ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 2000ದ ಸೆಪ್ಟೆಂಬರ್ 4ರಿಂದ ಡಿಸೆಂಬರ್ 18ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಶಿಮ್ಮಿಯನ್ನು ಕೊಲ್ಲದಂತೆ ದಾವೀದನು ಅಬೀಷೈಯನ್ನು ತಡೆದನು. ಏಕೆಂದರೆ, ಶಿಮ್ಮಿಯು ದಾವೀದನ ಕುರಿತು ಮಾಡುತ್ತಿದ್ದ ಆಪಾದನೆಗಳ ವಿಷಯದಲ್ಲಿ ದಾವೀದನು ದೋಷಿಯಾಗಿದ್ದನು. (2 ಸಮು. 16:5-13) [ವಾರದ ಬೈಬಲ್ ವಾಚನ; w-KA99 5/1 ಪು. 32 ಪ್ಯಾರ. 3 ನ್ನು ನೋಡಿ.]
2. ಒಂದು ಶುದ್ಧವಾದ ಮತ್ತು ಸರಿಯಾಗಿ ತರಬೇತುಗೊಳಿಸಲ್ಪಟ್ಟ ಮನಸ್ಸಾಕ್ಷಿಯು, ದೇವರೊಂದಿಗೆ ಆದರಣೀಯವಾದ, ವೈಯಕ್ತಿಕ ಸಂಬಂಧಕ್ಕೆ ನಡೆಸುವುದಲ್ಲದೆ, ನಮ್ಮ ರಕ್ಷಣೆಗೂ ಅತ್ಯಾವಶ್ಯಕವಾಗಿದೆ. (ಇಬ್ರಿ. 10:22; 1 ಪೇತ್ರ 1:15, 16) [w-KA98 9/1 ಪು. 4 ಪ್ಯಾರ. 4]
3. ನ್ಯಾಯವಾದ ಕೋಪಕ್ಕೆ ತಕ್ಕ ಸ್ಥಾನವಿರುವುದಾದರೂ, ಕೋಪವು ಒಂದು ಎಡವುಗಲ್ಲಾಗಿ ಪರಿಣಮಿಸುವ ಅಪಾಯವು ಯಾವಾಗಲೂ ಇರುತ್ತದೆ. [w-KA99 8/15 ಪುಟಗಳು 8, 9]
4. ಯೇಸುವಿನ ಸಾವಿರ ವರ್ಷದಾಳ್ವಿಕೆಯನ್ನು ಸೊಲೊಮೋನನ ಶಾಂತಿ ಮತ್ತು ಸಮೃದ್ಧಿಯ 40 ವರ್ಷದ ಆಳ್ವಿಕೆಗೆ ಹೋಲಿಸಬಹುದು. (1 ಅರ. 4:24, 25, 29) [ವಾರದ ಬೈಬಲ್ ವಾಚನ; w90 6/1 ಪು. 6 ಪ್ಯಾರ. 5 ನ್ನು ನೋಡಿ.]
5. ಅಬೀಯನು ಯೋಗ್ಯ ರೀತಿಯಲ್ಲಿ ಹೂಳಲ್ಪಟ್ಟದ್ದು, ಯಾರೊಬ್ಬಾಮನ ಮನೆತನದವರೊಳಗೆ ಅವನೊಬ್ಬನೇ ಯೆಹೋವನ ನಂಬಿಗಸ್ತ ಆರಾಧಕನಾಗಿದ್ದನು ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ. (1 ಅರ. 14:10, 13) [ವಾರದ ಬೈಬಲ್ ವಾಚನ; w-KA95 4/1 ಪು. 12 ಪ್ಯಾರ. 11 ನ್ನು ನೋಡಿ.]
