ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/02 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2002 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಏಪ್ರಿಲ್‌ 8ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 15ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 22ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 29ರಿಂದ ಆರಂಭವಾಗುವ ವಾರ
  • ಮೇ 6ರಿಂದ ಆರಂಭವಾಗುವ ವಾರ
2002 ನಮ್ಮ ರಾಜ್ಯದ ಸೇವೆ
km 4/02 ಪು. 2

ಸೇವಾ ಕೂಟದ ಶೆಡ್ಯೂಲ್‌

ಏಪ್ರಿಲ್‌ 8ರಿಂದ ಆರಂಭವಾಗುವ ವಾರ

ಗೀತೆ 4 (43)

13 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಏಪ್ರಿಲ್‌ 22ರ ವಾರದ ಸೇವಾ ಕೂಟದಲ್ಲಿನ ಚರ್ಚೆಗಾಗಿ ಸಿದ್ಧತೆಯಲ್ಲಿ, ಯುವ ಜನರು ಪ್ರಶ್ನಿಸುವುದು​—⁠ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?# ಎಂಬ ವಿಡಿಯೋವನ್ನು ನೋಡುವಂತೆ ಪ್ರತಿಯೊಬ್ಬರನ್ನು ಉತ್ತೇಜಿಸಿರಿ. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್‌-ಜೂನ್‌ ಎಚ್ಚರ! ಹಾಗೂ ಏಪ್ರಿಲ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದರ ಕುರಿತಾದ ಎರಡು ಬೇರೆ ಬೇರೆ ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ, “ನನಗೆ ನನ್ನ ಸ್ವಂತ ಧರ್ಮವಿದೆ” ಎಂಬ ಸಂಭಾಷಣಾ ತಡೆಗಟ್ಟನ್ನು ನಿರ್ವಹಿಸುವ ಭಿನ್ನ ಭಿನ್ನ ವಿಧವನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 10-11ನೆಯ ಪುಟಗಳನ್ನು ನೋಡಿರಿ.

12 ನಿ:  ಸ್ಥಳಿಕ ಅಗತ್ಯಗಳು.

20 ನಿ:  “ಎಲ್ಲರಿಗೆ ಒಳ್ಳೇದನ್ನು ಮಾಡೋಣ.”a ಪ್ರಶ್ನೋತ್ತರ ಚರ್ಚೆಯ ಬಳಿಕ, ಒಬ್ಬರು ಅಥವಾ ಇಬ್ಬರು ಪ್ರಚಾರಕರ ಇಂಟರ್‌ವ್ಯೂ ಮಾಡಿ; ಅವರು ತಮ್ಮ ಶುಶ್ರೂಷೆಯನ್ನು ಹೇಗೆ ವಿಸ್ತರಿಸುತ್ತಿದ್ದಾರೆ ಎಂಬುದನ್ನು ಅವರು ಹೇಳಲಿ.

ಗೀತೆ 27 (221) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 15ರಿಂದ ಆರಂಭವಾಗುವ ವಾರ

ಗೀತೆ 28 (224)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ.

