ಸೇವಾ ಕೂಟದ ಶೆಡ್ಯೂಲ್
ಸೂಚನೆ: ನಮ್ಮ ರಾಜ್ಯದ ಸೇವೆಯು, ಅಧಿವೇಶನದ ತಿಂಗಳುಗಳಲ್ಲಿ ಪ್ರತಿಯೊಂದು ವಾರಕ್ಕಾಗಿ ಒಂದು ಸೇವಾ ಕೂಟವನ್ನು ಶೆಡ್ಯೂಲ್ ಮಾಡುವುದು. “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಅನುಮತಿಸುವಂತೆ ಅಗತ್ಯವಿರುವ ಹೊಂದಾಣಿಕೆಗಳನ್ನು ಸಭೆಗಳು ಮಾಡಿಕೊಳ್ಳಬಹುದು. ಸೂಕ್ತವಾಗಿರುವಲ್ಲಿ, ಅಧಿವೇಶನಕ್ಕೆ ಹಾಜರಾಗುವ ಮುಂಚಿನ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿರುವ ಸ್ಥಳಿಕವಾಗಿ ಅನ್ವಯಿಸುವ ಸೂಚಿತ ಸಲಹೆಯನ್ನು ಪುನರಾವರ್ತಿಸಲು 15 ನಿಮಿಷಗಳನ್ನು ಉಪಯೋಗಿಸಿರಿ. ಜನವರಿ ತಿಂಗಳಿನಲ್ಲಿ, ಅಧಿವೇಶನ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಇಡೀ ಸೇವಾ ಕೂಟವನ್ನು ಏರ್ಪಡಿಸಲಾಗುವುದು. ಆ ಚರ್ಚೆಗೆ ತಯಾರಿಯೋಪಾದಿ, ಅಧಿವೇಶನದಲ್ಲಿ ನಾವೆಲ್ಲರೂ ಅರ್ಥಭರಿತ ಟಿಪ್ಪಣಿಗಳನ್ನು ಬರೆದುಕೊಳ್ಳಸಾಧ್ಯವಿದೆ. ಇದರೊಂದಿಗೆ ನಮ್ಮ ಸ್ವಂತ ಜೀವಿತದಲ್ಲಿ ಹಾಗೂ ಕ್ಷೇತ್ರ ಸೇವೆಯಲ್ಲಿ ನಾವು ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಲು ಬಯಸುವ ನಿರ್ದಿಷ್ಟ ಅಂಶಗಳನ್ನೂ ಪಟ್ಟಿಮಾಡಿಕೊಳ್ಳಸಾಧ್ಯವಿದೆ. ಅಧಿವೇಶನಕ್ಕೆ ಹಾಜರಾದಂದಿನಿಂದ ನಾವು ಆ ಸಲಹೆಗಳನ್ನು ಹೇಗೆ ಅನ್ವಯಿಸಿಕೊಂಡಿದ್ದೇವೆ ಎಂಬುದನ್ನೂ ನಾವು ವಿವರಿಸಸಾಧ್ಯವಿದೆ. ಅಧಿವೇಶನದಲ್ಲಿ ಪಡೆದುಕೊಂಡ ಒಳ್ಳೇ ಬೋಧನೆಯಿಂದ ತಾವು ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದೇವೆ ಎಂಬುದನ್ನು ಕೇಳಿಸಿಕೊಳ್ಳುವುದು ಪರಸ್ಪರ ಉತ್ತೇಜನದಾಯಕವಾಗಿದೆ.
ಸೆಪ್ಟೆಂಬರ್ 9ರಿಂದ ಆರಂಭವಾಗುವ ವಾರ
ಗೀತೆ 4 (43)
12 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೊದಲನೆಯದ್ದು.) ಮತ್ತು ಸೆಪ್ಟೆಂಬರ್ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬೇಕು ಎಂಬುದರ ಎರಡು ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದರಲ್ಲಿಯೂ, “ಯೆಹೋವನ ಸಾಕ್ಷಿಗಳಲ್ಲಿ ನನಗೆ ಅಭಿರುಚಿಯಿಲ್ಲ” ಎಂಬ ಸಂಭಾಷಣಾ ತಡೆಗಟ್ಟನ್ನು ನಿಭಾಯಿಸುವ ವಿಭಿನ್ನ ವಿಧಾನವನ್ನು ತೋರಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ ಪುಟ 9ನ್ನು ನೋಡಿರಿ.
