ಎಪ್ರಿಲ್ಗಾಗಿ ಸೇವಾ ಕೂಟಗಳು
ಎಪ್ರಿಲ್ 7ರಿಂದ ಆರಂಭವಾಗುವ ವಾರ
ಸಂಗೀತ 100 (6)
12 ನಿ: ಸ್ಥಳಿಕ ತಿಳಿಸುವಿಕೆಗಳು. ಸಾಹಿತ್ಯ ನೀಡುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪ್ರಚಲಿತ ಪತ್ರಿಕೆಗಳಲ್ಲಿನ ಮಾತನಾಡುವ ವಿಷಯಗಳನ್ನು ತಿಳಿಸಿರಿ.
15 ನಿ: “ಜನಸಮೂಹಗಳು ಕೂಡಿಸಲ್ಪಡುತ್ತಿವೆ.” ಪ್ರಶ್ನೋತ್ತರಗಳು. ಆಗಸ್ಟ್ 15, 1993ರ ಕಾವಲಿನಬುರುಜುವಿನಲ್ಲಿ, 12-17ನೆಯ ಪುಟಗಳಲ್ಲಿ ಆವರಿಸಲ್ಪಟ್ಟಿರುವ ಮುಖ್ಯ ಸಲಹೆಗಳನ್ನು ಪುನರ್ವಿಮರ್ಶಿಸಿರಿ.
18 ನಿ: “ಅನನುಭವಿಗಳು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿರಿ.” ಪ್ರಶ್ನೋತ್ತರಗಳು. ಅಪೇಕ್ಷಿಸು ಬ್ರೋಷರಿನ ವೈಶಿಷ್ಟ್ಯಗಳನ್ನು ಪುನರ್ವಿಮರ್ಶಿಸಿರಿ: ಸರಳೀಕರಿಸಲ್ಪಟ್ಟ ಅಭ್ಯಾಸ ವಿಧಾನ, ಸಮಯೋಚಿತ ಪ್ರಶ್ನೆಗಳು, ಆಕರ್ಷಕ ಚಿತ್ರಗಳು, ಹೇರಳವಾದ ವಚನದ ರೆಫೆರನ್ಸ್ಗಳು. ಕಟ್ಟಕಡೆಗೆ ಜ್ಞಾನ ಪುಸ್ತಕಕ್ಕೆ ನಡಿಸುವ ಅಭ್ಯಾಸಗಳನ್ನು ಆರಂಭಿಸುವ ಗುರಿಯನ್ನು ಒತ್ತಿಹೇಳಿರಿ. 4ನೆಯ ಪ್ಯಾರಗ್ರಾಫ್ನಲ್ಲಿ ರೇಖಿಸಲ್ಪಟ್ಟಿರುವ ಪ್ರಸ್ತಾವವನ್ನು ಉಪಯೋಗಿಸುತ್ತಾ, ಒಂದು ಅಭ್ಯಾಸವನ್ನು ಆರಂಭಿಸುವ ವಿಧವನ್ನು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ. ಸಭೆಯಲ್ಲಿರುವ ಎಲ್ಲಾ ಹೆತ್ತವರು ತಮ್ಮ ಎಳೆಯ ಮಕ್ಕಳೊಂದಿಗೆ ಬ್ರೋಷರನ್ನು ಅಭ್ಯಾಸಿಸುವಂತೆ ಉತ್ತೇಜಿಸಿರಿ.
ಸಂಗೀತ 130 (22) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 14ರಿಂದ ಆರಂಭವಾಗುವ ವಾರ
ಸಂಗೀತ 107 (4)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಸಮಯವು ಅನುಮತಿಸಿದಂತೆ, ಚಂದಾಗಳನ್ನು ಅಥವಾ ಅಪೇಕ್ಷಿಸು ಬ್ರೋಷರನ್ನು ನೀಡಿರುವ, ಅಥವಾ ಆ ಬ್ರೋಷರನ್ನು ಉಪಯೋಗಿಸಿ ಬೈಬಲ್ ಅಭ್ಯಾಸಗಳನ್ನು ಆರಂಭಿಸಿರುವ ಕುರಿತಾದ ಸ್ಥಳಿಕ ಕ್ಷೇತ್ರ ಅನುಭವಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
15 ನಿ: “ನಮ್ಮ ಹೆಸರಿನ ಹಿಂದಿರುವ ಸಂಸ್ಥೆಯ ಕಡೆಗೆ ವಿದ್ಯಾರ್ಥಿಗಳನ್ನು ನಿರ್ದೇಶಿಸುವುದು.” (1-6ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. 5-6ನೆಯ ಪ್ಯಾರಗ್ರಾಫ್ಗಳನ್ನು ಮತ್ತು ಉದ್ಧರಿಸಲ್ಪಟ್ಟಿರುವ ವಚನಗಳನ್ನು ಓದಿರಿ. ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ವಿಡಿಯೊವನ್ನು ನೋಡಿದ ಬೈಬಲ್ ವಿದ್ಯಾರ್ಥಿಗಳ ಪ್ರತಿಕ್ರಿಯೆಯ ಕುರಿತಾಗಿ ಸ್ಥಳಿಕ ಅನುಭವಗಳನ್ನು ತಿಳಿಸಿರಿ.
