ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2003ರ ಜೂನ್ 30ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2003ರ ಮೇ 5ರಿಂದ ಜೂನ್ 30ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಒಂದು ಭಾಷಣವನ್ನು ಕೊಡುತ್ತಿರುವಾಗ ಧ್ವನಿಯ ಏರಿಳಿತವು ಪ್ರಾಮುಖ್ಯವೇಕೆ, ಮತ್ತು ಇದನ್ನು ಸಾಧಿಸುವ ವಿಧ ಯಾವುದು? [be-KA ಪು. 111 ಚೌಕ; ಪು. 112 ಚೌಕ]
2. ಒಬ್ಬ ಭಾಷಣಕರ್ತನು, ತಾನು ಹೇಳುತ್ತಿರುವ ವಿಷಯವನ್ನು ನಂಬುವವನೂ ಯೆಹೋವನನ್ನು ಪ್ರೀತಿಸುವವನೂ ಆಗಿರುವುದಾದರೂ, ಅವನು ಉತ್ಸಾಹರಹಿತನಾಗಿರಬಹುದು ಏಕೆ? [be-KA ಪು. 115 ಪ್ಯಾರ. 3-4; ಪು. 116 ಪ್ಯಾರ. 1]
3. ಒಬ್ಬ ಭಾಷಣಕರ್ತನಿಗೆ ತನ್ನ ಭಾಷಣದಲ್ಲಿ ಹಾರ್ದಿಕತೆ ಮತ್ತು ಭಾವಪೂರ್ಣತೆಯನ್ನು ವ್ಯಕ್ತಪಡಿಸಲು ಯಾವುದು ಸಹಾಯಮಾಡುವುದು, ಮತ್ತು ಇದು ಪ್ರಾಮುಖ್ಯವೇಕೆ? [be-KA ಪು. 119 ಪ್ಯಾರ. 1-4]
4. ಒಂದು ಭಾಷಣದಲ್ಲಿ ಸೂಕ್ತವಾದ ಉತ್ಸಾಹ, ಹಾರ್ದಿಕತೆ, ಮತ್ತು ಇತರ ಭಾವಾವೇಶಗಳನ್ನು ಯಾವುದು ನಿರ್ಧರಿಸುತ್ತದೆ? [be-KA ಪು. 120 ಪ್ಯಾರ. 2-5]
5. ಸರಿಯೋ ತಪ್ಪೋ: ಭಾವಾಭಿನಯಗಳು ಮತ್ತು ಮುಖಭಾವಗಳು ನಿಮ್ಮ ಸಭಿಕರು ನಿಮ್ಮನ್ನು ನೋಡುತ್ತಿರುವುದಾದರೆ ಮಾತ್ರ ಪ್ರಯೋಜನದಾಯಕವಾಗಿವೆ. ವಿವರಿಸಿರಿ. [be-KA ಪು. 121 ಪ್ಯಾರ. 3]
ನೇಮಕ ನಂಬರ್ 1
6. ಒಂದು ಭೀಕರ ಬಾಲ್ಯದ ಹೊರತೂ ಸರಿಯಾದ ಮಾರ್ಗವನ್ನು ಆಯ್ದುಕೊಳ್ಳುವಂತೆ ಯೋಷೀಯನಿಗೆ ಸಹಾಯಮಾಡಿದ್ದು ಯಾವುದು? (2 ಪೂರ್ವ. 34:1, 2) [w-KA01 4/15 ಪು. 27 ಪ್ಯಾರ. 1-6; ಪು. 28 ಪ್ಯಾರ. 4]
7. ಜ್ಞಾನೋಕ್ತಿ 9:7, 8ಎ ವಚನಗಳು ಏನನ್ನು ಅರ್ಥೈಸುತ್ತವೆ, ಮತ್ತು ಇದನ್ನು ಕ್ಷೇತ್ರ ಶುಶ್ರೂಷೆಗೆ ಹೇಗೆ ಅನ್ವಯಿಸಸಾಧ್ಯವಿದೆ? [w-KA01 5/15 ಪು. 29 ಪ್ಯಾರ. 4-5]