16 ನಿ: “ಯೆಹೋವನನ್ನು ಘನಪಡಿಸಲು ಇತರರಿಗೆ ಸಹಾಯಮಾಡುವುದು.”a ಸಮಯವು ಅನುಮತಿಸಿದಂತೆ, ತರ್ಕಿಸುವುದು# ಎಂಬ ಪುಸ್ತಕದ 196-9ನೇ ಪುಟಗಳಲ್ಲಿರುವ ಒಂದೆರಡು ಪ್ರಾಯೋಗಿಕ ಅಂಶಗಳನ್ನು ತಿಳಿಸಿರಿ.
17 ನಿ: ಕಳೆದ ವರ್ಷ ನಾವು ಏನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕನಿಂದ ಭಾಷಣ. 2002ನೇ ಸೇವಾ ವರ್ಷಕ್ಕಾಗಿರುವ ಸಭಾ ವರದಿಯ ಮುಖ್ಯಾಂಶಗಳನ್ನು ತಿಳಿಸಿರಿ. ಸಾಧಿಸಲ್ಪಟ್ಟ ಒಳ್ಳೇ ಕಾರ್ಯಗಳಿಗಾಗಿ ಪ್ರತಿಯೊಬ್ಬರನ್ನು ಪ್ರಶಂಸಿಸಿರಿ. ಕೂಟಗಳ ಹಾಜರಿಯಲ್ಲಿ, ಪುನರ್ಭೇಟಿಗಳು ಹಾಗೂ ಬೈಬಲ್ ಅಧ್ಯಯನ ಚಟುವಟಿಕೆಯಲ್ಲಿ, ಹಾಗೂ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಸಭೆಯು ಹೇಗೆ ಕಾರ್ಯನಡಿಸಿದೆ ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಮತ್ತು ಪ್ರಗತಿಗಾಗಿರುವ ಪ್ರಾಯೋಗಿಕ ಸಲಹೆಗಳನ್ನು ನೀಡಿರಿ. ಮುಂದಿನ ವರ್ಷಕ್ಕಾಗಿ ಸಾಧಿಸಲು ಸಾಧ್ಯವಿರುವ ಗುರಿಗಳನ್ನು ಇಡಿರಿ.
ಗೀತೆ 16 (143) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 16ರಿಂದ ಆರಂಭವಾಗುವ ವಾರ
ಗೀತೆ 9 (37)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
17 ನಿ: “ವಿಶೇಷ ರೀತಿಯ ಪ್ರೋತ್ಸಾಹ ವಿನಿಮಯ.” ಒಂದು ಭಾಷಣ. ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಕಾತುರ ಹಾಗೂ ಗಣ್ಯತೆಯನ್ನು ಮೂಡಿಸಿರಿ. ಮೊದಲನೆಯ ದಿನದ ಬೆಳಗ್ಗಿನ ಕಾರ್ಯಕ್ರಮದಿಂದ ಹಿಡಿದು ಮೂರನೆಯ ದಿನದ ಮಧ್ಯಾಹ್ನದ ಕಾರ್ಯಕ್ರಮದ ವರೆಗೆ, ಪ್ರತಿಯೊಂದು ಸೆಷನ್‌ಗೆ ಹಾಜರಿರುವಂತೆ ಎಲ್ಲರನ್ನೂ ಉತ್ತೇಜಿಸಿರಿ.
18 ನಿ: “ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ.”b ನಮ್ಮ ಪ್ರಯೋಜನಕ್ಕಾಗಿ ಮಾಡಲ್ಪಟ್ಟಿರುವ ರೂಮಿಂಗ್ ಏರ್ಪಾಡುಗಳಿಗನುಸಾರ ನಡೆಯುವ ಆವಶ್ಯಕತೆಯನ್ನು ಒತ್ತಿಹೇಳಿರಿ. 2ನೆಯ ಪ್ಯಾರಗ್ರಾಫ್‌ನಲ್ಲಿರುವ ಆರು ಮರುಜ್ಞಾಪನಗಳನ್ನು ಒತ್ತಿಹೇಳಿರಿ. ಪ್ರತಿಯೊಬ್ಬರೂ ಒಳ್ಳೇ ನಡತೆಯನ್ನು ತೋರಿಸುವುದು ಏಕೆ ಅತ್ಯಗತ್ಯ ಎಂಬುದನ್ನು ವಿವರಿಸಿರಿ.
ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 23ರಿಂದ ಆರಂಭವಾಗುವ ವಾರ
ಗೀತೆ 1 (13)
12 ನಿ: ಸ್ಥಳಿಕ ಪ್ರಕಟನೆಗಳು. ಮುಂದಿನ ವಾರದ ಸೇವಾ ಕೂಟಕ್ಕಾಗಿ ಸಿದ್ಧತೆಯಲ್ಲಿ, ಕಳೆದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದಲ್ಲಿ ಬರೆದುಕೊಂಡಂಥ ಟಿಪ್ಪಣಿಗಳನ್ನು ಪುನರ್ವಿಮರ್ಶಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೂರನೆಯದ್ದು.) ಪತ್ರಿಕೆಯನ್ನು ಹೇಗೆ ನೀಡುವುದು ಎಂಬುದನ್ನು ಒಬ್ಬ ಶುಶ್ರೂಷಾ ಸೇವಕನು ತೋರಿಸಲಿ ಮತ್ತು ಅಕ್ಟೋಬರ್ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದೆಂಬುದನ್ನು ಒಬ್ಬ ಹಿರಿಯನು ಪ್ರತ್ಯಕ್ಷಾಭಿನಯಿಸಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ಬಳಿಕ, ಮನೆಯವನ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಂಥ ಆರಂಭದ ಒಂದೆರಡು ಹೇಳಿಕೆಗಳನ್ನು ಪುನಃ ಹೇಳಿರಿ.
15 ನಿ: “ನಿಮ್ಮ ಆತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳಿ.” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಅಧಿವೇಶನದ ಕಾರ್ಯಕ್ರಮಕ್ಕೆ ಎಲ್ಲರೂ ಏಕೆ ನಿಕಟವಾದ ಗಮನವನ್ನು ಕೊಡಬೇಕು ಎಂಬುದಕ್ಕಾಗಿರುವ ಕಾರಣಗಳನ್ನು ಪರಿಗಣಿಸಿರಿ. ನಾವು ಕೇವಲ ಕೇಳಿಸಿಕೊಳ್ಳುವುದಕ್ಕೆ ಬದಲಾಗಿ, ಕೇಳಿಸಿಕೊಂಡದ್ದನ್ನು ಅನ್ವಯಿಸಿಕೊಳ್ಳುವ ಆವಶ್ಯಕತೆಯನ್ನು ಒತ್ತಿಹೇಳಿರಿ. ಜನವರಿ ತಿಂಗಳಿನಲ್ಲಿ ಒಂದು ಸೇವಾ ಕೂಟಕ್ಕಾಗಿ ಏನನ್ನು ಯೋಜಿಸಲಾಗಿದೆ ಎಂಬುದರ ಕುರಿತಾದ ಸೂಚನೆಯನ್ನು ಪರಿಗಣಿಸಿರಿ. ಎಲ್ಲರೂ ಟಿಪ್ಪಣಿಗಳನ್ನು ಬರೆದುಕೊಳ್ಳುವಂತೆ ಉತ್ತೇಜಿಸಿರಿ. ಕಳೆದ ವರ್ಷದ ಕಾರ್ಯಕ್ರಮದಿಂದ ಪಡೆದುಕೊಂಡ ಪ್ರಯೋಜನಗಳ ಕುರಿತು ಕೆಲವೊಂದು ಹೇಳಿಕೆಗಳನ್ನು ನೀಡುವಂತೆ ಕರೆಕೊಡಿರಿ.
18 ನಿ: “ಶುದ್ಧತೆಯು ಯೆಹೋವನಿಗೆ ಮಹಿಮೆಯನ್ನು ತರುತ್ತದೆ.”c ಇದನ್ನು ಒಬ್ಬ ಹಿರಿಯನು ನಿರ್ವಹಿಸತಕ್ಕದ್ದು; ಪ್ರತಿಯೊಂದು ಪ್ಯಾರಗ್ರಾಫನ್ನು ಚರ್ಚಿಸಿದ ಬಳಿಕ, ಅವನು ಆ ಪ್ಯಾರಗ್ರಾಫನ್ನು ಓದುವನು. ಇಡೀ ಅಧಿವೇಶನದಲ್ಲಿ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವೈಯಕ್ತಿಕ ತೋರಿಕೆಯ ವಿಷಯದಲ್ಲಿ ಜಾಗರೂಕರಾಗಿರುವುದು ಏಕೆ ಪ್ರಾಮುಖ್ಯವಾಗಿದೆ ಎಂಬುದನ್ನು ಗಣ್ಯಮಾಡಲು ಎಲ್ಲರಿಗೂ ಸಹಾಯಮಾಡಿರಿ.
