ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಮೇ 6ರಿಂದ ಆಗಸ್ಟ್ 19, 2002ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ಕಾವಲಿನಬುರುಜು ಪತ್ರಿಕೆಯ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬರ್ಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಜನರು ತಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲಸಗಳನ್ನು ಮಾಡುವಂತೆ ಯೆಹೋವನು ಅವರನ್ನು ಪ್ರೇರಿಸುತ್ತಾನೆ ಎಂಬುದಾಗಿ ಯೆರೆಮೀಯ 18:1-6 ತೋರಿಸುತ್ತದೆ. [ವಾರದ ಬೈಬಲ್ ವಾಚನ; w-KA99 4/1 ಪು. 22 ಪ್ಯಾರ. 3-4ನ್ನು ನೋಡಿ.]
2. ದೇವರಿಂದ ಬಂದ ಸತ್ಯ ಎಚ್ಚರಿಕೆಗೆ ಕಿವಿಗೊಡುವ ಬದಲಿಗೆ ಸುಳ್ಳಿಗೆ ಕಿವಿಗೊಡುವಂತೆ ಜನರನ್ನು ಉತ್ತೇಜಿಸುವ ಮೂಲಕ ಸುಳ್ಳು ಪ್ರವಾದಿಗಳು ದೇವರ ವಾಕ್ಯದ ಬಲವನ್ನು ಮತ್ತು ಪರಿಣಾಮಕಾರತೆಯನ್ನು ಕದ್ದುಕೊಂಡರು. (ಯೆರೆ. 23:30) [ವಾರದ ಬೈಬಲ್ ವಾಚನ; w-KA92 5/1 ಪು. 4 ಪ್ಯಾರ. 3ನ್ನು ನೋಡಿ.]
3. ಯೆರೆಮೀಯ 25:15, 16ರಲ್ಲಿ ದಾಖಲಿಸಲ್ಪಟ್ಟ, ‘ಸಕಲ ಜನಾಂಗಗಳನ್ನು . . . ಹುಚ್ಚುಚ್ಚಾಗುವಂತೆ’ ಮಾಡುವ, “ರೋಷರೂಪಮದ್ಯದ ಈ ಪಾತ್ರೆ”ಯು, ಸುಳ್ಳು ಧರ್ಮದ ಹುಚ್ಚಾಗಿಸುವ ಪ್ರಭಾವವನ್ನು ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w-KA94 3/1 ಪು. 20 ಪ್ಯಾರ. 13ನ್ನು ನೋಡಿ.]
4. ಮತ್ತಾಯನು ಯೆರೆಮೀಯನ ಪ್ರವಾದನೆಯನ್ನು ಅನ್ವಯಿಸಿದ ರೀತಿಗನುಸಾರ, “ಶತ್ರುವಿನ ದೇಶ” ಎಂಬುದು ಎಲ್ಲಿಂದ ಮಹಾ ಹೆರೋದನ ಮೂಲಕ ಕೊಲ್ಲಲ್ಪಟ್ಟ ಮಕ್ಕಳು ಪುನರುತ್ಥಾನದಲ್ಲಿ ಹಿಂತಿರುಗಿ ಬರಲಿರುವರೋ ಆ ಮರಣದ ದೇಶವನ್ನು ಸೂಚಿಸುತ್ತದೆ. (ಯೆರೆ. 31:15, 16; ಮತ್ತಾ. 2:17, 18) [ವಾರದ ಬೈಬಲ್ ವಾಚನ; w79 6/15 ಪು. 19 ಪ್ಯಾರ. 13ನ್ನು ನೋಡಿ.]
5. ಕಠಿನ ಆರ್ಥಿಕ ಸಮಯಗಳಲ್ಲಿ ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಪೋಷಿಸಬಲ್ಲನು ಎಂಬ ಆಶ್ವಾಸನೆಯನ್ನು ಯೆರೆಮೀಯ 37:21 ಕೊಡುತ್ತದೆ. [ವಾರದ ಬೈಬಲ್ ವಾಚನ; w-KA97 9/15 ಪು. 3 ಪ್ಯಾರ. 4ರಿಂದ ಪು. 4 ಪ್ಯಾರ. 2ನ್ನು ನೋಡಿ.]
