ಮೇಲಿನ ವಿಷಯಗಳ ಮೇಲೆ ನಿಮ್ಮ ಮನಸ್ಸನ್ನು ನೆಲೆಗೊಳಿಸಿರಿ
1 ನಮ್ಮ ಸುತ್ತಲೂ ಆವರಿಸಿರುವ ಸಂತತಿ ಮತ್ತು ಭವಿಷ್ಯತ್ತಿನ ಮೇಲಿನ ಅದರ ಹೊರನೋಟದ ಕುರಿತಾಗಿ ಹೇಳಿಕೆ ನೀಡುತ್ತಾ, 1994, ಡಿಸೆಂಬರ್ 31ರ ದ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ಒಂದು ಲೇಖನವು ಹೇಳಿದ್ದು: “ಅವರು ಭವಿಷ್ಯತ್ತಿನ ಕುರಿತು ಭಯಪಡುತ್ತಿದ್ದಾರೆ. ಉದ್ಯೋಗಗಳು, ರೋಗ, ಆರ್ಥಿಕ ಪರಿಸ್ಥಿತಿ, ಲೋಕ ಸನ್ನಿವೇಶಗಳ ಪರಿಭಾಷೆಯಲ್ಲಿ ಅವರು ಭಯಪಡುತ್ತಾರೆ.” ನಾವು ನೋಡುವಲ್ಲೆಲ್ಲಾ, ಜೀವನದ ಕುರಿತು ಅನಿಶ್ಚಿತ ಭಾವನೆಯಿದೆ. ಯೆಹೋವನ ಸಾಕ್ಷಿಗಳೋಪಾದಿ ನಮ್ಮ ಶುಶ್ರೂಷೆಯು, ಈ ರೀತಿಯ ಅನಿಸಿಕೆಯಾಗುವ ಜನರೊಂದಿಗೆ ದಿನನಿತ್ಯವೂ ಸಂಪರ್ಕಿಸುವಂತೆ ಮಾಡುತ್ತದೆ. ಅವರು ಎದುರಿಸುವಂತಹದ್ದೇ ರೀತಿಯ ಸಮಸ್ಯೆಗಳನ್ನು ನಾವು ಎದುರಿಸುವಾಗ, ದೇವರ ವಾಕ್ಯದ ಖಚಿತ ವಾಗ್ದಾನಗಳಲ್ಲಿನ ನಮ್ಮ ನಂಬಿಕೆ ಮತ್ತು ಭರವಸೆಯು, ನಮಗೆ ಜೀವನ ಮತ್ತು ಮಾನವ ಕುಲದ ಭವಿಷ್ಯತ್ತಿನ ಕುರಿತಾಗಿ ತೀರ ಭಿನ್ನವಾದ ಹೊರನೋಟವನ್ನು ಪಡೆದುಕೊಳ್ಳಲು ಶಕ್ತರನ್ನಾಗಿ ಮಾಡುತ್ತದೆ.—ಯೆಶಾ. 65:13, 14, 17.