15 ನಿ:  ಪಯನೀಯರರು ಇತರರಿಗೆ ನೆರವು ನೀಡುತ್ತಾರೆ. ಸೇವಾ ಮೇಲ್ವಿಚಾರಕನು, ಒಬ್ಬ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕ, ಒಬ್ಬ ಪಯನೀಯರ್‌ ಮತ್ತು ಒಬ್ಬ ಪ್ರಚಾರಕರಿಂದ ಕೂಡಿದ ಒಂದು ಗುಂಪು ಚರ್ಚೆಯನ್ನು ನಡೆಸುತ್ತಾನೆ. ಸೇವಾ ಮೇಲ್ವಿಚಾರಕನು, ಸೆಪ್ಟೆಂಬರ್‌ 1998ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟದಲ್ಲಿ ತಿಳಿಸಲ್ಪಟ್ಟಿರುವಂತೆ, ಪಯನೀಯರರು ಇತರರಿಗೆ ನೆರವು ನೀಡುತ್ತಾರೆ ಎಂಬ ಕಾರ್ಯಕ್ರಮವನ್ನು ಪುನರ್ವಿಮರ್ಶಿಸುತ್ತಾನೆ. ತದನಂತರ ಅವನು ಆ ಗುಂಪಿನಲ್ಲಿರುವ ಪ್ರತಿಯೊಬ್ಬರೊಂದಿಗೆ, ಕಾರ್ಯಕ್ರಮದಲ್ಲಿ ಅವನ ಅಥವಾ ಅವಳ ಪಾತ್ರದ ಕುರಿತು ಮತ್ತು ಅದು ಹೇಗೆ ಅದರ ಉದ್ದೇಶವನ್ನು ಪೂರೈಸುತ್ತಿದೆ ಎಂಬುದರ ಕುರಿತು ಚರ್ಚಿಸುತ್ತಾನೆ. ಇದರಲ್ಲಿ ಯಶಸ್ಸನ್ನು ಪಡೆಯಲು ಏನು ಮಾಡಲಾಗಿದೆ? ಶುಶ್ರೂಷೆಯಲ್ಲಿ ಪ್ರಚಾರಕರು ನೆರವನ್ನು ಪಡೆದುಕೊಳ್ಳಲು ಬಯಸುವಲ್ಲಿ, ಅದನ್ನು ತನಗೆ ತಿಳಿಸುವಂತೆ ಸೇವಾ ಮೇಲ್ವಿಚಾರಕನು ಎಲ್ಲ ಪ್ರಚಾರಕರಿಗೆ ಕರೆಕೊಡುತ್ತಾನೆ. ಗತ ಸಮಯದಲ್ಲಿ ಯಾರಿಗೆ ನೆರವು ನೀಡಲ್ಪಟ್ಟಿದೆಯೋ ಅವರು, ಶುಶ್ರೂಷೆಯ ಇನ್ನೊಂದು ಅಂಶದಲ್ಲಿ ಇನ್ನೂ ಹೆಚ್ಚಿನ ಸಹಾಯವನ್ನು ಪಡೆದುಕೊಳ್ಳುವಂತೆ ಅವರನ್ನು ಸಹ ಪುನಃ ಒಳಗೂಡಿಸಬಹುದು.

20 ನಿ:  “ಪೂರ್ಣ ಸಮಯದ ಸೇವೆಯಿಂದ ಸಿಗುವ ಆನಂದಗಳು.”b ಯುವ ಜನರು ತಮ್ಮ ರಜಾ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್‌ ಸೇವೆಗಾಗಿ ಅರ್ಜಿಯನ್ನು ಹಾಕುವಂತೆ ಅವರನ್ನು ಉತ್ತೇಜಿಸಿರಿ.

ಗೀತೆ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 22ರಿಂದ ಆರಂಭವಾಗುವ ವಾರ

ಗೀತೆ 7 (51)

10 ನಿ:  ಸ್ಥಳಿಕ ಪ್ರಕಟನೆಗಳು. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಒಬ್ಬ ಸಹೋದರಿಯು ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದು ಮತ್ತು ಒಬ್ಬ ಶುಶ್ರೂಷಾ ಸೇವಕನು ಮೇ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿ ತೋರಿಸುವಂತೆ ಏರ್ಪಡಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ನಂತರ, ಮನೆಯವರ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ಉಪಯೋಗಿಸಲ್ಪಟ್ಟ ಆರಂಭದ ಒಂದೆರಡು ವಾಕ್ಯಗಳನ್ನು ಪುನಃ ತಿಳಿಸಿರಿ.