6. ಹೀಬ್ರು ಭಾಷೆಯಲ್ಲಿ, “ಪ್ರಾಯಶ್ಚಿತ್ತ” ಎಂಬ ಪದವು ಒಬ್ಬ ಬಂದಿಯನ್ನು ವಿಮೋಚಿಸಲು ತೆರುವ ಬೆಲೆಯನ್ನು ಸೂಚಿಸುತ್ತದೆ ಹಾಗೂ ಸಮಾನ ಮೊತ್ತವನ್ನು ನಿರ್ದೇಶಿಸುತ್ತದೆ. [kl-KA ಪು. 65 ಪ್ಯಾರ. 11]
7. ಹೆತ್ತವರ ಪಾಪಗಳಿಗಾಗಿ ಯೆಹೋವನು ಮಕ್ಕಳನ್ನು ಶಿಕ್ಷಿಸುತ್ತಾನೆಂಬದನ್ನು ಪ್ರಲಾಪಗಳು 5:7 ಸ್ಪಷ್ಟವಾಗಿ ತೋರಿಸುತ್ತದೆ. [ವಾರದ ಬೈಬಲ್ ವಾಚನ; w88 9/1 ಪು. 27 ರೇಖಾಚೌಕ.]
8. ಜ್ಞಾನವು ತಾನೇ ಒಬ್ಬ ವ್ಯಕ್ತಿಯನ್ನು ರಕ್ಷಿಸುತ್ತದೆ ಎಂದು ಯೆಹೆಜ್ಕೇಲ 9:4ರಲ್ಲಿ ಸೂಚಿಸಲಾದ ಹಣೆಯ ಮೇಲಿನ ಗುರುತು ಅರ್ಥೈಸುತ್ತದೆ. [ವಾರದ ಬೈಬಲ್ ವಾಚನ; w-KA88 11/1 ಪು. 11 ಪ್ಯಾರ. 18ನ್ನು ನೋಡಿ.]
9. ಎಫೆಸ 4:8ರಲ್ಲಿ ತಿಳಿಸಲ್ಪಟ್ಟ ‘ಮನುಷ್ಯರಲ್ಲಿರುವ ದಾನಗಳು’ ಕ್ರೈಸ್ತ ಹಿರಿಯರಾಗಿದ್ದಾರೆ. ಇವರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ ಹಾಗೂ ತಮ್ಮ ಜೊತೆ ವಿಶ್ವಾಸಿಗಳ ಆತ್ಮಿಕ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಇವರಿಗೆ ಅಧಿಕಾರವು ಕೊಡಲ್ಪಟ್ಟಿದೆ. (ಅ. ಕೃ. 20:28) [w-KA00 8/1 ಪು. 6 ಪ್ಯಾರ. 3]
10. ಯೆಹೆಜ್ಕೇಲ 23ನೆಯ ಅಧ್ಯಾಯದ ಆಧುನಿಕ ದಿನದ ಅನ್ವಯದಲ್ಲಿ, ಪ್ರಾಟೆಸ್ಟಂಟ್ ಮತವನ್ನು ಒಹೊಲೀಬಳಿಗೆ ಮತ್ತು ರೋಮನ್ ಕ್ಯಾಥೊಲಿಕ್ ಮತವನ್ನು ಅವಳ ಅಕ್ಕ ಒಹೊಲಳಿಗೆ ಹೋಲಿಸಸಾಧ್ಯವಿದೆ. [ವಾರದ ಬೈಬಲ್ ವಾಚನ; w-KA88 11/1 ಪು. 16 ಪ್ಯಾರ. 22ನ್ನು ನೋಡಿ.]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. “ಪುನರುತ್ಥಾನ” ಎಂಬ ಪದದ ಅಕ್ಷರಾರ್ಥವೇನು? [kl-KA ಪು. 85 ಪ್ಯಾರ. 15]
12. ಲೂಕ 9:23ರ ಆಮಂತ್ರಣಕ್ಕೆ ಪ್ರತಿಕ್ರಿಯೆಯಲ್ಲಿ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞಕ್ಕಾಗಿರುವ ನಿಜವಾದ ಗಣ್ಯತೆಯು ಹೇಗೆ ಪ್ರತಿಬಿಂಬಿಸಲ್ಪಡುತ್ತದೆ? [w-KA00 3/15 ಪು. 8 ಪ್ಯಾರ. 1]
13. ಯಾವ ವಿಧದಲ್ಲಿ ಯೆಹೋವನು ಯೆರೆಮೀಯನನ್ನು ‘ಮರುಳುಗೊಳಿಸಿದನು’? (ಯೆರೆ. 20:7) [ವಾರದ ಬೈಬಲ್ ವಾಚನ; w89 5/1 ಪು. 31 ಪ್ಯಾರ. 6ನ್ನು ನೋಡಿ.]
