ್ಪರ ಚಿಂತೆ” ಎಂಬ ಉಪಶೀರ್ಷಿಕೆಯ ಕೆಳಗಿನ ಮಾಹಿತಿಯ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಯೆಹೋವನ ಜನರು ಭೂಮಿಯ ಎಲ್ಲಾ ಭಾಗಗಳಲ್ಲಿ ಜೀವಿಸುತ್ತಿರುವುದಾದರೂ, ನಾವು ನಿಕಟಬಾಂಧವ್ಯದಲ್ಲಿ ಐಕ್ಯರಾಗಿದ್ದೇವೆ. ನಾವೆಲ್ಲರೂ ನಮ್ಮ ಸಹೋದರರಿಗಾಗಿ ಪ್ರತಿ ದಿನ ಪ್ರಾರ್ಥಿಸಬೇಕು. ಮತ್ತು ತುರ್ತು ಪರಿಸ್ಥಿತಿಗಳು ಏಳುವಾಗ ಭೌತಿಕ ನೆರವನ್ನು ನೀಡಲು ಸಹ ನಾವು ತತ್‌ಕ್ಷಣವೇ ಮುಂದಾಗುತ್ತೇವೆ. ಮುಖ್ಯ ವಚನಗಳನ್ನು ಓದಿ ಚರ್ಚಿಸಿರಿ, ಮತ್ತು ನಮ್ಮ ಪ್ರಕಾಶನಗಳಿಂದ ತೆಗೆಯಲ್ಪಟ್ಟ ಒಂದೆರಡು ಅನುಭವಗಳನ್ನು ಸೇರಿಸಿಕೊಳ್ಳಿ.
ಗೀತೆ 100 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 24ರಿಂದ ಆರಂಭವಾಗುವ ವಾರ
ಗೀತೆ 128
12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ. ಜೂನ್ 1ರ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ನಾಲ್ಕನೆಯದ್ದು) ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ನಿರೂಪಣೆಯನ್ನು, ಸ್ಥಳಿಕ ಧರ್ಮದ ವ್ಯಕ್ತಿಯೊಬ್ಬನಿಗೆ ಆಸಕ್ತಿಕರವಾಗಿರುವಂಥ ರೀತಿಯಲ್ಲಿ ಹೊಂದಿಸಿಕೊಳ್ಳಿ.
15 ನಿ: “ಚೈತನ್ಯದಾಯಕ ಸಂಗೀತ.” ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಇಸವಿ 2002 ವರ್ಷಪುಸ್ತಕ (ಇಂಗ್ಲಿಷ್), ಪುಟ 175, ಮತ್ತು ಫೆಬ್ರವರಿ 1, 1997, ಕಾವಲಿನಬುರುಜುವಿನ ಪುಟ 27, ಪ್ಯಾರಗ್ರಾಫ್‌ಗಳು 1-2ರ ಮೇಲೆ ಆಧಾರಿತವಾದ ಹೇಳಿಕೆಗಳನ್ನು ಸೇರಿಸಿಕೊಳ್ಳಿ.
18 ನಿ: ಅನೌಪಚಾರಿಕವಾಗಿ ಸಾಕ್ಷಿಕೊಡಲು ಸಿದ್ಧರಾಗಿರಿ. ಜೂನ್ 2003ರ ನಮ್ಮ ರಾಜ್ಯದ ಸೇವೆಯ ಪುಟ 3ರ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಅನೌಪಚಾರಿಕವಾಗಿ ಸಾಕ್ಷಿಕೊಟ್ಟದ್ದರಿಂದ ತಮಗೆ ಸಿಕ್ಕಿದ ಅನುಭವಗಳ ಕುರಿತು ತಿಳಿಸುವಂತೆ ಕೆಲವರೊಂದಿಗೆ ಮುಂಚಿತವಾಗಿ ಏರ್ಪಾಡುಮಾಡಿರಿ. ಅನೌಪಚಾರಿಕವಾಗಿ ಸಾಕ್ಷಿಕೊಡುತ್ತಿರುವಾಗ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್ ಮತ್ತು ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಪುಸ್ತಿಕೆಯನ್ನು ಹೇಗೆ ಉಪಯೋಗಿಸಲ್ಪಡಸಾಧ್ಯವಿದೆ ಎಂಬುದನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ.
