ಪ್ರಕಟನೆಗಳು
◼ ಆಗಸ್ಟ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?, ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ. ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಎಂಬ ಬ್ರೋಷರುಗಳನ್ನು ನೀಡಬಹುದು. ಸೆಪ್ಟೆಂಬರ್: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? ಎಂಬ ಪುಸ್ತಕ. ಪರ್ಯಾಯ ನೀಡುವಿಕೆಯಾಗಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಅಥವಾ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವನ್ನು ಉಪಯೋಗಿಸಬಹುದು. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಎಲ್ಲಿ ಆಸಕ್ತಿಯು ಕಂಡುಬರುತ್ತದೋ ಅಲ್ಲಿ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ವಿಶೇಷ ಪ್ರಯತ್ನವನ್ನು ಮಾಡುತ್ತಾ, ಅಪೇಕ್ಷಿಸು ಬ್ರೋಷರನ್ನು ನೀಡಿರಿ. ನವೆಂಬರ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಜನರ ಬಳಿ ಈಗಾಗಲೇ ಇವು ಇರುವುದಾದರೆ, ಹಳೆಯ ಪುಸ್ತಕಗಳಲ್ಲೊಂದನ್ನು ನೀಡಬಹುದು.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಸೆಪ್ಟೆಂಬರ್ 1ರಂದು ಅಥವಾ ತದನಂತರ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯನ್ನು ಓದಿದ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಸ್ಟಾಕ್‌ನಲ್ಲಿರುವ ಎಲ್ಲ ಸಾಹಿತ್ಯ ಹಾಗೂ ಪತ್ರಿಕೆಗಳ ವಾರ್ಷಿಕ ಇನ್ವೆಂಟರಿಯನ್ನು, 2002, ಆಗಸ್ಟ್ 31ರಂದು ಅಥವಾ ಅದಕ್ಕೆ ಸಾಧ್ಯವಿರುವಷ್ಟು ಬೇಗನೆ ತಯಾರಿಸತಕ್ಕದ್ದು. ಈ ಇನ್ವೆಂಟರಿಯು ಸಾಹಿತ್ಯ ಸಂಯೋಜಕನಿಂದ ಮಾಸಿಕವಾಗಿ ಮಾಡಲ್ಪಡುವ ಲೆಕ್ಕದಂತೆಯೇ ಇರುವುದು. ಮತ್ತು ಒಟ್ಟು ಮೊತ್ತಗಳನ್ನು ಲಿಟ್‌ರೇಚರ್ ಇನ್ವೆಂಟರಿ ಫಾರ್ಮ್ (S-18)ನಲ್ಲಿ ಭರ್ತಿಮಾಡಬೇಕು. ಸಾಹಿತ್ಯದ ಗುಂಪಿನಲ್ಲಿರುವ ಪ್ರತಿಯೊಂದು ಸಭೆಯ ಪತ್ರಿಕಾ ಸೇವಕರಿಂದ, ಒಟ್ಟಿನಲ್ಲಿ ಸದ್ಯಕ್ಕೆ ಎಷ್ಟು ಪತ್ರಿಕೆಗಳಿವೆ ಎಂಬುದನ್ನು ಕೇಳಿ ತಿಳಿದುಕೊಳ್ಳಬಹುದು. ಪ್ರತಿಯೊಂದು ಸಹಯೋಜಕ ಸಭೆಯು ಮೂರು ಲಿಟ್‌ರೇಚರ್ ಇನ್ವೆಂಟರಿ ಫಾರ್ಮ್ (S-18)ಗಳನ್ನು ಪಡೆದುಕೊಳ್ಳುವುದು. ದಯವಿಟ್ಟು ಮೂಲ ಪ್ರತಿಯನ್ನು ಸೆಪ್ಟೆಂಬರ್ 6ನೆಯ ತಾರೀಖಿನೊಳಗೆ ಸೊಸೈಟಿಗೆ ಅಂಚೆಯ ಮೂಲಕ ಕಳುಹಿಸಿಕೊಡಿ. ಒಂದು ಪ್ರತಿಯನ್ನು ನಿಮ್ಮ ಫೈಲ್‌ಗಳಿಗಾಗಿ ಇಟ್ಟುಕೊಳ್ಳಿ. ಮೂರನೆಯ ಪ್ರತಿಯನ್ನು ಒಂದು ವರ್ಕ್ ಷೀಟ್ ಆಗಿ ಉಪಯೋಗಿಸಬಹುದು. ಸಹಯೋಜಕ ಸಭೆಯ ಸೆಕ್ರಿಟರಿಯು ಇನ್ವೆಂಟರಿಯನ್ನು ಪರಿಶೀಲಿಸಬೇಕು. ಅವರು ಮತ್ತು ಸಹಯೋಜಕ ಸಭೆಯ ಅಧ್ಯಕ್ಷ ಮೇಲ್ವಿಚಾರಕರು ಫಾರ್ಮ್‌ನ ಮೇಲೆ ಸಹಿಹಾಕುವರು.