6. ಕ್ರೈಸ್ತ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದು, ಒಬ್ಬನು ಪ್ರೌಢನಾಗಿರುವ ದೇವರ ಸೇವಕನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ. [w-KA98 10/1 ಪು. 28 ಪ್ಯಾರ. 2]
7. ಯೆಹೋವನು ಎಲೀಯನಿಗೆ ಅತಿಮಾನುಷ ಧೈರ್ಯವನ್ನು ಕೊಟ್ಟನು ಮತ್ತು ಭಯದಿಂದಲೂ ಅವನನ್ನು ರಕ್ಷಿಸಿದನು. (1 ಅರ. 18:17, 18, 21, 40, 46) [ವಾರದ ಬೈಬಲ್ ವಾಚನ; w-KA98 1/1 ಪು. 31 ಪ್ಯಾರ. 2 ನ್ನು ನೋಡಿ.]
8. ಮನ್ನ ಸಹಜವಾಗಿ ದೊರಕುತ್ತಿದ್ದ ಆಹಾರವಾಗಿತ್ತು. [w-KA99 8/15 ಪು. 25]
9. ಎಲ್ಲ ರಾಷ್ಟ್ರಗಳ ಪ್ರಾಮಾಣಿಕ ಸ್ತ್ರೀಪುರುಷರನ್ನು ಸ್ವೀಕರಿಸುವ ಯೆಹೋವನ ಸಿದ್ಧಮನಸ್ಸನ್ನು ನಾವು ಎಲೀಯ ಮತ್ತು ನಾಮಾನರನ್ನು ಒಳಗೊಂಡ ಘಟನೆಯಿಂದ ಗಮನಿಸಬಹುದು. ಇಂದು ಲೋಕದಲ್ಲಿ ವ್ಯಾಪಕವಾಗಿರುವ ಸಂಕುಚಿತ ಸ್ವಭಾವದ ಧಾರ್ಮಿಕ ವೈಷಮ್ಯಕ್ಕಿಂತ ಯೆಹೋವನ ಗುಣವು ಉನ್ನತವಾಗಿದೆ ಎಂಬ ಆಶ್ವಾಸನೆಯನ್ನು ಇದು ನಮಗೆ ಕೊಡುತ್ತದೆ. [ವಾರದ ಬೈಬಲ್ ವಾಚನ; w-KA99 6/15 ಪು. 23 ನ್ನು ನೋಡಿ.]
10. 2 ಅರಸುಗಳು 11:12ರಲ್ಲಿ ತಿಳಿಸಲ್ಪಟ್ಟಿರುವಂತೆ, ಅರಸನಿಗೆ “ಧರ್ಮಶಾಸ್ತ್ರವನ್ನು” ಕೊಡುವುದೆಂದರೆ, ಅರಸನು ದೇವರ ನಿಯಮಗಳ ಕುರಿತು ನೀಡುವ ವಿವರಣೆಯೇ ಕೊನೆಯದು ಮತ್ತು ಜನರು ಅದನ್ನು ಪಾಲಿಸಲೇಬೇಕು ಎಂಬುದರ ಸಾಂಕೇತಿಕ ಭಾವಾಭಿನಯವಾಗಿತ್ತು. [ವಾರದ ಬೈಬಲ್ ವಾಚನ; w91 2/1 ಪು. 31 ಪ್ಯಾರ. 6.]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. 1 ಯೋಹಾನ 2:15-17ರ ಹೊಂದಿಕೆಯಲ್ಲಿ ದೇವಭಕ್ತಿಯುಳ್ಳ ಹೆತ್ತವರು ತಮ್ಮ ಮಕ್ಕಳು ತಕ್ಕದಾದ ಐಹಿಕ ಕೆಲಸವನ್ನು ಆಯ್ಕೆಮಾಡುವಂತೆ ಮಾರ್ಗದರ್ಶಿಸುವಾಗ, ಅವರು ಯಾವುದರಿಂದ ದೂರವಿರುವಂತೆ ಉತ್ತೇಜಿಸಬೇಕು? [w-KA98 7/15 ಪು. 5 ಪ್ಯಾರ. 2]
12. “ಕತ್ತಿಗಿಂತ ಕಾಡೇ ಹೆಚ್ಚಿನ ಸಂಹಾರಕ್ಕೆ ಕಾರಣವಾಯಿತು” ಎಂದು 2 ಸಮುವೇಲ 18:8ರಲ್ಲಿ ಹೇಳಿರುವುದರ ಅರ್ಥವೇನು? [ವಾರದ ಬೈಬಲ್ ವಾಚನ; w-KA88 4/1 ಪು. 31 ಪ್ಯಾರ. 2 ನ್ನು ನೋಡಿ.]
