ಸೇವಾ ಕೂಟದ ಶೆಡ್ಯೂಲ್
ಮಾರ್ಚ್ 11ರಿಂದ ಆರಂಭವಾಗುವ ವಾರ
ಗೀತೆ 7 (51)
13 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಯನ್ನು ಮತ್ತು ಮಾರ್ಚ್ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದು ಎಂಬುದನ್ನು ತೋರಿಸುವ ಎರಡು ಪ್ರತ್ಯೇಕ ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ, “ನನಗೆ ಅಭಿರುಚಿ ಇಲ್ಲ” ಎಂಬ ಸಂಭಾಷಣಾ ತಡೆಗಟ್ಟನ್ನು ನಿರ್ವಹಿಸುವ ಭಿನ್ನ ರೀತಿಯನ್ನು ತೋರಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ 7ನೆಯ ಪುಟವನ್ನು ನೋಡಿರಿ.
12 ನಿ: ಬೇಸಗೆಕಾಲಕ್ಕಾಗಿ ನಿಮ್ಮ ಯೋಜನೆಗಳೇನು? ಒಬ್ಬ ಹಿರಿಯ ಅಥವಾ ಒಬ್ಬ ಶುಶ್ರೂಷಾ ಸೇವಕನು ಮತ್ತು ಅವನ ಕುಟುಂಬವು, ಬೇಸಗೆ ತಿಂಗಳುಗಳಿಗಾಗಿ ತಾವು ಮಾಡಿರುವ ಯೋಜನೆಗಳ ಕುರಿತು ಚರ್ಚಿಸುತ್ತಾರೆ. ಒಂದು ಕುಟುಂಬದೋಪಾದಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವುದರ ಕುರಿತಾಗಿ, ಮತ್ತು ಪ್ರಾಯಶಃ ರಜೆಯನ್ನು ಪಡೆದುಕೊಂಡು ಸ್ವಲ್ಪ ಮನೋರಂಜನೆಯಲ್ಲಿ ಆನಂದಿಸುವುದರ ಕುರಿತಾಗಿಯೂ ಅವರು ಮಾತಾಡುತ್ತಾರೆ. ತಾವು ಬೇರೊಂದು ಸ್ಥಳಕ್ಕೆ ಪ್ರಯಾಣಿಸುವುದಾದರೂ, ಸಭಾ ಕೂಟಗಳಿಗೆ ಹಾಜರಾಗುವುದು, ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದು, ಮತ್ತು ತಮ್ಮ ಕುಟುಂಬ ಬೈಬಲ್ ಅಧ್ಯಯನವನ್ನು ನಡೆಸುವುದರಂಥ ದೇವಪ್ರಭುತ್ವಾತ್ಮಕ ಚಟುವಟಿಕೆಗಳನ್ನು ತಾವು ಅಲಕ್ಷಿಸಲು ಬಯಸುವುದಿಲ್ಲವೆಂದು ಅವರೆಲ್ಲರೂ ಒಪ್ಪಿಕೊಳ್ಳುತ್ತಾರೆ. ಅವರು ಮನೆಯಲ್ಲಿರಲಿ ಅಥವಾ ಬೇರೆ ಸ್ಥಳಕ್ಕೆ ಪ್ರಯಾಣಿಸಲಿ, ತಾವು ತಡಮಾಡದೆ ತಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ವರದಿಸುವೆವೆಂದು ಅವರು ಖಚಿತಗೊಳಿಸುವರು.