◼ ಕೆಲವು ಸಂದರ್ಭಗಳಲ್ಲಿ, ಸಭೆಗಳು ಮತ್ತು ವೈಯಕ್ತಿಕ ಪ್ರಚಾರಕರು ಯೆಹೋವನಿಗೆ ನಾವು ಸಲ್ಲಿಸುವ ಆರಾಧನೆಯ ಸಂಬಂಧದಲ್ಲಿ ಕಾನೂನುಬದ್ಧ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ವಿಚಾರಗಳಲ್ಲಿ ನೆರವು ನೀಡಲಿಕ್ಕಾಗಿ, ಸುವಾರ್ತೆಯ ಪರವಾಗಿ ವಾದಿಸುವುದು ಮತ್ತು ನ್ಯಾಯಬದ್ಧವಾಗಿ ಸ್ಥಾಪಿಸುವುದು (ಇಂಗ್ಲಿಷ್) ಎಂಬ ಪುಸ್ತಿಕೆಯು 1950ರಲ್ಲಿ ಪ್ರಕಾಶಿಸಲ್ಪಟ್ಟಿತು. ಈ ಪುಸ್ತಿಕೆಯು ಗತಕಾಲದಲ್ಲಿ ಪ್ರಯೋಜನಕರವಾಗಿತ್ತಾದರೂ, ಅದು ಪ್ರಸ್ತುತಪಡಿಸುವ ಕಾನೂನುಬದ್ಧ ಮಾಹಿತಿಯು ಈಗ ಸದ್ಯೋಚಿತವಾಗಿಲ್ಲ. ಆದುದರಿಂದ, ವೈಯಕ್ತಿಕ ಪ್ರಚಾರಕರು ಮತ್ತು ಹಿರಿಯರ ಮಂಡಲಿಗಳು, ಆ ಪುಸ್ತಿಕೆಯಲ್ಲಿ ಅಡಕವಾಗಿರುವ ಮಾಹಿತಿಯ ಆಧಾರದ ಮೇಲೆ ಕಾನೂನುಬದ್ಧ ವಿಚಾರಗಳನ್ನು ನಿರ್ವಹಿಸಲು ಪ್ರಯತ್ನಿಸಬಾರದು.
◼ ಪತ್ರಗಳು ಮತ್ತು ಪೋಸ್ಟ್ ಕಾರ್ಡ್‌ಗಳ ಮೇಲೆ ಸಾಕಷ್ಟು ಅಂಚೆಚೀಟಿಗಳು ಅಂಟಿಸಲ್ಪಟ್ಟಿರದ ಕಾರಣ, ಪ್ರತಿ ತಿಂಗಳು ಬ್ರಾಂಚ್ ಆಫೀಸು ಗಮನಾರ್ಹ ಮೊತ್ತದ ಹಣವನ್ನು ಅಂಚೆ ದಂಡವಾಗಿ ತೆರುತ್ತಿದೆ. ದಯವಿಟ್ಟು ನೀವು ಬ್ರಾಂಚ್ ಆಫೀಸ್‌ಗೆ ಪತ್ರಗಳನ್ನು ಕಳುಹಿಸುವಾಗ ಅದಕ್ಕೆ ಸರಿಯಾದ ಅಂಚೆಚೀಟಿಗಳನ್ನು ಉಪಯೋಗಿಸಿದ್ದೀರೋ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.