ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/03 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2003 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಮೇ 12ರಿಂದ ಆರಂಭವಾಗುವ ವಾರ
  • ಮೇ 19ರಿಂದ ಆರಂಭವಾಗುವ ವಾರ
  • ಮೇ 26ರಿಂದ ಆರಂಭವಾಗುವ ವಾರ
  • ಜೂನ್‌ 2ರಿಂದ ಆರಂಭವಾಗುವ ವಾರ
2003 ನಮ್ಮ ರಾಜ್ಯದ ಸೇವೆ
km 5/03 ಪು. 2

ಸೇವಾ ಕೂಟದ ಶೆಡ್ಯೂಲ್‌

ಮೇ 12ರಿಂದ ಆರಂಭವಾಗುವ ವಾರ

ಗೀತೆ 6 (45)

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 4ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಮೇ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದರ ಕುರಿತಾದ ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ, ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು. ಕಾಣಿಕೆಯ ಏರ್ಪಾಡಿನ ಕುರಿತಾದ ಹೇಳಿಕೆಯನ್ನೂ ಒಳಗೂಡಿಸಿರಿ.

20 ನಿ:  ಹೆತ್ತವರೇ, ಪ್ರಗತಿಮಾಡಲಿಕ್ಕಾಗಿ ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ. ಶುಶ್ರೂಷಾ ಶಾಲೆ ಪುಸ್ತಕದ 9-12 ಹಾಗೂ 21-38ನೆಯ ಪುಟಗಳಿಂದ ತೆಗೆದ ಪ್ರಮುಖ ಅಂಶಗಳನ್ನು ಚರ್ಚಿಸುವಂಥ ಒಂದು ಭಾಷಣ. ಶುಶ್ರೂಷೆಯಲ್ಲಿ ಪ್ರಗತಿಯನ್ನು ಮಾಡಲು ತಮ್ಮ ಮಕ್ಕಳಿಗೆ ತರಬೇತಿಯನ್ನು ನೀಡುವ ಗುರಿಯೊಂದಿಗೆ, ಈ ವಸ್ತುವಿಷಯದಲ್ಲಿ ಕೆಲವನ್ನು ತಮ್ಮ ಕುಟುಂಬ ಅಧ್ಯಯನದಲ್ಲಿ ಉಪಯೋಗಿಸುವಂತೆ ಹೆತ್ತವರನ್ನು ಉತ್ತೇಜಿಸಿರಿ. ಯುವ ಜನರು ಅಗತ್ಯವಿರುವ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಲು ಉಪಯೋಗಿಸಸಾಧ್ಯವಿರುವ ನಿರ್ದಿಷ್ಟ ಅಂಶಗಳ ಕಡೆಗೆ ಗಮನ ಸೆಳೆಯಿರಿ.

15 ನಿ:  “ಸುವಾರ್ತೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವವರು.”a ಒಬ್ಬರು ಅಥವಾ ಇಬ್ಬರು ಪ್ರಚಾರಕರು, ಸಾರುವ ಕೆಲಸದಲ್ಲಿ ಹೆಚ್ಚಿನ ಮಟ್ಟಿಗೆ ಪಾಲ್ಗೊಳ್ಳಲಿಕ್ಕಾಗಿ ಅವರು ತಮ್ಮ ವೈಯಕ್ತಿಕ ಸನ್ನಿವೇಶಗಳನ್ನು ಹೇಗೆ ಹೊಂದಿಸಿಕೊಳ್ಳಲು ಶಕ್ತರಾದರು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸುವಂತೆ ಮುಂದಾಗಿಯೇ ಏರ್ಪಾಡನ್ನು ಮಾಡಿರಿ.

ಗೀತೆ 5 (46) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 19ರಿಂದ ಆರಂಭವಾಗುವ ವಾರ

ಗೀತೆ 23 (200)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ.

15 ನಿ:  ಸ್ಥಳಿಕ ಅಗತ್ಯಗಳು.

