ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತ್ಯೇಕ ಪ್ರತಿಗಳನ್ನು ನೀಡಿರಿ. ಆಸಕ್ತ ಜನರನ್ನು ಪುನಃ ಭೇಟಿಮಾಡುವಾಗ—ಜ್ಞಾಪಕಾಚರಣೆಗೆ ಹಾಗೂ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರಾದರೂ, ಸಭೆಯೊಂದಿಗೆ ಕ್ರಿಯಾಶೀಲವಾಗಿ ಸಹವಾಸಮಾಡದಿರುವಂಥ ಜನರನ್ನು ಪುನರ್ಭೇಟಿಮಾಡುವುದೂ ಇದರಲ್ಲಿ ಒಳಗೂಡಿರಬಹುದು—ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿa ಎಂಬ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ವಿಶೇಷವಾಗಿ ಕೆಲವರು ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರಿನ ಅಧ್ಯಯನ ಮಾಡಿರುವಲ್ಲಿ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಿಕ್ಕಾಗಿ ಎಲ್ಲಾ ಪ್ರಯತ್ನವನ್ನು ಮಾಡತಕ್ಕದ್ದು. ಮೇ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಒಂದು ಬದಲಿ ನೀಡುವಿಕೆಯೋಪಾದಿ, ಬೈಬಲ್ ಕಥೆಗಳ ನನ್ನ ಪುಸ್ತಕ, ಬೈಬಲು ದೇವರ ವಾಕ್ಯವೋ ಅಥವಾ ಮಾನವನದ್ದೋ?b ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ನೀವು ಉಪಯೋಗಿಸಬಹುದು. ಈ ಬದಲಿ ನೀಡುವಿಕೆಗಳಲ್ಲಿ ಯಾವುದರ ಸರಬರಾಯಿಯೂ ನಿಮ್ಮ ಸಭೆಯಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಬಹುದಾದ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ವಿಚಾರಿಸಿರಿ. ಜೂನ್: ಜ್ಞಾನ ಪುಸ್ತಕ ಅಥವಾ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಮನೆಯವನ ಬಳಿ ಇದು ಈಗಾಗಲೇ ಇರುವಲ್ಲಿ, ಸಭೆಯಲ್ಲಿ ಲಭ್ಯವಿರುವ ಯಾವುದಾದರೊಂದು ಸೂಕ್ತವಾದ ಬ್ರೋಷರನ್ನು ಉಪಯೋಗಿಸಿರಿ. ಜುಲೈ ಮತ್ತು ಆಗಸ್ಟ್: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,c ನಿತ್ಯಕ್ಕೂ ಬಾಳುವ ದೈವಿಕ ನಾಮ,d ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ,e ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿ!
◼ ಎಲ್ಲಾ ಅಧ್ಯಕ್ಷ ಮೇಲ್ವಿಚಾರಕರು ಮತ್ತು ಸೆಕ್ರಿಟರಿಗಳ ಸದ್ಯದ ಟೆಲಿಫೋನ್ ನಂಬರುಗಳು ಮತ್ತು ವಿಳಾಸಗಳ ದಾಖಲೆಯನ್ನು ಬ್ರಾಂಚ್ ಆಫೀಸು ಇಟ್ಟುಕೊಳ್ಳುವುದು ಬಹಳ ಅಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಗಳಿರುವುದಾದರೆ, ಸಭೆಯ ಸರ್ವಿಸ್ ಕಮಿಟಿಯು ಪ್ರಿಸೈಡಿಂಗ್ ಓವರ್‌ಸೀಯರ್/ಸೆಕ್ರಿಟರಿ ಚೇಂಜ್ ಆಫ್ ಆ್ಯಡ್ರೆಸ್ (S-29) ಫಾರ್ಮ್ ಅನ್ನು ಭರ್ತಿಮಾಡಿ, ತಡಮಾಡದೆ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಇದರಲ್ಲಿ ಎಸ್‌ಟಿಡಿ ಕೋಡ್‌ಗಳಲ್ಲಾಗುವ ಯಾವುದೇ ಬದಲಾವಣೆಗಳೂ ಒಳಗೂಡುತ್ತದೆ.