10 ನಿ:  ಸರಿಯಾದ ಸಮಯಕ್ಕೆ ಬನ್ನಿ! ಒಂದು ಭಾಷಣ. ನಮ್ಮ ಆರಾಧನೆ ಹಾಗೂ ಸೇವೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಅತ್ಯಂತ ಪ್ರಮುಖ ವಿಷಯಗಳಾಗಿದ್ದು, “ನೇಮಿತ ಸಮಯ”ವನ್ನು ಅಗತ್ಯಪಡಿಸುತ್ತವೆ. (ಪ್ರಸಂ. 3:​1, NW) ನಾವು ದೇವಪ್ರಭುತ್ವಾತ್ಮಕ ಒದಗಿಸುವಿಕೆಗಳಿಂದ ಸಂಪೂರ್ಣ ರೀತಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುತ್ತೇವೆ. ಸಭಾ ಕೂಟಗಳು ಮತ್ತು ಕ್ಷೇತ್ರ ಸೇವೆಗಾಗಿರುವ ಕೂಟಗಳು, ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಬೇಕು. ತನ್ನ ಚಟುವಟಿಕೆಗಳನ್ನು ನೆರವೇರಿಸುವುದರಲ್ಲಿ ಯೆಹೋವನು ಎಂದೂ ತಡಮಾಡುವುದಿಲ್ಲ. (ಹಬ. 2:⁠3) ಈ ವಿಷಯದಲ್ಲಿ ನಾವು ಪ್ರಗತಿಯನ್ನು ಮಾಡುವ ಅಗತ್ಯವಿದೆಯೋ? ಕೆಲವೊಮ್ಮೆ, ಅನಿವಾರ್ಯ ಕಾರಣಗಳಿಂದಾಗಿ ಒಬ್ಬ ವ್ಯಕ್ತಿಯು ತಡವಾಗಿ ಬರಬಹುದು. ಆದರೆ ಒಳ್ಳೆಯ ವ್ಯವಸ್ಥಾಪನೆಯಿರುವಲ್ಲಿ, ಒಂದು ಕೂಟದ ಆರಂಭದ ಗೀತೆ ಹಾಗೂ ಪ್ರಾರ್ಥನೆಯ ಬಳಿಕ ಅಥವಾ ಈಗಾಗಲೇ ಕ್ಷೇತ್ರ ಸೇವಾ ಏರ್ಪಾಡುಗಳು ಮಾಡಲ್ಪಟ್ಟ ಬಳಿಕ ವಾಡಿಕೆಯಾಗಿ ನಾವು ತಡವಾಗಿ ಬರುವ ಅಗತ್ಯವಿರುವುದಿಲ್ಲ. ಎಲ್ಲ ಆತ್ಮಿಕ ಚಟುವಟಿಕೆಗಳಿಗಾಗಿ ನಾವು ತಡಮಾಡದೆ ಸರಿಯಾದ ಸಮಯದಲ್ಲಿ ಉಪಸ್ಥಿತರಿರುವುದನ್ನು ಖಾತ್ರಿನೀಡುವ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂಥ ಪ್ರಾಯೋಗಿಕ ವಿಧಗಳನ್ನು ಚರ್ಚಿಸಿರಿ.​—⁠ಜೂನ್‌ 15, 1990ರ ಕಾವಲಿನಬುರುಜು# ಪತ್ರಿಕೆಯ 29ನೆಯ ಪುಟವನ್ನು ನೋಡಿ.