20 ನಿ: “‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಿ’”a ಈ ಭಾಗವನ್ನು ಸೇವಾ ಮೇಲ್ವಿಚಾರಕನು ನಿರ್ವಹಿಸುತ್ತಾನೆ. ಮಾರ್ಚ್ 28ರಂದು ಆಚರಿಸಲ್ಪಡುವ ಜ್ಞಾಪಕಾಚರಣೆಯ ತಯಾರಿಯಾಗಿ, ಶುಶ್ರೂಷೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಮುದ್ರಿತ ಆಮಂತ್ರಣಗಳನ್ನು ಹೇಗೆ ಅತ್ಯುತ್ತಮವಾಗಿ ಉಪಯೋಗಿಸಬಹುದೆಂಬುದನ್ನು ಚರ್ಚಿಸಿರಿ. ಕಳೆದ ವರ್ಷ ಜ್ಞಾಪಕಾಚರಣೆಗೆ ಹಾಜರಾಗಲು ತಮ್ಮ ಸಂಬಂಧಿಕರು, ನೆರೆಯವರು, ಬೈಬಲ್ ವಿದ್ಯಾರ್ಥಿಗಳು, ಮತ್ತು ಇತರ ಆಸಕ್ತ ವ್ಯಕ್ತಿಗಳು ಹಾಜರಾಗುವಂತೆ ಮಾಡಲು ಹೇಗೆ ಶಕ್ತರಾದರು ಮತ್ತು ಅದರಿಂದ ಯಾವ ಆನಂದ ಸಿಕ್ಕಿತೆಂಬುದನ್ನು ಪ್ರಚಾರಕರು ಹೇಳುವಂತೆ ಆಮಂತ್ರಿಸಿರಿ. ಏಪ್ರಿಲ್ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಶಕ್ತರಾಗಿರುವವರು ಹಾಗೆ ಮಾಡುವಂತೆ ಮತ್ತು ಕೂಟದ ನಂತರ ಒಂದು ಅರ್ಜಿಯನ್ನು ಪಡೆದುಕೊಳ್ಳುವಂತೆ ಉತ್ತೇಜಿಸಿರಿ.
ಗೀತೆ 10 (82) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 18ರಿಂದ ಆರಂಭವಾಗುವ ವಾರ
ಗೀತೆ 17 (187)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ. “ಜ್ಞಾಪಕಾಚರಣೆಯ ಮರುಜ್ಞಾಪನಗಳು” ಎಂಬ ವಿಷಯವನ್ನು ಚರ್ಚಿಸಿರಿ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2002 ಪುಸ್ತಿಕೆಯಲ್ಲಿ ಮಾರ್ಚ್ 23-28ಕ್ಕೆ ಶೆಡ್ಯೂಲ್ ಮಾಡಲ್ಪಟ್ಟಿರುವ ಜ್ಞಾಪಕದ ಬೈಬಲ್ ಓದುವಿಕೆಯನ್ನು ಅನುಸರಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ.
15 ನಿ: “ಯೆಹೋವನೊಂದಿಗೆ ಮತ್ತು ಆತನ ಪುತ್ರನೊಂದಿಗೆ ಆನಂದದಿಂದ ಐಕ್ಯರು.” ಒಬ್ಬ ಹಿರಿಯನಿಂದ ಶಾಸ್ತ್ರೀಯವಾಗಿ ಪ್ರಚೋದಿಸುವಂಥ ಭಾಷಣ. ಇಂದು ಮತ್ತು ಮಾರ್ಚ್ 28ರ ನಡುವಿನ ಸಮಯದಲ್ಲಿ, ನಮ್ಮೊಂದಿಗೆ ಜ್ಞಾಪಕಾಚರಣೆಗೆ ಹಾಜರಾಗುವಂತೆ ಸಾಧ್ಯವಿರುವಷ್ಟು ಹೆಚ್ಚು ಜನರನ್ನು ಆಮಂತ್ರಿಸಲಿಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ಎಲ್ಲರನ್ನೂ ಉತ್ತೇಜಿಸಿರಿ.