2 ಖಚಿತ ನಿರೀಕ್ಷೆಯ ಕುರಿತಾದ ನಮ್ಮ ಸತ್ಪ್ರತೀಕ್ಷೆ ಮತ್ತು ಹೊರನೋಟವು, ಪ್ರಾಮಾಣಿಕ ಹೃದಯಿಗಳಾದ ಅನೇಕ ಜನರು ನಾವು ಅವರಿಗಾಗಿ ಕೊಂಡೊಯ್ಯುವ ಸಂದೇಶವನ್ನು ಆಲಿಸುವಂತೆ ಮಾಡುತ್ತದೆ. ಖಿನ್ನರಾದ ಮತ್ತು ಕೆಳಕ್ಕೆ ತುಳಿಯಲ್ಪಟ್ಟಂತಹ ಅನಿಸಿಕೆಯಾಗುವ ಅನೇಕ ವ್ಯಕ್ತಿಗಳು ನಮ್ಮೊಂದಿಗೆ ಮಾತಾಡುವುದನ್ನು ಸಾಂತ್ವನದಾಯಕವಾಗಿ ಕಂಡುಕೊಳ್ಳುತ್ತಾರೆ. ಕೇಳುವಂತಹ ವಿಷಯವನ್ನು ಅವರು ಇಷ್ಟಪಡುವ ಕಾರಣದಿಂದ, ಕೆಲವರು ನಮ್ಮೊಂದಿಗೆ ಬೈಬಲನ್ನು ಅಭ್ಯಾಸಿಸಲು ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ, ಕೆಲವೊಮ್ಮೆ ಜನರು ಮೊದಲಾಗಿ ತಮ್ಮ ವೈಯಕ್ತಿಕ ಸಮಸ್ಯೆಗಳ ಕುರಿತು ಮಾತಾಡಲು ಬಯಸಬಹುದು. ಯಾರಾದರೊಬ್ಬರ ವೈಯಕ್ತಿಕ ಚಿಂತೆಗಳಿಗೆ ಕಿವಿಗೊಡಲಿಕ್ಕಾಗಿ ಸ್ವಲ್ಪ ಸಮಯವನ್ನು ವ್ಯಯಿಸಬಹುದಾದರೂ, ದೇವರ ವಾಕ್ಯದ ಸಕಾರಾತ್ಮಕವಾದ ಸತ್ಯತೆಗಳನ್ನು ಜನರಿಗೆ ಕಲಿಸುವ ನಮ್ಮ ಉದ್ದೇಶದ ದೃಷ್ಟಿಯನ್ನು ನಾವು ಕಳೆದುಕೊಳ್ಳಬಾರದು.
3 ದುಃಖದ ಹೊರೆಗಳಿಂದ ಭಾರವಾಗಿರುವವರ ಕಡೆಗೆ ಸಹಾನುಭೂತಿಯುಳ್ಳವರಾಗಿರಲು ನಾವು ಬಯಸುತ್ತೇವೆ ನಿಜ. ಮತ್ತಾಯ 11:28ರಲ್ಲಿ ದಾಖಲಿಸಲ್ಪಟ್ಟಿರುವಂತೆ, “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ” ಎಂದು ಯೇಸು ಹೇಳಿದಾಗ, ಆತನು ಮಾದರಿಯನ್ನು ಇಟ್ಟನು. ನಾವು ಅದೇ ರೀತಿಯಲ್ಲಿ ಜನರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಆದರೂ, 28ನೆಯ ವಚನದ ಮುಕ್ತಾಯದಲ್ಲಿ ಯೇಸು ಹೇಳಿದ್ದು: “ನಾನು ನಿಮಗೆ ವಿಶ್ರಾಂತಿಕೊಡುವೆನು.” ಅದು ನಮ್ಮ ಗುರಿಯಾಗಿರತಕ್ಕದ್ದು. ದೇವರ ವಾಕ್ಯದಿಂದ ಪುನರ್ಚೈತನ್ಯದಾಯಕ ವಾಗ್ದಾನಗಳನ್ನು ಹಂಚಿಕೊಳ್ಳುವ ಮೂಲಕ ನಾವು ಅದನ್ನು ಮಾಡುತ್ತೇವೆ. ಒಬ್ಬ ಒಳ್ಳೆಯ ಕೇಳುಗನಾಗಿರುವುದು, ನಮ್ಮ ವೈಯಕ್ತಿಕ ಆಸಕ್ತಿ ಮತ್ತು ಚಿಂತೆಯನ್ನು ತೋರಿಸುತ್ತದೆ ಮತ್ತು ಮಾನವ ಕುಲದ ಎಲ್ಲಾ ಸಮಸ್ಯೆಗಳಿಗಾಗಿ ಏಕಮಾತ್ರ ಖಚಿತ ಪರಿಹಾರವು ರಾಜ್ಯವಾಗಿದೆ ಎಂಬುದನ್ನು ಇತರರು ಗ್ರಹಿಸುವಂತೆ ಸಹಾಯ ಮಾಡುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುವ ನಮ್ಮ ನೇಮಕವನ್ನು ನೆರವೇರಿಸಲು ಪ್ರಾಮುಖ್ಯವಾಗಿದೆ.—ಮತ್ತಾ. 24:14.