◼ ಆ್ಯಪ್ಲಿಕೇಷನ್ ಫಾರ್ ರೆಗ್ಯುಲರ್ ಪಯನೀಯರ್ ಸರ್ವಿಸ್ (S-205) ಹಾಗೂ ಆ್ಯಪ್ಲಿಕೇಷನ್ ಫಾರ್ ಆಕ್ಸಿಲಿಯರಿ ಪಯನೀಯರ್ ಸರ್ವಿಸ್ (S-205b) ಎಂಬ ಫಾರ್ಮ್‌ಗಳ ಸಾಕಷ್ಟು ಸರಬರಾಯಿಯನ್ನು ಹೊಂದಿರುವಂತೆ ಸಭೆಯ ಸೆಕ್ರಿಟರಿಗಳು ನೋಡಿಕೊಳ್ಳಬೇಕು. ಇವುಗಳನ್ನು ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ (S-14) ಆರ್ಡರ್ ಮಾಡಸಾಧ್ಯವಿದೆ. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗಿರುವಷ್ಟು ಅರ್ಜಿಗಳನ್ನು ಇಟ್ಟುಕೊಳ್ಳಿರಿ. ಎಲ್ಲಾ ರೆಗ್ಯುಲರ್ ಪಯನೀಯರ್ ಅರ್ಜಿಗಳು ಸಂಪೂರ್ಣವಾಗಿ ಭರ್ತಿಮಾಡಲ್ಪಟ್ಟಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಅವುಗಳನ್ನು ಪರಿಶೀಲಿಸಿರಿ. ಅರ್ಜಿದಾರರು ತಮ್ಮ ದೀಕ್ಷಾಸ್ನಾನದ ತಾರೀಖನ್ನು ನೆನಪುಮಾಡಿಕೊಳ್ಳಲು ಅಶಕ್ತರಾಗಿರುವಲ್ಲಿ, ತಾರೀಖನ್ನು ಅಂದಾಜುಮಾಡುತ್ತಾ ಅದರ ದಾಖಲೆಯನ್ನು ಬರೆದಿಡಬೇಕು.
◼ ನೀವು ಇನ್ನೊಂದು ದೇಶಕ್ಕೆ ಪ್ರಯಾಣಿಸಲು ವೈಯಕ್ತಿಕವಾದ ಯೋಜನೆಗಳನ್ನು ಮಾಡುವಾಗ, ಅಲ್ಲಿನ ಸಭಾ ಕೂಟಗಳಿಗೆ, ಸರ್ಕಿಟ್ ಸಮ್ಮೇಳನಕ್ಕೆ, ಇಲ್ಲವೆ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಯೋಜಿಸಿರುವುದಾದರೆ, ಅವುಗಳ ತಾರೀಖುಗಳು, ಸಮಯ ಮತ್ತು ಸ್ಥಳಗಳ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಆ ದೇಶದ ಕೆಲಸವನ್ನು ನೋಡಿಕೊಳ್ಳುವ ಬ್ರಾಂಚ್ ಆಫೀಸಿಗೆ ಬರೆಯಬೇಕು. ಬ್ರಾಂಚಿನ ವಿಳಾಸಗಳ ಪಟ್ಟಿಯನ್ನು ಸದ್ಯದ ವರ್ಷ ಪುಸ್ತಕ (ಇಂಗ್ಲಿಷ್)ದ ಕೊನೆಯ ಪುಟದಲ್ಲಿ ಕೊಡಲಾಗಿದೆ.
