ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/03 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2003 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಏಪ್ರಿಲ್‌ 14ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 21ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 28ರಿಂದ ಆರಂಭವಾಗುವ ವಾರ
  • ಮೇ 5ರಿಂದ ಆರಂಭವಾಗುವ ವಾರ
2003 ನಮ್ಮ ರಾಜ್ಯದ ಸೇವೆ
km 4/03 ಪು. 2

ಸೇವಾ ಕೂಟದ ಶೆಡ್ಯೂಲ್‌

ಏಪ್ರಿಲ್‌ 14ರಿಂದ ಆರಂಭವಾಗುವ ವಾರ

ಗೀತೆ 8 (53)

15 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಏಪ್ರಿಲ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದರ ಕುರಿತಾದ ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ, ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು.

10 ನಿ:  ಪ್ರಶ್ನಾ ಚೌಕ. ಒಬ್ಬ ಹಿರಿಯನಿಂದ ಭಾಷಣ.

20 ನಿ:  “ಜ್ಯೋತಿರ್ಮಂಡಲಗಳಂತೆ ಹೊಳೆಯುವುದು.”a ಜೂನ್‌ 1, 1997ರ ಕಾವಲಿನಬುರುಜು, ಪು. 14-15, ಪ್ಯಾರ. 8-13ರಲ್ಲಿರುವ ವಿಷಯಗಳನ್ನಾಧರಿಸಿ ಐದು ನಿಮಿಷದ ಭಾಷಣವನ್ನು ಕೊಡಿರಿ. ನಾವು ರಾಜ್ಯದ ಸಂದೇಶವನ್ನು ಜನರಿಂದ ಏಕೆ ಗುಪ್ತವಾಗಿಡುವುದಿಲ್ಲ ಎಂಬುದನ್ನು ಒತ್ತಿಹೇಳಿರಿ.

ಗೀತೆ 28 (224) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 21ರಿಂದ ಆರಂಭವಾಗುವ ವಾರ

ಗೀತೆ 2 (15)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ.

15 ನಿ:  “ನಿಮಗೆ ನಿಮ್ಮ ಮನೆಯನ್ನು ಲಭ್ಯಗೊಳಿಸುವ ಸಾಧ್ಯತೆ ಇದೆಯೆ?” ಪುಸ್ತಕ ಅಧ್ಯಯನ ಮೇಲ್ವಿಚಾರಕನಿಂದ ಭಾಷಣ. 2001 ಮೇ ಮತ್ತು 1990 ಮಾರ್ಚ್‌ ತಿಂಗಳ (ಇಂಗ್ಲಿಷ್‌) ನಮ್ಮ ರಾಜ್ಯದ ಸೇವೆಯ ಪ್ರಶ್ನಾ ಚೌಕಗಳಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ. ಸಭೆಯಲ್ಲಿರುವ ಪುಸ್ತಕ ಅಧ್ಯಯನ ಗುಂಪುಗಳ ಸಂಖ್ಯೆಯನ್ನು ಮತ್ತು ಅದರ ಸರಾಸರಿ ಹಾಜರಿಯನ್ನು ತಿಳಿಸಿರಿ. ಒಬ್ಬರು ಅಥವಾ ಇಬ್ಬರು ಪ್ರಚಾರಕರು, ಅವರ ಮನೆಯಲ್ಲಿ ಪುಸ್ತಕ ಅಧ್ಯಯನವನ್ನು ನಡಿಸುವುದರಿಂದ ಅವರಿಗೂ ಅವರ ಕುಟುಂಬಕ್ಕೂ ಸಿಕ್ಕಿದ ಪ್ರಯೋಜನಗಳನ್ನು ತಿಳಿಸುವಂತೆ ಮುಂಚಿತವಾಗಿಯೇ ಏರ್ಪಡಿಸಿರಿ. ಈ ಉದ್ದೇಶಕ್ಕಾಗಿ ತಮ್ಮ ಮನೆಯನ್ನು ಲಭ್ಯಗೊಳಿಸಬಯಸುವವರು ಅದನ್ನು ಮೇಲ್ವಿಚಾರಕರಿಗೆ ತಿಳಿಸತಕ್ಕದ್ದು.

