ಅರ್ಥಭರಿತ ಕುಟುಂಬ ಬೈಬಲಭ್ಯಾಸಗಳನ್ನು ನಡಿಸುವುದು
1 ಹೆತ್ತವರು ನಡಿಸುವ ಅತ್ಯಂತ ಮಹತ್ವದ ಕಾರ್ಯಗಳಲ್ಲಿ ಒಂದು ಯಾವುದೆಂದರೆ ತಮ್ಮ ಮಕ್ಕಳಿಗೆ ಸತ್ಯವನ್ನು ಕಲಿಸುವುದೇ. ಅದು ಯೆಹೋವನು ಕೊಟ್ಟ ಜವಾಬ್ದಾರಿಕೆಯು. (ಧರ್ಮೋ. 6:6, 7) ಭಕ್ತಿಹೀನ ಲೋಕದಲ್ಲಿ ಪ್ರಾಮಾಣಿಕರಾಗಿ ನಡೆಯಲು ಮಕ್ಕಳಿಗೆ ಮಾರ್ಗದರ್ಶನೆ ಮತ್ತು ನಡಿಸುವಿಕೆಯು ಬೇಕು. ಅವರು ಯೆಹೋವನನ್ನು ಮತ್ತು ಸತ್ಯವನ್ನು ಪ್ರೀತಿಸಲು ಕಲಿಯಬೇಕು ಮತ್ತು ಅದಕ್ಕೆ ಅಂಟಿಕೊಂಡಿರಲು ನಿರ್ಧಾರವನ್ನು ಮಾಡಬೇಕು. ಅಗೋಸ್ತು 1, 1988ರ ವಾಚ್ಟವರ್ ತನ್ನ 11ನೇ ಪುಟದಲ್ಲಿ ಹೇಳಿದ್ದು: “ನಿಮಗೆ ಬೇರೆ ಯಾವುವೇ ಹಂಗುಗಳನ್ನು ಅಥವಾ ತೊಂದರೆಗಳನ್ನು ಎದುರಿಸಲಿದ್ದರೂ, ಮಕ್ಕಳೊಂದಿಗೆ ಸಮಯ ಕಳೆಯುವುದಕ್ಕೆ ಮಾತ್ರ ಆದ್ಯತೆ ಕೊಡುವ ಅಗತ್ಯವಿದೆ. ನೀವು ಒಟ್ಟಾಗಿ ಕಳೆಯುವ ಸಮಯವು ನಿಮ್ಮ ಮಕ್ಕಳ ಹೃದಯಗಳನ್ನು ರಕ್ಷಿಸುವ ಆತ್ಮಿಕ ಮೂಲ್ಯತೆಗಳನ್ನು ಅವರಲ್ಲಿ ಬೇರೂರಿಸಲು, ಮತ್ತು ಸರಿಯಾದ ಮಾರ್ಗದಲ್ಲಿ ಅವರನ್ನು ನಡಿಸಲು ಅವಕಾಶವನ್ನು ಕೊಡುವುದು.”
2 ದೇವರ ವಾಕ್ಯದಲ್ಲಿ ಕೊಡಲ್ಪಟ್ಟ ಮಾರ್ಗದರ್ಶನೆಗಳನ್ನು ಕುಟುಂಬಗಳು ಪಾಲಿಸಬೇಕಾದರೆ, ಕುಟುಂಬ ಅಭ್ಯಾಸಕ್ಕಾಗಿ ಕ್ರಮವಾಗಿ ಸಮಯವನ್ನು ಬದಿಗಿಡಲೇ ಬೇಕು. ಕುಟುಂಬ ಪ್ರಮುಖರು ಕುಟುಂಬದ ಆತ್ಮಿಕತೆಯನ್ನು ನೋಡಿಕೊಳ್ಳಲು ಆದ್ಯತೆಯನ್ನು ಕೊಡುವ ಅಗತ್ಯವಿದೆ. ಮನೆವಾರ್ತೆಯ ಆತ್ಮಿಕ ಅಗತ್ಯತೆಗಳ ಕಡೆಗೆ ಈಗಲೇ ತಕ್ಕದಾದ ಗಮನವನ್ನು ಕೊಡದಿದ್ದರೆ ಮುಂದಕ್ಕೆ, ಗಂಭೀರ ಸಮಸ್ಯೆಗಳನ್ನು ಎದುರಿಸುವ ಸಂಭವನೀಯತೆ ಹೆತ್ತವರಿಗಿದೆ.