◼ ಸ್ಪೆಷಲ್ ರಿಕ್ವೆಸ್ಟ್ ಫಾರ್ಮ್ ಫಾರ್ ಆ್ಯನ್ಯುಅಲ್ ಐಟಮ್ಸ್ ಎಂಬ ಫಾರ್ಮನ್ನು, ಪ್ರತಿಯೊಂದು ಸಭೆಗೆ ಫೆಬ್ರವರಿ ಮಾಸಿಕ ಸ್ಟೇಟ್‌ಮೆಂಟ್‌ನೊಂದಿಗೆ ಕಳುಹಿಸಲಾಗಿತ್ತು. 2003ನೇ ಇಸವಿಯ ಅಧಿವೇಶನದ ಬ್ಯಾಡ್ಜ್ ಕಾರ್ಡ್‌ಗಳು ಮತ್ತು 2004ನೇ ಇಸವಿಗಾಗಿರುವ ಇನ್ನಿತರ ವಾರ್ಷಿಕ ಐಟಮ್‌ಗಳನ್ನು ಇನ್ನೂ ವಿನಂತಿಸಿಕೊಂಡಿರದ ಸಭೆಗಳು, ತಮ್ಮ ವಿನಂತಿಗಳನ್ನು ಒಡನೆಯೇ ಕಳುಹಿಸಬೇಕು.
◼ ಯಿಯರ್ಲಿ ಕ್ಯಾಲೆಂಡರ್ ಆಫ್ ಲಿಟ್‌ರೇಚರ್ ಐಟಮ್‌ಗನುಸಾರ, ಬರಲಿರುವ ಸೇವಾ ವರುಷಕ್ಕೆ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ (S-14)ಪಟ್ಟಿಮಾಡಲಾಗಿರುವ ಫಾರ್ಮ್‌ಗಳಿಗಾಗಿ ವಿನಂತಿಯನ್ನು ಕಳುಹಿಸಿಕೊಡಬೇಕಾದ ತಿಂಗಳಾಗಿ ಏಪ್ರಿಲ್ ತಿಂಗಳನ್ನು ಶೆಡ್ಯೂಲ್ ಮಾಡಲಾಗಿದೆ. ಆದ್ದರಿಂದ, ಏಪ್ರಿಲ್ ತಿಂಗಳಿನ ಸಾಹಿತ್ಯ ವಿನಂತಿಯೊಂದಿಗೆ ಎಲ್ಲಾ ಫಾರ್ಮ್‌ಗಳ ಒಂದು ವರುಷದ ಸರಬರಾಯಿಯ ವಿನಂತಿಯನ್ನು ಸಹ ಕಳುಹಿಸಿರಿ. ಫಾರ್ಮ್‌ಗಳ ವಿನಂತಿಯನ್ನು, ಪ್ರತ್ಯೇಕ ಪತ್ರದ ಅಥವಾ ಪ್ರತ್ಯೇಕ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನ ಮೂಲಕ ಕಳುಹಿಸಬೇಡಿರಿ. ಆದರೆ ಆ ವಿನಂತಿಯನ್ನು ನಿಮ್ಮ ಸಭೆಯ ಸಾಹಿತ್ಯ ವಿನಂತಿಯೊಂದಿಗೆ ಸೇರಿಸಿ ಕಳುಹಿಸಬೇಕು. ದಯಮಾಡಿ ವಾಚ್‌ಟವರ್ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ ಗೈಡ್, ಭಾಗ 4, ಪು. 1ನ್ನು ನೋಡಿರಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ನಿಮ್ಮ ಮಾತನಾಡುವ ಮತ್ತು ಕಲಿಸುವ ಸಾಮರ್ಥ್ಯವನ್ನು ಉತ್ತಮಗೊಳಿಸುವ ವಿಧ —ಅಸ್ಸಾಮಿ, ಮೀಸೊ
ಈ ಲೋಕವು ಪಾರಾಗುವುದೋ? (ಟ್ರ್ಯಾಕ್ಟ್ ನಂಬ್ರ 19) —ಮಣಿಪುರಿ
ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? (ಟ್ರ್ಯಾಕ್ಟ್ ನಂ.22) —ಮಣಿಪುರಿ
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.
e ಕನ್ನಡದಲ್ಲಿ ಲಭ್ಯವಿಲ್ಲ.