20 ನಿ:  “ಆಸ್ಪದ ಮಾಡಿಕೊಡಲಿ.”b ತಮ್ಮ ಅವಿವಾಹಿತತನವನ್ನು ರಾಜ್ಯದ ಅಭಿರುಚಿಗಳನ್ನು ಅಭಿವೃದ್ಧಿಗೊಳಿಸಲು ಉಪಯೋಗಿಸುತ್ತಿರುವ ಒಬ್ಬರು ಅಥವಾ ಇಬ್ಬರನ್ನು ಇಂಟರ್‌ವ್ಯೂ ಮಾಡಿರಿ. ಅವರ ಸೇವೆಯಲ್ಲಿ ತೃಪ್ತಿಯನ್ನು ಪಡೆಯಲು ಅವರಿಗೆ ಯಾವುದು ಸಹಾಯಮಾಡಿತು ಎಂಬುದನ್ನು ಕೇಳಿರಿ.

ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 28ರಿಂದ ಆರಂಭವಾಗುವ ವಾರ

ಗೀತೆ 7 (51)

10 ನಿ:  ಸ್ಥಳಿಕ ಪ್ರಕಟನೆಗಳು. ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಲ್ಲಿ ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಮೇ 1ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದನ್ನು ತೋರಿಸಿರಿ.

15 ನಿ:  ದೇವರನ್ನು ಆರಾಧಿಸಿರಿ ಪುಸ್ತಕವನ್ನು ವಿಮರ್ಶಿಸಿರಿ. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಈ ಹೊಸ ಪುಸ್ತಕವನ್ನು ಎರಡನೆಯ ಅಧ್ಯಯನ ಪುಸ್ತಕವಾಗಿ ಉಪಯೋಗಿಸುವ ಏರ್ಪಾಡಿನ ಕುರಿತು ವಿವರಿಸಿರಿ. (km 6/00 ಪು. 4 ಪ್ಯಾರ. 5-6) ಈ ಪುಸ್ತಕವನ್ನು ಓದಿ ಆನಂದಿಸಿದ ಅಂಶಗಳ ಕುರಿತು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ದೇವರ ವಾಕ್ಯದ ಕುರಿತು ಮನನಮಾಡುವಂತೆ ವಿದ್ಯಾರ್ಥಿಗಳನ್ನು ಪ್ರಚೋದಿಸಲು, ಪುಸ್ತಕದ ಕೆಲವೊಂದು ಭಾಗಗಳಲ್ಲಿ ಪ್ರಶ್ನೆಗಳು ಮತ್ತು ಶಾಸ್ತ್ರವಚನಗಳು ಉಪಯೋಗಿಸಲ್ಪಟ್ಟಿವೆ. ಪು. 47-9, ಪ್ಯಾರ. 13ರಲ್ಲಿ ಕಂಡುಬರುವ ಉದಾಹರಣೆಯನ್ನು ತೋರಿಸಿರಿ.

20 ನಿ:  “ಪುನರ್ಭೇಟಿಗಳು ಬೈಬಲ್‌ ಅಧ್ಯಯನಗಳಿಗೆ ನಡೆಸುತ್ತವೆ.”c ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡಬೇಕು. ಈ ಅಂಶವನ್ನು ಬೆಂಬಲಿಸುವಂತಹ, ಕ್ಷೇತ್ರ ಸೇವೆಯಲ್ಲಾದ ಅನುಭವಗಳನ್ನು ಸಂಕ್ಷಿಪ್ತವಾಗಿ ತಿಳಿಸುವಂತೆ ಸಭಿಕರನ್ನು ಉತ್ತೇಜಿಸಿರಿ. ಪ್ಯಾರ. 5ನ್ನು ಚರ್ಚಿಸುವಾಗ, ಬೈಬಲ್‌ ಅಧ್ಯಯನಕ್ಕೆ ನಡಿಸಿದ, ಸ್ಥಳಿಕ ಟೆರಿಟೊರಿಯಲ್ಲಾದ ಒಂದು ಅನುಭವವನ್ನು ಪುನರ್‌ಅಭಿನಯಿಸಿರಿ.

ಗೀತೆ 18 (162) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 5ರಿಂದ ಆರಂಭವಾಗುವ ವಾರ

ಗೀತೆ 25 (204)

10 ನಿ:  ಸ್ಥಳಿಕ ಪ್ರಕಟನೆಗಳು. “ರಾಜ್ಯ ಸಭಾಗೃಹದ ಲೈಬ್ರರಿಗಾಗಿ ಹೊಸ ಏರ್ಪಾಡು” ಎಂಬ ಭಾಗದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿರಿ. ರಾಜ್ಯ ಸಭಾಗೃಹದ ಲೈಬ್ರರಿಯ ಉಸ್ತುವಾರಿಯನ್ನು ನೋಡಿಕೊಳ್ಳುವವರಾಗಿ ಯಾರು ಸೇವೆಸಲ್ಲಿಸುತ್ತಿದ್ದಾರೆ ಎಂಬುದನ್ನು ಸಭೆಗೆ ತಿಳಿಯಪಡಿಸಿರಿ.