25 ನಿ:  “ಒಂದು ಉತ್ಸಾಹಭರಿತ ಪ್ರತಿಕ್ರಿಯೆ!”c 1ನೆಯ ಪ್ಯಾರಗ್ರಾಫ್‌ನಲ್ಲಿ, ಯುವ ಜನರು ಪ್ರಶ್ನಿಸುವುದು​—⁠ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?# ಎಂಬ ವಿಡಿಯೋದ ಕುರಿತು ಸಂಕ್ಷಿಪ್ತವಾದ ಕೆಲವು ಹೇಳಿಕೆಗಳನ್ನು ಮಾಡುವಂತೆ ಸಭೆಯನ್ನು ಅನುಮತಿಸಿ. ತದನಂತರ, 2-7ನೆಯ ಪ್ಯಾರಗ್ರಾಫ್‌ಗಳಲ್ಲಿ ಕೊಡಲ್ಪಟ್ಟಿರುವ ಪ್ರತಿಯೊಂದು ಪ್ರಶ್ನೆಯನ್ನು ಸಭಿಕರೊಂದಿಗೆ ಚರ್ಚಿಸಲು ಆರಂಭಿಸಿರಿ. ಜೂನ್‌ ತಿಂಗಳಿನಲ್ಲಿ ನಾವು ನಮ್ಮ ಸಹೋದರರ ಇಡೀ ಬಳಗ# ಎಂಬ ವಿಡಿಯೋವನ್ನು ಪರಿಶೀಲಿಸಲಿರುವೆವು.

ಗೀತೆ 21 (191) ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 29ರಿಂದ ಆರಂಭವಾಗುವ ವಾರ

ಗೀತೆ 18 (162)

10 ನಿ:  ಸ್ಥಳಿಕ ಪ್ರಕಟನೆಗಳು. ಏಪ್ರಿಲ್‌ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ.

15 ನಿ:  “ರಾಜ್ಯ ಸಾರುವಿಕೆಯು ಜೀವಗಳನ್ನು ರಕ್ಷಿಸಲು ಸಹಾಯಮಾಡುತ್ತದೆ!”d ಶಾಸ್ತ್ರವಚನಗಳು ಹೇಗೆ ಅನ್ವಯವಾಗುತ್ತವೆ ಎಂಬುದರ ಕುರಿತು ಸಭಿಕರಿಂದ ಹೇಳಿಕೆಗಳನ್ನು ಪಡೆಯಿರಿ.

20 ನಿ:  ತರ್ಕಿಸು# ಪುಸ್ತಕವನ್ನು ಉಪಯೋಗಿಸಿ ಸಂಶೋಧನೆ. ಸಭಿಕರೊಂದಿಗೆ ಚರ್ಚೆ. ತರ್ಕಿಸು# ಪುಸ್ತಕದಲ್ಲಿರುವ “ಮುಖ್ಯ ವಿಚಾರಗಳು” (Principal Subjects) (5-6ನೆಯ ಪುಟಗಳು) ಎಂಬ ಮೇಲ್ಬರಹದ ಕೆಳಗೆ ಪಟ್ಟಿಮಾಡಲ್ಪಟ್ಟಿರದಂಥ ವಿಷಯಗಳ ಕುರಿತು ಕ್ಷೇತ್ರ ಸೇವೆಯಲ್ಲಿ ಅನೇಕವೇಳೆ ಪ್ರಶ್ನೆಗಳು ಏಳುತ್ತವೆ. ನಮ್ಮ ನಂಬಿಕೆಗಳನ್ನು ಬೆಂಬಲಿಸುವುದಕ್ಕಾಗಿರುವ ಶಾಸ್ತ್ರವಚನಗಳನ್ನು ಕಂಡುಹಿಡಿಯುವುದರಲ್ಲಿ “ಇಂಡೆಕ್ಸ್‌” (439-45ನೆಯ ಪುಟಗಳು) ತುಂಬ ಉಪಯುಕ್ತವಾಗಿದೆ. ಓರೆ ಅಕ್ಷರಗಳಲ್ಲಿ ಕೊಡಲ್ಪಟ್ಟಿರುವ ಪ್ರತಿಯೊಂದು ಪದದ ಕೆಳಗೆ ಇಂಡೆಕ್ಸ್‌ನಲ್ಲಿ ನೋಡುವ ಮೂಲಕ ಈ ಮುಂದಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದರಲ್ಲಿ ಭಾಗವಹಿಸುವಂತೆ ಸಭಿಕರನ್ನು ಆಮಂತ್ರಿಸಿರಿ: ರಾಷ್ಟ್ರಗೀತೆಗಳು (Anthems) ಮತ್ತು ಬಾವುಟಗಳ (flags) ವಿಷಯದಲ್ಲಿ ಒಬ್ಬ ಕ್ರೈಸ್ತನ ನೋಟವೇನು? ದೇವರು ವಿಪತ್ತುಗಳನ್ನು (disasters) ಏಕೆ ಅನುಮತಿಸುತ್ತಾನೆ? ವಿವಾಹ ವಿಚ್ಛೇದದ (divorce) ಕುರಿತಾದ ಬೈಬಲಿನ ದೃಷ್ಟಿಕೋನವನ್ನು ನೀವು ಹೇಗೆ ವಿವರಿಸುವಿರಿ? ಏಕೆ ಮತ್ತು ಯಾವಾಗ ಸಹೋದರಿಯರು ಕೆಲವೊಮ್ಮೆ ತಲೆಗೆ ಮುಸುಕನ್ನು (head covering) ಹಾಕಿಕೊಳ್ಳುವ ಅಗತ್ಯವಿದೆ? ತಾಯಿಯ ದಿನ (Mother’s Day)ದ ಆಚರಣೆಯ ಮೂಲವೇನು? ಬೈಬಲಿನಲ್ಲಿ 1,44,000 ಎಂಬುದು ಒಂದು ಅಕ್ಷರಾರ್ಥ ಸಂಖ್ಯೆಯಾಗಿದೆ ಎಂಬುದು ನಮಗೆ ಹೇಗೆ ಗೊತ್ತು? ಐಶ್ವರ್ಯವಂತ ಹಾಗೂ ಲಾಜರ (rich man and Lazarus)ನ ಕುರಿತಾದ ದೃಷ್ಟಾಂತದ ಅರ್ಥವೇನು? ಕ್ಷೇತ್ರ ಸೇವೆಯಲ್ಲಿ ತರ್ಕಿಸು# ಪುಸ್ತಕವನ್ನು ಉಪಯೋಗಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ.