ಗೀತೆ 211 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 31ರಿಂದ ಆರಂಭವಾಗುವ ವಾರ
ಗೀತೆ 26
8 ನಿ: ಸ್ಥಳಿಕ ಪ್ರಕಟನೆಗಳು. ಮೇ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.
17 ನಿ: ಜೀವ—ಮಾನ್ಯ ಮಾಡಬೇಕಾದ ಒಂದು ಕೊಡುಗೆ. ತರ್ಕಿಸು (ಇಂಗ್ಲಿಷ್) ಪುಸ್ತಕದ 25-6ನೇ ಪುಟಗಳ ಮೇಲಾಧಾರಿತವಾದ ಸಭಿಕರೊಂದಿಗಿನ ಚರ್ಚೆ. ಸೆಪ್ಟೆಂಬರ್ 8, 1993ರ ಎಚ್ಚರ! ಪತ್ರಿಕೆಯ 10-11ನೇ ಪುಟಗಳ ಮೇಲೆ ಹೇಳಿಕೆಗಳನ್ನು ಸೇರಿಸಿಕೊಳ್ಳಿ. ಸ್ತ್ರೀಯೊಬ್ಬಳಿಗೆ ತನ್ನ ಸ್ವಂತ ದೇಹಕ್ಕೆ ಸಂಬಂಧಪಟ್ಟ ವಿಷಯಗಳನ್ನು ನಿರ್ಣಯಿಸಲು ಹಕ್ಕಿದೆ ಎಂದು ನೆನಸುವ ಒಬ್ಬ ವ್ಯಕ್ತಿಗೆ ಗರ್ಭಪಾತದ ಕಡೆಗಿರುವ ಯೆಹೋವನ ದೃಷ್ಟಿಕೋನವನ್ನು ನೀವು ಹೇಗೆ ವಿವರಿಸುವಿರಿ? ಜನವರಿ 1, 2000ದ ಕಾವಲಿನಬುರುಜು ಪತ್ರಿಕೆಯ ಪುಟ 4, ಪ್ಯಾರಗ್ರಾಫ್‌ಗಳು 4-5ರಲ್ಲಿ ಕಂಡುಬರುವ ಅನುಭವವನ್ನು ತಿಳಿಸಿರಿ.
20 ನಿ: “ಮಹಾ ಬೋಧಕನಿಂದ ಕಲಿಯಿರಿ ಪುಸ್ತಕವನ್ನು ನೀಡುವುದು.” ಜೂನ್ ತಿಂಗಳಿನಲ್ಲಿ ನಾವು ಈ ಪ್ರಕಾಶನವನ್ನು ನೀಡುವೆವು. ಪುಸ್ತಕದ 7ನೇ ಪುಟದಲ್ಲಿರುವ 1-3ನೇ ಪ್ಯಾರಗ್ರಾಫ್‌ಗಳಲ್ಲಿ ವಿವರಿಸಲ್ಪಟ್ಟಿರುವ ವೈಶಿಷ್ಟ್ಯಗಳನ್ನು ಸೂಚಿಸಿರಿ. ಇದರಲ್ಲಿ ಸಭಿಕರಿಗೆ ಯಾವುದು ಇಷ್ಟವಾಗಿದೆ ಎಂಬ ಹೇಳಿಕೆಗಳನ್ನು ಬರಮಾಡಿರಿ. ಸೂಚಿತ ನಿರೂಪಣೆಗಳನ್ನು ಪರಿಶೀಲಿಸಿರಿ. ಪುಸ್ತಕವನ್ನು ನೀಡುತ್ತಿರುವಾಗ ಚಿತ್ರಗಳನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಎತ್ತಿತೋರಿಸಿ. ಒಬ್ಬ ಯುವಕನು ಮೊದಲನೇ ನಿರೂಪಣೆಯನ್ನು ಕೊಡುವಂತೆ, ಮತ್ತು ಇತರ ಎರಡು ನಿರೂಪಣೆಗಳಲ್ಲಿ ಒಂದನ್ನು ಒಬ್ಬ ವಯಸ್ಕನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿ. ವಿಭಿನ್ನವಾದೊಂದು ಸಮೀಪಿಸುವಿಕೆಯು ಸ್ಥಳಿಕ ಟೆರಿಟೊರಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಬಹುದಾದರೆ, ಇದನ್ನು ಎರಡನೇ ಅಥವಾ ಮೂರನೇ ನಿರೂಪಣೆಯ ಸ್ಥಾನದಲ್ಲಿ ಚರ್ಚಿಸಿ ಪ್ರತ್ಯಕ್ಷಾಭಿನಯಿಸಬಹುದು.
ಗೀತೆ 24 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 7ರಿಂದ ಆರಂಭವಾಗುವ ವಾರ
ಗೀತೆ 136
10 ನಿ: ಸ್ಥಳಿಕ ಪ್ರಕಟನೆಗಳು. “ಅವರಿಗೆ ಸಹಾಯವನ್ನು ನೀಡಲಿಕ್ಕಾಗಿ ಒಂದು ಮಾಧ್ಯಮ,” ಎಂಬ ಭಾಗದ ಮುಖ್ಯ ಅಂಶಗಳನ್ನು ಚರ್ಚಿಸಿರಿ. ಸ್ಥಳಿಕ ಟೆರಿಟೊರಿಯಲ್ಲಿ ಎದುರಾಗುವ ಕೆಲವು ಭಾಷೆಗಳನ್ನು ಹೆಸರಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ನಿಮ್ಮ ಬೋಧಿಸುವಿಕೆಯಲ್ಲಿ ಪರಿಣಾಮಕಾರಿ ದೃಷ್ಟಾಂತಗಳನ್ನು ಉಪಯೋಗಿಸಿರಿ. ಸೆಪ್ಟೆಂಬರ್ 1, 2002ರ ಕಾವಲಿನಬುರುಜುವಿನ 22-4ನೇ ಪುಟಗಳ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಯಾವ ನಾಲ್ಕು ಅಂಶಗಳು ಒಂದು ದೃಷ್ಟಾಂತವನ್ನು ಪರಿಣಾಮಕಾರಿಯಾಗಿ ಮಾಡುತ್ತವೆ? ದೃಷ್ಟಾಂತಗಳನ್ನು ಸರಳವಾಗಿಡುವುದು ಏಕೆ ಪ್ರಯೋಜನಕರ? ಒಳ್ಳೆಯ ದೃಷ್ಟಾಂತಗಳನ್ನು ನಾವು ಎಲ್ಲಿ ಕಂಡುಕೊಳ್ಳಬಲ್ಲೆವು? ಪುಟ 23ರಲ್ಲಿರುವ ಚೌಕದಲ್ಲಿ ಕಂಡುಬರುವ ಕೆಲವು ಉದಾಹರಣೆಗಳನ್ನು ಪರಿಶೀಲಿಸಿರಿ, ಮತ್ತು ಪ್ರತಿಯೊಂದು ದೃಷ್ಟಾಂತವನ್ನು ಪರಿಣಾಮಕಾರಿಯಾಗಿ ಮಾಡುವಂಥದ್ದು ಯಾವುದು ಎಂಬುದನ್ನು ಚರ್ಚಿಸಿರಿ.
ಗೀತೆ 133 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.