ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಜನವರಿ 1ರಿಂದ ಎಪ್ರಿಲ್ 22, 1996ರ ವಾರಗಳ ತನಕದ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ ಇದಾಗಿರುತ್ತದೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲಾ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಾ ನಂಬ್ರಗಳು ಒಂದು ವೇಳೆ ಇರಲಿಕ್ಕಿಲ್ಲ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ತಾನು ಸರಿಯಾದ ವಿಷಯವನ್ನು ಮಾಡುತ್ತಿದ್ದೇನೆಂದು ಒಬ್ಬ ಕ್ರೈಸ್ತನಿಗೆ ಅನಿಸುವ ವರೆಗೆ, ಅವನ ನಿರ್ಣಯಗಳು ಸಮರ್ಪಕವಾಗಿರುವವು. (ಜ್ಞಾನೋ. 14:12) [uw ಪು. 8 ಪ್ಯಾರ. 8(2)]
2. ತ್ರಯೈಕ್ಯದ ಬೋಧನೆಯು ಕ್ರೈಸ್ತಪ್ರಪಂಚದೊಂದಿಗೆ ಉದ್ಭವಿಸಿತು. [uw ಪು. 15, ಪ್ಯಾರ. 8]
3. ಮೋಶೆಯ ಧರ್ಮಶಾಸ್ತ್ರವು ಗತಿಸಿಹೋದರೂ, ಕೊನೆಗೊಂಡ ಸಂಗತಿಗಳಲ್ಲಿ ದಶಾಜ್ಞೆಗಳು ಸೇರಿದ್ದವೆಂಬ ಯಾವ ಸೂಚನೆಯನ್ನೂ ಬೈಬಲು ಕೊಡುವುದಿಲ್ಲ. [rs ಪು. 348 ಪ್ಯಾರ. 2]
4. ರೋಮಾಪುರ 8:16ನ್ನು ರೋಮಾಪುರ 1:7ರೊಂದಿಗೆ ಹೋಲಿಸುವ ಮೂಲಕ, ಪೌಲನು ಸಕಲ ಮಾನವ ಜಾತಿಯನ್ನು ‘ದೇವರ ಮಕ್ಕಳು’ ಎಂಬುದಾಗಿ ಸೂಚಿಸುತ್ತಿದ್ದನೆಂದು ಕಂಡುಬರುತ್ತದೆ. [uw ಪು. 26 ಪ್ಯಾರ. 12(3)]
5. ಯೆರೆಮೀಯ 31:31, 33ರಲ್ಲಿ ಉಲ್ಲೇಖಿಸಲ್ಪಟ್ಟ ಒಡಂಬಡಿಕೆಯು, ಒಂದು ರಾಜ್ಯಕ್ಕಾಗಿ ತನ್ನ ಅಭಿಷಿಕ್ತ ಹಿಂಬಾಲಕರೊಂದಿಗೆ ಯೇಸು ಮಾಡುವ ಒಡಂಬಡಿಕೆಯನ್ನು ಸೂಚಿಸುತ್ತದೆ. [si ಪು. 129 ಪ್ಯಾರ. 38]
6. ಪ್ರಲಾಪಗಳ ಪುಸ್ತಕವು ಐದು ಗೀತ ರೂಪದ ಪದ್ಯಗಳಿಂದ ರಚಿತವಾಗಿದೆ, ಅವುಗಳಲ್ಲಿ ನಾಲ್ಕು ಆದ್ಯಕ್ಷರಿಗಳಾಗಿವೆ. [si ಪು. 130 ಪ್ಯಾರ. 6]
7. ತನ್ನ ಪುನರುತ್ಥಾನವನ್ನು ಅನುಸರಿಸಿ, ಯೇಸು ಹಲವಾರು ಬಾರಿ ಕಾಣಿಸಿಕೊಂಡನು—ಆದರೆ ತನ್ನ ಶಿಷ್ಯರ ಉಪಸ್ಥಿತಿಯಲ್ಲಿ ಮಾತ್ರ. [rs ಪು. 334 ಪ್ಯಾರ. 2]
