ಪ್ರಕಟನೆಗಳು
◼ ಮಾರ್ಚ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಭ್ಯಾಸಗಳನ್ನು ನಡೆಸಲು ವಿಶೇಷವಾದ ಪ್ರಯತ್ನವನ್ನು ಮಾಡಲಾಗುವುದು. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಯನ್ನು ಮಾಡಿದಾಗ ಆಸಕ್ತಿ ಕಂಡುಬರುವಲ್ಲಿ, ಚಂದಾಗಳನ್ನು ನೀಡಬಹುದು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ನೀಡಿ. ಜೂನ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ.
◼ ಏಪ್ರಿಲ್‌ನಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಲು ಇಷ್ಟಪಡುವ ಪ್ರಚಾರಕರು ಈಗಲೇ ಯೋಜನೆಗಳನ್ನು ಮಾಡಿ, ತಮ್ಮ ಅರ್ಜಿಯನ್ನು ಆದಷ್ಟು ಬೇಗನೆ ಕೊಡಬೇಕು. ಇದು ಅಗತ್ಯವಿರುವ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಮಾಡಲು ಮತ್ತು ಸಾಕಷ್ಟು ಪತ್ರಿಕೆಗಳು ಹಾಗೂ ಇತರ ಸಾಹಿತ್ಯವನ್ನು ಹೊಂದಿರಲು ಹಿರಿಯರಿಗೆ ಸಹಾಯ ಮಾಡುವುದು. ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಯಾರ ಅರ್ಜಿಯು ಅಂಗೀಕರಿಸಲ್ಪಟ್ಟಿದೆಯೋ ಅವರೆಲ್ಲರ ಹೆಸರುಗಳನ್ನು ಸಭೆಯಲ್ಲಿ ಪ್ರಕಟಿಸಬೇಕು.
◼ 2001 ಏಪ್ರಿಲ್ 8ರ, ಭಾನುವಾರದಂದು ಜ್ಞಾಪಕಾಚರಣೆಯು ನಡೆಸಲ್ಪಡುವುದು. ಕ್ಷೇತ್ರ ಸೇವೆಗಾಗಿರುವ ಕೂಟಗಳಲ್ಲದೆ ಬೇರೆ ಯಾವ ಕೂಟವು ಆ ದಿನದಂದು ನಡೆಯುವುದಿಲ್ಲ. ಆ ವಾರದ ಕಾವಲಿನಬುರುಜು ಅಭ್ಯಾಸವನ್ನು ಬೇರೊಂದು ಸಮಯದಲ್ಲಿ ನಡೆಸಲು ಹಿರಿಯರು ಯೋಗ್ಯ ಏರ್ಪಾಡುಗಳನ್ನು ಮಾಡಬಹುದು.
◼ ಸಭೆಯೊಂದಿಗೆ ಸಹವಾಸಿಸುತ್ತಿರುವವರೆಲ್ಲರೂ ತಮ್ಮ ವೈಯಕ್ತಿಕ ಚಂದಾಗಳನ್ನು ಸೇರಿಸಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿ, ಹೊಸ ಮತ್ತು ನವೀಕರಣ ಚಂದಾಗಳನ್ನು ಸಭೆಯ ಮೂಲಕ ಕಳುಹಿಸಬೇಕು.
◼ ಪ್ರತಿಯೊಬ್ಬ ಪ್ರಚಾರಕನು ಸಾಹಿತ್ಯಕ್ಕಾಗಿ ಮಾಡುವ ಮನವಿಗಳನ್ನು ಸೊಸೈಟಿಯು ಭರ್ತಿಮಾಡುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡಲಿಕ್ಕಾಗಿ ಅಧ್ಯಕ್ಷ ಮೇಲ್ವಿಚಾರಕರು ಏರ್ಪಾಡನ್ನು ಮಾಡಬೇಕು. ಹೀಗೆ ಮಾಡುವುದರಿಂದ ವೈಯಕ್ತಿಕ ಸಾಹಿತ್ಯದ ಐಟಮ್‌ಗಳನ್ನು ಪಡೆದುಕೊಳ್ಳಲು ಇಷ್ಟಪಡುವವರೆಲ್ಲರೂ ಸಾಹಿತ್ಯವನ್ನು ನೋಡಿಕೊಳ್ಳುವ ಸಹೋದರನಿಗೆ ತಿಳಿಸಬಹುದು. ಯಾವ ಪ್ರಕಾಶನಗಳು ವಿಶೇಷ ವಿನಂತಿ ಐಟಮ್‌ಗಳು ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ—ಮಲೆಯಾಳಂ, ತಮಿಳು
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?—ಅಸ್ಸಾಮಿಸ್, ಇಂಗ್ಲಿಷ್, ಕನ್ನಡ, ಗುಜರಾತಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬೆಂಗಾಲಿ, ಮರಾಠಿ, ಮಲೆಯಾಳಂ ಹಾಗೂ ಹಿಂದಿ
◼ ಭಾರತದಲ್ಲಿ ಸ್ಟಾಕ್‌ನಲ್ಲಿಲ್ಲ:
ಶಾಸ್ತ್ರಗಳ ಒಳನೋಟ —ಇಂಗ್ಲಿಷ್
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚ್‌ರ್ಸ್ (ಡಿಲಕ್ಸ್ ಪಾಕೆಟ್ ಎಡಿಷನ್; DLbi25)
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚ್‌ರ್ಸ್–(ಡಿಲಕ್ಸ್; DLbi 12 ಮಾರ್ಜಿನಲ್ ರೆಫರೆನ್ಸ್‌ಸ್‌ನೊಂದಿಗೆ)
ದೇವರಿಗಾಗಿ ಮಾನವಕುಲದ ಅನ್ವೇಷಣೆ —ಇಂಗ್ಲಿಷ್
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ದೊಡ್ಡ ಹಾಗೂ ಚಿಕ್ಕ ಹಾಡು ಪುಸ್ತಕಗಳು) —ಇಂಗ್ಲಿಷ್
ರೀಸನಿಂಗ್ ಫ್ರಾಮ್ ದ ಸ್ಕ್ರಿಪ್ಚರ್ಸ್ —ಇಂಗ್ಲಿಷ್, ತಮಿಳು
ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು—ಇಂಗ್ಲಿಷ್, ತಮಿಳು ಹಾಗೂ ಮಲೆಯಾಳಂ
ಬೈಬಲ್ ಕಥೆಗಳ ನನ್ನ ಪುಸ್ತಕ, ಚಿಕ್ಕ ಎಡಿಷನ್ —ತಮಿಳು
ಕುರುಕ್ಷೇತ್ರದಿಂದ ಅರ್ಮಗೆದೋನಿಗೆ —ತಮಿಳು, ತೆಲುಗು
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ —ಮಲೆಯಾಳಂ
ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? —ತಮಿಳು, ಮಲೆಯಾಳಂ, ಹಿಂದಿ
ಚರ್ಚೆಗಾಗಿ ಬೈಬಲ್ ವಿಷಯಗಳು —ಮಲೆಯಾಳಂ
ಸಕಲ ಜನರಿಗಾಗಿರುವ ಒಂದು ಗ್ರಂಥ —ತಮಿಳು, ಮಲೆಯಾಳಂ
“ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” —ಮಲೆಯಾಳಂ
ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! —ತಮಿಳು