ಅಭ್ಯಾಸದ ವಿಷಯ ಮತ್ತು ವಿಧಾನಗಳು
3 ಏನನ್ನು ಅಭ್ಯಸಿಸಬೇಕು? ಕುಟುಂಬಕ್ಕೆ ಏನು ಬೇಕೆಂಬದನ್ನು ತಿಳಿಯಲು ಕುಟುಂಬ ಪ್ರಮುಖನು ಉತ್ತಮ ಸ್ಥಾನದಲ್ಲಿರುವನು. ಯಾವುದು ಪ್ರಯೋಜನಕಾರಿ ಎಂದು ಇತರರು ನೆನಸುತ್ತಾರೆ ಎಂದವನು ವಿಚಾರಿಸಬಹುದು ಮತ್ತು ಅವರ ಸಲಹೆಗಳನ್ನು ಪರಿಗಣನೆಗೆ ತರಬಹುದು. ನಮನೀಯತೆಯು ಕುಟುಂಬ ಅಭ್ಯಾಸವನ್ನು ವ್ಯಾವಹಾರ್ಯವೂ ಚೇತನಕಾರಿಯೂ ಆಗಿ ಮಾಡುವುದು. ಅನೇಕ ಕುಟುಂಬಗಳು ವಾಚ್ಟವರ್ನಲ್ಲಿ ವಾರದ ಪಾಠವನ್ನು ತಯಾರಿಸಲು ಆಯ್ದುಕೊಳ್ಳುತ್ತವೆ. ಆದರೂ ಕೆಲವೊಮ್ಮೆ, ಯುವಕರು ಶಾಲೆಯಲ್ಲಿ ಎದುರಿಸುವ ವಿಶಿಷ್ಠ ಸಮಸ್ಯೆಗಳನ್ನು ಚರ್ಚಿಸುವುದು ಅವಶ್ಯವಾದೀತು. ಡೇಟಿಂಗ್, ಶಾಲ್ಯಾತೀತ ಚಟುವಟಿಕೆಗಳು, ಆಟಗಳು ಮತ್ತು ಅನೈತಿಕ ಸ್ವಭಾವಗಳೇ ಮುಂತಾದವನ್ನು ಬಲವರ್ಧಕವಾಗಿ ಮತ್ತು ಪ್ರೋತ್ಸಾಹನೀಯವಾಗಿ ಚರ್ಚಿಸ ಸಾಧ್ಯವಿದೆ. ಕುಟುಂಬಕ್ಕೆ ಯಾವ ಸಮಾಚಾರದ ಅಗತ್ಯವಿದೆ ಮತ್ತು ಅದನ್ನು ಅವರ ಹೃದಯಕ್ಕೆ ತಲಪಿಸುವ ಉತ್ತಮ ದಾರಿ ಯಾವುದು ಎಂಬದನ್ನು ಕುಟುಂಬ ತಲೆಯು ಸದಾ ಪರೀಕ್ಷಿಸುತ್ತಿರುವುದು ಮಹತ್ವದ್ದು.—ವಾಚ್ಟವರ್, ಫೆಬ್ರವರಿ 15, 1971, ಪುಟ 105-6 ನೋಡಿ.