4 ನಮ್ಮ ಕೆಲಸವು ವೃತ್ತಿಪರ ಆರೋಗ್ಯಾರೈಕೆಯ ಪರಿಣತರಂತಹ ಕೆಲಸವಾಗಿರುವುದಿಲ್ಲ. ಬದಲಾಗಿ, ಅದು 1 ತಿಮೊಥೆಯ 4:6ರಲ್ಲಿ ಗಮನಿಸಲಾಗಿದ್ದು, ಅಪೊಸ್ತಲ ಪೌಲನು ವಿವರಿಸಿರುವಂತೆ, “ಸುಬೋಧನೆಯ” ಮೇಲೆ, ದೇವರ ವಾಕ್ಯದಲ್ಲಿ ಕಂಡುಬರುವ ಬೋಧನೆಗಳ ಮೇಲೆ ಕೇಂದ್ರೀಕರಿಸುವ ಒಂದು ಶುಶ್ರೂಷೆಯಾಗಿದೆ. ವೈಯಕ್ತಿಕ ಅಥವಾ ಭಾವನಾತ್ಮಕ ಸಮಸ್ಯೆಗಳಿರುವವರು, ಯೆಹೋವನ ಮೇಲೆ ಆತುಕೊಳ್ಳುವಂತೆ ಉತ್ತೇಜಿಸಲ್ಪಡಬೇಕಾದ ಅಗತ್ಯವಿರಬಹುದು. “ಮೇಲಿನ ವಿಷಯಗಳ ಮೇಲೆ” ಅವರ “ಮನಸ್ಸುಗಳನ್ನು ನೆಲೆಗೊಳಿ”ಸುವಂತೆ ಅವರಿಗೆ ಕಲಿಸಿರಿ—ರಾಜ್ಯ ನಿರೀಕ್ಷೆಗೆ ಸಂಬಂಧಿಸಿರುವ ವಿಷಯಗಳು. (ಕೊಲೊ. 3:2, NW) ಜನರು ತಮ್ಮ ಗಮನವನ್ನು ದೇವರ ವಾಕ್ಯದ ಮೇಲೆ ಕೇಂದ್ರೀಕರಿಸಿಡುವಾಗ, ತಮ್ಮ ಜೀವಿತಗಳಲ್ಲಿ ಅದು ಪ್ರಯೋಗಿಸುವ ಪ್ರಬಲವಾದ ಪ್ರಭಾವದ ಫಲಿತಾಂಶವಾಗಿ ಅವರ ಭಕ್ತಿವೃದ್ಧಿಯಾಗಸಾಧ್ಯವಿದೆ.—ಇಬ್ರಿ. 4:12.
5 ಆದುದರಿಂದ, ಜನರು ‘ನ್ಯಾಯವೂ ಶುದ್ಧವೂ ಪ್ರೀತಿಕರವೂ ಕೀರ್ತಿಗೆ ಯೋಗ್ಯವೂ’ ಆಗಿರುವ ವಿಷಯಗಳ ಮೇಲೆ ತಮ್ಮ ಆಲೋಚನೆಯನ್ನು ಕೇಂದ್ರೀಕರಿಸುವಂತೆ ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. (ಫಿಲಿ. 4:8) ಅವರು ರಾಜ್ಯ ನಿರೀಕ್ಷೆಯ ಮೇಲೆ ಗಮನವನ್ನು ಕೇಂದ್ರೀಕರಿಸುವಲ್ಲಿ, ನಾವು ಆಶೀರ್ವದಿಸಲ್ಪಟ್ಟಿರುವಂತಹದ್ದೇ ರೀತಿಯಲ್ಲಿ ಅವರು ಆಶೀರ್ವದಿಸಲ್ಪಡುವರು. ಯೆಹೋವನು ತನ್ನ ರಾಜ್ಯದ ಮೂಲಕ ಕ್ರಮೇಣವಾಗಿ ಅವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವನು ಎಂಬ ಜ್ಞಾನದಿಂದ ಬರುವ ಹರ್ಷವನ್ನು ಅವರು ಸಹ ಅನುಭವಿಸುವರು.—ಕೀರ್ತ. 145:16.