ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/95 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1995 ನಮ್ಮ ರಾಜ್ಯದ ಸೇವೆ
1995 ನಮ್ಮ ರಾಜ್ಯದ ಸೇವೆ
km 11/95 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ನವೆಂಬರ್‌: ಸಾಧ್ಯವಿರುವಲ್ಲೆಲ್ಲಾ, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್‌ಚರ್ಸ್‌ನೊಂದಿಗೆ ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? (ಇಂಗ್ಲಿಷ್‌) ಎಂಬ ಪುಸ್ತಕವನ್ನು ರೂ. 75ರ ಕಾಣಿಕೆಗೆ ನೀಡಬೇಕು. ಪರ್ಯಾಯವಾಗಿ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್‌) ಪುಸ್ತಕವನ್ನು ರೂ. 45ರ ಕಾಣಿಕೆಗೆ ನೀಡಬಹುದು. ಮನೆಯವರಿಗೆ ಇಂಗ್ಲಿಷ್‌ ತಿಳಿಯದಿರುವಲ್ಲಿ, ನಮ್ಮ ರಾಜ್ಯದ ಸೇವೆಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8ರ ಕಾಣಿಕೆಗೆ ನೀಡಬಹುದು. ನಮ್ಮಲ್ಲಿ ಈಗಲೂ ಲಭ್ಯವಿರುವ, ಈ ವಿಭಾಗದಲ್ಲಿನ ಪುಸ್ತಕಗಳ ಪಟ್ಟಿಗಾಗಿ ಆಗಸ್ಟ್‌ 1995ರ ನಮ್ಮ ರಾಜ್ಯದ ಸೇವೆಯ ‘ಪ್ರಕಟನೆಗಳು’ ಅಂಕಣವನ್ನು ನೋಡಿರಿ. ಬಂಗಾಲಿ ಅಥವಾ ಪಂಜಾಬಿ ತಿಳಿದಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಅಥವಾ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ, ಮತ್ತು ನೇಪಾಲಿ ಓದುವವರಿಗೆ ಸದಾಜೀವನವನ್ನು ಆನಂದಿಸಿರಿ ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಇಷ್ಟಪಡುವ ವ್ಯಕ್ತಿಗಳಿಗೆ ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆಯುವುದು! (ಇಂಗ್ಲಿಷ್‌) ಎಂಬ ಪುಸ್ತಕವನ್ನು ರೂ. 15ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂಬುದನ್ನು ದಯವಿಟ್ಟು ಗಮನಿಸಿರಿ.

ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕ ರೂ. 45ರ ಕಾಣಿಕೆಗೆ. ಪರ್ಯಾಯವಾಗಿ, ಅದೇ ಕಾಣಿಕೆಗೆ, ಬೈಬಲ್‌ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್‌) ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಸ್‌ ರೂ. 25 ಆಗಿದೆ) ನೀಡಲ್ಪಡಸಾಧ್ಯವಿದೆ.

ಜನವರಿ: ನಮ್ಮ ರಾಜ್ಯದ ಸೇವೆಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8ರ ಕಾಣಿಕೆಗೆ ನೀಡಬಹುದು.

ಫೆಬ್ರವರಿ: ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕ ರೂ. 50ರ ಕಾಣಿಕೆಗೆ. ಪರ್ಯಾಯವಾಗಿ, ನಮ್ಮ ರಾಜ್ಯದ ಸೇವೆಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8ರ ಕಾಣಿಕೆಗೆ ನೀಡಬಹುದು.

