ಜೂನ್‌ಗಾಗಿ ಸೇವಾ ಕೂಟಗಳು
ಜೂನ್ 3ರ ವಾರ
ಸಂಗೀತ 181 (105)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ದೇಶ ಹಾಗೂ ಸ್ಥಳಿಕ ಸಭೆ—ಇವೆರಡರ—ಮಾಸಿಕ ಕ್ಷೇತ್ರ ಸೇವಾ ವರದಿಯ ಕುರಿತು ಹೇಳಿಕೆಯನ್ನೀಡಿರಿ.
15 ನಿ: “ಅವರ ನಂಬಿಕೆಯನ್ನು ಅನುಕರಿಸಿರಿ.” ಪ್ರಶ್ನೋತ್ತರಗಳು. ಸೆಪ್ಟಂಬರ್ 15, 1991ರ ದ ವಾಚ್‌ಟವರ್ ಪತ್ರಿಕೆಯಲ್ಲಿನ ಪುಟ 13ರಲ್ಲಿರುವ ರೇಖಾಚೌಕದಲ್ಲಿ ಆವರಿಸಲ್ಪಟ್ಟ ನಂಬಿಕೆಯ ಸಾಕ್ಷ್ಯಗಳನ್ನು ಪುನರ್ವಿಮರ್ಶಿಸಿರಿ. ಅನೇಕ ವರ್ಷಗಳ ವರೆಗೆ ತಮ್ಮ ಕ್ರಮವಾದ ರಾಜ್ಯ ಚಟುವಟಿಕೆಯನ್ನು ಕಾಪಾಡಿಕೊಳ್ಳಲು ತಮಗೆ ಯಾವುದು ಸಹಾಯ ಮಾಡಿದೆ ಎಂಬುದನ್ನು ಕಂಡುಹಿಡಿಯಲು, ಒಬ್ಬ ಅಥವಾ ಇಬ್ಬರು ಪ್ರಚಾರಕರ ಇಂಟರ್‌ವ್ಯೂ ಮಾಡಿರಿ.
20 ನಿ: “ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಹಬ್ಬಿಸುವುದು.” (1-3ನೆಯ ಪ್ಯಾರಗ್ರಾಫ್‌ಗಳು) 1ನೆಯ ಪ್ಯಾರಗ್ರಾಫನ್ನು ಆವರಿಸಿರಿ. (ಜನವರಿ 15, 1996ರ ಕಾವಲಿನಬುರುಜು, ಪುಟಗಳು 12-13, ಪ್ಯಾರಗ್ರಾಫ್‌ಗಳು 11-12ರಲ್ಲಿರುವ ಹೇಳಿಕೆಗಳನ್ನು ಸೇರಿಸಿರಿ.) ನಮ್ಮ ರಾಜ್ಯದ ಸೇವೆಯ ಹಿಂದಿನ ಪುಟಕ್ಕಾಗಿರುವ ಹೊಸ ಸ್ವರೂಪವು, ಪುನರ್ಭೇಟಿಗಳನ್ನು ಮಾಡಲು ಹೆಚ್ಚು ಉತ್ತಮವಾಗಿ ಸಿದ್ಧರಾಗಿರುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ ಎಂಬುದನ್ನು ವಿವರಿಸಿರಿ. ದೀರ್ಘ ಸಮಯದ ವರೆಗೆ ಕಾಯುವ ಬದಲಿಗೆ, ಪುನರ್ಭೇಟಿಯನ್ನು ಒಂದೆರಡು ದಿನಗಳೊಳಗೆ ಮಾಡುವುದು ಅನೇಕ ವೇಳೆ ವಿವೇಕಯುತವಾಗಿರುವುದರಿಂದ, ಮನೆ ಮನೆಯ ಭೇಟಿ ಹಾಗೂ ಪುನರ್ಭೇಟಿಗಾಗಿ—ಎರಡಕ್ಕೂ—ಸೂಚಿಸಲ್ಪಟ್ಟ ನಿರೂಪಣೆಗಳನ್ನು ನಾವು ಒಂದೇ ಸೇವಾ ಕೂಟದಲ್ಲಿ ಪರಿಗಣಿಸುವೆವು. ಸಂಕ್ಷಿಪ್ತವಾಗಿ 2 ಮತ್ತು 3ನೆಯ ಪ್ಯಾರಗ್ರಾಫ್‌ಗಳನ್ನು ಪುನರ್ವಿಮರ್ಶಿಸಿರಿ, ಇದನ್ನು