20 ನಿ:  “ಅನೌಪಚಾರಿಕವಾಗಿ ಸಾಕ್ಷಿನೀಡುವ ಮೂಲಕ ಯೆಹೋವನನ್ನು ಸ್ತುತಿಸಿರಿ.” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. 3ನೆಯ ಪ್ಯಾರಗ್ರಾಫನ್ನು ಚರ್ಚಿಸುವಾಗ, ಈ ಮುಂದಿನ ಕೆಲವು ಸನ್ನಿವೇಶಗಳಲ್ಲಿ ಒಂದು ಬೈಬಲ್‌ ಚರ್ಚೆಯನ್ನು ಆರಂಭಿಸಲಿಕ್ಕಾಗಿ ಏನನ್ನು ಹೇಳಸಾಧ್ಯವಿದೆ ಎಂದು ಸಭಿಕರನ್ನು ಕೇಳಿರಿ: (1) ಷಾಪಿಂಗ್‌ ಮಾಡುತ್ತಿರುವಾಗ, (2) ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುತ್ತಿರುವಾಗ, (3) ಅಂಗಳದಲ್ಲಿ ಕೆಲಸಮಾಡುತ್ತಿರುವ ಒಬ್ಬ ನೆರೆಯವನಿಗೆ, (4) ನಿಮ್ಮ ಕೆಲಸದ ಸ್ಥಳದಲ್ಲಿರುವ ಒಬ್ಬ ಸಹಕರ್ಮಿಗೆ, ಮತ್ತು (5) ಶಾಲೆಯಲ್ಲಿ ಒಬ್ಬ ಸಹಪಾಠಿಗೆ. ಒಬ್ಬ ಪ್ರಚಾರಕನು ಯಶಸ್ವಿಕರವಾಗಿ ಅನೌಪಚಾರಿಕ ಸಾಕ್ಷಿಯನ್ನು ಹೇಗೆ ಕೊಟ್ಟನು ಎಂಬುದನ್ನು ತೋರಿಸುವಂಥ ಒಂದು ಸ್ಥಳಿಕ ಅನುಭವವನ್ನು ತಿಳಿಸುವಂತೆ ಮುಂಚಿತವಾಗಿಯೇ ಏರ್ಪಡಿಸಿರಿ.

ಗೀತೆ 16 (143) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 26ರಿಂದ ಆರಂಭವಾಗುವ ವಾರ

ಗೀತೆ 22 (130)

10 ನಿ:  ಸ್ಥಳಿಕ ಪ್ರಕಟನೆಗಳು. ಮೇ ತಿಂಗಳಿಗಾಗಿ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. 4ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಲ್ಲಿ ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಜೂನ್‌ 1ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದನ್ನು ತೋರಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ, ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು. ನಿರೂಪಣೆಗಳಲ್ಲಿ ಒಂದನ್ನು ನೀಡಿದ ಬಳಿಕ, ಪತ್ರಿಕೆಗಳನ್ನು ಸ್ವೀಕರಿಸದಿರುವಂಥ ಒಬ್ಬ ಮನೆಯವನೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟನ್ನು ಬಿಟ್ಟುಬನ್ನಿರಿ.

10 ನಿ:  ಪ್ರಶ್ನಾ ಚೌಕ. ಒಂದು ಭಾಷಣ. 2001ರ ಫೆಬ್ರವರಿ ತಿಂಗಳ ನಮ್ಮ ರಾಜ್ಯದ ಸೇವೆಯ 6ನೇ ಪುಟದ 12-15ನೆಯ ಪ್ಯಾರಗ್ರಾಫ್‌ಗಳಲ್ಲಿ ಕಂಡುಬಂದ ಟೆಲಿಫೋನ್‌ ನಿರೂಪಣೆಗಳಿಗಾಗಿರುವ ಕೆಲವು ಸಲಹೆಗಳನ್ನು, ಅಥವಾ ಸ್ಥಳಿಕ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿರುವ ಇತರ ಕೆಲವು ಸಲಹೆಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ.

25 ನಿ:  “ದೇವರ ವಾಕ್ಯವು ಸತ್ಯವಾಗಿದೆ.”b ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಚಾರಕರು ಬೈಬಲನ್ನು ಉಪಯೋಗಿಸಿದ್ದರಿಂದ ಸತ್ಯವನ್ನು ಕಲಿಯುವಂತೆ ಸಹಾಯವು ಹೇಗೆ ಒದಗಿಸಲ್ಪಟ್ಟಿತು ಎಂಬುದರ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. 4ನೆಯ ಪ್ಯಾರಗ್ರಾಫನ್ನು ಚರ್ಚಿಸುವಾಗ, “ದೇವರ ವಾಕ್ಯವನ್ನು ಸರಿಯಾಗಿ ಉಪದೇಶಿಸಿರಿ” ಎಂಬ ಲೇಖನದಲ್ಲಿ ಕಂಡುಬಂದ ಸಲಹೆಗಳಲ್ಲಿ ಕೆಲವನ್ನು ಉಪಯೋಗಿಸುತ್ತಾ, ಆರಂಭದ ಭೇಟಿಯಲ್ಲೇ ಬೈಬಲನ್ನು ಹೇಗೆ ಉಪಯೋಗಿಸಬಹುದೆಂಬುದನ್ನು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ.​—⁠km-KA 12/01 ಪು. 1 ಪ್ಯಾರ. 3-4.

ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 2ರಿಂದ ಆರಂಭವಾಗುವ ವಾರ

ಗೀತೆ 23 (200)

10 ನಿ:  ಸ್ಥಳಿಕ ಪ್ರಕಟನೆಗಳು. ಅಪೇಕ್ಷಿಸು ಬ್ರೋಷರನ್ನು ಮತ್ತು ಜ್ಞಾನ ಪುಸ್ತಕವನ್ನು ನೀಡಲಿಕ್ಕಾಗಿ 2002ರ ಜನವರಿ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿರುವ ಪುರವಣಿಯಿಂದ ಒಂದೊ ಎರಡೊ ಸಲಹೆಗಳನ್ನು ಪುನರ್ವಿಮರ್ಶಿಸಿರಿ.