8. ಕ್ರಿಸ್ತನ ಯಜ್ಞದಲ್ಲಿ ನಂಬಿಕೆಯನ್ನು ಇಡುವ ಮೂಲಕ ಮತ್ತು ತಮ್ಮನ್ನು ನೀತಿವಂತರೆಂದು ರುಜುಪಡಿಸಿಕೊಳ್ಳಲು ತಾವು ಪ್ರಯತ್ನಿಸುವ ಕೆಲಸಗಳನ್ನು ಮಾಡದಿರುವ ಮೂಲಕ, ನಿಜ ಕ್ರೈಸ್ತರು ದೇವರ ವಿಶ್ರಾಂತಿಯೊಳಗೆ ಪ್ರವೇಶಿಸುತ್ತಾರೆ. (ಇಬ್ರಿ. 4:10) [rs ಪು. 350 ಪ್ಯಾರ. 1]
9. “ಮಿಕ್ಕ ಸತ್ತವರು” ಜೀವಿತರಾಗಿ ಬರುವುದರ ಕುರಿತು, ಪ್ರಕಟನೆ 20:5ರಲ್ಲಿನ ವಿವರಣಾತ್ಮಕ ಹೇಳಿಕೆಯು, ಬೇರೆ ಕುರಿಗಳ ಭೌಮಿಕ ಪುನರುತ್ಥಾನವನ್ನು ಸೂಚಿಸುತ್ತದೆ. [rs ಪು. 338 ಪ್ಯಾರ. 2–ಪು. 339 ಪ್ಯಾರ. 2]
10. ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆಯು ಅತಿ ಶ್ರೇಷ್ಠವೆಂಬ ಪ್ರಶ್ನೆಗೆ ಯೇಸು ಉತ್ತರ ನೀಡಿದಾಗ, ದಶಾಜ್ಞೆಗಳಲ್ಲಿ ಯಾವುದನ್ನೂ ಅವನು ಉದಾಹರಿಸಲಿಲ್ಲ. (ಮತ್ತಾ. 22:35-40) [rs ಪು. 348 ಪ್ಯಾರ. 1]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ನಮಗಾಗಿ ತನ್ನ ಜೀವವನ್ನು ಕೊಡಲು ಆತನ ಪುತ್ರನನ್ನು ಕಳುಹಿಸುವಂತೆ ಯೆಹೋವನ ಮಹಾ ಪ್ರೀತಿಯು ಆತನನ್ನು ಪ್ರೇರೇಪಿಸಿದ್ದರಿಂದ, ದೇವರಿಗಾಗಿರುವ ನಮ್ಮ ಪ್ರೀತಿಯು ಏನು ಮಾಡುವಂತೆ ನಮ್ಮನ್ನು ಪ್ರೇರೇಪಿಸಬೇಕು? (2 ಕೊರಿಂ. 5:14, 15) [uw ಪು. 14 ಪ್ಯಾರ. 6]
12. ಯೆಹೋವನ ಹೆಸರಿನಲ್ಲಿ ನಡೆಯುವುದು ಏನನ್ನು ಸೂಚಿಸುತ್ತದೆ? [uw ಪು. 18 ಪ್ಯಾರ. 14]
13. ಪ್ರಲಾಪಗಳ ಪುಸ್ತಕವನ್ನು ಓದುವ ಮೂಲಕ ನಾವು ಯೆಹೋವನ ಗುಣಗಳ ಕುರಿತು ಏನನ್ನು ಕಲಿಯುತ್ತೇವೆ? (ಪ್ರಲಾ. 3:22, 23, 32) [si ಪು. 132 ಪ್ಯಾರ. 13, 15]
14. ಯೆಹೆಜ್ಕೇಲನ ಮತ್ತು ಯೇಸು ಕ್ರಿಸ್ತನ—ಇವರಿಬ್ಬರ—ಸಂಬಂಧದಲ್ಲಿ ಯಾವ ಪದವು ಸತತವಾಗಿ ಬಳಸಲ್ಪಡುತ್ತದೆ? [si ಪು. 133 ಪ್ಯಾರ. 2]
15. ಭೂಮಿಯ ಮೇಲಿನ ಜೀವಿತಕ್ಕೆ ಪುನರುತ್ಥಾನಗೊಳ್ಳುವವರು ತಮ್ಮ ಭವಿಷ್ಯತ್ತಿನ ಕ್ರಿಯೆಗಳ ಆಧಾರದಲ್ಲಿ ನ್ಯಾಯತೀರಿಸಲ್ಪಡುವರೆಂದು ನಂಬುವುದು ಏಕೆ ವಿವೇಚನಾಯುಕ್ತವಾಗಿದೆ? (ರೋಮಾ. 6:7) [rs ಪು. 338 ಪ್ಯಾರ. 1]
16. ಇಂದು ಯೆಹೋವನ ಜನರು ಅನುಭವಿಸುವ ಐಕ್ಯಕ್ಕೆ ನೆರವನ್ನೀಡುವ ನಾಲ್ಕು ಪ್ರಧಾನ ಅಂಶಗಳಾವುವು? [uw ಪುಟಗಳು 8-9 ಪ್ಯಾರ. 8, 9]
17. ಕ್ರಿಸ್ತನ ಸಾನ್ನಿಧ್ಯದೊಂದಿಗೆ ಜೊತೆ ಸೇರಿರುವ ಘಟನೆಗಳು, ವರ್ಷಗಳ ಅವಧಿಯ ಉದ್ದಕ್ಕೂ ಸಂಭವಿಸುತ್ತವೆಂದು ನಾವು ಯುಕ್ತವಾಗಿ ಏಕೆ ಹೇಳಬಲ್ಲೆವು? (ಮತ್ತಾ. 24:37-39) [rs ಪು. 341 ಪ್ಯಾರ. 1]
18. ಯೆಹೋವನ ಪ್ರಮುಖ ಗುಣಗಳಾದ ಪ್ರೀತಿ, ನ್ಯಾಯ, ವಿವೇಕ, ಮತ್ತು ಶಕ್ತಿಯ ಜೊತೆಗೆ, ವಿಮೋಚನಕಾಂಡ 34:6, ಕೀರ್ತನೆ 86:5, ಮತ್ತು ಅ. ಕೃತ್ಯಗಳು 10:34, 35ರಿಂದ ಆತನ ಹಿಡಿಸುವ ವ್ಯಕ್ತಿತ್ವದ ಕುರಿತು ನಾವು ಏನನ್ನು ಕಲಿಯಬಲ್ಲೆವು? [uw ಪು. 13 ಪ್ಯಾರ. 3]
19. ಯೋಹಾನ 14:9, 10ನ್ನು ಲೂಕ 5:12, 13ರೊಂದಿಗೆ ಹೋಲಿಸಿದ ತರುವಾಯ, ಕಷ್ಟಾನುಭವಿಸುತ್ತಿರುವ ಮಾನವ ಜಾತಿಯ ಕಡೆಗೆ ಯೆಹೋವನು ಕೋಮಲವಾಗಿ ಕನಿಕರಿಸುವವನಾಗಿದ್ದಾನೆಂದು ನಾವು ಏಕೆ ತೀರ್ಮಾನಿಸಸಾಧ್ಯವಿದೆ? [uw ಪು. 25 ಪ್ಯಾರ. 12(1)]
20. ವಾರದ ಸಬ್ಬತ್ ದಿನವನ್ನು ಆಚರಿಸುವ ಹಂಗಿನ ಕೆಳಗೆ ಕ್ರೈಸ್ತರಿಲ್ಲವೇಕೆ? (ರೋಮಾ. 10:4) [rs ಪು. 345 ಪ್ಯಾರ. 2, 3]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಯಾ ಪದಗುಚ್ಛವನ್ನು ಒದಗಿಸಿರಿ:
21. ಎಬೆದ್ಮೆಲೆಕ್, _______________________________ನಲ್ಲಿ ಸಂರಕ್ಷಿಸಲ್ಪಡಲಿರುವ _______________________________ವನ್ನು ಮುನ್ಚಿತ್ರಿಸಿದನು, ಏಕೆಂದರೆ ಅವರು ಕ್ರಿಸ್ತನ ಸಹೋದರರ _______________________________ ಸ್ನೇಹ ಮಾಡಿದರು ಮತ್ತು ನೆರವನ್ನು ನೀಡಿದರು. [ವಾರದ ಬೈಬಲ್ ವಾಚನ; w82 10/1 ಪು. 27 ಪ್ಯಾರ. 11ನ್ನು ನೋಡಿ.]
