ಸೇವಾ ಕೂಟದ ಶೆಡ್ಯೂಲ್
ಜೂನ್ 10ರಿಂದ ಆರಂಭವಾಗುವ ವಾರ
ಗೀತೆ 26 (212)
15 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಜೂನ್ 24ರ ವಾರದ ಸೇವಾ ಕೂಟದ ಚರ್ಚೆಯ ತಯಾರಿಯಾಗಿ ನಮ್ಮ ಸಹೋದರರ ಇಡೀ ಬಳಗ (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡುವಂತೆ ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸಿರಿ. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜೂನ್ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದೆಂಬುದರ ಪ್ರತ್ಯೇಕ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ “ಧರ್ಮದಲ್ಲಿ ನನಗೆ ಆಸಕ್ತಿಯಿಲ್ಲ” ಎಂಬ ಸಂಭಾಷಣಾ ತಡೆಗಟ್ಟನ್ನು ನಿರ್ವಹಿಸುವ ಬೇರೆ ಬೇರೆ ವಿಧಗಳನ್ನು ತೋರಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 9ನೆಯ ಪುಟವನ್ನು ನೋಡಿರಿ.
10 ನಿ: ಪ್ರಶ್ನಾ ರೇಖಾಚೌಕ. ಪೂರ್ತಿ ಲೇಖನವನ್ನೂ ಉಲ್ಲೇಖಿತ ಶಾಸ್ತ್ರವಚನಗಳನ್ನೂ ಓದಿರಿ. ಆಮೇಲೆ, ಮಾರ್ಚ್ 1998ರ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ರೇಖಾಚೌಕದಲ್ಲಿನ ಇತರ ಹೇಳಿಕೆಗಳ ಆಧಾರದ ಮೇಲೆ ವಿಸ್ತರಿಸುತ್ತಾ ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ.
20 ನಿ: “ಹೆಚ್ಚಾಗಿ ಬಿತ್ತುವುದು ಹೆಚ್ಚಿನ ಆಶೀರ್ವಾದಗಳನ್ನು ತರುತ್ತದೆ.”a 1993, ಮಾರ್ಚ್ 1ರ ಕಾವಲಿನಬುರುಜು ಪತ್ರಿಕೆಯ ಪುಟಗಳು 15-16, ಪ್ಯಾರಗ್ರಾಫ್‌ಗಳು 14-17ರ ಮೇಲಾಧರಿತವಾದ ಹೇಳಿಕೆಗಳನ್ನು ಸೇರಿಸಿರಿ.
ಗೀತೆ 29 (222) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 17ರಿಂದ ಆರಂಭವಾಗುವ ವಾರ
ಗೀತೆ 7 (51)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ನಿಮಗಿರುವವುಗಳಲ್ಲಿ ಸಂತೃಪ್ತರಾಗಿರಿ.”b ಈ ಬುದ್ಧಿವಾದಕ್ಕಿರುವ ಶಾಸ್ತ್ರೀಯ ಆಧಾರವನ್ನು ಒತ್ತಿ ಹೇಳಿರಿ. ಸಮಯವು ಅನುಮತಿಸುವಷ್ಟು ಶಾಸ್ತ್ರವಚನಗಳನ್ನು ಓದಿ ಚರ್ಚಿಸಿರಿ.
ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 24ರಿಂದ ಆರಂಭವಾಗುವ ವಾರ
ಗೀತೆ 15 (127)
8 ನಿ: ಸ್ಥಳಿಕ ಪ್ರಕಟನೆಗಳು. ಸೇವೆಯಲ್ಲಿ ಜೊತೆಯಾಗಿ ಕೆಲಸಮಾಡುತ್ತಿರುವ ಒಬ್ಬ ವಿವಾಹಿತ ದಂಪತಿ, ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಜುಲೈ 1ರ ಕಾವಲಿನಬುರುಜು ಪತ್ರಿಕೆಗಳನ್ನು ನೀಡುವುದು ಹೇಗೆಂಬುದನ್ನು ಪ್ರತ್ಯಕ್ಷಾಭಿನಯಿಸುತ್ತಾರೆ. ಗಂಡನು ಎಚ್ಚರ! ಪತ್ರಿಕೆಯನ್ನು ಹಾಗೂ ಹೆಂಡತಿಯು ಕಾವಲಿನಬುರುಜು ಪತ್ರಿಕೆಯನ್ನು ನೀಡುವುದನ್ನು ಪ್ರದರ್ಶಿಸುತ್ತಾರೆ.