20 ನಿ:  “‘ದೇವರನ್ನು ಘನಪಡಿಸಿರಿ’​—⁠2003ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.”d ಪ್ಯಾರಾಗ್ರಾಫ್‌ 4-12ರ ಮೇಲೆ ಕೇಂದ್ರೀಕರಿಸುತ್ತಾ, ಸೆಕ್ರಿಟರಿಯು ನಿರ್ವಹಿಸುವ ಭಾಗ. ಪ್ಯಾರಾಗ್ರಾಫ್‌ 9-10ನ್ನು ಆವರಿಸುವಾಗ, ಸಭೆಯಲ್ಲಿರುವ ಅಧಿವೇಶನ ಸಂಘಟಕನಾಗಿ ಸೇವೆಸಲ್ಲಿಸುವ ಸೆಕ್ರಿಟರಿಯ ಪಾತ್ರದ ಪ್ರಾಮುಖ್ಯತೆಯನ್ನು ತಿಳಿಸಿರಿ. ಈ ವರ್ಷದ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಈಗಲೇ ತಯಾರಿಗಳನ್ನು ಮಾಡಲಾರಂಭಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ.

15 ನಿ:  ಒಳ್ಳೇ ಸುದ್ದಿ​—⁠ಹೃದಯಕ್ಕೆ ಆನಂದ. (ಜ್ಞಾನೋ. 15:30) ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳುಗಳಲ್ಲಿ ವಿಶೇಷ ಪ್ರಯತ್ನದ ಮೂಲಕ ಸಭೆಯು ಏನನ್ನು ಸಾಧಿಸಶಕ್ತವಾಯಿತು ಎಂಬುದನ್ನು ತೋರಿಸುತ್ತಾ, ಸಭಿಕರೊಂದಿಗೆ ಚರ್ಚೆ. ಈ ಕೆಳಗೆ ತಿಳಿಸಲಾದ ಕ್ಷೇತ್ರಗಳಲ್ಲಿ ದೊರೆತ ಸಕಾರಾತ್ಮಕ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಪ್ರೋತ್ಸಾಹಿಸಿರಿ: (1) ಆಸಕ್ತ ವ್ಯಕ್ತಿಯೊಬ್ಬನನ್ನು ಜ್ಞಾಪಕಾಚರಣೆಗೆ ಹಾಜರಾಗುವಂತೆ ಸಹಾಯಮಾಡುವುದು, (2) ಆಕ್ಸಿಲಿಯರಿ ಪಯನೀಯರಾಗಿ ಸೇವೆಸಲ್ಲಿಸುವುದು, (3) ನಿಷ್ಕ್ರಿಯ ಪ್ರಚಾಕರನು ಸಭೆಯೊಂದಿಗೆ ಪುನಃ ಅವನ ಚಟುವಟಿಕೆಯನ್ನು ಆರಂಭಿಸುವಂತೆ ಉತ್ತೇಜಿಸುವುದು, (4) ಸಾರಲು ಆರಂಭಿಸುವಂತೆ ಹೊಸಬರಿಗೆ ಸಹಾಯಮಾಡುವುದು, (5) ಜ್ಞಾಪಕಾಚರಣೆಗೆ ಹಾಜರಾದವರ ಆಸಕ್ತಿಯನ್ನು ಬೆಳೆಸುವುದು. ಕೆಲವು ಪ್ರಚಾರಕರು ಹೇಳಿಕೆ ನೀಡುವಂತೆ ಮುಂಚಿತವಾಗಿಯೇ ಏರ್ಪಡಿಸಿರಿ. ಈಗಾಗಲೇ ಮಾಡಿರುವ ಪ್ರಯತ್ನಗಳಿಗಾಗಿ ಶ್ಲಾಘಿಸಿರಿ, ಮತ್ತು ಈ ಪ್ರಯತ್ನಗಳನ್ನು ಮುಂದಕ್ಕೂ ಮಾಡುತ್ತಾ ಇರುವಂತೆ ಉತ್ತೇಜಿಸಿರಿ.

ಗೀತೆ 3 (32) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