20 ನಿ: “ದೇವರು ಅಪೇಕ್ಷಿಸುವುದನ್ನು ಇತರರಿಗೆ ಕಲಿಸಿರಿ.” ಸಭಿಕರೊಂದಿಗೆ 1-4ನೆಯ ಪ್ರಾರಗ್ರಾಫ್ಗಳ ಚರ್ಚೆ. 5ನೆಯ ಪ್ಯಾರಗ್ರಾಫ್ನಲ್ಲಿರುವ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ನಾಲ್ಕು ಭಿನ್ನ ಸನ್ನಿವೇಶಗಳನ್ನು ಬಳಸಿರಿ—ಬೀದಿಯಲ್ಲಿ, ಒಂದು ಮನೆಯಲ್ಲಿ, ಒಂದು ವ್ಯಾಪಾರದ ಸ್ಥಳದಲ್ಲಿ, ಮತ್ತು ಒಂದು ಉದ್ಯಾನವನದಲ್ಲಿ. ಈ ರಾತ್ರಿ ರಾಜ್ಯ ಸಭಾಗೃಹವನ್ನು ಬಿಟ್ಟುಹೋಗುವ ಮುಂಚೆ ಕ್ಷೇತ್ರ ಸೇವೆಗಾಗಿ ಬ್ರೋಷರುಗಳು ಮತ್ತು ಪತ್ರಿಕೆಗಳನ್ನು ಕೊಂಡುಹೋಗುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ.
ಸಂಗೀತ 126 (3) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 21ರಿಂದ ಆರಂಭವಾಗುವ ವಾರ
ಸಂಗೀತ 113 (12)
15 ನಿ: ಸ್ಥಳಿಕ ತಿಳಿಸುವಿಕೆಗಳು. ಮೇ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಇನ್ನೂ ತಡವಾಗಿರುವುದಿಲ್ಲವೆಂಬುದನ್ನು ವಿವರಿಸಿರಿ. ಪ್ರಶ್ನಾ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ, ಮತ್ತು ರಾಜ್ಯ ಸಭಾಗೃಹದಲ್ಲಿರುವ ಪುಸ್ತಕ ಭಂಡಾರವನ್ನು ಪೂರ್ಣಗೊಳಿಸಲು ನಿರ್ದಿಷ್ಟ ಪುಸ್ತಕಗಳ ಅಗತ್ಯವಿರುವಲ್ಲಿ, ಸಭೆಗೆ ತಿಳಿಸಿರಿ.
15 ನಿ: “ನಮ್ಮ ಹೆಸರಿನ ಹಿಂದಿರುವ ಸಂಸ್ಥೆಯ ಕಡೆಗೆ ವಿದ್ಯಾರ್ಥಿಗಳನ್ನು ನಿರ್ದೇಶಿಸುವುದು.” (7-14ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. ಕೂಟಗಳಿಗೆ ಹಾಜರಾಗುವ ಅಗತ್ಯದ ಕುರಿತಾಗಿ ಒಬ್ಬ ವಿದ್ಯಾರ್ಥಿಯೊಂದಿಗೆ ಒಂದು ದಯಾಪರವಾದ, ಮುಚ್ಚುಮರೆಯಿಲ್ಲದ ಚರ್ಚೆ ನಡಿಸುವ ವಿಧವನ್ನು ಒಬ್ಬ ಸಮರ್ಥ ಶಿಕ್ಷಕನು ಪ್ರತ್ಯಕ್ಷಾಭಿನಯಿಸಲಿ.