13. ಗೊಲ್ಯಾತನ ಸಂಬಂಧಿಕರಾಗಿದ್ದ ರೆಫಾಯರನ್ನು ಇಂದು ಯಾರಿಗೆ ಹೋಲಿಸಬಹುದು ಮತ್ತು ಅವರು ಏನನ್ನು ಮಾಡಲು ಪ್ರಯತ್ನಿಸುತ್ತಾರೆ? (2 ಸಮು. 21:15-22) [ವಾರದ ಬೈಬಲ್ ವಾಚನ; w89 1/1 ಪು. 20 ಪ್ಯಾರ. 8 ನ್ನು ನೋಡಿ.]
14. ಸಮಾನಸ್ಥರ ಒತ್ತಡ ಎಂದರೇನು? [w-KA99 8/1 ಪು. 22]
15. ಸಬ್ಬತ್ ನಿಯಮವನ್ನು ಉಲ್ಲಂಘಿಸಿದ ಕಾರಣ, ವ್ಯಕ್ತಿಯೊಬ್ಬನು ಕೊಲ್ಲಲ್ಪಟ್ಟ ಘಟನೆಯಿಂದ ಯಾವ ಪ್ರಾಮುಖ್ಯ ಮೂಲತತ್ವವನ್ನು ನಾವು ಕಲಿಯಬಹುದು? (ಅರಣ್ಯ. 15:35) [w-KA98 9/1 ಪು. 20 ಪ್ಯಾರ. 2]
16. ‘ಸೊಲೊಮೋನನ ಜ್ಞಾನಕ್ಕೆ’ ಕಿವಿಗೊಡಲು ಬಹಳ ದೂರದಿಂದ ಪ್ರಯಾಣವನ್ನು ಮಾಡಿದ ಶೆಬದ ರಾಣಿಯನ್ನು ನಾವು ಹೇಗೆ ಅನುಕರಿಸಬಹುದು? (1 ಅರ. 10:1-9) [ವಾರದ ಬೈಬಲ್ ವಾಚನ; w-KA99 7/1 ಪು. 31 ಪ್ಯಾರ. 1-2 ನ್ನು ನೋಡಿ.]
17. 1 ಅರಸುಗಳು 17:3, 4, 7-9, 17-24ಕ್ಕನುಸಾರ, ಯಾವ ಮೂರು ವಿಧಗಳಲ್ಲಿ ಎಲೀಯನು ಯೆಹೋವನಲ್ಲಿ ತನ್ನ ನಂಬಿಕೆಯನ್ನು ಪ್ರದರ್ಶಿಸಿದನು? [ವಾರದ ಬೈಬಲ್ ವಾಚನ; w-KA92 4/1 ಪು. 19 ಪ್ಯಾರ. 5 ನ್ನು ನೋಡಿ.]
18. ನಾಬೋತನು ತನ್ನ ದ್ರಾಕ್ಷೇತೋಟವನ್ನು ಅಹಾಬನಿಗೆ ಕೊಡಲು ನಿರಾಕರಿಸಿದ್ದು, ಅವನ ಹಟಮಾರಿತನವನ್ನು ತೋರಿಸುವುದಿಲ್ಲವೆಂದು ಏಕೆ ಹೇಳಬಹುದು? (1 ಅರ. 21:2, 3) [ವಾರದ ಬೈಬಲ್ ವಾಚನ; w-KA97 8/1 ಪು. 13 ಪ್ಯಾರ. 18 ನ್ನು ನೋಡಿ.]
19. 2 ಅರಸುಗಳು 6:16ರಲ್ಲಿರುವ ಮಾತುಗಳು ಯೆಹೋವನ ಸೇವಕರನ್ನು ಇಂದು ಯಾವ ರೀತಿಯಲ್ಲಿ ಪ್ರೋತ್ಸಾಹಿಸಿವೆ? [ವಾರದ ಬೈಬಲ್ ವಾಚನ; w-KA98 6/15 ಪು. 18 ಪ್ಯಾರ. 5 ನ್ನು ನೋಡಿ.]