ಆ ಪ್ಯಾರಗ್ರಾಫ್‌ಗಳ ಪ್ರತ್ಯಕ್ಷಾಭಿನಯವು ಅನುಸರಿಸಲಿ. ಆರಂಭದ ನಿರೂಪಣೆಯು, ಲೋಕವ್ಯಾಪಕ ಕೆಲಸಕ್ಕೆ ದಾನವು ಹೇಗೆ ಮಾಡಲ್ಪಡಸಾಧ್ಯವಿದೆ ಎಂಬುದರ ಕುರಿತು ಸಂಕ್ಷಿಪ್ತ ಹೇಳಿಕೆಗಳನ್ನು ಒಳಗೊಳ್ಳಬೇಕು. ಲೇಖನದಲ್ಲಿರುವ ಉಳಿದ ನಿರೂಪಣೆಗಳು ಮುಂದಿನ ಎರಡು ಸೇವಾ ಕೂಟಗಳಲ್ಲಿ ಆವರಿಸಲ್ಪಡುವವು.
ಸಂಗೀತ 143 (76) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 10ರ ವಾರ
ಸಂಗೀತ 63 (32)
5 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
10 ನಿ: “‘ದಿನಂಪ್ರತಿ’ ಯೆಹೋವನನ್ನು ಕೊಂಡಾಡಿರಿ.” ಪ್ರಶ್ನೋತ್ತರಗಳು. ಆಕ್ಸಿಲಿಯರಿ ಮತ್ತು ಕ್ರಮದ ಪಯನೀಯರ್ ಕಾರ್ಯಕ್ಕಾಗಿ ಸಕಾರಾತ್ಮಕ ಉತ್ತೇಜನವನ್ನು ನೀಡಿರಿ.
10 ನಿ: “ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಹಬ್ಬಿಸುವುದು.” (4-5ನೆಯ ಪ್ಯಾರಗ್ರಾಫ್‌ಗಳು) ಸಂಕ್ಷಿಪ್ತ ಪೀಠಿಕೆಯ ತರುವಾಯ, 4 ಮತ್ತು 5ನೆಯ ಪ್ಯಾರಗ್ರಾಫ್‌ಗಳಲ್ಲಿರುವ ಆರಂಭದ ಭೇಟಿ ಮತ್ತು ಪುನರ್ಭೇಟಿಗಾಗಿರುವ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಜ್ಞಾನ ಪುಸ್ತಕದ ಎಲ್ಲ ಕೊಡಿಕೆಗಳನ್ನು ತಡವಿಲ್ಲದೆ ಅನುಸರಿಸುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
20 ನಿ: “ಜ್ಞಾನ ಪುಸ್ತಕದೊಂದಿಗೆ ಶಿಷ್ಯರನ್ನಾಗಿ ಮಾಡುವ ವಿಧ.” 1, 2 ಪ್ಯಾರಗ್ರಾಫ್‌ಗಳ ಮೇಲೆ ಆಧರಿತವಾದ ಸಂಕ್ಷಿಪ್ತ ಆರಂಭದ ಹೇಳಿಕೆಗಳನ್ನು ಮಾಡಿರಿ. 3-11ನೆಯ ಪ್ಯಾರಗ್ರಾಫ್‌ಗಳನ್ನು ಪ್ರಶ್ನೋತ್ತರಗಳಿಂದ ಆವರಿಸಿರಿ. ಪುರವಣಿಯ ಉಳಿದ ಭಾಗವನ್ನು ಜುಲೈ ಮತ್ತು ಆಗಸ್ಟ್ ತಿಂಗಳಿನ ಸೇವಾ ಕೂಟಗಳಲ್ಲಿ ಪರಿಗಣಿಸಲಾಗುವುದೆಂದು ವಿವರಿಸಿರಿ. ಅದನ್ನು ಉಳಿಸಿ ಇಟ್ಟುಕೊಳ್ಳುವಂತೆ ಎಲ್ಲರನ್ನು ಉತ್ತೇಜಿಸಿರಿ.