4 ಒಂದು ಅಭ್ಯಾಸವು ಹೇಗೆ ನಡಿಸಲ್ಪಡಬೇಕು? ಒಂದು ಬಿಡುವಾದ ಆದರೂ ಆದರಣೀಯ ವಾತಾವರಣವನ್ನು ಬೆಳೆಸಿಕೊಳ್ಳಿರಿ. ಯಾಂತ್ರಿಕವಾದ, ಅತಿರೇಕ ವಿಧಿಪೂರ್ವಕದ ವಿಧಾನವನ್ನು ವಿಸರ್ಜಿಸಿರಿ. ಸೇರಿಸಿದ ಪ್ರಶ್ನೆಗಳನ್ನು ಹಾಕಿರಿ. ವಿಚಾರಗಳನ್ನು ಪ್ರೇರೇಪಿಸುವ ದೃಷ್ಟಾಂತಗಳನ್ನು ಉಪಯೋಗಿಸಿರಿ, ಮತ್ತು ಎಲ್ಲರನ್ನು ಅಭ್ಯಾಸದಲ್ಲಿ ಒಳಗೂಡಿಸಿರಿ. ನಕ್ಷೆಗಳು ಮತ್ತು ಚಾರ್ಟುಗಳು ಮುಂತಾದ ದೃಷ್ಟಿ ಸಹಾಯಕಗಳನ್ನು ಬಳಸಿರಿ. ಇದರಿಂದ ವಿಷಯದಲ್ಲಿ ಆಸಕ್ತಿಯು ಹೆಚ್ಚುವುದು. ಮಕ್ಕಳ ಪ್ರಾಯ ಮತ್ತು ಸಾಮರ್ಥ್ಯಕ್ಕನುಸಾರ ನೇಮಕಗಳನ್ನು ಕೊಟ್ಟು, ಇಂಡೆಕ್ಸ್ ಅಥವಾ ಇನ್ಸೈಟ್ ಸಂಪುಟಗಳಲ್ಲಿ ಸಮಾಚಾರವನ್ನು ಶೋಧಿಸುವಂತೆ ಹೇಳಬಹುದು. ಚಿಕ್ಕ ಮಕ್ಕಳು ಪ್ರತಿಕ್ರಿಯೆ ತೋರಿಸಲು ಶಕ್ತರಾದ ಕೂಡಲೇ ಅವರನ್ನು ಚರ್ಚೆಯೊಳಗೆ ಸೇರಿಸಿರಿ. ಒಂದೆರಡು ಶಬ್ದಗಳಲ್ಲಿ ಉತ್ತರ ಕೊಡಶಕ್ತವಾದ ಸುಲಭ ಪ್ರಶ್ನೆಗಳನ್ನು ಅವರಿಗೆ ಕೇಳಿರಿ. ಅಭ್ಯಾಸದ ಅವಧಿಯನ್ನು ಮಕ್ಕಳ ಗದರಿಕೆಗಾಗಿ ಉಪಯೋಗಿಸಬೇಡಿ. ಬದಲಾಗಿ, ಅವರನ್ನು ಹೊಗಳಿರಿ, ಅವರ ಪ್ರಯತ್ನಗಳಿಗಾಗಿ ಗಣ್ಯತೆ ತೋರಿಸಿರಿ, ಆತ್ಮಿಕ ದೃಷ್ಟಿಕೋನಗಳನ್ನು ಅವರೊಂದಿಗೆ ಹಂಚುವುದರಲ್ಲಿ ಉತ್ಸಾಹದಿಂದಿರ್ರಿ.
5 ನೀವು ಹೃದಯವನ್ನು ತಲಪುತ್ತೀರಿ ಎಂಬ ಖಾತ್ರಿ ಹೇಗೆ? ಎಲ್ಲರೂ ತಮ್ಮ ಉತ್ತರಗಳನ್ನು ಸ್ವಂತ ಮಾತುಗಳಲ್ಲಿ ಕೊಡುವಂತೆ ಉತ್ತೇಜಿಸಿರಿ. ಅವರ ಹೃದಯದ ಭಾವನೆಗಳನ್ನು ನಿರ್ಧರಿಸಲು ದೃಷ್ಟಿಕೋನ ಪ್ರಶ್ನೆಗಳನ್ನು ಜಾಣ್ಮೆಯಿಂದ ಬಳಸಿರಿ. ಹೀಗೆ ಕೇಳಬಹುದು: “ಈ ವಿಷಯದ ಕುರಿತು ಶಾಲೆಯಲ್ಲಿನ ಮಕ್ಕಳು ಏನು ಭಾವಿಸ್ಯಾರು? ಈ ವಿಷಯದ ಬಗ್ಗೆ ನಿನಗೇನಾದರೂ ಸಂಶಯಗಳಿವೆಯೇ?” ದೃಷ್ಟಿಕೋನದ ಪ್ರಶ್ನೆಗಳಿಗೆ ನಿಮ್ಮ ಮಕ್ಕಳು ಕೊಡಬಹುದಾದ ಉತ್ತರಗಳಿಗೆ, ಅಥವಾ ಅವನ್ನು ಪ್ರಾಮಾಣಿಕತೆಯಿಂದ ಉತ್ತರಿಸಲು ಅವರು ಸಂಕೋಚಪಟ್ಟಲ್ಲಿ ಸಿಟ್ಟುಗೊಳ್ಳದಂತೆ ಜಾಗ್ರತೆ ವಹಿಸಿರಿ. ಅವರು ಮಾತಾಡುವಂತೆ ಸಮಯ ಕೊಡಿರಿ. ಅವರಲ್ಲಿ ಮತ್ತು ಅವರ ಸಮಸ್ಯೆಗಳಲ್ಲಿ ನೀವು ಆಸಕ್ತರಿದ್ದೀರಿ ಎಂದು ಅವರು ತಿಳಿಯುವುದು ನಿಮ್ಮ ಕಲಿಸುವಿಕೆಯನ್ನು ಹೆಚ್ಚು ಸುಲಭವಾಗಿ ಮಾಡಬಲ್ಲದು.—ವಾಚ್ಟವರ್, ನವಂಬರ 1, 1986 ಪುಟ 23-5 ನೋಡಿ.
