ಆಗಸ್ಗ್ಟಾಗಿ ಸೇವಾ ಕೂಟಗಳು
ಆಗಸ್ಟ್ 2 ರ ವಾರ
ಸಂಗೀತ 63 (32)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪ್ರಚಲಿತ ಪತ್ರಿಕೆಗಳಿಂದ ಮಾತಾಡುವ ಅಂಶಗಳನ್ನು ಚರ್ಚಿಸಿರಿ. ಈ ವಾರಾಂತ್ಯ ಕ್ಷೇತ್ರ ಸೇವೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಉತ್ತೇಜಿಸಿರಿ.
20 ನಿ: “ಜನರು ಗಮನಕೊಟ್ಟು ಆಲಿಸುವಂತೆ ಶ್ರಮಿಸಿರಿ.” ಸಭಿಕರೊಂದಿಗೆ ಚರ್ಚಿಸಿರಿ. ಅವನೊಂದಿಗೆ ಒಂದು ಚರ್ಚೆಯನ್ನು ಹೊಂದಿರುವ ಉದ್ದೇಶದಿಂದ, ಪ್ರತಿಯೊಬ್ಬ ಮನೆಯವನನ್ನು ಪ್ರತ್ಯೇಕ ವ್ಯಕ್ತಿಯಾಗಿ ನಡೆಸಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿತೋರಿಸಿರಿ. ಪ್ಯಾರಗ್ರಾಫ್ಗಳು 2 ಮತ್ತು 3 ರಲ್ಲಿರುವ ಸೂಚನೆಗಳ ಮೇಲೆ ಆಧಾರಿತವಾದ ಸಂಕ್ಷಿಪ್ತ ಸಾದರಪಡಿಸುವಿಕೆಗಳು ಇರಲಿ. ಕ್ಷೇತ್ರ ಸೇವೆಯಲ್ಲಿ ಪತ್ರಿಕೆಗಳ ಕ್ರಮವಾದ ಉಪಯೋಗವನ್ನು ಒತ್ತಿಹೇಳಿರಿ.
15 ನಿ: “ಲಾಭದಾಯಕ ಫಲಿತಾಂಶಗಳನ್ನು ಉತ್ಪಾದಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸುವುದು.” ಪುರವಣಿಯ ಮೊದಲ 8 ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. ಸೂಕ್ತವಾದ ಅನ್ವಯವನ್ನು ಮಾಡುತ್ತಾ, ಎಲ್ಲಾ ಪ್ಯಾರಗ್ರಾಫ್ಗಳನ್ನು ಮತ್ತು ನಮೂದಿಸಲಾದ ವಚನಗಳನ್ನು ಓದಿರಿ. ಮುಂದಿನ ವಾರ ಉಳಿದ ಎಂಟು ಪ್ಯಾರಗ್ರಾಫ್ಗಳ ಆವರಿಸುವಿಕೆಗಾಗಿ ತಯಾರಿಸುವಂತೆ ಸಭೆಗೆ ನೆನಪುಮಾಡಿರಿ.
ಸಂಗೀತ 193 (103) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 9 ರ ವಾರ
ಸಂಗೀತ 70 (39)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿಯನ್ನು ಮತ್ತು ಕಾಣಿಕೆಗಳ ಅಂಗೀಕಾರಗಳನ್ನು ಒಳಗೂಡಿಸಿರಿ. ಸ್ಥಳಿಕ ಸಭೆಗೆ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕೆ ಆರ್ಥಿಕ ಬೆಂಬಲ ಕೊಟ್ಟದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ.
15 ನಿ: “ಲಾಭದಾಯಕ ಫಲಿತಾಂಶಗಳನ್ನು ಉತ್ಪಾದಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸುವುದು.” ಪ್ಯಾರಗ್ರಾಫ್ಗಳು 9-16 ರ ಪ್ರಶ್ನೋತ್ತರ ಆವರಿಸುವಿಕೆ. ಸೂಕ್ತವಾದ ಅನ್ವಯವನ್ನು ಮಾಡುತ್ತಾ, ಎಲ್ಲಾ ಪ್ಯಾರಗ್ರಾಫ್ಗಳನ್ನು ಮತ್ತು ನಮೂದಿಸಲಾದ ವಚನಗಳನ್ನು ಓದಿರಿ. ಜೂನ್ 1993 ರ ನಮ್ಮ ರಾಜ್ಯದ ಸೇವೆ ಯ ಪುಟ ಒಂದರಿಂದ ಹೆಚ್ಚಿನ ಅಂಶಗಳನ್ನು ಎತ್ತಿತೋರಿಸಿರಿ.