ಗೀತೆ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 6ರಿಂದ ಆರಂಭವಾಗುವ ವಾರ

ಗೀತೆ 17 (187)

10 ನಿ:  ಸ್ಥಳಿಕ ಪ್ರಕಟನೆಗಳು. ಕೆಲಸದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ, ರಜೆಯಲ್ಲಿ ಹೋಗಿದ್ದಾಗ, ಅಥವಾ ಸಾಕ್ಷ್ಯೇತರ ಸಂಬಂಧಿಕರನ್ನು ಭೇಟಿಮಾಡಲು ಹೋಗಿದ್ದಾಗ ಅನೌಪಚಾರಿಕವಾಗಿ ಸಾಕ್ಷಿಕೊಟ್ಟದ್ದರ ಕುರಿತು ಅನುಭವಗಳನ್ನು ಹೇಳುವಂತೆ ಸಭಿಕರನ್ನು ಆಮಂತ್ರಿಸಿರಿ.

10 ನಿ:  “ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಂದ ಪ್ರಯೋಜನ ಪಡೆದುಕೊಳ್ಳುತ್ತಾ ಇರಿ.” ಸಭಿಕರೊಂದಿಗೆ ಚರ್ಚೆ.

25 ನಿ:  “ಆತ್ಮಿಕವಾಗಿ ಪ್ರಬಲವಾಗಿರುವ ಕುಟುಂಬಗಳು​—⁠ಹೇಗೆ ಸಾಧ್ಯ?”e ಈ ಲೇಖನವನ್ನು ಚರ್ಚಿಸಿದ ಬಳಿಕ, ಫೆಬ್ರವರಿ 15, 1999ರ ಕಾವಲಿನಬುರುಜು ಪತ್ರಿಕೆಯ 10-12ನೆಯ ಪುಟಗಳಿಂದ ಕೆಲವು ಪ್ರಾಯೋಗಿಕ ಅನುಭವಗಳನ್ನು ತಿಳಿಸಿರಿ.

ಗೀತೆ 7 (51) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