14. “ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು” ಎಂದು ಯೇಸು ಹೇಳಿದಾಗ, ಅವನು ಏನನ್ನು ಅರ್ಥೈಸಿದನು? (ಯೋಹಾ. 14:26) [w-KA00 4/1 ಪು. 8 ಪ್ಯಾರ. 7-8]
15. ಯೆರೆಮೀಯ 35:18, 19ಕ್ಕನುಸಾರ, ಆಧುನಿಕ ದಿನದ ರೇಕಾಬ್ಯರಿಗೆ ಯಾವ ನಿರೀಕ್ಷೆಯು ಕಾದಿರಿಸಲ್ಪಟ್ಟಿದೆ? [ವಾರದ ಬೈಬಲ್ ವಾಚನ; su ಪು. 131 ಪ್ಯಾರ. 7ನ್ನು ನೋಡಿ.]
16. ಯಾವ ವಿಧದಲ್ಲಿ ನೆಫೀಲಿಯರು “ಮಹಾಶರೀರಿಗಳು” ಹಾಗೂ “ಪರಾಕ್ರಮಶಾಲಿಗಳು” ಆಗಿದ್ದರು? (ಆದಿ. 6:4) [w-KA00 4/15 ಪು. 27 ಪ್ಯಾರ. 9]
17. ಬಾರೂಕನು ತನ್ನ ಆತ್ಮಿಕ ಸಮತೆಯನ್ನು ಕಳೆದುಕೊಂಡದ್ದು ಹೇಗೆ ಮತ್ತು ಅವನ ಅನುಭವದಿಂದ ನಾವು ಯಾವ ಪಾಠವನ್ನು ಕಲಿಯಬಹುದು? (ಯೆರೆ. 45:1-5) [ವಾರದ ಬೈಬಲ್ ವಾಚನ; w-KA97 8/15 ಪು. 21 ಪ್ಯಾರ. 14-16ನ್ನು ನೋಡಿ.]
18. ಯೆರೆಮೀಯ 50:38ರ ಪ್ರವಾದನೆಯು ಯಾವಾಗ ಮತ್ತು ಹೇಗೆ ನೆರವೇರಿತು? [ವಾರದ ಬೈಬಲ್ ವಾಚನ; dp-KA ಪು. 150 ಪ್ಯಾರ. 2-3ನ್ನು ನೋಡಿ.]
19. ಪ್ರಲಾಪಗಳು 1:15ಕ್ಕನುಸಾರ, ‘ಯೆಹೂದದ ಯುವತಿ’ಯಾದ ಯೆರೂಸಲೇಮಿನ ಗತಿಯು, ಕ್ರೈಸ್ತಪ್ರಪಂಚಕ್ಕೆ ಏನನ್ನು ಮುನ್ಸೂಚಿಸುತ್ತದೆ? [ವಾರದ ಬೈಬಲ್ ವಾಚನ; w-KA88 10/1 ಪು. 31ರ ರೇಖಾಚೌಕವನ್ನು ನೋಡಿ.]
20. ಯೆಹೆಜ್ಕೇಲ 21:26ರಲ್ಲಿನ “ಮುಂಡಾಸವನ್ನು ಕಿತ್ತುಬಿಡು! ಕಿರೀಟವನ್ನು ಎತ್ತಿಹಾಕು!” ಎಂಬ ಹೇಳಿಕೆಯ ಸೂಚಿತಾರ್ಥವೇನು? [ವಾರದ ಬೈಬಲ್ ವಾಚನ; w-KA88 11/1 ಪು. 19 ಪ್ಯಾರ. 16ನ್ನು ನೋಡಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ವಿನಯಶೀಲನಾದ ವ್ಯಕ್ತಿಯು _______________ ____________ ಇರುತ್ತಾನೆ ಮತ್ತು ತಾನು ಮಾಡಬೇಕಾದ ಮತ್ತು ಮಾಡಶಕ್ತನಾಗಿರುವ ಕೆಲಸಗಳಿಗೆ _________________________ ಸಹ ಅವನು ಅಂಗೀಕರಿಸುತ್ತಾನೆ. (ಮೀಕ 6:8) [w-KA00 3/15 ಪು. 21 ಪ್ಯಾರ. 1-2]