20. ಧರ್ಮಾಧಿಕಾರ ವ್ಯಾಪಾರದ ಕುರಿತು ಇಂದು ನಿಜ ಕ್ರೈಸ್ತರು ಯಾವ ರೀತಿಯಲ್ಲಿ ದೂರವಿರಬೇಕು? [w-KA98 11/15 ಪು. 28 ಪ್ಯಾರ. 5]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ನಿಜ ಕ್ರೈಸ್ತನೊಬ್ಬನು _________________________ ಒಳಗಾಗಿ, _________________________ ಅಪ್ರಸನ್ನಗೊಳಿಸುವ ಪದ್ಧತಿಗಳಲ್ಲಿ ಭಾಗವಹಿಸಬಾರದು. (ಜ್ಞಾನೋ. 29:25; ಮತ್ತಾ. 10:28) [w-KA98 7/15 ಪು. 20 ಪ್ಯಾರ. 5]
22. ಅಗ್ರಿಪ್ಪನ ಮುಂದೆ ಸಾಕ್ಷಿಕೊಡುವಾಗ ಪೌಲನು _________________________ ಉಪಯೋಗಿಸುತ್ತಾ, ತಾನು ಮತ್ತು ಅಗ್ರಿಪ್ಪನು _________________________ ವಿಷಯಗಳ ಕುರಿತಾದ ಅಂಶಗಳನ್ನು ಒತ್ತಿಹೇಳಿದನು. (ಅ.ಕೃ. 26:2, 3, 26, 27) [w-KA98 9/1 ಪು. 31 ಪ್ಯಾರ. 3]
23. ದೇವರು ಅದೃಶ್ಯನಾಗಿರುವುದರಿಂದ, ಆತನು _________________________ ಎಂದು ಕೆಲವರಿಗೆ ಅನಿಸಬಹುದು. ಆದರೆ _________________________ ಅವಧಿಗಳು, ದೀರ್ಘವೂ ಗಾಢವೂ ಆದದ್ದಾಗಿರುವಾಗ, ‘ಅದೃಶ್ಯನಾಗಿರುವಾತನನ್ನು ದೃಷ್ಟಿಸುವಂತೆ’ ಅದು ಒಬ್ಬನನ್ನು ಶಕ್ತಗೊಳಿಸುವುದು. (ಇಬ್ರಿ. 11:27) [w-KA98 9/15 ಪು. 21 ಪ್ಯಾರ. 3-4]
24. ಸಿರಿಯಾ ದೇಶದ ಅಧಿಕಾರಿಯಾಗಿದ್ದ _________________________ ವಿಷಯದಲ್ಲಿ ನೋಡಿದಂತೆ, ಕೆಲವೊಮ್ಮೆ ಸ್ವಲ್ಪ _________________________ ತೋರಿಸುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿದೆ. [ವಾರದ ಬೈಬಲ್ ವಾಚನ; w-KA99 2/1 ಪು. 3 ಪ್ಯಾರ. 6-ಪು. 4 ಪ್ಯಾರ. 1 ನ್ನು ನೋಡಿ.]