20 ನಿ: “ಅವರು ಸದಾಕಾಲ ಹೇಗೆ ಜೀವಿಸಬಲ್ಲರೆಂದು ಕಲಿಯುವಂತೆ ಜನರಿಗೆ ಸಹಾಯ ಮಾಡಲು ಹಿಂದಿರುಗಿರಿ.” ಪ್ರಶ್ನೋತ್ತರ ಆವರಿಸುವಿಕೆ. ಪ್ಯಾರಗ್ರಾಫ್ಗಳು 5 ಮತ್ತು 6 ರಲ್ಲಿರುವ ನೀಡಿಕೆಯ ಆಧಾರದ ಮೇಲೆ ಪುನರ್ ಭೇಟಿಯ ಒಂದು ಪ್ರತ್ಯಕ್ಷಾಭಿನಯ ಇರಲಿ.
ಸಂಗೀತ 71 (96) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 16 ರ ವಾರ
ಸಂಗೀತ 20 (55)
10 ನಿ: ಸ್ಥಳಿಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು. ಮುಂದಿನ ತಿಂಗಳು ಭಾರತದಲ್ಲಿ ಪ್ರಾರಂಭಿಸುವ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳ ಶ್ರೇಣಿಯಲ್ಲಿ ಒಂದನ್ನು ಹಾಜರಾಗಲು ಮುಂಚಿತವಾದ ಯೋಜನೆಗಳನ್ನು ಮಾಡುವಂತೆ ಎಲ್ಲರನ್ನು ಉತ್ತೇಜಿಸಿರಿ. ಹತ್ತಿರವಿರುವ ಅಧಿವೇಶನದ ಸ್ಥಳ ಮತ್ತು ತಾರೀಖನ್ನು ತಿಳಿಸಿರಿ. ವಾರಾಂತ್ಯ ಕ್ಷೇತ್ರ ಚಟುವಟಿಕೆಯಲ್ಲಿ ಭಾಗವಹಿಸುವಿಕೆಯನ್ನು ಕೂಡ ಉತ್ತೇಜಿಸಿರಿ.
15 ನಿ: ಸದಾ ಜೀವಿಸಬಲ್ಲಿರಿ ಪುಸ್ತಕದ ಮೌಲ್ಯವನ್ನು ಎತ್ತಿತೋರಿಸಿರಿ. ಈ ಪ್ರಕಾಶನವನ್ನು ಉಪಯೋಗಿಸಲಾದ ವರ್ಷಗಳಲ್ಲಿ ಅಭಿವೃದ್ಧಿಗಳನ್ನು ಸೂಚಿಸಲು ಸಂಖ್ಯೆಗಳನ್ನು ನಮೂದಿಸಬಹುದು. ಈ ಪುಸ್ತಕವನ್ನು ಅಭ್ಯಾಸಿಸುವುದರ ಮೂಲಕ ಅನೇಕರು ಸತ್ಯವನ್ನು ಕಲಿತಿದ್ದಾರೆ. ಸತ್ಯಕ್ಕೆ ಬರುವ ಸಮಯದಲ್ಲಿ ಈ ಪುಸ್ತಕವನ್ನು ಅಭ್ಯಾಸಿಸಿದ ಒಂದೆರಡು ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ. ಅದರಿಂದ ಯಾವ ವಿಷಯದ ಕುರಿತು ಕಲಿಯುವುದನ್ನು ಅವರು ಗಣ್ಯಮಾಡಿದರು ಮತ್ತು ಅದನ್ನು ಕ್ಷೇತ್ರದಲ್ಲಿ ಹೇಗೆ ಉಪಯೋಗಿಸಲು ಸಾಧ್ಯ ಎಂಬುದನ್ನು ಅವರಿಂದ ಹೇಳಿಸಿ. ಅದನ್ನು ಉತ್ಸಾಹಪೂರ್ವಕವಾಗಿ ನೀಡಲು ಸಹೋದರರನ್ನು ಉತ್ತೇಜಿಸಿರಿ.