6 ನಿಮ್ಮ ಕುಟುಂಬ ಅಭ್ಯಾಸದ ಮುಖ್ಯ ಉದ್ದೇಶವು ಯೆಹೋವನ ವಿಚಾರಗಳನ್ನು ಮನಸ್ಸಲ್ಲಿ ಬೇರೂರಿಸುವದೇ ಹೊರತು ಸಭಾ ಕೂಟದಲ್ಲಿ ಕೇವಲ ಒಂದು ಉತ್ತರವನ್ನು ಹೇಳಲಿಕ್ಕಾಗಿ ಅಲ್ಲವೆಂಬದನ್ನು ನೆನಪಿನಲ್ಲಿಡಿ. (ಎಫೆ. 3:17-19) ಇದರ ಅರ್ಥವು, ಸಮಾಚಾರವನ್ನು ಹೃದಯಕ್ಕೆ ತಲಪಿಸಲು ಕಾರ್ಯನಡಿಸುವುದೇ. ದೇವರ ಚಿತ್ತವನ್ನು ಅವರು ಮಾಡ ಬಯಸಬೇಕೇಕೆ ಮತ್ತು ಅದು ಜೀವಿತದದಲ್ಲಿ ಅತ್ಯುತ್ತಮ ಮಾರ್ಗವೇಕೆ ಎಂಬದರ ಕಾರಣಗಳನ್ನು ಕುಟುಂಬಕ್ಕೆ ಕೊಡಿರಿ.
7 ಕುಟುಂಬದ ಆತ್ಮಿಕತೆಯನ್ನು ಕಟ್ಟುವುದಕ್ಕೆ ಕ್ರಮದ ಕುಟುಂಬ ಬೈಬಲಭ್ಯಾಸ ಅತ್ಯಾವಶ್ಯಕ. ಜೀವಿತದ ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ ಅದು ಮಕ್ಕಳನ್ನು ತರಬೇತು ಮತ್ತು ಸನ್ನದ್ಧಗೊಳಿಸುತ್ತದೆ. ಹೆತ್ತವರಾದ ನೀವು ನಿಮ್ಮ ಮಕ್ಕಳಿಗೆ ಸಹಾಯ ಕೊಡುವ ಉತ್ತಮ ಸ್ಥಾನದಲ್ಲಿದ್ದೀರಿ. ಈ ದೇವದತ್ತ ಜವಾಬ್ದಾರಿಕೆಯನ್ನು ಸ್ವೀಕರಿಸಿರಿ. ಅರ್ಥಭರಿತ ಬೈಬಲಭ್ಯಾಸ ನಡಿಸುವುದರಲ್ಲಿ ಏಕರೂಪವಾಗಿರಲು ನೀವು ಎಲ್ಲಾ ಪ್ರಯತ್ನಗಳನ್ನು ಮಾಡುವದಾದರೆ ಯೆಹೋವನು ನಿಮ್ಮನ್ನು ಆಶೀರ್ವದಿಸುವುದು ನಿಶ್ಚಯ.