15 ನಿ: ನಮ್ಮ ಸಾಹಿತ್ಯದ ಪೂರ್ಣ ಉಪಯೋಗವನ್ನು ಮಾಡುವುದು. ಒಬ್ಬ ಹಿರಿಯನಿಂದ ಭಾಷಣ. (ಜನವರಿ 1996ರ ನಮ್ಮ ರಾಜ್ಯದ ಸೇವೆಯ 3-5ನೆಯ ಪುಟಗಳನ್ನು ನೋಡಿರಿ.) ಸಭೆಗಳು ಪ್ರತಿ ತಿಂಗಳು ವಾಸ್ತವವಾಗಿ ವಿತರಿಸುವ ಪತ್ರಿಕೆಗಳಿಗಿಂತ ತೀರ ಹೆಚ್ಚನ್ನು ಆರ್ಡರ್ ಮಾಡುತ್ತವೆಂಬುದನ್ನು ವರದಿಗಳು ತೋರಿಸುತ್ತವೆ. ಸುಮಾರು 50 ಪ್ರತಿಶತದಷ್ಟು ಪತ್ರಿಕೆಗಳು, ಕೊಡಿಕೆಗಳಾಗಿ ಎಂದೂ ವರದಿಸಲ್ಪಡುವುದೇ ಇಲ್ಲ. (ಸ್ಥಳಿಕವಾಗಿ ಸಂಖ್ಯಾಸಂಗ್ರಹಗಳು ಸೂಚಿಸುವ ಸಂಗತಿಯನ್ನು ತೋರಿಸಿರಿ.) ಈ ಪತ್ರಿಕೆಗಳಿಗೆ ಏನಾಗುತ್ತದೆ? ಅನೇಕ ಪತ್ರಿಕೆಗಳು ಒಂದು ಶೆಲ್ಫ್ ಮೇಲೆ ಉಳಿಯುತ್ತವೆ ಅಥವಾ ಎಸೆಯಲ್ಪಡುತ್ತವೆ. ಇದನ್ನು ಹೇಗೆ ತಪ್ಪಿಸಸಾಧ್ಯವಿದೆ? ಪ್ರತಿಯೊಬ್ಬ ಪ್ರಚಾರಕನು ತನ್ನ ಅಗತ್ಯಗಳನ್ನು ಜಾಗರೂಕತೆಯಿಂದ ಅಂದಾಜುಮಾಡಬೇಕು ಮತ್ತು ತಾನು ನೀಡಸಾಧ್ಯವಿರುವಷ್ಟು ಪತ್ರಿಕೆಗಳಿಗಾಗಿ ಮಾತ್ರ ಆರ್ಡರ್ ಮಾಡಬೇಕು. ನಾವು ಸಂಪರ್ಕಿಸುವವರೆಲ್ಲರಿಗೂ ಪತ್ರಿಕೆಗಳನ್ನು ನೀಡುವ ಒಂದು ರೂಢಿಯನ್ನು ಮಾಡಿಕೊಳ್ಳಿರಿ. ಹಳೆಯ ಸಂಚಿಕೆಗಳು ಹಾಳಾಗಿ ಹೋಗುವಂತೆ ಬಿಡಬೇಡಿರಿ. ಕ್ರಮವಾಗಿ ಪತ್ರಿಕಾ ಸೇವೆಯಲ್ಲಿ ಪಾಲ್ಗೊಳ್ಳಿರಿ.
ಸಂಗೀತ 128 (13) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 28ರಿಂದ ಆರಂಭವಾಗುವ ವಾರ
ಸಂಗೀತ 121 (21)
15 ನಿ: ಸ್ಥಳಿಕ ತಿಳಿಸುವಿಕೆಗಳು. ಎಪ್ರಿಲ್ ತಿಂಗಳಿಗಾಗಿರುವ ತಮ್ಮ ರಿಪೋರ್ಟುಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ. ಮೇ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿರುವವರ ಹೆಸರುಗಳನ್ನು ಪ್ರಕಟಿಸಿರಿ. ಸ್ಥಳಿಕವಾಗಿ ಕ್ಷೇತ್ರ ಸೇವೆಯ ಕೂಟಗಳಿಗಾಗಿ ಮಾಡಲ್ಪಡುತ್ತಿರುವ ಹೆಚ್ಚಿನ ಏರ್ಪಾಡುಗಳನ್ನು ತಿಳಿಯಪಡಿಸಿರಿ. ತಿಂಗಳಿನ ಪ್ರತಿಯೊಂದು ರಜಾದಿನದಂದು, ಇಡೀ ದಿನಕ್ಕಾಗಿ ಕ್ಷೇತ್ರ ಸೇವೆಯು ಯೋಜಿಸಲ್ಪಡಸಾಧ್ಯವಿದೆ. ಮೇ ತಿಂಗಳಿನಲ್ಲಿ, ಅಭ್ಯಾಸಗಳನ್ನು ಆರಂಭಿಸುವ ಗುರಿಯೊಂದಿಗೆ ಬ್ರೋಷರ್ ಕೊಡಿಕೆಗಳನ್ನು ಮಾಡಿದಲ್ಲೆಲ್ಲಾ ಪುನರ್ಭೇಟಿಗಳನ್ನು ಮಾಡಲು ಒಂದು ವಿಶೇಷ ಪ್ರಯತ್ನವು ಮಾಡಲ್ಪಡಬೇಕು. ನಾವು ಅನೌಪಚಾರಿಕವಾಗಿ ಸಾಕ್ಷಿನೀಡುವ ಜನರ ಹೆಸರು ಮತ್ತು ವಿಳಾಸವನ್ನು ಜಾಣ್ಮೆಯಿಂದ ವಿನಂತಿಸಿಕೊಳ್ಳಸಾಧ್ಯವಿರುವ ವಿಧಗಳನ್ನು ಸಂಕ್ಷಿಪ್ತವಾಗಿ ಸೂಚಿಸಿರಿ. ನೀವು ನಿಮ್ಮ ಹೆಸರು ಮತ್ತು ವಿಳಾಸವನ್ನು ಪ್ರಥಮವಾಗಿ ಕೊಡಸಾಧ್ಯವಿದೆ ಮತ್ತು ಅವರನ್ನು ಸಂಪರ್ಕಿಸಲು ಒಂದು ಫೋನ್ ನಂಬರ್ ಇದೆಯೊ ಎಂದು ಕೇಳಿರಿ. ಅವರಿಗೆ ಪರಿಣಾಮಕಾರಿಯಾಗಿ ಕಾರ್ಯನಡಿಸಿರುವ ಇತರ ಸಲಹೆಗಳನ್ನು ಕೊಡುವಂತೆ ಸಭಿಕರನ್ನು ಆಮಂತ್ರಿಸಿರಿ.
15 ನಿ: “ಅವರು ಅದನ್ನು ಏಕೆ ಮಾಡುತ್ತಾರೆ?” ಒಬ್ಬ ಹಿರಿಯನು ಲೇಖನವನ್ನು ಇಬ್ಬರು ಅಥವಾ ಮೂವರು ಕ್ರಮದ ಪಯನೀಯರರೊಂದಿಗೆ ಚರ್ಚಿಸುತ್ತಾನೆ. (ಅವರು ಲಭ್ಯವಿರದಿದ್ದಲ್ಲಿ, ಆಗಾಗ್ಗೆ ಆಕ್ಸಿಲಿಯರಿ ಪಯನೀಯರರೋಪಾದಿ ನಮೂದಿಸಿಕೊಳ್ಳುವವರನ್ನು ಉಪಯೋಗಿಸಿರಿ.) ಜನವರಿ 15, 1994ರ ಕಾವಲಿನಬುರುಜು ಪತ್ರಿಕೆಯಲ್ಲಿ, “ಪಯನೀಯರರು ಆಶೀರ್ವಾದಗಳನ್ನು ಅನುಗ್ರಹಿಸುತ್ತಾರೆ ಹಾಗೂ ಪಡೆಯುತ್ತಾರೆ” ಎಂಬ ಲೇಖನದಿಂದ ಮುಖ್ಯಾಂಶಗಳನ್ನು ಸೇರಿಸಿರಿ. ಪ್ರತಿಯೊಬ್ಬರೂ, ಅವನು ಅಥವಾ ಅವಳು ಪಯನೀಯರ್ ಸೇವೆಯನ್ನು ಏಕೆ ಆರಂಭಿಸಿದರೆಂಬುದನ್ನು ವಿವರಿಸಲಿ. ಹಾಗೆ ಮಾಡಿರುವುದಕ್ಕಾಗಿ ಅವರು ಹೇಗೆ ಆಶೀರ್ವದಿಸಲ್ಪಟ್ಟಿದ್ದಾರೆಂಬುದನ್ನು ತೋರಿಸುವ ಅನುಭವಗಳನ್ನು ತಿಳಿಸುವಂತೆ ಕೇಳಿಕೊಳ್ಳಿರಿ.
15 ನಿ: ಸ್ಥಳಿಕ ಅಗತ್ಯಗಳು. ಹಿರಿಯರು ಈ ಸಮಯವನ್ನು ನಿರ್ದಿಷ್ಟವಾದ ಸ್ಥಳಿಕ ಅಗತ್ಯಗಳ ಕುರಿತಾದ ಮಾಹಿತಿಯನ್ನು ಸಾದರಪಡಿಸಲು ಉಪಯೋಗಿಸಬಹುದು.
ಸಂಗೀತ 129 (18) ಮತ್ತು ಸಮಾಪ್ತಿಯ ಪ್ರಾರ್ಥನೆ.