ಗೀತೆ 17 (187) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 30ರಿಂದ ಆರಂಭವಾಗುವ ವಾರ
ಗೀತೆ 4 (43)
5 ನಿ: ಸ್ಥಳಿಕ ಪ್ರಕಟನೆಗಳು. ಸೆಪ್ಟೆಂಬರ್ ತಿಂಗಳಿಗಾಗಿ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.
15 ನಿ: ನಮ್ಮ ಪತ್ರಿಕೆಗಳನ್ನು ಯಾವುದು ಅಪೂರ್ವವಾದದ್ದಾಗಿ ಮಾಡುತ್ತದೆ? ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಅಕ್ಟೋಬರ್ ತಿಂಗಳಿನಲ್ಲಿ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಲಿರುವೆವು. ಈ ಪತ್ರಿಕೆಗಳು ಏಕೆ ಅಪೂರ್ವವಾಗಿವೆ ಎಂಬುದಕ್ಕಿರುವ ಕಾರಣಗಳನ್ನು ಚರ್ಚಿಸಿರಿ: (1) ಅವು ಯೆಹೋವನ ಹೆಸರನ್ನು ಉನ್ನತಿಗೇರಿಸುತ್ತವೆ. (2) ಅವು ಯೇಸುವಿನಲ್ಲಿ ನಂಬಿಕೆಯನ್ನು ಇಡುವಂತೆ ಪ್ರೋತ್ಸಾಹಿಸುತ್ತವೆ. (3) ಅವು ದೇವರ ರಾಜ್ಯವನ್ನು ಘೋಷಿಸುತ್ತವೆ. (4) ಅವು ಅಂತಿಮ ಅಧಿಕಾರದೋಪಾದಿ ಬೈಬಲಿನ ಕಡೆಗೆ ಗಮನವನ್ನು ನಿರ್ದೇಶಿಸುತ್ತವೆ. (5) ಅವು ಬೈಬಲ್ ಪ್ರವಾದನೆಯ ನೆರವೇರಿಕೆಯನ್ನು ವಿವರಿಸುತ್ತವೆ. (6) ಅವು ಲೋಕ ಘಟನೆಗಳ ಹಿಂದಿರುವ ನಿಜಾರ್ಥವನ್ನು ವಿವರಿಸುತ್ತವೆ. (7) ಅವು ಇಂದಿನ ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದು ಎಂಬುದನ್ನು ತೋರಿಸುತ್ತವೆ. (8) ಅವು ಜೀವನದ ಎಲ್ಲ ಅಂತಸ್ತುಗಳ ಜನರ ಆಸಕ್ತಿಯನ್ನು ಕೆರಳಿಸುತ್ತವೆ. (9) ಅವು ರಾಜಕೀಯ ವಿಷಯಗಳಲ್ಲಿ ತಟಸ್ಥವಾಗಿವೆ. ಎರಡು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳನ್ನು ಪ್ರಸ್ತುತಪಡಿಸಿರಿ. ಅವುಗಳಲ್ಲಿ ಪ್ರತಿಯೊಂದು ಪ್ರತ್ಯಕ್ಷಾಭಿನಯವು, ಒಂದು ಸಂಭಾಷಣೆಯನ್ನು ಆರಂಭಿಸಲು ಈ ಅಂಶಗಳಲ್ಲೊಂದನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ತೋರಿಸಲಿ.
