ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಜೂನ್: ಜ್ಞಾನ ಪುಸ್ತಕ ಅಥವಾ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಮನೆಯವನ ಬಳಿ ಇದು ಈಗಾಗಲೇ ಇರುವಲ್ಲಿ, ಸಭೆಯಲ್ಲಿ ಲಭ್ಯವಿರುವ ಯಾವುದಾದರೊಂದು ಸೂಕ್ತವಾದ ಬ್ರೋಷರನ್ನು ಉಪಯೋಗಿಸಿರಿ. ಜುಲೈ ಮತ್ತು ಆಗಸ್ಟ್: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,a ನಿತ್ಯಕ್ಕೂ ಬಾಳುವ ದೈವಿಕ ನಾಮ,b ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ,c ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಸೂಕ್ತವಾಗಿರುವಲ್ಲಿ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ, ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೋ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೋ?d ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೋ?e ಎಂಬ ಬ್ರೋಷರ್‌ಗಳನ್ನು ನೀಡಬಹುದು. ಸೆಪ್ಟೆಂಬರ್: “ನಿನ್ನ ರಾಜ್ಯವು ಬರಲಿ” ಅಥವಾ ಇರುವುದು ಈ ಜೀವಿತ ಮಾತ್ರವೋ? ಪುಸ್ತಕವನ್ನು ಅಥವಾ ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1988ಕ್ಕೆ ಮುಂಚೆ ಪ್ರಕಾಶಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು.
◼ ಇತ್ತೀಚೆಗೆ ಹಲವಾರು ಬಹಿರಂಗ ಭಾಷಣದ ಹೊರಮೇರೆಗಳು ಸದ್ಯೋಚಿತಗೊಳಿಸಲ್ಪಟ್ಟಿವೆ. ಆಗಸ್ಟ್ 2003ರಲ್ಲಿ, ವಾರ್ಷಿಕ ಫಾರ್ಮ್‌ಗಳ ಸರಬರಾಯಿಯೊಂದಿಗೆ, ಇಂಗ್ಲಿಷ್ ಭಾಷೆಯಲ್ಲಿ ಎಲ್ಲಾ ಹೊರಮೇರೆಗಳ ಒಂದು ಹೊಸ ಸೆಟ್ ಅನ್ನು ಕಳುಹಿಸಲಾಗುವುದು. ಆ ಸಮಯಕ್ಕೆ ಸಿದ್ಧವಾಗಿರುವ ದೇಶೀಯ ಭಾಷೆಯ ಹೊರಮೇರೆಗಳು ಕೂಡ ಸಭೆಗಳಿಗೆ ಕಳುಹಿಸಲ್ಪಡುವವು. ಉಳಿದ ಹೊರಮೇರೆಗಳು ನಂತರ ಕಳುಹಿಸಲ್ಪಡುವವು. ಸದ್ಯೋಚಿತಗೊಳಿಸಲ್ಪಟ್ಟಿರುವ ಹೊರಮೇರೆಗಳನ್ನು ಪಡೆದುಕೊಂಡೊಡನೆಯೇ, ಸಭೆಗಳು ಹಳೇ ಹೊರಮೇರೆಗಳನ್ನು ಬಿಸಾಡಿಬಿಡಬೇಕು ಮತ್ತು ತಮ್ಮ ಫೈಲ್‌ನಲ್ಲಿ ಹೊಸ ಹೊರಮೇರೆಗಳನ್ನು ಇಡಬೇಕು.