25. ಯೆಹೋನಾದಾಬನ ಮನಸ್ಸು ಯೇಹುವಿನೊಂದಿಗಿದ್ದಂತೆ, ಇಂದು _________________________ ಈ ಭೂಮಿಯ ಮೇಲೆ _________________________ ಪ್ರತಿನಿಧಿಸಲ್ಪಟ್ಟಿರುವ ಮಹಾ ಯೇಹುವಾಗಿರುವ _________________________ ಪೂರ್ಣಹೃದಯದಿಂದ ಅಂಗೀಕರಿಸುತ್ತದೆ ಮತ್ತು ಅವನೊಂದಿಗೆ ಸಹಕರಿಸುತ್ತದೆ. (2 ಅರ. 10:15, 16) [ವಾರದ ಬೈಬಲ್ ವಾಚನ; w-KA98 1/1 ಪು. 13 ಪ್ಯಾರ. 5-6 ನ್ನು ನೋಡಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ‘ಯೆಹೂದ್ಯಕುಲಗಳವರ ಖಾನೇಷುಮಾರಿಮಾಡುವ’ ಮೂಲಕ ಪಾಪಮಾಡುವಂತೆ ದಾವೀದನನ್ನು ಹುರಿದುಂಬಿಸಿದವನು (ಸೈತಾನ; ಯೆಹೋವ; ಯೋವಾಬ) ಆಗಿದ್ದನು. (2 ಸಮು. 24:1) [ವಾರದ ಬೈಬಲ್ ವಾಚನ; w-KA92 7/15 ಪು. 5 ಪ್ಯಾರ. 2 ನ್ನು ನೋಡಿ.]
27. ಯೆರೂಸಲೇಮಿನಲ್ಲಿ ಯೆಹೋವನ ಆಲಯದ ಸಮರ್ಪಣೆಯ ಸಮಯದಲ್ಲಿ ರಾಜ ಸೊಲೊಮೋನನು ಮಾಡಿದ ಸಾರ್ವಜನಿಕ ಪ್ರಾರ್ಥನೆಯಲ್ಲಿ ಅವನು (ನಮ್ರತೆಯನ್ನು; ವಿವೇಕವನ್ನು; ದೇವಾಲಯವನ್ನು ಕಟ್ಟಿಮುಗಿಸಿದ್ದಕ್ಕಾಗಿ ಜಂಬವನ್ನು) ತೋರಿಸಿದನು. (1 ಅರ. 8:27) [ವಾರದ ಬೈಬಲ್ ವಾಚನ; w-KA99 1/15 ಪು. 17 ಪ್ಯಾರ. 7 ನ್ನು ನೋಡಿ.]
28. ಸೊಲೊಮೋನನು ಯೆರೂಸಲೇಮಿನಲ್ಲಿ ದೇವಾಲಯವನ್ನು ಹಾಗೂ ತನ್ನ ಮನೆಯನ್ನು ಕಟ್ಟಲಿಕ್ಕಾಗಿ ತೆಗೆದುಕೊಂಡು 20 ವರ್ಷಗಳ ಸಮಯವು, (1919; 1923; 1931)ರಲ್ಲಿ ಪ್ರಾರಂಭವಾದ, ಮತ್ತು (1938; 1942; 1950)ರಲ್ಲಿ ಮುಕ್ತಾಯಗೊಂಡ ಬೋಧನೀಯ ಮತ್ತು ಸಂಘಟನಾ ಮರು ಅಳವಡಿಸುವಿಕೆಗಳ ಕಾಲಾವಧಿಗೆ ಹೋಲುತ್ತದೆ. (1 ಅರ. 9:10) [ವಾರದ ಬೈಬಲ್ ವಾಚನ; w-KA92 3/1 ಪು. 20 ರಲ್ಲಿರುವ ರೇಖಾಚೌಕವನ್ನು ನೋಡಿ.]
29. 2 ಅರಸುಗಳು 2:11ರಲ್ಲಿ ಉಪಯೋಗಿಸಿರುವ “ಪರಲೋಕ” ಎಂಬ ಪದವು (ದೇವರ ಆತ್ಮಿಕ ವಾಸಸ್ಥಾನ; ಭೌತಿಕ ವಿಶ್ವ; ಪಕ್ಷಿಗಳು ಹಾರಾಡುವ ಮತ್ತು ಗಾಳಿಯು ಬೀಸುವ ಭೂಮಿಯ ವಾಯುಮಂಡಲ)ಕ್ಕೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w-KA97 9/15 ಪು. 15 ರಲ್ಲಿರುವ ರೇಖಾಚೌಕವನ್ನು ನೋಡಿ.]