22. ಯೇಸುವನ್ನು “ಒಬ್ಬ ದೇವ”ನೆಂದು ಹೇಳಲಾಗಿರುವುದಾದರೂ, ಯೋಹಾನ 17:3ರಲ್ಲಿ ಅವನು ಯೆಹೋವನನ್ನು “_______________________________ ಸತ್ಯ ದೇವರು” ಎಂದು ಕರೆದನು, ಮತ್ತು ಯೋಹಾನ 20:17ರಲ್ಲಿ ಅವನು ಯೆಹೋವನನ್ನು “_______________________________ ದೇವರೂ _______________________________ ದೇವರೂ” ಎಂದು ಸೂಚಿಸಿದನು. [uw ಪು. 18 ಪ್ಯಾರ. 12]
23. ಯೆರೆಮೀಯ 52:5-11ರಲ್ಲಿ ವಿವರಿಸಲ್ಪಟ್ಟ ಘಟನೆಗಳು ಸಾ.ಶ.ಪೂ. _______________________________ರಲ್ಲಿ ಸಂಭವಿಸಿದವು. [ವಾರದ ಬೈಬಲ್ ವಾಚನ; w88 4/1 ಪು. 14 ಪ್ಯಾರ. 18ನ್ನು ನೋಡಿ.]
24. ಕ್ರಿಸ್ತನ ಹಿಂದಿರುಗುವಿಕೆಯನ್ನು ಅನುಸರಿಸಿ “ಎಲ್ಲರ ಕಣ್ಣುಗಳು ಆತನನ್ನು ಕಾಣುವವು” ಎಂದು ಪ್ರಕಟನೆ 1:7 ಹೇಳುವಾಗ, ಉಲ್ಲೇಖವು _______________________________ ದೃಷ್ಟಿಗಲ್ಲ, ಬದಲಾಗಿ ಮಾನಸಿಕ _______________________________ ಮಾಡಲ್ಪಟ್ಟಿದೆ. [rs ಪು. 343 ಪ್ಯಾರ. 2]
25. ಶಿಷ್ಯರ ಮನಸ್ಸುಗಳಲ್ಲಿ ತಾನು ಆಗ ಒಬ್ಬ _______________________________ನೆಂಬ ನಿಜತ್ವವನ್ನು ಬಹುಶಃ ಬಲಪಡಿಸಲು, ಯೇಸು ತನ್ನ ಪುನರುತ್ಥಾನವನ್ನು ಅನುಸರಿಸಿ ಯಾವಾಗಲೂ ಅದೇ _______________________________ದಲ್ಲಿ ಕಾಣಿಸಿಕೊಳ್ಳಲಿಲ್ಲ, ಆದುದರಿಂದಲೇ ಅವನು ತನ್ನ ಆಪ್ತ ಸಹವಾಸಿಗಳಿಂದಲೂ ಕೂಡಲೇ _______________________________ಲಿಲ್ಲ. [rs ಪು. 