◼ ಅಧಿವೇಶನದ ಕಾಲಾವಧಿಯಲ್ಲಿ ಪ್ರತಿಯೊಂದು ವಾರಕ್ಕಾಗಿ ಒಂದು ಸೇವಾ ಕೂಟವನ್ನು ನಮ್ಮ ರಾಜ್ಯದ ಸೇವೆಯು ಶೆಡ್ಯೂಲ್‌ ಮಾಡುವುದು. “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಮತ್ತು ತದನಂತರ ಮುಂದಿನ ವಾರದ ಸೇವಾ ಕೂಟದಲ್ಲಿ ಕಾರ್ಯಕ್ರಮದ ಮುಖ್ಯವಿಷಯಗಳನ್ನು 30 ನಿಮಿಷಗಳ ವರೆಗೆ ಪುನರ್ವಿಮರ್ಶಿಸುವಂತೆ ಅನುಮತಿಸಲು, ಅಗತ್ಯವಿರುವ ಸರಿಹೊಂದಿಸುವಿಕೆಗಳನ್ನು ಸಭೆಗಳು ಮಾಡಬಹುದು. ಜಿಲ್ಲಾ ಅಧಿವೇಶನ ಕಾರ್ಯಕ್ರಮದ ಅನುದಿನದ ಪುನರ್ವಿಮರ್ಶೆಯು, ಪ್ರಮುಖವಾದ ಅಂಶಗಳ ಮೇಲೆ ಕೇಂದ್ರೀಕರಿಸಲು ಶಕ್ತರಾಗಿರುವ, ಅರ್ಹರಾದ ಇಬ್ಬರು ಅಥವಾ ಮೂವರು ಸಹೋದರರಿಗೆ ಮುಂದಾಗಿಯೇ ನೇಮಿಸಬೇಕು. ಚೆನ್ನಾಗಿ ತಯಾರಿಸಲ್ಪಟ್ಟ ಈ ಪುನರ್ವಿಮರ್ಶೆಯು, ವೈಯಕ್ತಿಕ ಅನ್ವಯಕ್ಕಾಗಿ ಮತ್ತು ಕ್ಷೇತ್ರದಲ್ಲಿನ ಉಪಯೋಗಕ್ಕಾಗಿ ಮುಖ್ಯವಾದ ಅಂಶಗಳನ್ನು ಜ್ಞಾಪಕದಲ್ಲಿಡುವಂತೆ ಸಭೆಗೆ ಸಹಾಯ ಮಾಡುವುದು. ಸಭಿಕರಿಂದ ಕೊಡಲ್ಪಡುವ ಹೇಳಿಕೆಗಳು ಮತ್ತು ಹೇಳಲ್ಪಡುವ ಅನುಭವಗಳು ಸಂಕ್ಷಿಪ್ತವಾಗಿರಬೇಕು ಮತ್ತು ವಿಷಯಕ್ಕೆ ತಕ್ಕವುಗಳಾಗಿರಬೇಕು.

◼ ದೊರೆಯುವ ಹೊಸ ಪ್ರಕಾಶನಗಳು:

ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ 1990-1994—ಇಂಗ್ಲಿಷ್‌ (ಪಯನೀಯರರಿಗೆ ರೂ. 11 ಮತ್ತು ಪ್ರಚಾರಕರಿಗೆ ಹಾಗೂ ಸಾರ್ವಜನಿಕರಿಗೆ ರೂ. 18.)

◼ ಪುನಃ ದೊರೆಯುವ ಪ್ರಕಾಶನಗಳು:

ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ (ಟ್ರ್ಯಾಕ್ಟ್‌ ನಂಬ್ರ 13)—ಇಂಗ್ಲಿಷ್‌, ಮಲೆಯಾಳಂ

ಯೆಹೋವನ ಸಾಕ್ಷಿಗಳ ನಂಬಿಕೆ ಏನು? (ಟ್ರ್ಯಾಕ್ಟ್‌ ನಂಬ್ರ 14)—ಇಂಗ್ಲಿಷ್‌, ಮಲೆಯಾಳಂ

ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (ಟ್ರ್ಯಾಕ್ಟ್‌ ನಂಬ್ರ 15)—ಇಂಗ್ಲಿಷ್‌, ತಮಿಳು, ಮಲೆಯಾಳಂ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