22. ಪವಿತ್ರಾತ್ಮವು _____________ ಅಥವಾ _______________ ತೆಗೆದುಹಾಕುವುದಿಲ್ಲವಾದರೂ ಅವುಗಳನ್ನು _________________________ ಅದು ನಮಗೆ ಸಹಾಯಮಾಡಬಲ್ಲದು. (1 ಕೊರಿಂ. 10:13; 2 ಕೊರಿಂ. 4:7) [w-KA00 4/1 ಪು. 11 ಪ್ಯಾರ. 6]
23. ಸೃಷ್ಟಿಕರ್ತನೋಪಾದಿ, ಯೆಹೋವ ದೇವರಿಗೆ _________________________ ಮತ್ತು ತನ್ನ _________________________ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಿರೂಪಿಸುವ ಹಕ್ಕಿದೆ. [kl-KA ಪು. 57 ಪ್ಯಾರ. 9]
24. ಯೆಹೋವನು ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಕೊಟ್ಟ ಅನುಮತಿಯು, ದೇವರಿಂದ _________________________, _________________________ ಉಂಟುಮಾಡಿಲ್ಲವೆಂಬುದನ್ನು ರುಜುಪಡಿಸಿದೆ. [kl-KA ಪು. 77 ಪ್ಯಾರ. 18]
25. ಒಂದು ಭಿನ್ನಾಭಿಪ್ರಾಯವನ್ನು ಬಗೆಹರಿಸುವಾಗ ಮಣಿಯುವವರಾಗಿರುವುದರಲ್ಲಿ ಅಬ್ರಹಾಮನ ಮಾದರಿಯು, _________________________ ಅಥವಾ _________________________ ನಮ್ಮ ಸಹೋದರರೊಂದಿಗಿನ ನಮ್ಮ ಅಮೂಲ್ಯವಾದ ಸಂಬಂಧವನ್ನು ಕಡಿದುಹಾಕಲು ಬಿಡದಂತೆ ನಮಗೊಂದು ಉತ್ತೇಜನವಾಗಿದೆ. (ಆದಿ. 13:5-12) [w-KA00 8/15 ಪು. 24 ಪ್ಯಾರ. 3-4]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಯೋಬನು ಯೆಹೋವನ (ಜ್ಞಾನಕ್ಕೆ; ಕರುಣೆಗೆ; ನ್ಯಾಯತೀರ್ಪಿಗೆ) ಮಹತ್ವ ನೀಡಿದ್ದರಿಂದ, ತನ್ನ ಸೇವಕರೊಂದಿಗೆ (ಒಳ ನೋಟದಿಂದ; ಕರುಣೆಯಿಂದ; ನ್ಯಾಯದಿಂದ) ವ್ಯವಹರಿಸಿದನು. (ಯೋಬ 31:13, 14) [w-KA00 3/15 ಪು. 26 ಪ್ಯಾರ. 1]
27. ಯೆರೆಮೀಯ 16:2-4ರಲ್ಲಿ ಪ್ರವಾದಿಗೆ, (ತನ್ನ ಸ್ವತ್ಯಾಗದ ಆತ್ಮವನ್ನು ಪ್ರದರ್ಶಿಸಲು; ಮೆಸ್ಸೀಯನ ಅವಿವಾಹಿತ ಸ್ಥಿತಿಯನ್ನು ಮುನ್ಚಿತ್ರಿಸಲು; ಯೆರೂಸಲೇಮಿನ ನಾಶನದ ಕುರಿತ ಯೆಹೋವನ ವಾಕ್ಯದ ನಿಶ್ಚಿತತೆಯನ್ನು ದೃಢೀಕರಿಸಲು) ಅವಿವಾಹಿತನಾಗಿ ಉಳಿಯುವಂತೆ ಆಜ್ಞಾಪಿಸಲಾಗಿತ್ತು. [ವಾರದ ಬೈಬಲ್ ವಾಚನ; w78 4/15 ಪು. 31 ಪ್ಯಾರ. 2ನ್ನು ನೋಡಿ.]
