ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2003ರ ಏಪ್ರಿಲ್ 28ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2003ರ ಮಾರ್ಚ್ 3ರಿಂದ ಏಪ್ರಿಲ್ 28ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಿರರ್ಗಳತೆಯ ಕೊರತೆಗೆ ಯಾವ ಅಂಶಗಳು ಕಾರಣವಾಗಿರಬಹುದು? [be-KA ಪು. 93]
2. ಸರಿಯೋ ತಪ್ಪೋ: ಮಧ್ಯೆ ಮಧ್ಯೆ ನಿಲ್ಲಿಸಿ ಮಾತಾಡುವುದರಿಂದ ದೂರವಿರಬೇಕು, ಏಕೆಂದರೆ ಇದು ಜನರ ಮನಸ್ಸುಗಳನ್ನು ಅತ್ತಿತ್ತ ಅಲೆದಾಡುವಂತೆ ಬಿಟ್ಟು ಅವರಿಗೆ ಮಧ್ಯೆ ಬಾಯಿಹಾಕಿ ನಿಲ್ಲಿಸುವ ಸಂದರ್ಭಗಳನ್ನು ಕೊಡಸಾಧ್ಯವಿದೆ. ವಿವರಿಸಿರಿ.
3. ಸರಿಯಾದ ಅರ್ಥಒತ್ತು, ಒಬ್ಬ ಭಾಷಣಕಾರನಿಗೆ ಅಥವಾ ಸಾರ್ವಜನಿಕ ವಾಚಕನಿಗೆ ಯಾವ ರೀತಿಯಲ್ಲಿ ಪ್ರಯೋಜನದಾಯಕವಾಗಿದೆ? (ನೆಹೆ. 8:8) [be-KA ಪು. 101]
4. ಸರಿಯಾದ ಅರ್ಥಒತ್ತಿನ ಉಪಯೋಗದಲ್ಲಿ ಒಬ್ಬನು ಹೇಗೆ ಅಭಿವೃದ್ಧಿಮಾಡಸಾಧ್ಯವಿದೆ? [be-KA ಪು. 102-3]
5. ಒಂದು ಬೈಬಲ್ ಅಧ್ಯಯನದಲ್ಲಿ ಅಥವಾ ಸಭಾ ಕೂಟದಲ್ಲಿ ಒಂದು ಪ್ರಕಾಶನದಿಂದ ಗಟ್ಟಿಯಾಗಿ ಓದುವಾಗ, ಒತ್ತಿಹೇಳಬೇಕಾಗಿರುವ ಪ್ರಧಾನ ವಿಚಾರಗಳಾವುವು? [be-KA ಪು. 105]
ನೇಮಕ ನಂಬರ್ 1
6. “ಕೇಳಿ ತಿಳಿದುಕೊಳ್ಳುವಂತೆ” ಮಕ್ಕಳನ್ನು ತರಬೇತಿಗೊಳಿಸಲು ಹೆತ್ತವರು ಏನು ಮಾಡಸಾಧ್ಯವಿದೆ? (ಧರ್ಮೋ. 31:12) [be-KA ಪು. 16]
7. ಆತ್ಮಿಕ ಪರದೈಸ್ ಅಂದರೇನು? [w-KA01 3/1 ಪು. 8-10]
8. ದೈವಿಕ ವಿವೇಕವು ಎಲ್ಲರಿಗೂ ಲಭ್ಯವಿದೆ ಎಂಬುದನ್ನು ಜ್ಞಾನೋಕ್ತಿ 8:1-3 ಹೇಗೆ ತೋರಿಸುತ್ತದೆ, ಮತ್ತು ಕೊಲೊಸ್ಸೆ 2:3ಕ್ಕನುಸಾರ ಅದನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? [w-KA01 3/15 ಪು. 25, 28]
9. ನಾವು ದೇವರ ಹೆಸರನ್ನು ಹೇಗೆ ಪ್ರಸಿದ್ಧಪಡಿಸಸಾಧ್ಯವಿದೆ? (ಯೋಹಾನ 17:6) [be-KA ಪು. 273-5]
10. “ರಾಜ್ಯದ ಈ ಸುವಾರ್ತೆಯ” ಕುರಿತು ಜನರು ಯಾವ ಮುಖ್ಯ ವಿವರಗಳನ್ನು ತಿಳಿಯಬೇಕಾಗಿದೆ? (ಮತ್ತಾ. 24:14) [be-KA ಪು. 279-80]
ಸಾಪ್ತಾಹಿಕ ಬೈಬಲ್ ವಾಚನ
11. (ಎ) ಪ್ರಥಮ ಶತಮಾನದಲ್ಲಿ, ಮಾರ್ಕ 13:14ರಲ್ಲಿ ತಿಳಿಸಲ್ಪಟ್ಟ “ಅಸಹ್ಯವಸ್ತು” ಏನಾಗಿತ್ತು?
12. ಮಾಂಸಿಕ ರೀತಿಯಲ್ಲಿ ಯೇಸು ದಾವೀದನ ಹಕ್ಕುಬಾಧ್ಯಸ್ಥನಾಗಿದ್ದನು ಎಂಬುದನ್ನು ಲೂಕನ ಸುವಾರ್ತೆಯು ಹೇಗೆ ದೃಢೀಕರಿಸುತ್ತದೆ? (ಲೂಕ 3:23-38) [w-KA93 4/1 ಪು. 9 ಪ್ಯಾರ. 3]
13. ಲೂಕ 12:2ರಲ್ಲಿ ದಾಖಲೆಯಾದ ಯೇಸುವಿನ ಹೇಳಿಕೆಯ ಅರ್ಥವೇನಾಗಿತ್ತು?
14. ಕಳೆದುಹೋದ ಪಾವಲಿಯ ಕುರಿತಾದ ಯೇಸುವಿನ ಸಾಮ್ಯದಲ್ಲಿ, ದೇವದೂತರ ಪ್ರತಿಕ್ರಿಯೆಯು ಏಕೆ ಗಮನಾರ್ಹವಾಗಿದೆ? (ಲೂಕ 15:10) ಅವರ ಮಾದರಿಯು ನಮ್ಮನ್ನು ಹೇಗೆ ಪ್ರಭಾವಿಸಬೇಕು?
15. ಲೂಕ 22:29ರಲ್ಲಿ ಯಾವ ಎರಡು ಒಡಂಬಡಿಕೆಗಳ ಕುರಿತು ತಿಳಿಸಲಾಗಿದೆ?