ಸಂಗೀತ 92 (51) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 17ರ ವಾರ
ಸಂಗೀತ 157 (73)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: “ಸ್ನೇಹಭಾವದ ಸಂಭಾಷಣೆಗಳು ಹೃದಯವನ್ನು ತಲಪಬಲ್ಲವು.” ಪ್ರಶ್ನೋತ್ತರಗಳು. ಸ್ನೇಹಭಾವದ ಸಮೀಪಿಸುವಿಕೆಯಿಂದ ತಾವು ಹೇಗೆ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದೆವೆಂಬುದನ್ನು ತೋರಿಸುತ್ತಾ, ಒಬ್ಬರು ಅಥವಾ ಇಬ್ಬರು ಪ್ರಚಾರಕರು ಉತ್ತೇಜನದಾಯಕ ಅನುಭವಗಳನ್ನು ತಿಳಿಸುವಂತೆ ಆಮಂತ್ರಿಸಿರಿ.
20 ನಿ: “ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಹಬ್ಬಿಸುವುದು.” (6-7ನೆಯ ಪ್ಯಾರಗ್ರಾಫ್‌ಗಳು) ಒಂದು ಪುನರ್ಭೇಟಿಯನ್ನು ಮಾಡುವುದರಲ್ಲಿನ ಗುರಿಗಳನ್ನು ಒತ್ತಿಹೇಳಿರಿ: ಆಸಕ್ತಿಯನ್ನು ಬೆಳೆಸುವುದು, ಅಧ್ಯಯನವೊಂದನ್ನು ಆರಂಭಿಸುವುದು, ಹಿಂದಿರುಗಿ ಹೋಗಲು ನಿರ್ದಿಷ್ಟ ಏರ್ಪಾಡುಗಳನ್ನು ಮಾಡುವುದು. 6 ಮತ್ತು 7ನೆಯ ಪ್ಯಾರಗ್ರಾಫ್‌ಗಳಲ್ಲಿರುವ ನಿರೂಪಣೆಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿದ ತರುವಾಯ, ಅಧ್ಯಯನವೊಂದನ್ನು ಆರಂಭಿಸುವುದು ಹೇಗೆಂದು ತೋರಿಸುತ್ತಾ, ಪ್ರತಿಯೊಂದೂ ಪ್ರತ್ಯಕ್ಷಾಭಿನಯಿಸಲ್ಪಡುವಂತೆ ಏರ್ಪಡಿಸಿರಿ. ಜನವರಿ 15, 1996ರ ಕಾವಲಿನಬುರುಜು ಪತ್ರಿಕೆಯ ಪುಟ 14ರಲ್ಲಿರುವ 17ನೆಯ ಪ್ಯಾರಗ್ರಾಫನ್ನು ಓದಿರಿ.
ಸಂಗೀತ 211 (66) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 24ರ ವಾರ
ಸಂಗೀತ 6 (4)
5 ನಿ: ಸ್ಥಳಿಕ ತಿಳಿಸುವಿಕೆಗಳು.