20 ನಿ: ವರ್ಷಪುಸ್ತಕದಿಂದ (ಇಂಗ್ಲಿಷ್) ನಿಮಗೆ ಯಾವ ಪ್ರಯೋಜನ ಸಿಗುತ್ತಿದೆ? ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಮೊದಲು, ಈ ಸಂಚಿಕೆಯ 6ನೆಯ ಪುಟದಲ್ಲಿರುವ “ಆಡಳಿತ ಮಂಡಲಿಯಿಂದ ಒಂದು ಪತ್ರ” ಎಂಬ ಲೇಖನದಲ್ಲಿರುವ ಮುಖ್ಯಾಂಶಗಳನ್ನು ಎತ್ತಿಹೇಳಿರಿ. ಅನಂತರ ಸಭಿಕರಿಗೆ, ಅವರು ವರ್ಷಪುಸ್ತಕದಲ್ಲಿ ವಿಶೇಷವಾಗಿ ಉತ್ತೇಜನದಾಯಕವೂ ನಂಬಿಕೆಯನ್ನು ಬಲಪಡಿಸುವಂಥಹದ್ದೂ ಆಗಿ ಕಂಡುಕೊಂಡಿರುವ ವರದಿಗಳನ್ನೂ ಅನುಭವಗಳನ್ನೂ ತಿಳಿಸುವಂತೆ ಕೇಳಿಕೊಳ್ಳಿ. ಎಲ್ಲರೂ ವರ್ಷಪುಸ್ತಕವನ್ನು ಓದಿ ಮುಗಿಸುವಂತೆ ಮತ್ತು ಬೈಬಲ್ ವಿದ್ಯಾರ್ಥಿಗಳನ್ನು ಯೆಹೋವನ ಸಂಸ್ಥೆಯೊಂದಿಗೆ ಪರಿಚಯಿಸಲಿಕ್ಕಾಗಿ ಅದನ್ನು ಉಪಯೋಗಿಸುವಂತೆ ಉತ್ತೇಜಿಸಿರಿ.
ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 25ರಿಂದ ಆರಂಭವಾಗುವ ವಾರ
ಗೀತೆ 9 (37)
14 ನಿ: ಸ್ಥಳಿಕ ಪ್ರಕಟನೆಗಳು. ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲಿಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಇನ್ನು ಕಾಲವು ಮೀರಿ ಹೋಗಿಲ್ಲವೆಂದು ವಿವರಿಸಿರಿ. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಒಬ್ಬ ಯುವ ವ್ಯಕ್ತಿಯು ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಯನ್ನು ಮತ್ತು ಒಬ್ಬ ಹಿರಿಯನು ಏಪ್ರಿಲ್ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬೇಕೆಂಬುದನ್ನು ಪ್ರತ್ಯಕ್ಷಾಭಿನಯಿಸಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ನಂತರ, ಆ ನಿರೂಪಣೆಯ ಕೆಲವು ಒಳ್ಳೆಯ ಅಂಶಗಳನ್ನು ಎತ್ತಿಹೇಳಿರಿ.
15 ನಿ: ಸ್ಥಳಿಕ ಅಗತ್ಯಗಳು.
16 ನಿ: ಉತ್ತೇಜನವನ್ನು ಕೊಡಲಿಕ್ಕಾಗಿ ರೀಸನಿಂಗ್ ಪುಸ್ತಕವನ್ನು ಉಪಯೋಗಿಸಿರಿ. ಸಭಿಕರೊಂದಿಗೆ ಚರ್ಚೆ. ಎಲ್ಲರಿಗೂ ಆಗಿಂದಾಗ್ಗೆ ಪ್ರೀತಿಪರ ಉತ್ತೇಜನದ ಅಗತ್ಯವಿದೆ. ಆದುದರಿಂದ, ನಾವು ಇತರರೊಂದಿಗೆ “ಸಾಂತ್ವನದಾಯಕವಾಗಿ ಮಾತಾಡುವ” ಅಗತ್ಯವಿದೆ. ಇವರಲ್ಲಿ, ನಾವು ಶುಶ್ರೂಷೆಯಲ್ಲಿ ಭೇಟಿಯಾಗುವ ಮನೋವ್ಯಥೆಯುಳ್ಳ ಜನರೂ ಸೇರಿದ್ದಾರೆ. (1 ಥೆಸ. 5:14, NW) ರೀಸನಿಂಗ್ ಪುಸ್ತಕವನ್ನು ಉಪಯೋಗಿಸುತ್ತಾ, 117-21ನೆಯ ಪುಟಗಳಲ್ಲಿ ತಿಳಿಸಲ್ಪಟ್ಟಿರುವ ಯಾವುದಾದರೊಂದು ಪರೀಕ್ಷೆಯನ್ನು ಅನುಭವಿಸುತ್ತಿರುವ ವ್ಯಕ್ತಿಗೆ, ಯಾವ ಶಾಸ್ತ್ರೀಯ ಉತ್ತೇಜನವನ್ನು ಕೊಡಬಹುದೆಂಬುದನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಅಗತ್ಯಬಿದ್ದಾಗೆಲ್ಲ ಪ್ರತಿಯೊಬ್ಬರೂ ಯಾರನ್ನಾದರೂ ಉತ್ತೇಜಿಸಲು ಪ್ರಯತ್ನಿಸುವಂತೆ ಸಲಹೆ ನೀಡಿರಿ.—ಗಲಾ. 6:10.
ಗೀತೆ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 1ರಿಂದ ಆರಂಭವಾಗುವ ವಾರ
ಗೀತೆ 4 (43)
7 ನಿ: ಸ್ಥಳಿಕ ಪ್ರಕಟನೆಗಳು. ಮಾರ್ಚ್ ತಿಂಗಳಿಗಾಗಿ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.
18 ನಿ: “‘ಪುರುಷರಲ್ಲಿ ವರದಾನಗಳು’ ದೇವರ ಮಂದೆಯನ್ನು ಸಿದ್ಧಮನಸ್ಸಿನಿಂದ ಕಾಯುತ್ತಾರೆ.” ಹಿರಿಯನೊಬ್ಬನಿಂದ ಭಾಷಣ. ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ಚರ್ಚಿಸಿರಿ. ನಿಷ್ಕ್ರಿಯ ವ್ಯಕ್ತಿಗಳಿಗೆ ಕುರಿಪಾಲನೆ ಮಾಡುವುದರಿಂದ ಮತ್ತು ದುರ್ಬಲರು ತಮ್ಮಿಂದ ಸಾಧ್ಯವಾಗುವಷ್ಟನ್ನು ಮಾಡುವಂತೆ ಅವರಿಗೆ ಸಹಾಯಮಾಡುವುದರಿಂದ, ಹೇಗೆ ಉತ್ತೇಜನದಾಯಕ ಅನುಭವಗಳು ಸಿಗಬಲ್ಲವು ಮತ್ತು ಈಗಾಗಲೇ ಸಿಕ್ಕಿವೆ ಎಂಬುದನ್ನು ತೋರಿಸಿರಿ. ಯೆಹೋವನ ಸೇವೆಯಲ್ಲಿ ಸಕ್ರಿಯರಾಗಿ ಉಳಿಯಲು ಕುರಿ ಮಂದೆಯವರು ಮಾಡುವ ಎಲ್ಲ ಹೃತ್ಪೂರ್ವಕ ಪ್ರಯತ್ನಗಳಿಗಾಗಿ ಪ್ರೀತಿಪರ ಕುರುಬರು ಗಣ್ಯತೆಯನ್ನು ತೋರಿಸುತ್ತಾರೆ.
20 ನಿ: “ಸಾರುವಿಕೆಯಲ್ಲಿ ನಿಮ್ಮ ಆನಂದವನ್ನು ಹೆಚ್ಚಿಸಿರಿ.” b 5ನೆಯ ಪ್ಯಾರಗ್ರಾಫನ್ನು ಚರ್ಚಿಸುವಾಗ, ಸ್ಥಳಿಕ ಟೆರಿಟೊರಿಯಲ್ಲಿ ನಾವು ಹೇಗೆ ತುಂಬ ಪರಿಣಾಮಕಾರಿಯಾಗಿರಬಲ್ಲೆವು ಎಂಬುದರ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ತಿಳಿಸುವಂತೆ ಕೇಳಿಕೊಳ್ಳಿ. ಒಂದು ಸಂಕ್ಷಿಪ್ತವಾದ ಸಾಕ್ಷಿಯನ್ನು ಕೊಡಲಿಕ್ಕಾಗಿ, ನಾವು ಹೇಗೆ ಒಬ್ಬ ವ್ಯಕ್ತಿಯನ್ನು ಮಾತಾಡಿಸಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬಹುದೆಂಬುದನ್ನು ತೋರಿಸುವ ಒಂದೆರಡು ಉದಾಹರಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಈ ವಾರ ಸಾಕ್ಷಿಯನ್ನು ಕೊಡಲಿಕ್ಕಾಗಿ ಅವಕಾಶಗಳನ್ನು ಏರ್ಪಡಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ.
ಗೀತೆ 2 (15) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.