25 ನಿ: “ದೇವರಿಗೆ ಭಯಪಟ್ಟು, ಆತನನ್ನು ಘನಪಡಿಸಿರಿ.” (ಪ್ರಕ. 14:7) ಕಳೆದ ಸೇವಾ ವರ್ಷದಲ್ಲಿ ನಡೆದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವನ್ನು ಪುನರ್ವಿಮರ್ಶಿಸುತ್ತಾ, ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಕಲಿತಂಥ ಮುಖ್ಯ ಅಂಶಗಳ ಕುರಿತು ಮತ್ತು ಅವರು ಅವುಗಳನ್ನು ವೈಯಕ್ತಿಕವಾಗಿ ಹಾಗೂ ಕುಟುಂಬ ಗುಂಪುಗಳೋಪಾದಿ ಅನ್ವಯಿಸಲು ಹೇಗೆ ಶಕ್ತರಾದರು ಎಂಬುದರ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. (ಭಾಗಗಳನ್ನು ಮುಂಚಿತವಾಗಿಯೇ ನೇಮಿಸಸಾಧ್ಯವಿದೆ.) ಕಾರ್ಯಕ್ರಮದ ಈ ಭಾಗಗಳ ಕಡೆಗೆ ಗಮನ ಸೆಳೆಯಿರಿ: (1) “ದೇವರ ಭಯವನ್ನು ಬೆಳಸುವಂತೆ ಹೊಸಬರಿಗೆ ಸಹಾಯಮಾಡಿರಿ.” ಜ್ಞಾಪಕಾಚರಣೆಗೆ ಹಾಜರಾದ ಆಸಕ್ತ ಜನರು ಪ್ರಗತಿಯನ್ನು ಮಾಡುವಂತೆ ಹಾಗೂ ಯೆಹೋವನ ಕ್ರಿಯಾಶೀಲ ಸೇವಕರಾಗುವಂತೆ ನಾವು ಅವರಿಗೆ ಹೇಗೆ ಸಹಾಯಮಾಡಸಾಧ್ಯವಿದೆ? (2) “ಯೆಹೋವನ ಭಯ ಅಂದರೆ ಕೆಟ್ಟದ್ದನ್ನು ದ್ವೇಷಿಸುವುದೇ.” (w87 4/15 16-18) ಜ್ಞಾನೋಕ್ತಿ 6:16-19ನೆಯ ವಚನಗಳು, ಯೆಹೋವನು ದ್ವೇಷಿಸುವಂಥ ವಿಷಯಗಳಿಂದ—ಹೆಮ್ಮೆ, ಸುಳ್ಳುಮಾತು, ಪ್ರಾಪಂಚಿಕ ಬೆನ್ನಟ್ಟುವಿಕೆಗಳು, ಅಹಿತಕರ ಮನೋರಂಜನೆ, ಇಂಟರ್‌ನೆಟ್‌ನ ದುರುಪಯೋಗ—ವಿಮುಖರಾಗಲು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ? (3) “ನೀವು ಪ್ರೀತಿಸುವವರ ಇನ್ನೂ ಸಮೀಪಕ್ಕೆ ಬನ್ನಿರಿ.” ನಾವು ಯೆಹೋವನನ್ನು, ಯೇಸುವನ್ನು, ಕುಟುಂಬದ ಸದಸ್ಯರನ್ನು, ಸಭೆಯಲ್ಲಿರುವ ಇತರರನ್ನು ಪ್ರೀತಿಸುತ್ತೇವೆ; ಅವರಿಗೆ ಆಪ್ತರಾಗುವುದು ಲೋಕದಿಂದ ನಮ್ಮನ್ನು ಹೇಗೆ ಕಾಪಾಡುತ್ತದೆ? (4) “ಯೆಹೋವನಿಗೆ ಭಯಪಡಿರಿ, ಮನುಷ್ಯರಿಗಲ್ಲ.” ಯೆಹೋವನ ಮನಸ್ಸಿಗೆ ಅಸಂತೋಷವನ್ನು ಉಂಟುಮಾಡುವ ಭಯವು, ಸಾರುತ್ತಿರುವಾಗ ನಾಚಿಕೆಪಟ್ಟುಕೊಳ್ಳುವ ಸ್ವಭಾವವನ್ನು ಜಯಿಸಲು, ಕೆಲಸದ ಸ್ಥಳದಲ್ಲಿ ಹಾಗೂ ಶಾಲೆಯಲ್ಲಿ ದೈವಿಕ ಮೂಲತತ್ತ್ವಗಳಿಗೆ ಅಂಟಿಕೊಳ್ಳಲು, ಅಥವಾ ಕೂಟಗಳು, ಸಮ್ಮೇಳನಗಳು ಹಾಗೂ ಅಧಿವೇಶನಗಳನ್ನು ತಪ್ಪಿಸಿಕೊಳ್ಳಲಿಕ್ಕಾಗಿ ನಿಮ್ಮ ಧಣಿಯಿಂದ ಬರುವ ಒತ್ತಡವನ್ನು ಪ್ರತಿರೋಧಿಸಲು ನಿಮಗೆ ಹೇಗೆ ಸಹಾಯಮಾಡಿದೆ? (5) “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.” (ಕೀರ್ತ. 119:37; ಇಬ್ರಿ. 4:13) ವಿಪರೀತವಾಗಿ ಕುಡಿಯುವುದು, ಅಶ್ಲೀಲ ಸಾಹಿತ್ಯವನ್ನು ನೋಡುವುದು, ಅಥವಾ ಇತರ ಗುಪ್ತ ಪಾಪಗಳನ್ನು ಮಾಡುವುದರಿಂದ ದೇವಭಯವು ನಮ್ಮನ್ನು ಏಕೆ ತಡೆಯಬೇಕು? (6) “ಯೆಹೋವನ ಭಯದಲ್ಲಿ ನಡೆಯುವುದನ್ನು ಮುಂದುವರಿಸಿರಿ.” ನಿಮ್ಮ ಜೀವಿತದಲ್ಲಿ ಆತನ ಪವಿತ್ರಾತ್ಮವು ಪೂರ್ಣವಾಗಿ ಕಾರ್ಯನಡಿಸುವಂತೆ ಅನುಮತಿಸಿದ್ದಕ್ಕಾಗಿ ಯೆಹೋವನು ನಿಮ್ಮನ್ನು ಹೇಗೆ ಆಶೀರ್ವದಿಸಿದ್ದಾನೆ?—ಕೀರ್ತ. 31:19; 33:18; 34:9, 17; 145:19.