20 ನಿ:  ಗೌರವಾರ್ಹ ವಿವಾಹ​—⁠ಒಂದು ದೈವಿಕ ಏರ್ಪಾಡು. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಅನೇಕ ದೇಶಗಳಲ್ಲಿ, ಒಂದು ಜೋಡಿಯು ಕಾನೂನುಬದ್ಧವಾಗಿ ವಿವಾಹವಾಗದೇ ಒಟ್ಟಿಗೆ ಜೀವಿಸುವುದು ಸರ್ವಸಾಮಾನ್ಯವಾಗಿದೆ. ಇದರಿಂದ ಪ್ರಾಯೋಗಿಕ ಪ್ರಯೋಜನಗಳಿವೆ ಎಂದು ಕೆಲವರು ಪ್ರತಿಪಾದಿಸುತ್ತಾರೆ. ವಿವಾಹವು ದೇವರ ಮೂಲ ಏರ್ಪಾಡಾಗಿದೆ ಎಂಬುದನ್ನು ಒತ್ತಿಹೇಳುತ್ತಾ, ಬೈಬಲಿನ ದೃಷ್ಟಿಕೋನವನ್ನು ಎತ್ತಿಹೇಳಿರಿ. (rs ಪು. 248-9) ವಿವಾಹವಾಗದೇ ಒಟ್ಟಿಗೆ ಜೀವಿಸುವುದು ಜಾರತ್ವವಾಗಿದೆ. (fy-KA ಪು. 17) ಅನೇಕರು ಏನನ್ನು ನಂಬುತ್ತಾರೋ ಅದಕ್ಕೆ ವ್ಯತಿರಿಕ್ತವಾಗಿ, ವಿವಾಹಕ್ಕೆ ಮೊದಲು ಒಟ್ಟಿಗೆ ಜೀವಿಸುವುದು ಮುಂದೆ ವಿವಾಹವು ಸಫಲವಾಗುವುದರ ಸಂಭವನೀಯತೆಯನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. (g02 3/8 ಪು. 29; g92 9/8 ಪು. 28; g91 5/8 ಪು. 28) ಕ್ರೈಸ್ತರು ಯೆಹೋವನ ಮಟ್ಟಗಳಿಗೆ ಹೊಂದಿಕೊಂಡು ಜೀವಿಸುವ ಮೂಲಕ ಆತನನ್ನು ಗೌರವಿಸುತ್ತಾರೆ. ಹೀಗೆ ಮಾಡುವ ಮೂಲಕ ಸ್ವತಃ ಅವರೂ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ.​—⁠ಯೆಶಾ. 48:​17, 18.

15 ನಿ:  ನೀವು ಹೇಗೆ ಪ್ರಯೋಜನ ಪಡೆದುಕೊಳ್ಳುತ್ತಿದ್ದೀರಿ? ಶಾಲಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡುವ ಸಭಿಕರೊಂದಿಗಿನ ಚರ್ಚೆ. ಜನವರಿ ತಿಂಗಳಿನಿಂದ ಆರಂಭಿಸಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿರುವ ಹೊಸ ಶೈಲಿಯು ನಮಗೆ ಪರಿಚಯಿಸಲ್ಪಟ್ಟಿತು. ಶಾಲೆಯ ಕೆಲವು ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. ಇಷ್ಟರ ತನಕ ಗಮನಿಸಿರುವ ಸಕಾರಾತ್ಮಕ ಫಲಿತಾಂಶಗಳನ್ನು ಎತ್ತಿಹೇಳಿರಿ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೋ? ಹೆಚ್ಚೆಚ್ಚು ಜನರು ಇದರಲ್ಲಿ ಮನಃಪೂರ್ವಕವಾಗಿ ಭಾಗವಹಿಸುತ್ತಿದ್ದಾರೋ? ಸಲಹೆಯನ್ನು ಕೊಡಲಿಕ್ಕಾಗಿರುವ ಹೊಸ ಏರ್ಪಾಡುಗಳಿಂದ ವಿದ್ಯಾರ್ಥಿಗಳು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ? ಇಷ್ಟರ ತನಕ ಅವರು ಹೇಗೆ ವೈಯಕ್ತಿಕವಾಗಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಮತ್ತು ಈ ಹೊಸ ಕಾರ್ಯಕ್ರಮವು ಭವಿಷ್ಯತ್ತಿನಲ್ಲಿ ಅವರಿಗೆ ಯಾವ ರೀತಿಯಲ್ಲಿ ಸಹಾಯಮಾಡುವುದು ಎಂಬ ವಿಷಯದಲ್ಲಿ ತಮ್ಮ ಅನಿಸಿಕೆಯನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