30. ಯೇಸು ನಜರೇತಿಗೆ ಬದಲಾಗಿ ಬೇತ್ಲೆಹೇಮಿನಲ್ಲಿ ಹುಟ್ಟಲು ಸಾಧ್ಯವಾಗುವಂತೆ ಖಾನೇಷುಮಾರಿಯನ್ನು ನಡೆಸುವಂತೆ ಆಜ್ಞೆಯನ್ನು ಕೊಟ್ಟವನು (ಮಹಾ ಹೆರೋದನು; ಚಕ್ರವರ್ತಿ ಔಗುಸ್ತನು; ತಿಬೇರಿಯನು) ಆಗಿದ್ದನು. [w-KA98 12/15 ಪು. 7 ರಲ್ಲಿರುವ ರೇಖಾಚೌಕ]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಕೀರ್ತ. 15:4; ಇಬ್ರಿ. 10:24, 25; 2 ಅರ. 3:11; ಕೊಲೊ. 3:13; ಗಲಾ. 6:10
31. ಯೆಹೋವನು ತನ್ನ ಜನರು ಕ್ರಮವಾಗಿ ಕೂಡಿಬರಬೇಕೆಂದು ಆದೇಶಿಸಿರುವುದಕ್ಕೆ ಒಂದು ಕಾರಣವು, ಸಮಾನಸ್ಥರ ಒತ್ತಡದ ಸಕಾರಾತ್ಮಕ ಪ್ರಭಾವಕ್ಕಾಗಿಯೇ ಆಗಿದೆ. [w-KA99 8/1 ಪು. 23]
32. ಇತರರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ನಮ್ಮ ಆಲೋಚನೆಗಳು ಹಾಗೂ ಕ್ರಿಯೆಗಳನ್ನು ಕೇಂದ್ರಿಕರಿಸುವಂಥ ಹಿತಕರವಾದ ಸಕಾರಾತ್ಮಕ ಚಟುವಟಿಕೆಯು, ಅನುಭೂತಿ ಮತ್ತು ಭರವಸೆಯನ್ನು ಮೂಡಿಸಿ, ಸುಲಭವಾಗಿ ಕೋಪವನ್ನು ಕೆರಳಿಸಬಲ್ಲ ಮನಸ್ತಾಪಗಳನ್ನು ಶಮನಗೊಳಿಸುವುದು. [w-KA99 8/15 ಪು. 9]
33. ಯೆಹೋವನ ದಯೆಗಾಗಿರುವ ಗಣ್ಯತೆಯು, ನಾವು ನಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಮತ್ತು ಇತರರ ತಪ್ಪುಗಳನ್ನು ಮುಚ್ಚವಂತೆಯೂ ಪ್ರಚೋದಿಸುವುದು. [w-KA98 11/1 ಪು. 6 ಪ್ಯಾರ. 3]
34. ವಿಶೇಷ ರೀತಿಯ ಸೇವೆಯಲ್ಲಿರುವ ಯೆಹೋವನ ನಂಬಿಗಸ್ತ ಸೇವಕರಿಗೆ ಅತಿಥಿಸತ್ಕಾರವನ್ನು ತೋರಿಸುವುದು ಮತ್ತು ದೀನಭಾವದಿಂದ ಅವರ ಉಪಚಾರಮಾಡುವುದು ಒಂದು ಸುಯೋಗವಾಗಿದೆ. [ವಾರದ ಬೈಬಲ್ ವಾಚನ; w-KA97 11/1 ಪು. 31 ಪ್ಯಾರ. 1 ನ್ನು ನೋಡಿ.]
35. ಸಾಲವನ್ನು ಹಿಂದಿರುಗಿಸುವ ವಿಷಯದಲ್ಲಿ, ದೇವಭಯವುಳ್ಳ ವ್ಯಕ್ತಿಯೊಬ್ಬನು, ತಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಕಷ್ಟಕರವನ್ನಾಗಿ ಮಾಡುವ ಮುಂಗಾಣದ ಸನ್ನಿವೇಶಗಳು ಬರುವುದಾದರೂ, ಅವನು ಕೊಟ್ಟ ಮಾತನ್ನು ಉಳಿಸಿಕೊಳ್ಳುವನು. [w-KA98 11/15 ಪು. 27 ಪ್ಯಾರ. 1]