ಗೀತೆ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 7ರಿಂದ ಆರಂಭವಾಗುವ ವಾರ
ಗೀತೆ 18 (162)
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: “ದೇವಪ್ರಭುತ್ವಾತ್ಮಕ ಸಾಧನಸಂಪತ್ತಿಗಾಗಿ ಗಣ್ಯತೆಯನ್ನು ತೋರಿಸಿರಿ.”d ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡಬೇಕು. ಸ್ಥಳಿಕವಾಗಿ ಏನನ್ನು ಗಮನಿಸಲಾಗಿದೆಯೋ ಅದರ ಕುರಿತು ಹಾಗೂ ನಮ್ಮ ಸಾಹಿತ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲಿಕ್ಕಾಗಿ ಸಭೆಯು ಏನು ಮಾಡಸಾಧ್ಯವಿದೆ ಎಂಬುದರ ಕುರಿತಾದ ಹೇಳಿಕೆಗಳನ್ನು ಒಳಗೂಡಿಸಿರಿ. ವಾಸ್ತವದಲ್ಲಿ ಏನು ಅಗತ್ಯವಿದೆಯೋ ಅಷ್ಟಕ್ಕೆ ಮಾತ್ರ ಸಾಹಿತ್ಯ ವಿನಂತಿಗಳನ್ನು ಮಿತಗೊಳಿಸುವಂತೆ ಉತ್ತೇಜಿಸಿರಿ. ಲೋಕವ್ಯಾಪಕ ಕೆಲಸಕ್ಕಾಗಿ ಬೆಂಬಲ ನೀಡುವುದರಲ್ಲಿ ಹಣಕಾಸನ್ನು ದಾನಮಾಡುವ ಸದವಕಾಶವನ್ನು ಮರೆಯದಿರಿ.
20 ನಿ: “‘ವ್ಯರ್ಥ ಕಾರ್ಯಗಳನ್ನು’ ಬೆನ್ನಟ್ಟದಿರಿ.”e 4ನೆಯ ಪ್ಯಾರಗ್ರಾಫನ್ನು ಚರ್ಚಿಸಿದ ಬಳಿಕ, 1999ನೆಯ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ 30-2ನೆಯ ಪ್ಯಾರಗ್ರಾಫ್‌ಗಳಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ. 5ನೆಯ ಪ್ಯಾರಗ್ರಾಫನ್ನು ಚರ್ಚಿಸುವಾಗ, 1994, ಅಕ್ಟೋಬರ್ 1ರ ಕಾವಲಿನಬುರುಜು ಪತ್ರಿಕೆಯ 8ನೆಯ ಪುಟದ ರೇಖಾಚೌಕದಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ. 6ನೆಯ ಪ್ಯಾರಗ್ರಾಫ್‌ನ ಜೊತೆಗೆ, 1999ರ ನವೆಂಬರ್ ತಿಂಗಳ ಪುರವಣಿಯಲ್ಲಿರುವ 18ನೆಯ ಪ್ಯಾರಗ್ರಾಫನ್ನು ಓದಿರಿ.
ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಕನ್ನಡದಲ್ಲಿ ಲಭ್ಯವಿಲ್ಲ.