12 ನಿ: (1) ಇತರ ಭಾಷೆಗಳನ್ನು ಆಡುವ ಜನರಿಗೆ ಸಾಕ್ಷಿಕೊಡುವಾಗ ಅಥವಾ (2) ಮನೆಯಿಂದ ಮನೆ ಮತ್ತು ಬೀದಿ ಸಾಕ್ಷಿಕಾರ್ಯವಲ್ಲದೆ ಇತರ ಸನ್ನಿವೇಶಗಳಲ್ಲಿ ಸಾಕ್ಷಿಕೊಡುವಾಗ ತಮಗಾದ ಅನುಭವಗಳನ್ನು ಹೇಳುವಂತೆ ಅಥವಾ ಅವುಗಳನ್ನು ಪುನರ್‌ಅಭಿನಯಿಸುವಂತೆ ಸ್ಥಳಿಕ ಪ್ರಚಾರಕರನ್ನು ಕೇಳಿಕೊಳ್ಳಿ. ಮುಂದಿನ ವಾರದ ಸೇವಾ ಕೂಟದ ತಯಾರಿಯಲ್ಲಿ, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನೀಡಲಾಗುವ ಯಾವುದಾದರೊಂದು ಬ್ರೋಷರಿನೊಂದಿಗೆ ಉಪಯೋಗಿಸಬಹುದಾದ ಒಂದು ನಿರೂಪಣೆಯನ್ನು ಆರಿಸಿಕೊಂಡು, ಅದನ್ನು ತಯಾರಿಸಿ ಬರುವಂತೆ ಎಲ್ಲರನ್ನೂ ಉತ್ತೇಜಿಸಿರಿ.—ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ “ಇತರ ಪ್ರಕಾಶನಗಳು” ಎಂಬ ರೇಖಾಚೌಕವನ್ನು ನೋಡಿರಿ.
25 ನಿ: “ನಮ್ಮ ಸಹೋದರರ ಇಡೀ ಬಳಗವನ್ನು ನಾವು ಪ್ರೀತಿಸಲು ಕಾರಣ.” ಯಾವುದೇ ಪೀಠಿಕಾ ಹೇಳಿಕೆಗಳಿಲ್ಲದೆ, ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ಸಭಿಕರೊಂದಿಗೆ ಇಡೀ ಬಳಗ ಎಂಬ ವಿಡಿಯೋವಿನ ಚರ್ಚೆಯನ್ನು ನೇರವಾಗಿ ಆರಂಭಿಸಿರಿ.
ಗೀತೆ 28 (224) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 1ರಿಂದ ಆರಂಭವಾಗುವ ವಾರ
ಗೀತೆ 17 (187)
15 ನಿ: ಸ್ಥಳಿಕ ಪ್ರಕಟನೆಗಳು. ಜೂನ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಜುಲೈ ತಿಂಗಳಲ್ಲಿ ಯಾವ ಬ್ರೋಷರನ್ನು ನೀಡಲು ಮತ್ತು ಯಾವ ನಿರೂಪಣೆಯನ್ನು ಉಪಯೋಗಿಸಲು ಪ್ರಚಾರಕರು ಯೋಜಿಸಿದ್ದಾರೆಂದು ಹೇಳುವಂತೆ ಅವರನ್ನು ಕೇಳಿರಿ.
15 ನಿ: ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಈ ಬ್ರೋಷರಿನ ವೈಶಿಷ್ಟ್ಯಗಳನ್ನು ವಿವರಿಸಿರಿ. ಇವು, ಮಕ್ಕಳಿಗೆ ಮತ್ತು ಸೀಮಿತ ಶಿಕ್ಷಣ ಅಥವಾ ಓದುವ ಸಾಮರ್ಥ್ಯವಿರುವ ಇತರರಿಗೆ ಯೆಹೋವನ ಬಗ್ಗೆ ಕಲಿಸುವುದರಲ್ಲಿ ಈ ಬ್ರೋಷರನ್ನು ಹೇಗೆ ಒಂದು ಪ್ರಭಾವಶಾಲಿ ಸಾಧನವಾಗಿ ಮಾಡುತ್ತವೆ ಎಂಬುದನ್ನು ತಿಳಿಸಿ. ಅದರ ಸರಳ ಹಾಗೂ ತರ್ಕಬದ್ಧವಾದ ವಿವರಣೆಗಳ ಉದಾಹರಣೆಗಳನ್ನು ಚರ್ಚಿಸಿರಿ. ವಿದ್ಯಾರ್ಥಿಯ ಹೃದಯವನ್ನು ತಲಪಲು ಚಿತ್ರಗಳನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ತೋರಿಸಿರಿ. ಈ ಬ್ರೋಷರನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದಾದ ವಿಧಗಳನ್ನು ಸೂಚಿಸಿರಿ. ಹೆತ್ತವರು ತಮ್ಮ ಎಳೆಯ ಮಕ್ಕಳೊಂದಿಗೆ ಅದನ್ನು ಅಭ್ಯಾಸಿಸಬೇಕು. ಶುಶ್ರೂಷೆಯಲ್ಲಿ ಸೂಕ್ತವಾಗಿರುವಲ್ಲೆಲ್ಲ ಇದನ್ನು ನೀಡುವಂತೆ ಎಲ್ಲರನ್ನೂ ಉತ್ತೇಜಿಸಿರಿ.
15 ನಿ: “ಇತರರಿಗೆ ಸಹಾಯಮಾಡಲು ನಿಮಗೆ ‘ಮನಸ್ಸುಂಟೊ’?”c ಸಹಾಯಮಾಡುವ ಆತ್ಮವನ್ನು ಹೊಂದಿರುವಂತೆ ಸಭೆಯಲ್ಲಿರುವ ಪ್ರತಿಯೊಬ್ಬರನ್ನೂ ಉತ್ತೇಜಿಸಿರಿ.
ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.