334 ಪ್ಯಾರ. 5]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಬೈಬಲು ದೇವರ ವಾಕ್ಯವಾಗಿದೆ ಏಕೆಂದರೆ (ಭಾಷಾಂತರಕಾರರು ಅದಕ್ಕೆ ಆ ಹೆಸರನ್ನು ಕೊಟ್ಟರು; ಧರ್ಮನಿಷ್ಠ ಪುರುಷರು ಅದನ್ನು ಬರೆದರು; ದೇವರು ಅದರ ಬರವಣಿಗೆಯನ್ನು ಸಕ್ರಿಯವಾಗಿ ನಿರ್ದೇಶಿಸಿದನು). [uw ಪು. 20 ಪ್ಯಾರ. 2]
27. ನೀವು ಪ್ರತಿದಿನ ಬೈಬಲಿನ ಕೇವಲ (ಒಂದು; ಎರಡು; ನಾಲ್ಕು) ಪುಟಗಳನ್ನು ಓದುವುದಾದರೆ, ನೀವು ಅದನ್ನು ಸುಮಾರು (ಆರು ತಿಂಗಳುಗಳು; ಒಂಬತ್ತು ತಿಂಗಳುಗಳು; ಒಂದು ವರ್ಷ)ದಲ್ಲಿ ಪೂರ್ಣಗೊಳಿಸುವಿರಿ. [uw ಪು. 24 ಪ್ಯಾರ. 9]
28. ದಶಾಜ್ಞೆಗಳನ್ನು ಒಳಗೊಂಡಿದ್ದ ಮೋಶೆಯ ಧರ್ಮಶಾಸ್ತ್ರದ ಅಂತ್ಯದೊಂದಿಗೆ ನೈತಿಕ ಪ್ರತಿಬಂಧಗಳು ಗತಿಸಿಹೋಗಲಿಲ್ಲ, ಏಕೆಂದರೆ ಕ್ರೈಸ್ತ ಏರ್ಪಾಡಿನ ಕೆಳಗೆ (ಪ್ರತಿಯೊಂದು ಸಮುದಾಯವು ತನ್ನ ಸ್ವಂತ ನೈತಿಕ ಮಟ್ಟಗಳನ್ನು ವಿಕಸಿಸಿಕೊಳ್ಳುವುದು; ಮನುಷ್ಯರು ತಮ್ಮ ಮನಸ್ಸಾಕ್ಷಿಯಿಂದ ಮಾತ್ರ ಮಾರ್ಗದರ್ಶಿಸಲ್ಪಡಬೇಕು; ದಶಾಜ್ಞೆಗಳ ನೈತಿಕ ಮಟ್ಟಗಳಲ್ಲಿ ಹೆಚ್ಚಿನವು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಪುನಃ ಹೇಳಲ್ಪಟ್ಟವು). [rs ಪು. 349 ಪ್ಯಾರ. 1]
29. ಯೆಹೋವನು ಯೆರೆಮೀಯನನ್ನು “ಮರುಳುಗೊಳಿಸಿ”ದ್ದು ಹೇಗೆಂದರೆ, ಆತನು (ಅವನು ಖಂಡನೆಯ ಸಂದೇಶವನ್ನು ಸಾರುವಂತೆ ಹೂಟ ಹೂಡಿದನು; ತನ್ನ ಸ್ವಂತ ಬಲದಲ್ಲಿ ಏನನ್ನು ಮಾಡಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲವೊ ಅದನ್ನು ನೆರವೇರಿಸಲು ಅವನನ್ನು ಉಪಯೋಗಿಸಿದನು; ಯೆರೆಮೀಯನು ಪ್ರವಾದಿಸಿದ ನಾಶನವನ್ನು ತರಲಿಲ್ಲ). (ಯೆರೆ. 20:7) [ವಾರದ ಬೈಬಲ್ ವಾಚನ; w89 5/1 ಪು. 31ನ್ನು ನೋಡಿ.]