20 ನಿ: “ಹೊಸ ಮತ್ತು ಅನುಭವಸ್ಥ ಶುಶ್ರೂಷಕನಿಗಿರುವ ಆವಶ್ಯಕತೆಗಳು.” ಹಿರಿಯನಿಂದ ಪ್ರಶ್ನೋತ್ತರ ಆವರಿಸುವಿಕೆ. ಆದರೆ ಸ್ಥಳಿಕ ಸಭೆಯ ಅಗತ್ಯಗಳಿಗೆ ಅನ್ವಯಿಸುವ ಅಂಶಗಳ ಸಾರಾಂಶದೊಂದಿಗೆ ಉತ್ಸಾಹಪೂರ್ವಕವಾಗಿ ಮುಕ್ತಾಯಗೊಳಿಸಿರಿ.
ಸಂಗೀತ 6 (4) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 23 ರ ವಾರ
ಸಂಗೀತ 148 (28)
10 ನಿ: ಸ್ಥಳಿಕ ತಿಳಿಸುವಿಕೆಗಳು.
20 ನಿ: “ಬೈಬಲ್ ಅಭ್ಯಾಸಗಳಿಗಾಗಿ ಶ್ರದ್ಧೆಯಿಂದ ಹುಡುಕಿರಿ.” ಸೇವಾ ಮೇಲ್ವಿಚಾರಕನಿಂದ ಲೇಖನದ ಪ್ರಶ್ನೋತ್ತರ ಆವರಿಸುವಿಕೆ. ನಮೂದಿಸಲಾದ ಎಲ್ಲಾ ವಚನಗಳನ್ನು ಓದಿ ಅನ್ವಯಿಸಿರಿ. ಕಳೆದ ಐದು ವರ್ಷಗಳಲ್ಲಿ ಸಭೆಯ ಬೈಬಲ್ ಅಭ್ಯಾಸ ಕೆಲಸದ ಪ್ರಗತಿಯನ್ನು ವಿಮರ್ಶಿಸಿರಿ, ಮತ್ತು ಸ್ಥಳಿಕ ಅಗತ್ಯತೆಗಳಿಗನುಸಾರ ಸಮಾಪ್ತಿಯ ಹೇಳಿಕೆಗಳನ್ನು ಬೆಳೆಸಿರಿ.
15 ನಿ: ಬೈಬಲಿನ ನಮ್ಮ ಅಭ್ಯಾಸದಲ್ಲಿ ತಾರೀಖುಗಳ ಪ್ರಾಮುಖ್ಯತೆ. ರೀಸನಿಂಗ್ ಪುಸ್ತಕದ ಪುಟ 93 ರಲ್ಲಿರುವ “ಡೆಫನೀಷನ್” ಎಂಬ ತಲೆಬರಹದ ಕೆಳಗಿರುವ ವಿಷಯದ ಮೇಲೆ ಸಂಕ್ಷಿಪ್ತ ಭಾಷಣದ ಅನಂತರ, “ಡೇಟ್ಸ್” ಶೀರ್ಷಿಕೆಯ ಕೆಳಗೆ ಉಳಿದಿರುವ ಮಾಹಿತಿಯಲ್ಲಿ ಸಭಿಕರೊಂದಿಗೆ ಚರ್ಚೆಯನ್ನು ನಡೆಸಿರಿ. “ದೇವರ ರಾಜ್ಯವು 1914 ರಲ್ಲಿ ಸ್ಥಾಪಿಸಲ್ಪಟ್ಟಿತ್ತೆಂದು ಯೆಹೋವನ ಸಾಕ್ಷಿಗಳು ಯಾಕೆ ಹೇಳುತ್ತಾರೆ?” ಎಂಬ ಪ್ರಶ್ನೆಯನ್ನು ಪರಿಗಣಿಸಿರಿ. ರಾಜ್ಯ ಸಂದೇಶದ ಪರವಾಗಿ ವಾದಿಸಲು ಹೊಸಬರು ತಯಾರಾಗಿರುವಂತೆ ಈ ಮಾಹಿತಿಯು ಹೇಗೆ ಸಹಾಯ ಮಾಡುತ್ತದೆ ಎಂದು ಎತ್ತಿತೋರಿಸಿರಿ.