8. ‘ನೀವು ಮರೆಯಬಾರದು’ ಎಂದು ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದಾಗ ಏನನ್ನು ಅರ್ಥೈಸಿದನು, ಮತ್ತು ನಾವು ಮರೆಯುವುದನ್ನು ಹೇಗೆ ತಪ್ಪಿಸಬಹುದು? (ಧರ್ಮೋ. 4:9; 8:11) [be-KA ಪು. 20 ಪ್ಯಾರ. 1-3]
9. ಗಂಭೀರವಾದ ಪಾಪವನ್ನು ಮಾಡಿದ್ದರೂ ನಿಜವಾದ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿರುವ ಒಬ್ಬ ವ್ಯಕ್ತಿಗೆ ಅಯೋಗ್ಯವಾದ ಅನಿಸಿಕೆ ಇರಬೇಕಾಗಿಲ್ಲ ಎಂಬುದನ್ನು ಕೀರ್ತನೆ 32:1, 5 ಮತ್ತು ಕೀರ್ತನೆ 51:10, 15ರಲ್ಲಿರುವ ದಾವೀದನ ಯಥಾರ್ಥ ಅಭಿವ್ಯಕ್ತಿಗಳು ಹೇಗೆ ತೋರಿಸುತ್ತವೆ? [w-KA01 6/1 ಪು. 30 ಪ್ಯಾರ. 1-3]
10. 1 ತಿಮೊಥೆಯ 5:3-16ರಲ್ಲಿ ತಿಳಿಸಲ್ಪಟ್ಟಿರುವ ಪೌಲನ ಸೂಚನೆಗಳಿಂದ, ಅಗತ್ಯದಲ್ಲಿರುವವರನ್ನು ನೋಡಿಕೊಳ್ಳುವ ವಿಷಯದಲ್ಲಿ ಏನನ್ನು ಕಲಿಯಸಾಧ್ಯವಿದೆ? [w-KA01 6/15 ಪು. 11 ಪ್ಯಾರ. 1]
ಸಾಪ್ತಾಹಿಕ ಬೈಬಲ್ ವಾಚನ
11. ಯೋಹಾನ 3:3ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು “ಹೊಸದಾಗಿ ಹುಟ್ಟ”ಬೇಕು ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸಿದಾಗ ಏನನ್ನು ಅರ್ಥೈಸಿದನು? [w-KA95 7/1 ಪು. 9-10 ಪ್ಯಾರ. 4-5]
12. ಯೇಸು ತನ್ನ ಶಿಕ್ಷಣವನ್ನು ಯಾವ ವಿಧದಲ್ಲಿ ಉಪಯೋಗಿಸಿದನು, ಮತ್ತು ಇದರಿಂದ ನಾವು ಯಾವ ಅಮೂಲ್ಯವಾದ ಪಾಠವನ್ನು ಕಲಿಯಸಾಧ್ಯವಿದೆ? (ಯೋಹಾ. 7:15-18) [w-KA96 2/1 ಪು. 9-10 ಪ್ಯಾರ. 4-7]
13. ಯೋಹಾನ 7:53–8:11ನ್ನು ನೂತನ ಲೋಕ ಭಾಷಾಂತರ (ಇಂಗ್ಲಿಷ್) ಬೈಬಲಿನಲ್ಲಿ ಏಕೆ ಮುಖ್ಯ ವಚನಭಾಗದಲ್ಲಿ ಸೇರಿಸಲ್ಪಟ್ಟಿಲ್ಲ?
14. ಯೇಸು ಹೇಗೆ ಸ್ವರ್ಗಾರೋಹಣವಾದ ‘ಅದೇ ರೀತಿಯಲ್ಲಿ ಬಂದನು’? (ಅ. ಕೃ. 1:11) [w-KA90 12/1 ಪು. 25 ಪ್ಯಾರ. 5]
15. ಅ. ಕೃತ್ಯಗಳು 5:13ರಲ್ಲಿ ತಿಳಿಸಲ್ಪಟ್ಟಿರುವಂತೆ, “[ಶಿಷ್ಯರ] ಜೊತೆಯಲ್ಲಿರುವದಕ್ಕೆ ಮಿಕ್ಕಾದವರೊಳಗೆ ಒಬ್ಬರಿಗೂ ಧೈರ್ಯವಿರಲಿಲ್ಲ” ಏಕೆ?