◼ ರವಾನಿಸುವಿಕೆಯ ಖರ್ಚುಗಳನ್ನು ಕಡಿಮೆಗೊಳಿಸಲಿಕ್ಕಾಗಿ, ಕೆಲವೊಮ್ಮೆ ಸಾಹಿತ್ಯ, ಪತ್ರಿಕೆಗಳು, ನಮ್ಮ ರಾಜ್ಯದ ಸೇವೆ ಮತ್ತು ಇತರ ಐಟಮ್‌ಗಳನ್ನು ಒಟ್ಟಿಗೆ ಒಂದೇ ಸರಬರಾಯಿಯಲ್ಲಿ ಸಭೆಗೆ ಕಳುಹಿಸಲಾಗುತ್ತದೆ. ಆದುದರಿಂದ, ಸಾಹಿತ್ಯ ಮತ್ತು ಪತ್ರಿಕೆಗಳನ್ನು ನಿರ್ವಹಿಸುವ ಸಹೋದರರು ಒಂದು ಸರಬರಾಯಿಯನ್ನು ಪಡೆದುಕೊಂಡ ತತ್‌ಕ್ಷಣವೇ ಎಲ್ಲಾ ಕಾರ್ಟನ್‌ಗಳನ್ನು ತೆರೆದು, ತಮ್ಮ ಇಲಾಖೆಗಳಿಗೆ ಸಂಬಂಧಿಸದ ಸಾಮಗ್ರಿಯನ್ನು ತಡವಿಲ್ಲದೇ ಅಧ್ಯಕ್ಷ ಮೇಲ್ವಿಚಾರಕನಿಗೆ ಒಪ್ಪಿಸಬೇಕು.
◼ ಸಭೆಗಳು ಈಗ ಸಿಡಿ-ರಾಮ್‌ನಲ್ಲಿ ವಾಚ್‌ಟವರ್ ಲೈಬ್ರರಿ—2001 ಎಡಿಷನ್‌ಗಾಗಿ ತಮ್ಮ ವಿನಂತಿಗಳನ್ನು ಕಳುಹಿಸಿಕೊಡಬಹುದು. ಈ ಕಾಂಪ್ಯಾಕ್ಟ್ ಡಿಸ್ಕ್ ಕೇವಲ ಇಂಗ್ಲಿಷ್‌ನಲ್ಲಿ ಲಭ್ಯವಿರುವುದು. ಇದು ಸಾರ್ವಜನಿಕ ವಿತರಣೆಗೋ, ಶಾಲೆಯ ಲೈಬ್ರರಿಗಳಿಗೋ, ಅಥವಾ ಯೆಹೋವನ ಸಾಕ್ಷಿಗಳಲ್ಲಿ ಕೇವಲ ಆಸಕ್ತಿಯನ್ನು ವ್ಯಕ್ತಪಡಿಸುವವರಿಗೋ ಆಗಿರುವುದಿಲ್ಲ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಟ್ಟುಕೊಳ್ಳಿರಿ. ವಾಚ್‌ಟವರ್ ಲೈಬ್ರರಿ—2001, ಕಂಪ್ಯೂಟರ್ ಸೌಲಭ್ಯವಿರುವ ಸಭೆಯ ಸದಸ್ಯರಿಗಾಗಿರುವ ಒದಗಿಸುವಿಕೆಯಾಗಿದೆ ಮತ್ತು ಸಭೆಯ ಮೂಲಕ ಮಾತ್ರ ಲಭ್ಯಗೊಳಿಸಲ್ಪಡುತ್ತದೆ. ಕಾಂಪ್ಯಾಕ್ಟ್ ಡಿಸ್ಕ್‌ಗಳು ಲಭ್ಯವಿರುವ ಮತ್ತು ರವಾನಿಸಲ್ಪಡುವ ತನಕ, ಸಭೆಯ ರವಾನೆ ಪಟ್ಟಿಯಲ್ಲಿ ಅವು “ಪೆಂಡಿಂಗ್” (Pending) ಎಂದು ಗುರುತಿಸಲ್ಪಟ್ಟಿರುವವು.
◼ ಪುನಃ ಲಭ್ಯವಿರುವ ಪ್ರಕಾಶನ:
ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ (ಮುಸ್ಲಿಮರಿಗಾಗಿ) —ಇಂಗ್ಲಿಷ್, ಕನ್ನಡ, ಬಂಗಾಲಿ, ಮಲೆಯಾಳಂ
◼ ಲಭ್ಯವಿರುವ ಹೊಸ ಪ್ರಕಾಶನ:
ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ (ಮುಸ್ಲಿಮರಿಗಾಗಿ) —ಗುಜರಾಥಿ
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.
e ಕನ್ನಡದಲ್ಲಿ ಲಭ್ಯವಿಲ್ಲ.