ಸಂಗೀತ 43 (11) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 30 ರ ವಾರ
ಸಂಗೀತ 156 (118)
5 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: “ನಿಮ್ಮ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ.” ಹಿರಿಯನಿಂದ ಭಾಷಣ. ಎರಡನೆಯ ಪ್ಯಾರಗ್ರಾಫ್ನ್ನು ಚರ್ಚಿಸುವಾಗ, ಆಧಾರವಾಗಿರುವ ಕಾವಲಿನಬುರುಜು ವಿನ ಸೂಕ್ತವಾದ ಹೇಳಿಕೆಗಳನ್ನು ಮಾಡಿರಿ. ಸಮಾಪ್ತಿಯಲ್ಲಿ ಮಲಾಕಿಯ 3:10 ನ್ನು ಓದಿ ಅನ್ವಯ ಮಾಡಿರಿ.
10 ನಿ: “ಲಾಭದಾಯಕ ಫಲಿತಾಂಶಗಳನ್ನು ಉತ್ಪಾದಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸುವುದು.” (2 ನಿ.) ಲೇಖನದ ಉನ್ನತ ಅಂಶಗಳ ಸಂಕ್ಷಿಪ್ತ ವಿಮರ್ಶೆ. ದೃಶ್ಯ I (3 ನಿ.) ಪ್ಯಾರಗ್ರಾಫ್ 5 ರಲ್ಲಿ ಕೊಡಲಾದ ಸೂಚನೆಯನ್ನು ಪ್ರತ್ಯಕ್ಷಾಭಿನಯಿಸಿರಿ. ದೃಶ್ಯ II (3 ನಿ.) ಪ್ಯಾರಗ್ರಾಫ್ಗಳು 8 ಯಾ 14 ರಲ್ಲಿ ತಿಳಿಸಲಾದಂಥ ಒಂದು ಸನ್ನಿವೇಶವನ್ನು ಉಪಯೋಗಿಸುತ್ತಾ, ಒಂದು ಸಂಭಾಷಣೆಯನ್ನು ಆರಂಭಿಸಲು ಒಂದು ಕಿರುಹೊತ್ತಗೆಯ ಉಪಯೋಗವನ್ನು ಪ್ರತ್ಯಕ್ಷಾಭಿನಯಿಸಿರಿ. (2 ನಿ.) ಕಿರುಹೊತ್ತಗೆಗಳನ್ನು ಮನೆಬಾಗಿಲುಗಳಲ್ಲಿಯೂ ಮತ್ತು ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿಯೂ ಉಪಯೋಗಿಸಲು ಇರುವ ಮಹಾ ಸಾಧ್ಯತೆಗಳ ಕುರಿತು ವಿಮರ್ಶಿಸುತ್ತಾ, ಉತ್ಸಾಹದಾಯಕ ಸಮಾಪ್ತಿಯನ್ನು ನೀಡಿರಿ.
15 ನಿ: ಸ್ಥಳಿಕ ಅಗತ್ಯತೆಗಳು. ಕಳೆದ ಸಂದರ್ಶನದಲ್ಲಿ ಸರ್ಕಿಟ್ ಮೇಲ್ವಿಚಾರಕರಿಂದ ಕೊಡಲಾದ ಪ್ರೋತ್ಸಾಹದ ಬಗೆಗೆ ಚರ್ಚಿಸ ಸಾಧ್ಯವಿದೆ. ಇಸವಿ 1993 ರ ಸೇವಾ ವರ್ಷದ ಎಲ್ಲಾ ವರದಿಗಳನ್ನು ಕೊಡಲಾಗಿವೆಯೊ ಇಲ್ಲವೊ ಎಂಬುದನ್ನು ನೋಡಲು ಸಹೋದರರಿಗೆ ನೆನಪುಮಾಡಿರಿ.
ಸಂಗೀತ 31 (51) ಮತ್ತು ಸಮಾಪ್ತಿಯ ಪ್ರಾರ್ಥನೆ.