30. ಯೋಹಾನ 5:28 (NW)ರಲ್ಲಿ ಕಂಡುಕೊಳ್ಳಲ್ಪಡುವ “ಸ್ಮರಣೆಯ ಗೋರಿಗಳು” ಎಂಬ ಅಭಿವ್ಯಕ್ತಿಯು, (ವ್ಯಕ್ತಿಗತ ಸಮಾಧಿಗಳು; ಮಾನವ ಜಾತಿಯ ಸಾಮಾನ್ಯ ಸಮಾಧಿ; ದೇವರಿಂದ ಮೃತ ವ್ಯಕ್ತಿಯ ಸ್ಮರಣೆ)ಯನ್ನು ಸೂಚಿಸುತ್ತದೆ. [rs ಪು. 339 ಪ್ಯಾರ. 3]
ಕೆಳಗಿನ ಶಾಸ್ತ್ರವಚನಗಳನ್ನು ಕೆಳಗೆ ಕೊಟ್ಟ ಹೇಳಿಕೆಗಳಿಗೆ ಸರಿಜೋಡಿಸಿರಿ: ಜ್ಞಾನೋ. 3:5, 6; ಯೆರೆ. 23:33; 32:9, 10; ಪ್ರಲಾ. 3:44; ಪ್ರಕ. 15:3, 4
31. ಆರಾಧನೆಯ ನಿಜ ಐಕ್ಯಕ್ಕಾಗಿರುವ ಆಧಾರವು, ಯೆಹೋವನನ್ನು ತಿಳಿಯುವುದು ಮತ್ತು ಆತನ ನೀತಿಯ ಮಾರ್ಗಗಳಿಗೆ ಹೊಂದಿಕೆಯಾಗಿ ಜೀವಿಸುವುದೇ ಆಗಿದೆ. [uw ಪು. 5 ಪ್ಯಾರ. 1]
32. ನಮ್ಮ ಇಡೀ ಜೀವನ ಮಾರ್ಗವು—ನಾವು ಎಲ್ಲಿದ್ದರೂ, ಏನೇ ಮಾಡುತ್ತಾ ಇದ್ದರೂ—ನಮ್ಮ ಯೋಚನೆ ಮತ್ತು ಪ್ರೇರಣೆಗಳು ದೇವಾಭಿಮುಖವಾಗಿವೆಯೆಂಬ ಸಾಕ್ಷ್ಯವನ್ನು ಕೊಡಬೇಕು. [uw ಪು. 10 ಪ್ಯಾರ. 11]
33. ಯೆಹೋವನು ದುಷ್ಟರ ಪ್ರಾರ್ಥನೆಗಳನ್ನು ಆಲಿಸುವುದಿಲ್ಲ. [ವಾರದ ಬೈಬಲ್ ವಾಚನ; w87 7/15 ಪು. 15ನ್ನು ನೋಡಿ.]
34. ಕ್ರೈಸ್ತಪ್ರಪಂಚದ ಸನ್ನಿಹಿತವಾಗಿರುವ ನಾಶನವನ್ನು ಪ್ರಕಟಿಸುತ್ತಾ, ದೇವರ ವಾಕ್ಯದಿಂದ ಬರುವ ಭಾರವಾದ ಪ್ರವಾದನಾತ್ಮಕ ಸಂದೇಶವು, ದಂಡಾಜ್ಞೆಯಿಂದ ಭಾರವಾಗಿದೆ. [ವಾರದ ಬೈಬಲ್ ವಾಚನ; ಕಾ94 3/1 ಪು. 12 ಪ್ಯಾರ. 18, 20ನ್ನು ನೋಡಿ.]
35. ಯೆಹೋವನ ಜೊತೆ ಆರಾಧಕರೊಂದಿಗೆ ವ್ಯಾಪಾರದ ವ್ಯವಹಾರಗಳಲ್ಲಿ ತೊಡಗುವಾಗ, ತದನಂತರದ ಸಮಯದಲ್ಲಿ ಏಳಸಾಧ್ಯವಿರುವ ತಪ್ಪಭಿಪ್ರಾಯಗಳನ್ನು ಒಂದು ಲಿಖಿತ ಒಪ್ಪಂದವು ತಡೆಯಬಲ್ಲದು. [ವಾರದ ಬೈಬಲ್ ವಾಚನ; ಕಾ95 5/1 ಪು. 30ನ್ನು ನೋಡಿ.]