28. ಜ್ಞಾನೋಕ್ತಿ 4:7ರಲ್ಲಿ ವಿವೇಕವು, (ಸತ್ಯಾಂಶಗಳೊಂದಿಗೆ ಪರಿಚಿತವಾಗಿರುವುದನ್ನು; ಸತ್ಯಾಂಶಗಳು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂಬುದನ್ನು ತಿಳಿದುಕೊಳ್ಳುವುದನ್ನು; ಜ್ಞಾನ ಮತ್ತು ತಿಳಿವಳಿಕೆಗಳನ್ನು ಕಾರ್ಯರೂಪಕ್ಕೆ ಹಾಕುವುದನ್ನು) ಸೂಚಿಸುತ್ತದೆ. [w-KA00 5/15 ಪು. 21 ಪ್ಯಾರ. 1]
29. ಐಗುಪ್ತಕ್ಕೆ ತರಲ್ಪಟ್ಟು ಪೋಟೀಫರನೆಂಬ ಹೆಸರಿನ ಮನುಷ್ಯನಿಗೆ ಮಾರಲ್ಪಟ್ಟಾಗ ಯೋಸೇಫನು ಕೇವಲ (17 ವರ್ಷ; 19 ವರ್ಷ; 21 ವರ್ಷ) ಪ್ರಾಯದವನಾಗಿದ್ದನು. [my-KA ಅಧ್ಯಾಯ 22]
30. ಯೆಹೆಜ್ಕೇಲ ಅಧ್ಯಾಯ 1ರಲ್ಲಿ ವರ್ಣಿಸಲ್ಪಟ್ಟ ದೇವರ ದಿವ್ಯ ರಥವು (ದೇವರ ಮೆಸ್ಸೀಯ ರಾಜ್ಯವನ್ನು; ಯೆಹೋವನ ಆತ್ಮಿಕ ದೇವದೂತ ಸಂಸ್ಥೆಯನ್ನು; ಉಳಿಕೆಯವರೊಂದಿಗೆ ಯೆಹೋವನ ಸಂವಾದವನ್ನು) ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w-KA88 11/1 ಪು. 8 ಪ್ಯಾರ. 5ನ್ನು ನೋಡಿ.]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಇಬ್ರಿ. 12:16, 17; ಲೂಕ 11:41; ಜ್ಞಾನೋ. 5:21; ಯೆರೆ. 46:28; ರೋಮಾ. 15:4
31. ಪವಿತ್ರ ಸಂಗತಿಗಳಿಗೆ ಗಣ್ಯತೆಯನ್ನು ತೋರಿಸಲು ತಪ್ಪಿಹೋಗುವುದು, ವ್ಯಭಿಚಾರದಂತಹ ಹೆಚ್ಚು ಗಂಭೀರವಾದ ಪಾಪಗಳಿಗೆ ನಡಿಸಬಹುದು. [my-KA ಅಧ್ಯಾಯ 17]
32. ಯೆಹೋವನು ಸಾಂತ್ವನವನ್ನು ಒದಗಿಸುವ ಒಂದು ನಿರ್ದಿಷ್ಟ ವಿಧವು, ಭವಿಷ್ಯಕ್ಕಾಗಿರುವ ಅದ್ಭುತಕರ ನಿರೀಕ್ಷೆಯನ್ನು ಒಳಗೊಂಡ ಆತನ ಲಿಖಿತ ವಾಕ್ಯದ ಮೂಲಕವೇ. [w-KA00 4/15 ಪು. 5 ಪ್ಯಾರ. 4]
33. ಹೆತ್ತವರ ಶಿಸ್ತು ನ್ಯಾಯಸಮ್ಮತ ಮಿತಿಗಳನ್ನು ಮೀರಬಾರದು ಅಥವಾ ತಿದ್ದುವ ಮತ್ತು ಕಲಿಸುವ ಉದ್ದೇಶವನ್ನು ದಾಟಿಹೋಗಬಾರದು. [ವಾರದ ಬೈಬಲ್ ವಾಚನ; kl-KA ಪು. 148 ಪ್ಯಾರ. 20ನ್ನು ನೋಡಿರಿ.]
34. ಇತರರನ್ನು ಪ್ರಭಾವಿಸುವ ಇಚ್ಛೆಯಿಂದ ಇರದೆ, ಕೊಡುವಿಕೆಯು ಪ್ರೀತಿಯ ಹೃದಯದಿಂದ ಪ್ರಚೋದಿಸಲ್ಪಡಬೇಕಾಗಿದೆ. [gt-KA ಅಧ್ಯಾಯ 76]
35. ಯಾವುದೇ ರೀತಿಯ ಲೈಂಗಿಕ ಅಶುದ್ಧತೆಯು, ಅದು ಎಷ್ಟೇ ಗುಟ್ಟಾಗಿರುವುದಾದರೂ, ದೇವರ ಕಣ್ಣಿಗೆ ಮರೆಯಾಗಿರುವುದಿಲ್ಲ. [w-KA00 7/15 ಪು. 31 ಪ್ಯಾರ. 3]