8 ನಿ: ಕ್ಷೇತ್ರ ಸೇವೆಯಲ್ಲಿ ಮಕ್ಕಳಿಗೆ ತರಬೇತಿ ನೀಡುವುದು. ಒಬ್ಬ ಹಿರಿಯನಿಂದ ಒಂದು ಭಾಷಣ. ಚಿಕ್ಕ ಪ್ರಾಯದಿಂದಲೇ ನಮ್ಮ ಮಕ್ಕಳು ನಮ್ಮೊಂದಿಗೆ ಸೇವೆಯಲ್ಲಿ ಸಕ್ರಿಯರಾಗಿರಬೇಕು. ಅವರು ಗಳಿಸುವ ತರಬೇತಿ ಮತ್ತು ಅನುಭವವು, ತದನಂತರದ ವರ್ಷಗಳಲ್ಲಿ ತಮ್ಮ ನಂಬಿಕೆ ಹಾಗೂ ಹುರುಪಿಗೆ ಬಲಿಷ್ಠವಾದ ಆಧಾರವನ್ನು ಒದಗಿಸುವುದು. ಶುಶ್ರೂಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಮತ್ತು ತಮ್ಮನ್ನು ಯೋಗ್ಯವಾಗಿ ನಡೆಸಿಕೊಳ್ಳುವ ಅಗತ್ಯವನ್ನು ಅವರು ಗಣ್ಯಮಾಡುವುದು ಪ್ರಾಮುಖ್ಯವಾಗಿದೆ. ಮಕ್ಕಳು ಪುಂಡ ನಡವಳಿಕೆಯಿಂದ ದೂರವಿರಬೇಕು; ಸೇವೆಯು ಆಟವಾಡಲಿಕ್ಕಾಗಿರುವ ಸಮಯವಲ್ಲ. ವಯಸ್ಕರೊಂದಿಗೆ ಕೆಲಸಮಾಡುವುದು ಅವರಿಗೆ ಅತ್ಯುತ್ತಮವಾಗಿದೆ. ತಮ್ಮ ಸಾಮರ್ಥ್ಯಗಳಿಗನುಸಾರ, ನಿರೂಪಣೆಗಳನ್ನು ನೀಡುವುದರಲ್ಲಿ ಪಾಲ್ಗೊಳ್ಳಲು ಅವರಿಗೆ ಸಹಾಯವು ನೀಡಲ್ಪಡಬೇಕು. (ಆಗಸ್ಟ್ 1, 1988ರ ದ ವಾಚ್‌ಟವರ್, ಪುಟ 15, ಪ್ಯಾರಗ್ರಾಫ್ 20ನ್ನು ನೋಡಿರಿ.) ಮೇಲ್ವಿಚಾರಣೆಯನ್ನು ಒದಗಿಸಲು ಹೆತ್ತವರು ಜವಾಬ್ದಾರರಾಗಿದ್ದಾರೆ; ಅವರ ಮೇಲೆ ಉಸ್ತುವಾರಿ ನಡೆಸಲು ಒಬ್ಬ ಹಿರಿಯ ವ್ಯಕ್ತಿಯಿಲ್ಲದೆ, ಸೇವೆಗಾಗಿರುವ ಕೂಟಗಳಿಗೆ ಅವರು ಮಕ್ಕಳನ್ನು ಕಳುಹಿಸಬಾರದು. ಮಕ್ಕಳು ಚೆನ್ನಾಗಿ ವರ್ತಿಸುವಾಗ ಅವರನ್ನು ಪ್ರಶಂಸಿಸಿರಿ.
12 ನಿ: ಸ್ಥಳಿಕ ಅಗತ್ಯಗಳು. (ಅಥವಾ ಜನವರಿ 1, 1996ರ ಕಾವಲಿನಬುರುಜು, ಪುಟಗಳು 29-31ರ ಮೇಲೆ ಆಧರಿತವಾದ “ಸತ್ಯವಾಕ್ಯವನ್ನು ಸರಿಯಾಗಿ ನಿರ್ವಹಿಸುವುದು” ಎಂಬ ವಿಷಯದ ಮೇಲೆ ಒಂದು ಭಾಷಣ.)
20 ನಿ: “ಪುನಃ ಸೇವೆ ಸಲ್ಲಿಸಲು ಅವರಿಗೆ ಸಹಾಯಮಾಡಿರಿ.” ಹಿರಿಯನೊಬ್ಬನಿಂದ ಭಾಷಣ ಹಾಗೂ ಚರ್ಚೆ. ಅಕ್ರಿಯರನ್ನು ಉತ್ತೇಜಿಸಲು, ನವೆಂಬರ್ 1, 1992ರ ಕಾವಲಿನಬುರುಜು ಪತ್ರಿಕೆಯ, “ನನ್ನ ಕಡೆಗೆ ಪುನಃ ತಿರುಗಿರಿ, ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು,” ಎಂಬ ಲೇಖನವನ್ನು ಉಪಯೋಗಿಸುವಂತೆ ಸೂಚಿಸಿರಿ. ಕೆಲವೊಂದು ಮುಖ್ಯಾಂಶಗಳನ್ನು ಉಲ್ಲೇಖಿಸಿರಿ.
ಸಂಗೀತ 71 (96) ಮತ್ತು ಸಮಾಪ್ತಿಯ ಪ್ರಾರ್ಥನೆ.